Kerala: ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಸೇನಾಪಡೆ, ಊಫ್​.. ಬದುಕಿತು ಬಡಜೀವ!

43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬು (23) ಅವರನ್ನು ಮರಳಿ ಕರೆತರುವ ಕಾರ್ಯಾಚರಣೆ (Rescue Operation) ಯಶಸ್ವಿಯಾಗಿದೆ. ಸೇನಾ ತಂಡ ಬಾಬುವಿನ ಕಡೆ ತಲುಪಿದ್ದುಅವರನ್ನು ನಿಧಾನವಾಗಿ ಮೇಲೆತ್ತಿದೆ.

ಭಾರತೀಯ ಸೇನೆಯಿಂದ ಯುವಕನ ರಕ್ಷಣೆ

ಭಾರತೀಯ ಸೇನೆಯಿಂದ ಯುವಕನ ರಕ್ಷಣೆ

  • Share this:

ಕಡಿದಾದ ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ ಟ್ರೆಕ್(Treck) ಅಥವಾ ಚಾರಣ ಮಾಡುವುದು ಸಾಹಸ(Action)ಮಯ ಚಟುವಟಿಕೆಯೇ ಹೌದು. ಆದರೆ, ಇಂತಹ ಸಾಹಸಮಯ ಚಟುವಟಿಕೆಯಲ್ಲಿ ತೊಡಗಿದ್ದಾಗ ಹೆಚ್ಚು ಎಚ್ಚರಿಕೆಯಿಂದಿರುವುದು ಅವಶ್ಯಕ. ಇಲ್ಲವಾದಲ್ಲಿ ನಡೆಯಬಾರದಂತಹ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹದ್ದೇ ಒಂದು ದಾರುಣ ಘಟನೆಯೊಂದು ಈಗ ಕೇರಳ(Kerala)ದಿಂದ ವರದಿಯಾಗಿದೆ. ಫೆಬ್ರವರಿ 7, ಸೋಮವಾರದಂದು ಬೆಳಗ್ಗೆ 7 ಗಂಟೆಗೆ ಬಾಬು(Babu) ಹಾಗೂ ಅವನ ಮೂರು ಸ್ನೇಹಿತರು ಕೇರಳದ ಕುರುಂಬಚಿ(Kurambachi) ಎಂಬ ಸ್ಥಳಕ್ಕೆ ಚಾರಣಕ್ಕೆಂದು ತೆರಳಿದ್ದರು. ಬೆಟ್ಟ ಹತ್ತಿ ಆನಂದಪಟ್ಟು ನಾಲ್ಕೂ ಜನ ಸ್ನೇಹಿತರು ಹಿಂತಿರುಗುವಾಗ ಬಾಬು ಕಾಲು ಜಾರಿ ಬಿದ್ದರು.  ಆದರೆ ಅದೃಷ್ಟವಶಾತ್, ಬೆಟ್ಟದ ಇಳಿಜಾರಿನಲ್ಲಿ ಇದ್ದ ಒಂದು ಸಂದಿಯೊಳಗೆ ಬಾಬು ಸಿಕ್ಕಿ ಹಾಕಿಕೊಂಡರು. ಆ ಸಂದಿಯು ಇಕ್ಕಟ್ಟಾದ ಸ್ಥಳವಾಗಿದ್ದು, ಅದರಲ್ಲೀಗ ಬಾಬು ಸಿಲುಕಿಕೊಂಡು ಚಡಪಡಿಸತೊಡಗಿದರು.


ಚಾರಣಕ್ಕೆ ಹೋಗಿ ಬಂಡೆ ಮಧ್ಯೆ ಲಾಕ್​!

ಬಾಬು ಅವರ ಸ್ನೇಹಿತರು ಬಾಬುವನ್ನು ರಕ್ಷಿಸಲೆಂದು ತಮಗೆ ತಿಳಿದ ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಿದರಾದರೂ ಬಾಬುನನ್ನು ಸಂದಿಯಿಂದ ಮೇಲೇರಿ ಬರುವಂತೆ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಕೊನೆಗೆ ಅವರು ಬೆಟ್ಟ ಇಳಿದು ಸ್ಥಳೀಯ ಗ್ರಾಮದ ಜನರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಮಾಲಂಪುಳ ಪೊಲೀಸರು ನಿಗದಿತ ಸ್ಥಳಕ್ಕೆ ಬಂದರಾದರೂ ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಲಿಲ್ಲ, ಕಾರಣ ಮಧ್ಯರಾತ್ರಿ ಆಗಿ ಹೋಗಿತ್ತು. ಹಾಗಾಗಿ ಅವರು ಅಲ್ಲಿ ಮೊಕ್ಕಾಂ ಹೂಡಬೇಕಾಯಿತು. ಬೆಳಗ್ಗೆ ಬೆಳಕು ಹರಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ, ಬಾಬುನನ್ನು ಅಂತಹ ದೊಡ್ಡ ಬೆಟ್ಟ ಪ್ರದೇಶದ ಚಿಕ್ಕ ಸಂದಿಯಲ್ಲಿ ಹುಡುಕುವುದು ಕಷ್ಟಕರವಾಯಿತು.


ಇದನ್ನೂ ಓದಿ: Hyundai ಬುಕ್ಕಿಂಗ್​ ರದ್ದು ಮಾಡಲು ಮುಂದಾದ ಗ್ರಾಹಕರು


ಡ್ರೋನ್​ ಹಾರಿಸಿ ವ್ಯಕ್ತಿ ಇರುವ ಸ್ಥಳ ಪತ್ತೆ!

ರಕ್ಷಣಾ ತಂಡದವರು ಬಾಬುನನ್ನು ಬೆಟ್ಟದ ಮೇಲಿನಿಂದ ಅವನು ಸಿಲುಕಿಕೊಂಡಿರುವ ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿದ್ದು ಅವನು ನಿಖರವಾಗಿ ಸಿಲುಕಿಕೊಂಡಿರುವ ಸ್ಥಳ ಸರಿಯಾಗಿ ಗೊತ್ತಾಗುತ್ತಿಲ್ಲ. ಈ ನಡುವೆ ಡ್ರೋನ್ ಅನ್ನು ಹಾರಿಸಿ ಬಾಬು ಇರುವ ಸ್ಥಳ ಪತ್ತೆ ಹಚ್ಚಲಾಗುತ್ತಿದೆ. ಡ್ರೋನ್ ಈಗಾಗಲೇ ಸೆರೆ ಹಿಡಿದಿರುವ ದೃಶ್ಯಗಳಲ್ಲಿ ಬಾಬು ಬೆಟ್ಟದ ಚಿಕ್ಕ ಸಂದಿಯೊಂದರಲ್ಲಿ ಒಂದೇ ಭಂಗಿಯಲ್ಲಿ ಕುಳಿತಿರುವುದು ಕಂಡುಬಂದಿದೆ.


ರಕ್ಷಣೆಗೆ ಬಂದಿದ್ದ ಹೆಲಿಕಾಪ್ಟರ್​!

ಇಷ್ಟಾಗಿಯೂ ಬಾಬುನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆಗ ಕೊಚ್ಚಿ ನಗರ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ ಸಹಾಯ ಕೇಳಲಾಯಿತು. ಇದಕ್ಕೆ ಸ್ಪಂದಿಸಿ ಹೆಲಿಕಾಪ್ಟರ್ ಬಂದಿತಾದರೂ ಬೆಟ್ಟದ ಸನಿಹಕ್ಕೆ ಅದರಲ್ಲೂ ಬಾಬು ಸಿಲುಕಿರುವ ಸ್ಥಳದ ಬಳಿ ಹೋಗಲು ಸಾಧ್ಯವಾಗದೆ ಮತ್ತೆ ಮರಳಬೇಕಾಯಿತು. ಪರಿಸ್ಥಿತಿಯ ಗಂಭೀರತೆಯನ್ನರಿತ ಪಾಲಕ್ಕಾಡ್ ಕಮಿಷನರ್ ಆಗಿರುವ ಮೃನ್ಮಯಿ ಜೋಶಿ ಶಶಾಂಕ್ ಅವರು ನೌಕಾದಳ ಹೆಲಿಕಾಪ್ಟರ್ ಸಹಾಯ ಕೋರಿದರು.


ಕೊನೆಗೆ ಭಾರತೀಯ ಸೇನೆಯಿಂದ ವ್ಯಕ್ತಿಯ ರಕ್ಷಣೆ!

ನೇವಿ ಹೆಲಿಕಾಪ್ಟರ್ ಸ್ಥಳಕ್ಕೆ ಬಂದು ಬಾಬು ಸಿಲುಕಿರಬಹುದಾದ ಸ್ಥಳಕ್ಕೆ ಹಗ್ಗವನ್ನು ಜೋತು ಬಿಟ್ಟು ಅದರಿಂದ ಬಾಬುನನ್ನು ಕಾಪಾಡಲು ಪ್ರಯತ್ನಿಸಲಾಯಿತಾದರೂ ಅದು ಯಶ ಕಾಣಲಿಲ್ಲ. ಕೊನೆಗೆ ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಹಿತಿ ತಲುಪಿ ಅವರು ಭಾರತೀಯ ಸೈನ್ಯದ ಸಹಾಯ ಕೋರಿದರು. ಇದಕ್ಕೆ ಸ್ಪಂದಿಸಿರುವ ಭಾರತೀಯ ಸೈನ್ಯದ ಪರ್ವತಾರೋಹಣ ವಿಭಾಗದ ನಿಪುಣ ಯೋಧರ ತಂಡವೊಂದು ಬೆಂಗಳೂರಿನಿಂದ ನಿಗದಿತ ಸ್ಥಳಕ್ಕೆ ತಲುಪಿತು.


ಇದನ್ನೂ ಓದಿ: ಅಪ್ರಾಪ್ತೆಯನ್ನು ರೇಪ್ ಮಾಡಿ ವಿಡಿಯೋ ವೈರಲ್ ಮಾಡಿದ ಕಿರಾತಕಬರೋಬ್ಬರಿ 43 ಗಂಟೆಗಳ ಬಳಿಕ ಬಾಬು ರಕ್ಷಣೆ

43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬು (23) ಅವರನ್ನು ಮರಳಿ ಕರೆತರುವ ಕಾರ್ಯಾಚರಣೆ (Rescue Operation) ಯಶಸ್ವಿಯಾಗಿದೆ. ಸೇನಾ ತಂಡ ಬಾಬುವಿನ ಕಡೆ ತಲುಪಿದ್ದುಅವರನ್ನು ನಿಧಾನವಾಗಿ ಮೇಲೆತ್ತಿದೆ. ರಾತ್ರಿಯೇ ಸ್ಥಳಕ್ಕಾಗಮಿಸಿದ ಸೇನಾ ತಂಡ ಬೆಟ್ಟದ ತುದಿ ತಲುಪಿ ಕೆಳಗೆ ಬಾಬು ಕುಳಿತಿದ್ದ ಜಾಗಕ್ಕೆ ಹಗ್ಗ ಬಿಗಿದಿತ್ತು. ಸೈನಿಕರು ಬಾಬು ಜೊತೆ ಮಾತನಾಡಿದ್ದಾರೆ. ಸುರಕ್ಷತಾ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿ ಬಾಬು ಅವರನ್ನು ಸೇನೆ ಮೇಲೆತ್ತಿದೆ.

Published by:Vasudeva M
First published: