ಮೊಣಕಾಲುದ್ದದ ಕೂದಲಿಗೆ ಕತ್ತರಿ ಹಾಕಿದ ಕೇರಳ ಪೊಲೀಸ್ ಅಧಿಕಾರಿ; ಕಾರಣವೇನು ಗೊತ್ತಾ?

44 ವರ್ಷದ ಅಪರ್ಣಾ ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ದನೆಯ ಕೂದಲಿಗೆ ಹೆಸರಾಗಿದ್ದ ಅವರು ಇದೀಗ ಕೂದಲನ್ನು ಸಂಪೂರ್ಣ ಬೋಳಿಸಿಕೊಂಡಿದ್ದಾರೆ.

Sushma Chakre | news18-kannada
Updated:September 26, 2019, 1:29 PM IST
ಮೊಣಕಾಲುದ್ದದ ಕೂದಲಿಗೆ ಕತ್ತರಿ ಹಾಕಿದ ಕೇರಳ ಪೊಲೀಸ್ ಅಧಿಕಾರಿ; ಕಾರಣವೇನು ಗೊತ್ತಾ?
ಅಪರ್ಣ ಲವಕುಮಾರ್
  • Share this:
ಉದ್ದವಾದ ಕೂದಲು ಬೇಕೆಂಬ ಆಸೆ ಯಾವ ಹೆಣ್ಣಿಗೆ ತಾನೇ ಇರುವುದಿಲ್ಲ? ಮಹಿಳೆಯರ ಸೌಂದರ್ಯಕ್ಕೆ ಅವರ ಕೂದಲೇ ಕಳಶವಿದ್ದಂತೆ. ಆರೋಗ್ಯವಾದ, ಉದ್ದನೆಯ ಕೂದಲಿದ್ದರೆ ಮಹಿಳೆಯರ ಸೌಂದರ್ಯ ಇನ್ನಷ್ಟು ಕಳೆಗಟ್ಟುತ್ತದೆ. ಟ್ರೆಡಿಷನಲ್ ಆಗಿರಲು ಇಷ್ಟಪಡುವವರು ಉದ್ದನೆಯ ಕೂದಲನ್ನು ಜಡೆ ಹೆಣೆದುಕೊಂಡರೆ ಮಾಡರ್ನ್ ಆಗಿರಲು ಬಯಸುವವರು ಆ ಕೂದಲಿಗೆ ಪೋನಿ ಹಾಕಿಕೊಂಡು ಅಥವಾ ಫ್ರೀ ಹೇರ್ ಬಿಟ್ಟುಕೊಳ್ಳುತ್ತಾರೆ. ಆದರೆ, ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​ ರೋಗಿಗಳಿಗಾಗಿ ತಮ್ಮ ಕೂದಲನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.

ಕ್ಯಾನ್ಸರ್​ ರೋಗಿಗಳಿಗೆ ಕೀಮೋಥೆರಪಿ ನೀಡಿದ ಬಳಿಕ ಅವರ ಕೂದಲು ಉದುರುತ್ತದೆ. ಗಂಡಸರಾದರೆ ಕ್ಯಾಪ್ ಹಾಕಿಕೊಂಡೋ, ಸ್ಕಾರ್ಫ್​ ಸುತ್ತಿಕೊಂಡೋ ಬೋಳುತಲೆಯನ್ನು ಮರೆಮಾಚಿಕೊಳ್ಳುತ್ತಾರೆ. ಆದರೆ, ಮಹಿಳೆಯರ ತಲೆಯಲ್ಲಿನ ಕೂದಲು ಅವರ ಸೌಂದರ್ಯ ವೃದ್ಧಿಸುವುದು ಮಾತ್ರವಲ್ಲ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಕೀಮೋಥೆರಪಿಯಿಂದ ತಲೆಗೂದಲು ಉದುರಲಾರಂಭಿಸಿದಾಗ ಮಹಿಳೆಯರು ಅದೇ ಯೋಚನೆಯಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಅಂಥವರಿಗಾಗಿ ಟೋಪನ್​ಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಕೂದಲು ಸಂಗ್ರಹಿಸಲು ಅನೇಕ ಎನ್​ಜಿಓಗಳು ಅಭಿಯಾನ ನಡೆಸುತ್ತಿರುತ್ತವೆ. ಆ ಅಭಿಯಾನದ ಭಾಗವಾಗಿ ಕೇರಳದ ಪೊಲೀಸ್ ಅಧಿಕಾರಿ ಅಪರ್ಣ ಲವಕುಮಾರ್ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.

ಸ್ಕ್ಯಾನಿಂಗ್​ ಮಷಿನ್​ ಒಳಗೇ ರೋಗಿಯನ್ನು ಮರೆತ ಆಸ್ಪತ್ರೆ ಸಿಬ್ಬಂದಿ​; ಆಮೇಲೇನಾಯ್ತು ಗೊತ್ತಾ?

ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಅಪರ್ಣ ಲವಕುಮಾರ್ ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾಗಿದ್ದಾರೆ. 44 ವರ್ಷದ ಪೊಲೀಸ್ ಅಧಿಕಾರಿ ಅಪರ್ಣಾ ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಣಕಾಲು ಮುಟ್ಟುವಷ್ಟು ಉದ್ದನೆಯ ಕೂದಲು ಹೊಂದಿದ್ದ ಅಪರ್ಣ ಪೊಲೀಸ್ ಸಮವಸ್ತ್ರ ಧರಿಸಿದಾಗ ತುರುಬು ಕಟ್ಟಿಕೊಂಡರೆ ದೊಡ್ಡ ಗಂಟನ್ನು ಇಟ್ಟುಕೊಂಡಂತೆ ಕಾಣುತ್ತಿತ್ತು. ಸಮೃದ್ಧವಾಗಿ ಬೆಳೆದಿದ್ದ ಕೂದಲನ್ನು ಬೋಳಿಸಿಕೊಂಡಿರುವ ಅಪರ್ಣ ಈ ಮೊದಲು ಅರ್ಧ ಕೂದಲನ್ನು ಕ್ಯಾನ್ಸರ್​ ರೋಗಿಗಳಿಗೆ ನೀಡಿದ್ದರು. ಇದೀಗ ಪೂರ್ತಿ ಕೂದಲನ್ನು ದಾನ ಮಾಡಿದ್ದಾರೆ.

Aparna Lavakumar
ಅಪರ್ಣ ಲವಕುಮಾರ್


ಈ ಬಗ್ಗೆ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆ ವರದಿ ಮಾಡಿದ್ದು, ಕ್ಯಾನ್ಸರ್​ನಿಂದ ತಲೆಕೂದಲು ಕಳೆದುಕೊಂಡು ಬೋಳುತಲೆಯವರಾಗುವ ಮಹಿಳೆಯರಿಗೆ ಬೆಂಬಲ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅಪರ್ಣ ಹೇಳಿದ್ದಾರೆ. ಸಂಪೂರ್ಣ ಮಹಿಳಾ ಪೊಲೀಸ್​ ಸಿಬ್ಬಂದಿಯೇ ತುಂಬಿರುವ ಕೇರಳದ ತ್ರಿಶೂರ್​ನಲ್ಲಿರುವ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿರುವ ಅಪರ್ಣ ಲವಕುಮಾರ್ ಬೇರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ಸ್ಥಳೀಯ ಶಾಲೆಯೊಂದಕ್ಕೆ ಕ್ಯಾನ್ಸರ್ ಜಾಗೃತಿ ಮೂಡಿಸಲು ತೆರಳಿದ್ದಾಗ ಅಲ್ಲಿದ್ದ ಕ್ಯಾನ್ಸರ್​ ಪೀಡಿತ 5ನೇ ತರಗತಿಯ ಮಕ್ಕಳನ್ನು ನೋಡಿದಾಗ ಕೂದಲನ್ನು ದಾನ ಮಾಡುವ ಬಗ್ಗೆ ನಿರ್ಧರಿಸಿದ್ದಾಗಿ ಅಪರ್ಣ ಹೇಳಿದ್ದಾರೆ.

ದುರಂತ ಪ್ರೇಮಕತೆ; ಪ್ರೇಯಸಿಗೆ ವಿಭಿನ್ನವಾಗಿ ಪ್ರಪೋಸ್​ ಮಾಡಲು ಹೋದವ ವಾಪಾಸ್​ ಬರಲೇ ಇಲ್ಲ!ಚಿಕ್ಕಮಕ್ಕಳು ಮತ್ತು ಹೆಣ್ಣುಮಕ್ಕಳ ಕೂದಲು ಉದುರಿದಾಗ ಕೀಮೋಥೆರಪಿಯಂತಹ ಚಿಕಿತ್ಸೆಯಿಂದ ಅವರ ದೇಹ ಜರ್ಜರಿತವಾಗಿರುತ್ತದೆ. ಇದರ ಜೊತೆಗೆ ಗೆಳೆಯರು, ಸುತ್ತಮುತ್ತಲಿನವರ ಅವರ ಸೌಂದರ್ಯವನ್ನು ನೋಡಿ ಆಡಿಕೊಳ್ಳುವಾಗ ಮಾನಸಿಕವಾಗಿ ಇನ್ನಷ್ಟು ಕುಗ್ಗಿಹೋಗುತ್ತಾರೆ. ಅಂತಹವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕೂದಲು ದಾನ ಅಭಿಯಾನ ಬಹಳ ಮುಖ್ಯವಾಗಿದೆ ಎಂಬುದು ಅಪರ್ಣ ಅಭಿಪ್ರಾಯ. ಸ್ಟೈಲಿಶ್​ ಆಗಿ ಕಾಣಬೇಕೆಂದು ಸಲೂನ್​ಗೆ ಹೋಗಿ ಹೇರ್​ಕಟ್ ಮಾಡಿಸಿಕೊಳ್ಳುವ ಬದಲು ಈ ರೀತಿ ಒಳ್ಳೆಯ ಉದ್ದೇಶಕ್ಕಾಗಿ ಕೂದಲನ್ನು ನೀಡಿದರೆ ಬೇರೆಯವರ ಮುಖದಲ್ಲೂ ನಗು ಮೂಡುತ್ತದೆ.

First published:September 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ