ಎಲ್​ಎಲ್​ಬಿ ಪದವಿ ಇಲ್ಲದೆ ಬಾರ್​ ಕೌನ್ಸಿಲ್​ ಚುನಾವಣೆ ಗೆದ್ದ ಮಹಿಳೆ: ಸತ್ಯ ತಿಳಿಯುತ್ತಿದ್ದಂತೆ ನಾಪತ್ತೆ

ಈ ಮಹಿಳೆ ಅಲಪ್ಪುಳದಲ್ಲಿರುವ ಪ್ರಸಿದ್ಧ ವಕೀಲರ ಕಚೇರಿಯಲ್ಲಿ ಅವರ ಬಳಿ ಕಿರಿಯ ವಕೀಲೆಯಾಗಿ ಕೆಲಸ ಮಾಡುತ್ತಿದ್ದಳು. ಈ ಮೂಲಕ ಬಾರ್ ಅಸೋಸಿಯೇಷನ್​ಅನ್ನು ಮೋಸಗೊಳಿಸಲು ಯಶಸ್ವಿಯಾಗಿದ್ದಳು. ಅದಕ್ಕೂ ಮೊದಲು, ಅವಳು ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಇದೇ ವಕೀಲರ ಬಳಿ ಇಂಟರ್ನ್‌ಶಿಪ್ ಮಾಡಿದ್ದಳು.

 • Share this:
  ಕೇರಳದ ಆಲಪ್ಪುಳ ಜಿಲ್ಲೆಯ ಮಹಿಳೆಯೊಬ್ಬರು ಎಲ್‌ಎಲ್‌ಬಿ ಪದವಿ ಪಡೆಯದೇ ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗೆ ದಾಖಲಾಗದೆ ಎರಡು ವರ್ಷಗಳ ಕಾಲ ವಕೀಲರಾಗಿ ಕೆಲಸಮಾಡಿದ್ದು ಈ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿದ್ದಾರೆ. 

  ನ್ಯೂಸ್ ಮಿನಿಟ್‌ನ ವರದಿಯ ಪ್ರಕಾರ, ಈ ವರ್ಷ ಮಹಿಳೆಯು  ಬಾರ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಿ ಗ್ರಂಥಪಾಲಕರಾಗಿ ಆಯ್ಕೆಯಾಗಿದ್ದರು.

  ಘಟನೆಯನ್ನು ವರದಿ ಮಾಡಿದ ಲೈವ್ ಲಾ ಪ್ರಕಾರ, ಈ ಮಹಿಳೆ ಅಲಪ್ಪುಳದಲ್ಲಿರುವ ಪ್ರಸಿದ್ಧ ವಕೀಲರ ಕಚೇರಿಯಲ್ಲಿ ಅವರ ಬಳಿ ಕಿರಿಯ ವಕೀಲೆಯಾಗಿ ಕೆಲಸ ಮಾಡುತ್ತಿದ್ದಳು. ಈ ಮೂಲಕ ಬಾರ್ ಅಸೋಸಿಯೇಷನ್​ಅನ್ನು ಮೋಸಗೊಳಿಸಲು ಯಶಸ್ವಿಯಾಗಿದ್ದಳು. ಅದಕ್ಕೂ ಮೊದಲು, ಅವಳು ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಇದೇ ವಕೀಲರ ಬಳಿ ಇಂಟರ್ನ್‌ಶಿಪ್ ಮಾಡಿದ್ದಳು. ನಂತರ ಬಾರ್ ಕೌನ್ಸಿಲ್ ನಲ್ಲಿ 2019 ರಲ್ಲಿ ಸದಸ್ಯತ್ವ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಳು ಮತ್ತು ಆಲಪ್ಪುಳ ಬಾರ್ ಅಸೋಸಿಯೇಷನ್​ ಸದಸಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಳು.

  ಜುಲೈನಲ್ಲಿ, ಬಾರ್ ಅಸೋಸಿಯೇಷನ್​ಗೆ ಅನಾಮಧೇಯ ಪತ್ರವೊಂದು ಬರುತ್ತದೆ ಹಾಗೂ ಅದರಲ್ಲಿ ಈ ಮಹಿಳೆ ಕುರಿತು ದೂರು ನೀಡಲಾಗಿತ್ತು,  ’’ಮಹಿಳೆ ಕಾನೂನು ಪದವಿ ಅಥವಾ ದಾಖಲಾತಿ ಪ್ರಮಾಣಪತ್ರವನ್ನು ಹೊಂದಿಲ್ಲ’’ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನಂತರ ಸತ್ಯ ಹೊರಗೆ ಬಂದಿತು.  ನಂತರ ವಕೀಲರ ಸಂಘವು ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಈ ಕುರಿತು ಮಾಹಿತಿ ನೀಡಿತಲ್ಲದೆ, ಆಲಪ್ಪುಳ ಉತ್ತರ ಪೊಲೀಸ್ ಠಾಣೆಗೆ ಪೊಲೀಸ್ ದೂರು ನೀಡಿತು.

  ಬಾರ್‌ ಕೌನ್ಸಿಲ್​ ಸದಸ್ಯರಾಗಲು, ಎಲ್‌ಎಲ್‌ಬಿ ಪದವಿ ಹೊಂದಿರಬೇಕು ಅಲ್ಲದೇ ಯಾವುದೇ ಬಾರ್ ಕೌನ್ಸಿಲ್‌ಗಳಲ್ಲಿ ಈ ಪದವಿ ಪತ್ರವನ್ನು ಸಲ್ಲಿಸಿದರೆ ದಾಖಲಾತಿ ಸಂಖ್ಯೆ ಮತ್ತು ಪ್ರಮಾಣಪತ್ರವನ್ನು ಪಡೆಯಬಹುದು. ಈ ಮಹಿಳೆ ಅರ್ಹತೆ ಇಲ್ಲದ ಕಾರಣ ಕೇರಳ ರಾಜ್ಯ ಬಾರ್ ಕೌನ್ಸಿಲ್​ಗೆ ಸದಸ್ಯರಾಗಲು ಅರ್ಹತೆ ಸಿಗುವುದಿಲ್ಲ “ಆದರೆ ಈ ಮಹಿಳೆ ತಿರುವನಂತಪುರಂನ ಇನ್ನೊಬ್ಬ ವಕೀಲರಿಗೆ ಸೇರಿದ ದಾಖಲಾತಿ ಸಂಖ್ಯೆಯನ್ನು ಕೊಟ್ಟಿದ್ದಳು.

  ಜುಲೈ 23 ರ ಗುರುವಾರ, ಶರಣಾಗತಿಗೂ ಮುಂಚೆ ಜಾಮೀನು ಪಡೆಯಲು ಈ ಆರೋಪಿತ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದರ ನಡುವೆ ಆಲಪ್ಪುಳ ಪೊಲೀಸರು ಜಾಮೀನು ರಹಿತ ಸೆಕ್ಷನ್​ಗಳಾದ 420 (ಮೋಸ ಮತ್ತು ವಂಚನೆ, ದಾಖಲೆಗಳನ್ನು ತಿರುಚಿರುವ ಪ್ರಕರಣ) ಕೂಡ ಸೇರಿಸಿದ್ದರು. ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ತನ್ನ  ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದ ನಂತರ ಅವಳು ನ್ಯಾಯಾಲಯದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ.  ಈವರೆಗೆ ಆಕೆಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.

  ಇದನ್ನೂ ಓದಿ: Karnataka Dams Water Level: ರಾಜ್ಯದಲ್ಲಿ ಬಹುತೇಕ ಭರ್ತಿಯಾದ ಡ್ಯಾಂಗಳು; ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಕಳೆದ ಎರಡು ವರ್ಷಗಳಿಂದ ಹಿರಿಯ ವಕೀಲರು ಸೇರಿದಂತೆ ನ್ಯಾಯಾಂಗದ ಕಣ್ಣಿಗೆ ಮಣ್ಣೆರಚಿ ವಕೀಲಿ ವೃತ್ತಿ ಮಾಡಿದ ಈ ಮಹಿಳೆಯನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: