Vismaya case: ವಿಸ್ಮಯ ಆತ್ಮಹತ್ಯೆ ಪ್ರಕರಣ; ಪತಿ ಕಿರಣ್‌ಗೆ ಹತ್ತು ವರ್ಷ ಜೈಲು ಶಿಕ್ಷೆ

ಕೇರಳದಲ್ಲಿ (Kerala) ಸಂಚಲನ ಮೂಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಆತ್ಮಹತ್ಯೆ (Vismaya case) ಪ್ರಕರಣದಲ್ಲಿ ಅವಳ ಪತಿ ಎಸ್ ಕಿರಣ್ ಕುಮಾರ್ (31) ಅಪರಾಧಿ ಎಂದು ಕೋರ್ಟ್ (Court) ತೀರ್ಪು ನೀಡಿದೆ.

ವಿಸ್ಮಯ

ವಿಸ್ಮಯ

  • Share this:
ಕೊಲ್ಲಂ: ಕೇರಳದಲ್ಲಿ (Kerala) ಸಂಚಲನ ಮೂಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಆತ್ಮಹತ್ಯೆ (Vismaya case) ಪ್ರಕರಣದಲ್ಲಿ ಅವಳ ಪತಿ ಎಸ್ ಕಿರಣ್ ಕುಮಾರ್ (31) ಅಪರಾಧಿ ಎಂದು ಕೋರ್ಟ್ (Court) ತೀರ್ಪು ನೀಡಿದೆ. ಕೊಲ್ಲಂ ಹೆಚ್ಚುವರಿ ಸೆಷನ್ ನ್ಯಾಯಾಲಯ ಮಂಗಳವಾರ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 12.55 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಹಿಂದೆ ಪತ್ನಿ ವಿಸ್ಮಯಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿತ್ತು. ಆದರೆ ಇದೀಗ ನಾಲ್ಕು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ವಿಸ್ಮಯಾ ಅವರ ಪತಿ ಕಿರಣ್ ಅವರನ್ನು ದೋಷಿ ಎಂದು ನ್ಯಾಯಾಧೀಶ ಸುಜಿತ್ ಕೆಎನ್ (Sujith KN) ತೀರ್ಪು ಪ್ರಕಟಿಸಿದ್ದಾರೆ.

ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ ನ್ಯಾಯಾಧೀಶ ಸುಜಿತ್ ಕೆಎನ್ ಅವರು ಐಪಿಸಿ 304 (ಬಿ) (ವರದಕ್ಷಿಣೆ ಸಾವು) ಅಪರಾಧಕ್ಕಾಗಿ ಆರೋಪಿಗೆ ಹತ್ತು ವರ್ಷಗಳ ಶಿಕ್ಷೆ ವಿಧಿಸಿದರು. ನ್ಯಾಯಾಲಯವು ಐಪಿಸಿ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ 6 ವರ್ಷಗಳ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ ದಂಡ ಮತ್ತು ಐಪಿಸಿ 498 ಎ (ವರದಕ್ಷಿಣೆ ಕಿರುಕುಳ) ಅಡಿಯಲ್ಲಿ ಹೆಚ್ಚುವರಿ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ 50,000 ದಂಡವನ್ನು ವಿಧಿಸಿದೆ.

ಕೇರಳನ್ನು ಬೆಚ್ಚಿ ಬೀಳಿಸಿದ ಪ್ರಕರಣವಿದು:

ವಿಸ್ಮಯ ಯುವ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯನ್ನು ಕಿರಣ್​ ಕುಮಾರ್​ಗೆ ವಿವಾಹ ಮಾಡಿ ಕೊಟ್ಟಿದ್ದರು. ಆದರೆ ಆತನ ಹಣದ ಆಸೆಗಾಗಿ ಆಕೆಯನ್ನು ಪೀಡಿಸುತ್ತಿದ್ದನು. ಇದರಿಂದ ನೊಂದ ವಿಸ್ಮಯ ಸಾವಿನ ಹಾದಿ ಹಿಡಿದಳು. ಅತ್ಮಹತ್ಯೆ ಮಾಡಿಕೊಂಡ ವಿಸ್ಮಯ ಗಂಡನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಳು.

ಇದನ್ನೂ ಓದಿ: Theft: ಅಪ್ಪ-ಅಮ್ಮನಿಂದಲೇ 4 ಲಕ್ಷ ಕದ್ದ 8,9 ವರ್ಷದ ಬಾಲಕರು! 20 ದಿನದಲ್ಲಿ ಹಣ ಖಾಲಿ, ನಂತರ ಮಾಡಿದ್ದೇನು?

ಸಮಾಜಕ್ಕೆ ಬಲವಾದ ಸಂದೇಶವಾಗಬೇಕು:

ಇನ್ನು, ಎಲ್ಲ ಆರೋಪಗಳಡಿ ಗರಿಷ್ಠ ಶಿಕ್ಷೆಗೆ ಗುರಿಯಾಗಿರುವುದರಿಂದ ನ್ಯಾಯಾಲಯದ ತೀರ್ಪಿನಿಂದ ಸಂಪೂರ್ಣ ತೃಪ್ತನಾಗಿದ್ದೇನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ಹೇಳಿದ್ದಾರೆ. ಆದರೆ, ತೀರ್ಪು ವ್ಯಕ್ತಿಯ ವಿರುದ್ಧವಾಗಿರಬಾರದು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಬದಲಾಗಿ ಸಮಾಜಕ್ಕೆ ಬಲವಾದ ಸಂದೇಶವಾಗಬೇಕು. ಇದು ಭವಿಷ್ಯದಲ್ಲಿ ಇತರರಿಗೆ ಉಲ್ಲೇಖವಾಗಬೇಕು ಎಂದು ಮೋಹನರಾಜ್ ಹೇಳಿದರು.

ಅಪರಾಧಿ ಸಾಮಾನ್ಯನಲ್ಲ, ಅವನು ಸರ್ಕಾರಿ ನೌಕರ, ಕಾನೂನನ್ನು ಎತ್ತಿಹಿಡಿಯಲು ಬದ್ಧನಾಗಿರುವವನು ಅದನ್ನು ಉಲ್ಲಂಘಿಸಿದವನು. ಆದ್ದರಿಂದ, ಈ ಆತ್ಮಹತ್ಯೆ ಪ್ರಕರಣವನ್ನು ಕೊಲೆಗೆ ಸಮಾನವೆಂದು ಪರಿಗಣಿಸಬೇಕು" ಎಂದು ಅವರು ವಾಧಿಸಿದರು. ಅಲ್ಲದೇ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ 41 ಸಾಕ್ಷಿಗಳು ಮತ್ತು 118 ದಾಖಲೆಗಳನ್ನು ಹಾಜರುಪಡಿಸಿತು.

ತೀರ್ಪು ತೃಪ್ತಿ ತರಲಿಲ್ಲ:

ಇತ್ತ, ಪ್ರಕರಣದ ಸಂಬಂಧ ವಿಸ್ಮಯ ಅವರ ತಾಯಿ ಸಜಿತಾ ಅವರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಮಗಳ ವಿರುದ್ಧ ಅವನು ಮಾಡಿದ ಕೃತ್ಯಕ್ಕಾಗಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ನಾವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇನ್ನು, ಒಟ್ಟು ದಂಡದ ಮೊತ್ತದಲ್ಲಿ 2 ಲಕ್ಷ ರೂಪಾಯಿಯನ್ನು ವಿಸ್ಮಯ ಅವರ ಪೋಷಕರಿಗೆ ಪರಿಹಾರವಾಗಿ ಹಂಚಿಕೊಳ್ಳಬೇಕು ಎಂದು ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: Navjot Singh Sidhu: ಮೊದಲ ದಿನವೇ ಜೈಲಿನ ಊಟ ಬೇಡ ಎಂದ ಸಿಧು, ಔಷಧಿ ಸೇವಿಸಿ ನಿದ್ರಿಸಿದ ಮಾಜಿ ಸಿಎಂ

2020ರಲ್ಲಿ ವಿವಾಹವಾಗಿದ್ದರು:

ವಿಸ್ಮಯ ಮತ್ತು ಕಿರಣ್​ 2020ರಲ್ಲಿ ಮೇ ತಿಂಗಳಿನಲ್ಲಿ ವಿವಾಹವಾದರು. ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಗಂಡ- ಹೆಂಡತಿ ಇಬ್ಬರೂ ಕೂಡ ಕೆಲಸ ಮಾಡಿಕೊಂಡಿ ಜೀವನ ನಡೆಸುತ್ತಿದ್ದರು. ಆದರೆ ಗಂಡ ಕಿರಣ್​ಗೆ ವಿಪರೀತ ಹಣದಾಸೆ. ಇದೇ ವಿಚಾರವಾಗಿ ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಮೃತದೇಹ 2021 ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು. ಆಕೆಯ ದೇಹದ ಮೇಲೆ ಗಾಯದ ಗುರುತುಗಳಿತ್ತು. ಆಕೆಯ ಸಾವಿಗೆ ಕಿರಣ್​ ಕಾರಣ ಎಂಬುದು ಬಹುತೇಕ ಖಚಿತವಾಗಿತ್ತು.
Published by:shrikrishna bhat
First published: