ಪ್ರಿಯಕರನಿಗಾಗಿ ಹೆತ್ತವರನ್ನೇ ಕೊಂದಿದ್ದ ಮಹಿಳೆ; ಆಕೆಗೆ ಬಂದ ಗತಿ ಏನು ಗೊತ್ತಾ?

news18
Updated:August 24, 2018, 5:48 PM IST
ಪ್ರಿಯಕರನಿಗಾಗಿ ಹೆತ್ತವರನ್ನೇ ಕೊಂದಿದ್ದ ಮಹಿಳೆ; ಆಕೆಗೆ ಬಂದ ಗತಿ ಏನು ಗೊತ್ತಾ?
news18
Updated: August 24, 2018, 5:48 PM IST
-ನ್ಯೂಸ್​ 18 ಕನ್ನಡ

ಕೇರಳ,(ಆ.24): ತನ್ನ ಪ್ರಿಯತಮನ ಜೊತೆ ಬದುಕಲು ಹೆತ್ತ ತಂದೆ-ತಾಯಿ ಹಾಗೂ ಮಗಳಿಗೆ ವಿಷ ಉಣಿಸಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರ ವಶವಾಗಿದ್ದ ಮಹಿಳೆಯೊಬ್ಬಳು ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಸೌಮ್ಯ(28) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆ ತನ್ನ ಗಂಡನಿಂದ ಬೇರೆಯಾಗಿ ತವರು ಮನೆಯಲ್ಲಿ ತನ್ನ ತಂದೆ-ತಾಯಿ ಮತ್ತು ಮಗಳೊಂದಿಗೆ ಜೀವನ ನಡೆಸುತ್ತಿದ್ದಳು. ಆಕೆ ತನ್ನ ಪ್ರಿಯಕರನ ಜೊತೆ ಬದುಕಲು ಬಯಸಿದ್ದಳು. ಇದಕ್ಕೆ ಅಡ್ಡಿಯಾದ ತನ್ನ ತಂದೆ-ತಾಯಿ ಮತ್ತು 9 ವರ್ಷದ ಮಗಳನ್ನೇ ವಿಷ ಉಣಿಸಿ ಸಾಯಿಸಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೌಮ್ಯಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಏಪ್ರಿಲ್​ ತಿಂಗಳಲ್ಲಿ ಪೊಲೀಸರ ವಶವಾಗಿದ್ದ ಆರೋಪಿ ಸೌಮ್ಯಳನ್ನು ಕಣ್ಣೂರಿನ ಮಹಿಳಾ ಕಾರಾಗೃಹದಲ್ಲಿ ಹೆಚ್ಚಿನ ಭದ್ರತೆಯಲ್ಲಿ ಇರಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆದೇಶಿಸಿದ್ದರು.

ಸದ್ಯ ಆರೋಪಿ ಸೌಮ್ಯ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ