ಸಾಕಿದ ನಾಯಿಗಳ ಮೇಲಿನ ಪ್ರೀತಿಯಿಂದಾಗಿ ರಕ್ಷಣೆಯನ್ನು ನಿರಾಕರಿಸಿದ್ದಳು!

news18
Updated:August 18, 2018, 6:08 PM IST
ಸಾಕಿದ ನಾಯಿಗಳ ಮೇಲಿನ ಪ್ರೀತಿಯಿಂದಾಗಿ ರಕ್ಷಣೆಯನ್ನು ನಿರಾಕರಿಸಿದ್ದಳು!
  • News18
  • Last Updated: August 18, 2018, 6:08 PM IST
  • Share this:
-ನ್ಯೂಸ್​ 18 ಕನ್ನಡ

ಕೊಚ್ಚಿ,(ಆ.18): ದೇವರನಾಡು  ಕೇರಳದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಸಾಕಷ್ಟು ಮಂದಿ ಮಳೆಗೆ ಬಲಿಯಾಗಿದ್ದಾರೆ. ಜೀವ ಉಳಿದರೆ ಸಾಕು ಎಂದು ತಮ್ಮ ಪ್ರಾಣ ಉಳಿಸಿಕೊಳ್ಳಲು ಜನರು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದರೂ ಸಹ ತಾನು ಸಾಕಿರುವ ನಾಯಿಗಳನ್ನು ಬಿಟ್ಟು ಬರಲಾಗದೆ ರಕ್ಷಣಾ ಸಿಬ್ಬಂದಿಯ ರಕ್ಷಣೆಯನ್ನು ನಿರಾಕರಿಸಿದ್ದಾಳೆ.

ತಾನು ಪ್ರೀತಿಯಿಂದ ಸಾಕಿರುವ 25 ನಾಯಿಗಳನ್ನು ಪ್ರವಾಹದಲ್ಲಿ ಬಿಟ್ಟು ಬರಲು ಮನಸ್ಸು ಒಪ್ಪದ ಕಾರಣ ಆಕೆ ಮನೆಯಿಂದ ಹೊರಬರಲು ಒಪ್ಪುತ್ತಿಲ್ಲ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯೆಲ್ಲಾ ಜಲಾವೃತಗೊಂಡಿತ್ತು. ಪ್ರಾಣಿ ದಯಾ ಸಂಘದವರು ಭೇಟಿ ನೀಡಿದಾಗ ಆಕೆ ಸಾಕಿರುವ ನಾಯಿಗಳು ಮನೆಯಲ್ಲಿ ಹಾಸಿಗೆ ಮೇಲೆ ಮುದುರಿಕೊಂಡು ಮಲಗಿದ್ದವು ಎಂದು ಇಂಟರ್​ನ್ಯಾಷನಲ್​ ಹ್ಯೂಮನ್​ ಸೊಸೈಟಿಯ ಸಾಲ್ಲಿ ವರ್ಮಾ ತಿಳಿಸಿದ್ದಾರೆ.

ರಕ್ಷಣಾ ಸಿಬ್ಬಂದಿಗಳು ನಾಯಿಗಳನ್ನು ಸ್ಥಳಾಂತರಿಸಲು ಒಪ್ಪದಿದ್ದಾಗ ಆಕೆ ರಕ್ಷಣಾ ಸಿಬ್ಬಂದಿಗಳನ್ನು ವಾಪಸ್ಸು ಕಳಿಸಿದ್ದರು.  ಆಕೆ ಪ್ರೀತಿಯಿಂದ ಸಾಕಿದ್ದ ನಾಯಿಗಳನ್ನು ಆ ಪ್ರವಾಹದಲ್ಲಿ ಬಿಟ್ಟುಬರಲು ಸಿದ್ದರಿರಲಿಲ್ಲ. ನನ್ನ ನಾಯಿಗಳಿಗೆ ರಕ್ಷಣೆ ಕೊಡದಿದ್ದರೆ ನನಗೂ ನಿಮ್ಮ ರಕ್ಷಣೆ ಬೇಡ. ಸಾಕಿರುವ ನಾಯಿಗಳನ್ನು ರಕ್ಷಿಸುವವರೆಗೂ ಮನೆಯಿಂದ ಬರುವುದಿಲ್ಲ ಎಂದು ಸುನೀತಾ ನಿರಾಕರಿಸಿದ್ದರು. ಆಗ ರಕ್ಷಣಾ ಸಿಬ್ಬಂದಿ ನಾಯಿಗಳನ್ನು ಸಹ ರಕ್ಷಿಸುವುದಾಗಿ ಒಪ್ಪಿಕೊಂಡರು ಎಂದು ವರ್ಮಾ ಹೇಳಿದ್ದಾರೆ.

ರಕ್ಷಣಾ ಸಿಬ್ಬಂದಿ ಸುನೀತಾಳ ಮನೆ ತಲುಪಿದಾಗ ಮನೆ ಸಂಪೂರ್ಣವಾಗಿ ಪ್ರವಾಹಕ್ಕೀಡಾಗಿತ್ತು. ನಾಯಿಗಳು ಹಾಸಿಗೆಯ ಮೇಲೆ ಮುದುರಿ ಮಲಗಿದ್ದವು. ಈಗ ರಕ್ಷಣಾ ಸಿಬ್ಬಂದಿ ಸುನೀತಾ, ಆಕೆಯ ಗಂಡ ಮತ್ತು ಆಕೆ ಸಾಕಿದ್ದ ನಾಯಿಗಳು ಈಗ ಬೇರೆಡೆಗೆ ಸ್ಥಳಾಂತರಗೊಳಿಸಿದ್ದು, ಸುರಕ್ಷಿತವಾಗಿದ್ದಾರೆ.

ಕೇರಳದಲ್ಲಿ ಅತಿ ಹೆಚ್ಚಾಗಿ ಪ್ರವಾಹಕ್ಕೆ ಒಳಗಾದ ತ್ರಿಸ್ಸೂರ್​ ಜಿಲ್ಲೆಯಲ್ಲಿ ಸುನೀತಾ ಸಿಲುಕಿಕೊಂಡಿದ್ದರು. ಕೇರಳದಲ್ಲಿ ಈಗಾಗಲೇ ಮಳೆಯ ಅಬ್ಬರಕ್ಕೆ 324 ಮಂದಿ ಸಾವನ್ನಪ್ಪಿದ್ದಾರೆ.

ಪ್ರಾಣಿಗಳು ಸಹ ನಮ್ಮಂತೆಯೇ ಎಂದು ಅವುಗಳ ಜೀವ ಕಾಪಾಡಿದ ಸುನೀತಾ ಮತ್ತು ರಕ್ಷಣಾ ಸಿಬ್ಬಂದಿಯ ಮಾನವೀಯತೆ ಮೆಚ್ಚುವಂತದ್ದು.
First published: August 18, 2018, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading