Lottery: ಕೊನೆಗೂ ಸಿಕ್ಕೇಬಿಟ್ರು ಕೇರಳದ ಬಂಪರ್‌ ಲಾಟರಿಯ ಜಾಕ್‌ಪಾಟ್‌ ವಿನ್ನರ್! 10 ಕೋಟಿ ಕೈಗೆ ಸಿಕ್ಕಿದ್ದೇ ಪವಾಡ

ಕೇರಳ ಲಾಟರಿ ಇಲಾಖೆ ಪ್ರತಿ ವರ್ಷ ನಡೆಸುವ ವಿಷು ಬಂಪರ್‌ ಲಾಟರಿಯ ಜಾಕ್‌ಪಾಟ್‌ ವಿಜೇತರು ಒಂದು ವಾರದ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಂಬಂಧಿಗಳಾಗಿರುವ ಡಾ.ಎಂ.ಪ್ರದೀಪ್‌ ಕುಮಾರ್‌ ಮತ್ತು ಎನ್‌ ರಮೇಶ್‌ ಎಂಬುವವರು 10 ಕೋಟಿ ರೂ.ಗೆದ್ದಿದ್ದಾರೆ. ಸಂಬಂಧಿಯೊಬ್ಬರನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬಂದಾಗ ಖರೀದಿಸಿದ ಲಾಟರಿ ಟಿಕೆಟ್‌ ಅದೃಷ್ಟವನ್ನೇ ಹೊತ್ತು ತಂದಿದೆ

ಕೇರಳದ ವಿಷು ಬಂಪರ್‌ ಲಾಟರಿಯ ಜಾಕ್‌ಪಾಟ್‌

ಕೇರಳದ ವಿಷು ಬಂಪರ್‌ ಲಾಟರಿಯ ಜಾಕ್‌ಪಾಟ್‌

  • Share this:
ಕನ್ಯಾಕುಮಾರಿ: ಕೇರಳ (Kerala) ಲಾಟರಿ ಇಲಾಖೆ ಪ್ರತಿ ವರ್ಷ ನಡೆಸುವ ವಿಷು ಬಂಪರ್‌ ಲಾಟರಿಯ ಜಾಕ್‌ಪಾಟ್‌ ವಿಜೇತರು ಒಂದು ವಾರದ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ. ತಮಿಳುನಾಡಿನ (Tamil Nadu) ಕನ್ಯಾಕುಮಾರಿಯಲ್ಲಿ ಸಂಬಂಧಿಗಳಾಗಿರುವ ಡಾ.ಎಂ.ಪ್ರದೀಪ್‌ ಕುಮಾರ್‌ ಮತ್ತು ಎನ್‌ ರಮೇಶ್‌ ಎಂಬುವವರು 10 ಕೋಟಿ ರೂ.ಗೆದ್ದಿದ್ದಾರೆ. ಸಂಬಂಧಿಯೊಬ್ಬರನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬಂದಾಗ ಖರೀದಿಸಿದ ಲಾಟರಿ ಟಿಕೆಟ್‌ (Lottery Ticket) ಅದೃಷ್ಟವನ್ನೇ ಹೊತ್ತು ತಂದಿದೆ. ಹೌದು, ಮೇ ತಿಂಗಳ ಆರಂಭದಲ್ಲಿ ಸಂಬಂಧಿಯೊಬ್ಬರನ್ನು ಕರೆದೊಯ್ಯಲು ಡಾ.ಎಂ.ಪ್ರದೀಪ್ ಕುಮಾರ್ ಮತ್ತು ಎನ್.ರಮೇಶ್ ಎಂಬುವವರು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆಗ ಏರ್‌ಪೋರ್ಟ್‌ನಲ್ಲಿ 'HB 727990' ಕ್ರಮ ಸಂಖ್ಯೆ ಇರುವ ಲಾಟರಿ ಟಿಕೆಟ್‌ ಖರೀದಿಸಿದ್ದರು. ಈಗ ಅದೇ ಲಾಟರಿ ಟಿಕೆಟ್‌ಗೆ ಬಂಪರ್‌ ಬಹುಮಾನ ಬಂದಿದ್ದು, 10 ಕೋಟಿ ರೂ. ಗೆದ್ದಿದ್ದಾರೆ.

ಚೈತನ್ಯ ಲಕ್ಕಿ ಸೆಂಟರ್‌ನಿಂದ ಖರೀದಿಸಿದ ಟಿಕೆಟ್‌
ತಿರುವನಂತಪುರಂನ ಪಜವಂಗಡಿಯಲ್ಲಿರುವ ಚೈತನ್ಯ ಲಕ್ಕಿ ಸೆಂಟರ್‌ನಿಂದ ಟಿಕೆಟ್‌ ಖರೀದಿಸಿದ್ದ ವಲಿಯತ್ತೂರ ಮೂಲದ ರಂಗನ್ ಹಾಗೂ ಆತನ ಪತ್ನಿ ಜಸೀಂತಾ ವಿಮಾನ ನಿಲ್ದಾಣದ ಆವರಣದಲ್ಲಿ ಅದನ್ನು ಮಾರಾಟ ಮಾಡಿದ್ದರು. ಮೇ 22ರಂದು ವಿಷು ಬಂಪರ್ ಲಾಟರಿಯ ಡ್ರಾ ನಡೆದಿತ್ತು. ಆದರೆ, ಡ್ರಾ ನಡೆದು ಒಂದು ವಾರ ಕಳೆದರೂ ಅದೃಷ್ಟಶಾಲಿ ಯಾರು ಎಂಬುದು ಪತ್ತೆಯಾಗಿದ್ದಿಲ್ಲ.

ಆದರೆ, ವಿಜೇತರು ಸೋಮವಾರ ತಿರುವನಂತಪುರಂನಲ್ಲಿರುವ ಲಾಟರಿ ನಿರ್ದೇಶನಾಲಯದಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ನಮ್ಮ ಊರಿನಲ್ಲಿ ದೇವಸ್ಥಾನದ ಉತ್ಸವಗಳಲ್ಲಿ ನಿರತರಾಗಿದ್ದರಿಂದ ಟಿಕೆಟ್ ಸಲ್ಲಿಸಲು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಹೀಗೆಲ್ಲ ಆಗಿತ್ತು
ಲಾಟರಿ ವಿಜೇತರು ಕೇರಳದ ಹೊರಗಿನವರಾಗಿರುವುದರಿಂದ, ಟಿಕೆಟ್ ಖರೀದಿಸಿದ ಸಂದರ್ಭದಲ್ಲಿ ಕೇರಳಕ್ಕೆ ಭೇಟಿ ನೀಡಿದ ಉದ್ದೇಶವನ್ನು ಲಾಟರಿ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಎಲ್ಲ ವಿಜೇತರು ನೋಟರಿಯಿಂದ ದೃಢೀಕರಿಸಿದ ವೈಯಕ್ತಿಕ ವಿವರಗಳನ್ನು ಕೂಡ ಲಾಟರಿ ನಿರ್ದೇಶನಾಲಯಕ್ಕೆ ಒದಗಿಸುವುದು ಕಡ್ಡಾಯವಾಗಿದೆ. ಬಂಪರ್‌ ಡ್ರಾ ಫಲಿತಾಂಶ ಪ್ರಕಟವಾದ ತಕ್ಷಣ ವಿಜೇತರು ಪತ್ತೆಯಾಗದೆ ಇರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆಗಳು ಸಂಭವಿಸಿವೆ.

ಲಾಟರಿ ಗೆದ್ದು 2 ತಿಂಗಳ ಬಳಿಕ ಬಂದಿದ್ದ ಮನೋಜ್‌
2010ರಲ್ಲಿ ವಿಷು ಬಂಪರ್ ಲಾಟರಿ ವಿಜೇತರು ಎರಡು ತಿಂಗಳ ಬಳಿಕ ತಮ್ಮ ಬಹುಮಾನದ ಹಣ ಪಡೆಯಲು ಬಂದಿದ್ದರು. ಲಾಟರಿ ಟಿಕೆಟ್ ಅನ್ನು ಖರೀದಿಸಿ ಪುಸ್ತಕದೊಳಗೆ ಇಟ್ಟುಕೊಂಡಿದ್ದ ಅದೃಷ್ಟಶಾಲಿ ವಿಜೇತರು ಸ್ನೇಹಿತರೊಂದಿಗೆ ಸಾಮಾನ್ಯವಾಗಿ ಮಾತನಾಡುವಾಗ ಫಲಿತಾಂಶದ ಬಗ್ಗೆ ತಿಳಿದುಕೊಂಡಿದ್ದರು. ಆಗ ಅವರಿಗೆ ಮೊದಲ ಬಹುಮಾನ 2 ಕೋಟಿ ರೂ. ಮತ್ತು ಇನ್ನೋವಾ ಕಾರು ತಮಗೆ ಬಂದಿದೆ ಎಂಬುದು ಗೊತ್ತಾಗಿತ್ತು.

ಎರ್ನಾಕುಲಂನ ಕಾಲಡಿ ಮೂಲದ ರಬ್ಬರ್ ಟ್ಯಾಪಿಂಗ್ ಕೆಲಸಗಾರ ಮನೋಜ್ ಅವರು 2010ರಲ್ಲಿ ತ್ರಿಶೂರ್‌ನ ತ್ರಿಪ್ರಯಾರ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಸ್‌ಗಾಗಿ ಕಾಯುತ್ತಿದ್ದಾಗ ಲಾಟರಿ ಟಿಕೆಟ್ ಖರೀದಿಸಿದ್ದರು. ನಿಯಮಿತವಾಗಿ ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ ಮನೋಜ್‌ಗೆ ಇರಲಿಲ್ಲ. ಪುಸ್ತಕದಲ್ಲಿ ಇಟ್ಟಿದ್ದ ಲಾಟರಿ ಟಿಕೆಟ್‌ ಬಗ್ಗೆ ಮರೆತುಬಿಟ್ಟಿದ್ದರು. ಬಹುಮಾನ ಗೆದ್ದ ಅದೃಷ್ಟಶಾಲಿಯ ಹುಡುಕಾಟದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಬೇಗ ಮನೆಯಿಂದ ಹೊರಟು ತಡರಾತ್ರಿ ಹಿಂತಿರುಗುವ ಮನೋಜ್‌ಗೆ ಇದೆಲ್ಲವೂ ತಿಳಿದೇ ಇರಲಿಲ್ಲ.

ಇದನ್ನೂ ಓದಿ: Fresher’s Salary: ಐಟಿ ವೇತನ ತಾರತಮ್ಯ: ಸಿಇಒ ವೇತನ ಹೆಚ್ಚಳ, ಆದ್ರೆ ಫ್ರೆಷರ್‌ಗಳ ಸಂಬಳ ಹೆಚ್ಚಾಗಿದೆಷ್ಟು?

ಎರಡು ತಿಂಗಳ ಬಳಿಕವೂ ಲಾಟರಿ ವಿಜೇತರು ಪತ್ತೆಯಾಗಿಲ್ಲ ಎಂದು ಪತ್ರಿಕೆ ವರದಿ ಮಾಡಿತ್ತು. ಈ ಬಗ್ಗೆ ಮನೋಜ್‌ ಸ್ನೇಹಿತರ ಮದುವೆಯಲ್ಲಿ ಚರ್ಚಿಸುತ್ತಿದ್ದಾಗ, ಮನೋಜ್‌ಗೆ ತಾನೂ ಖರೀದಿಸಿದ್ದ ಲಾಟರಿ ನೆನಪಾಗಿದೆ. ಆಗ, ಲಾಟರಿ ಟಿಕೆಟ್‌ ಹುಡುಕಿ ತ್ರಿಪ್ರಯಾರ್‌ನಲ್ಲಿರುವ ಏಜೆನ್ಸಿಗೆ ಕರೆ ಮಾಡಿ ಟಿಕೆಟ್‌ಗೆ ಬಹುಮಾನ ಬಂದಿರುವುದನ್ನು ಖಚಿತ ಪಡಿಸಿಕೊಂಡಿದ್ದಾನೆ. ಬಳಿಕ ವಿಳಂಬಕ್ಕೆ ಕಾರಣ ನೀಡಿ ಬಹುಮಾನವನ್ನು ಮನೋಜ್‌ ತನ್ನದಾಗಿಸಿಕೊಂಡಿದ್ದರು.

ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್‌ ಹಣವನ್ನು ಉತ್ತರಾಧಿಕಾರಿಗಳಿಗೆ ವರ್ಗಾಯಿಸುವುದು ಹೇಗೆ?

ಅನೇಕ ಬಾರಿ ಗೆದ್ದವರು ಬಂದೇ ಇಲ್ಲ!
ಗೆದ್ದ ಬಹುಮಾನವನ್ನು ಪಡೆಯಲು ತಡವಾಗಿ ಬಂದಿರುವುದು ಒಂದು ಕಡೆಯಾದರೆ, ಗೆದ್ದ ಲಾಟರಿ ಬಹುಮಾನವನ್ನು ಪಡೆಯದ ಅನೇಕ ಜನರಿದ್ದಾರೆ. 2016-17ನೇ ಸಾಲಿನಲ್ಲಿ ವಿಜೇತರು ಲಾಟರಿ ಬಹುಮಾನದ ಹಣ ಪಡೆಯಲು ಬರದ ಕಾರಣ ರಾಜ್ಯ ಸರ್ಕಾರಕ್ಕೆ 105 ಕೋಟಿ ರೂ. ಉಳಿದತ್ತು. ಒಮ್ಮೆ ಲಾಟರಿ ಡ್ರಾ ಘೋಷಿಸಿದರೆ, ವಿಜೇತರು ತಮ್ಮ ಲಾಟರಿ ಟಿಕೆಟ್ ಅನ್ನು ಲಾಟರಿ ನಿರ್ದೇಶನಾಲಯಕ್ಕೆ 30 ದಿನಗಳ ಒಳಗಾಗಿ ಸಲ್ಲಿಸಬೇಕು. ಇದನ್ನು ವಿಶೇಷ ಸಂದರ್ಭಗಳಲ್ಲಿ 90 ದಿನಗಳವರೆಗೆ ವಿಸ್ತರಿಸಲಾಗಿದೆ.
Published by:Ashwini Prabhu
First published: