ಪ್ರವಾಸ (Travel)ಮಾಡುವುದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.. ನಾವು ಮೆಚ್ಚಿದವರ ಜೊತೆಗೆ ವಿಶ್ವದ(World) ನಾನಾ ಭಾಗಗಳಿಗೆ ಹೋಗೋದು ಬಹುತೇಕರ ಅದೃಷ್ಟವೇ ಸರಿ.. ಈ ರೀತಿ ತಾನು ಮೆಚ್ಚಿದವರ ಜೊತೆಗೆ ಪ್ರಪಂಚ ಪರ್ಯಟನೆ ಮಾಡುವುದು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಿಗುವ ಅವಕಾಶ.. ಈ ರೀತಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತನ್ನ ಹೆಂಡತಿಯ(Wife) ಜೊತೆಗೆ ಬದುಕಿನುದ್ದಕ್ಕೂ 25ಕ್ಕೂ ಹೆಚ್ಚು ದೇಶಗಳಿಗೆ (25 Country) ಭೇಟಿ ಕೊಟ್ಟಿದ್ದ ಕೇರಳದ (Kerala) ಕೆ. ಆರ್ ವಿಜಯನ್ ನಿಧನರಾಗಿದ್ದಾರೆ.
ಟೀ ಮಾರುತ್ತ ಬಂದ ಹಣದಿಂದ ಹೆಂಡತಿಯ ಜೊತೆಗೆ ಪ್ರಪಂಚ ಪರ್ಯಟನೆ
ಕೊಚ್ಚಿಯ ಕತ್ರಿ ಕಡವು ಎಂಬಲ್ಲಿ ತನ್ನ ಹೆಂಡತಿ ಮೋಹನ ಜೊತೆ ಸೇರಿ, ಶ್ರೀ ಬಾಲಾಜಿ ಕಾಫಿ ಹೌಸ್ ಎಂಬ ಅಂಗಡಿ ಇಟ್ಟುಕೊಂಡಿದ್ದ ವಿಜಯನ್ ದಿನಕ್ಕೆ ಕೇವಲ 300 ರೂಪಾಯಿಗಳನ್ನು ಗಳಿಸಿ ಉಳಿಸುತ್ತಿದ್ದರು.. ಮತ್ತು ಉಳಿತಾಯದ ಹಣದಿಂದ 14 ವರ್ಷಗಳಲ್ಲಿ 6 ಖಂಡಗಳ, ಬರೋಬ್ಬರಿ 25ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ರು.. ಆದರೆ ಈಗ ತಮ್ಮ ಪತ್ನಿಯ ಜೊತೆಗೆ ಮನೆಯ ಪ್ರವಾಸ ಮಾಡಿಬಂದ ಕೆಲವೇ ದಿನಗಳಲ್ಲಿ ವಿಜಯನ್ ಅವರು ಮೃತರಾಗಿದ್ದಾರೆ..
ಇದನ್ನೂ ಓದಿ: 6 ತಿಂಗಳಿಂದ ಇವರದ್ದು ಕಾರಲ್ಲೇ ನಿದ್ದೆ, ಪೆಟ್ರೋಲ್ ಬಂಕ್ನಲ್ಲೇ ಸ್ನಾನ, ಕೊರೊನಾ ಕಾಲದಲ್ಲಿ ದೇಶ ಸುತ್ತುತ್ತಿದ್ದಾರೆ ಈ ದಂಪತಿ!
ಕೆಲವು ತಿಂಗಳುಗಳ ಹಿಂದೆ ವಿಜಯನ್ ದಂಪತಿ ರಷ್ಯಾ ಪ್ರವಾಸ ಮುಗಿಸಿಕೊಂಡು ಕೇರಳಕ್ಕೆ ಮರಳಿ ಬಂದಿದ್ದರು.. ಇದಾದ ಬಳಿಕ ವಿಜಯನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರನ್ನು ಕೊಚ್ಚಿಯ ಶ್ರೀ ಸುಧೀಂದ್ರ ವೈದ್ಯಕೀಯ ಮಿಷನ್ಗೆ ದಾಖಲಿಸಲಾಗಿತ್ತು. ಆದ್ರೆ ಹೃದಯಸ್ತಂಭನವಾಗಿ ವಿಜಯನ್ ನಿಧನರಾಗಿದ್ದಾರೆ .
ಇಸ್ರೇಲ್ ನಿಂದ ಪ್ರಾರಂಭವಾಗಿತ್ತು ವಿಜಯನ್ ದಂಪತಿ ಪ್ರಪಂಚ ಪರ್ಯಟನೆ
ಶ್ರೀ ಬಾಲಾಜಿ ಕಾಫಿ ಹೌಸ್ ನಿಂದ ಬಂದ ಹಣದಲ್ಲಿ ವಿಜಯನ್ ದಂಪತಿ 1988ರಲ್ಲಿ ಹಿಮಾಲಯ ಪ್ರವಾಸ ಕೈಗೊಳ್ಳುವ ಮೂಲಕ ತಮ್ಮ ಪ್ರಯಾಣವನ್ನು ವಿಜಯನ್ ದಂಪತಿ ಆರಂಭಿಸಿದ್ರು. ಇದಾದ ಬಳಿಕ ಟೀಅಂಗಡಿ ಇಂದ ಬಂದ ಹಣದಲ್ಲಿ 2007ರಲ್ಲಿ ಮೊದಲ ಬಾರಿಗೆ ಭಾರತ ಬಿಟ್ಟು ವಿದೇಶಿ ಪ್ರಯಾಣವನ್ನು ಕೈಗೊಂಡಿದ್ದರು.. ತಾವು ಗಳಿಸಿದ ಹಣದಿಂದಲೇ ವಿಜಯನ್ ದಂಪತಿ ಮೊದಲ ವಿದೇಶಿ ಪ್ರವಾಸವಾಗಿ ಇಸ್ರೇಲ್ಗೆ ಭೇಟಿ ನೀಡಿದ್ರು. ಜೊತೆಗೆ 2007ರಿಂದ ವಿಜಯನ್ ತಮ್ಮ ಪತ್ನಿ ಮೋಹನ ಜೊತೆಗೆ 6 ಖಂಡಗಳ 25ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.
ಇನ್ನು ತಮ್ಮ ಪ್ರವಾಸಕ್ಕಾಗಿ ವಿಜಯನ್ ದಂಪತಿ ಕೆಲವೊಮ್ಮೆ ಸಣ್ಣ ಸಾಲವನ್ನೂ ತೆಗೆದುಕೊಳ್ಳುತ್ತಿದ್ದರು. ಆದರೆ ಯಾವಾಗ ವಿಜಯನ್ ದಂಪತಿಗಳ ದೇಶ ಸುತ್ತುವ ಹವ್ಯಾಸ ಸಾಕಷ್ಟು ಸುದ್ದಿಯಾದ ಬಳಿಕ ಉದ್ಯಮಿ ಆನಂದ್ ಮಹೀಂದ್ರಾರಂತಹ ಹಲವರು ವಿಜಯನ್ ದಂಪತಿಗಳ ಪ್ರವಾಸದ ಪ್ರಾಯೋಜಕರನ್ನು ನೀಡಲು ಪ್ರಾರಂಭಿಸಿದರು.
ಇದನ್ನೂ ಓದಿ: ಪ್ರವಾಹ ಇದ್ರೂ ಪಾತ್ರೆಯಲ್ಲಿ ಕುಳಿತುಕೊಂಡು ಮಂಟಪ ಸೇರಿದ ಜೋಡಿ… ಕೊನೆಗೂ ಮದುವೆ ಆದ್ರು!
ಕೊನೆಯ ಬಾರಿ ರಷ್ಯಾ ಪ್ರವಾಸಕೈಗೊಂಡಿದ್ದ ವಿಜಯನ್- ಮೋಹನ್
USA, ಜರ್ಮನಿ, ಸ್ವಿಟ್ಜರ್ಲೆಂಡ್, ಬ್ರೆಜಿಲ್, ಅರ್ಜೆಂಟೀನಾ ಮತ್ತು ಪೆರು, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸಿಂಗಪೂರ್ ಸೇರಿ ಸೇರಿ ಹಲವು ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದ ವಿಜಯನ್ ದಂಪತಿ ತಮ್ಮ ಕೊನೆಯ ಪ್ರವಾಸವನ್ನು ರಷ್ಯಾಕ್ಕೆ ಕೈಗೊಂಡಿದ್ರು.. ಆದ್ರೆ ಕೊರೋನಾ ಮಹಾಮಾರಿ ಆಟ ಆರಂಭವಾದ ಬಳಿಕ ವಿಜಯನ್ ದಂಪತಿ ಯಾವುದೇ ಪ್ರವಾಸ ಕೈಗೊಂಡಿರಲಿಲ್ಲ. ಆದರೆ ಇತ್ತೀಚಿಗೆ ಜಪಾನ್, ವಿಯೆಟ್ನಾಂ ಮತ್ತು ಕಾಂಬೋಡಿಯಾ, ಪ್ರವಾಸಕ್ಕೆ ವಿಜಯನ್ ದಂಪತಿ ಸಿದ್ಧತೆಗಳನ್ನು ನಡೆಸುತ್ತಿದ್ರು.. ಅವರ ಸಿದ್ಧತೆ ಪೂರ್ಣಗೊಳ್ಳುವ ಮೊದಲೇ 71 ವರ್ಷದ ವಿಜಯ ನಿಧನರಾಗಿದ್ದಾರೆ..
ವಿಜಯನ್ ದಂಪತಿಗಳ ಪ್ರವಾಸದ ಬಗ್ಗೆ ಸಾಕ್ಷ್ಯಚಿತ್ರ
ಇನ್ನು ವಿಜಯನ್ ದಂಪತಿಗಳ ಜೀವನೋತ್ಸಾಹ ಹಾಗೂ ಪ್ರವಾಸದ ಮೇಲೆ ಅವರಿಗೆ ಇದ್ದ ಪ್ರೀತಿ ಮತ್ತು ಅವರ ಪ್ರವಾಸದ ಕುರಿತು, ಇನ್ವಿಸಿಬಲ್ ವಿಂಗ್ಸ್, ಗ್ಲೋಬ್ಟ್ರೋಟಿಂಗ್ ಎನ್ನುವ ಸಾಕ್ಷಚಿತ್ರವನ್ನು ಕೂಡ ನಿರ್ಮಾಣ ಮಾಡಲಾಗಿದೆ .ಇಷ್ಟು ಮಾತ್ರವಲ್ಲದೆ ಈ ದಂಪತಿಗಳು ತಮ್ಮ ವಿದೇಶ ಪ್ರವಾಸಗಳ ಅನುಭವದ ಬಗ್ಗೆ, "ಛಾಯಾ ವಿಟ್ಟು ವಿಜಯಂತೇಯುಂ ಮೋಹನಾಯುದೆಯುಂ ಲೋಕ ಸಂಚಾರಗಳು"(ವಿಜಯನ್ ಮತ್ತು ಮೋಹನರ ಜಾಗತಿಕ ಪ್ರವಾಸಗಳು) ಎಂಬ ಪುಸ್ತಕವನ್ನು ಸಹ ಇತ್ತೀಚಿಗೆ ಹೊರತಂದಿದ್ದರು..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ