Accident Video: ಸಾವಿನ ಮನೆಗೆ ಹೋಗಿ ಬಂದ ಬಾಲಕ! ಬಸ್ Accidentನಿಂದ ಜಸ್ಟ್ ಮಿಸ್! ಭಯಾನಕ ವಿಡಿಯೋ ಇಲ್ಲಿದೆ

ಶಾಲಾ ಬಾಲಕನೊಬ್ಬ ಸಾವಿನ ಮನೆವರೆಗೂ ಹೋಗಿ, ವಾಪಸ್ ಬಂದಿದ್ದಾನೆ. ಒಂದು ಕ್ಷಣ ತಡವಾಗಿದ್ದರೂ ಬಾಲಕ ಬಸ್ ಚಕ್ರದ ಅಡಿಗೆ ಸಿಲುಕಿ, ಭೀಕರವಾಗಿ ಸಾವನ್ನಪ್ಪುತ್ತಿದ್ದ. ಅದಕ್ಕೂ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು ಅಪಾಯ ತಂದುಕೊಳ್ಳುತ್ತಿದ್ದ. ಆದರೆ ಆತನ ಅದೃಷ್ಟ ದೊಡ್ಡದು, ಕೂದಲೆಳೆಯ ಅಂತರದಿಂದ ಭೀಕರ ಅಪಘಾತದಿಂದ ಪಾರಾಗಿದ್ದಾನೆ.

ಅಪಘಾತದ ಫೋಟೋ

ಅಪಘಾತದ ಫೋಟೋ

  • Share this:
ಕೇರಳ: ಸಾವು (Death) ಎನ್ನುವುದು ಯಾರಿಗೆ, ಎಲ್ಲಿ, ಯಾವಾಗ ಬರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ (Case) ಚೆನ್ನಾಗಿಯೇ ಇದ್ದವರು, ಆರೋಗ್ಯವಾಗಿ (Healthy) ಇದ್ದವರು ಮರುಕ್ಷಣವೇ ಸಾಯುತ್ತಾರೆ. ಮತ್ತು ಕೆಲವು ಪ್ರಕರಣಗಳಲ್ಲಿ ಸತ್ತೇ ಹೋಗುತ್ತಾರೆ ಎಂದು ಕೊಂಡವರು ಉಳಿದು, ಆರಾಮವಾಗಿ ಬದುಕುತ್ತಾರೆ. ಇನ್ನು ಕೆಲವರು ಸಾವಿನ ಮನೆವರೆಗೆ ಹೋಗಿ, ಏನೂ ಆಗದೇ ವಾಪಸ್ ಬುರುತ್ತಾರೆ. ನಾವು ಹೇಳುವ ಈ ಕಥೆಯೂ ಇದೇ ಸಾಲಿಗೆ ಸೇರಿದ್ದು. ಇಲ್ಲಿ ಶಾಲಾ ಬಾಲಕನೊಬ್ಬ (School Boys) ಸಾವಿನ ಮನೆವರೆಗೂ ಹೋಗಿ, ವಾಪಸ್ ಬಂದಿದ್ದಾನೆ. ಒಂದು ಕ್ಷಣ ತಡವಾಗಿದ್ದರೂ ಬಾಲಕ ಬಸ್ (Bus) ಚಕ್ರದ ಅಡಿಗೆ ಸಿಲುಕಿ, ಭೀಕರವಾಗಿ ಸಾವನ್ನಪ್ಪುತ್ತಿದ್ದ. ಅದಕ್ಕೂ ಮೊದಲು ಬೈಕ್‌ಗೆ (Bike) ಡಿಕ್ಕಿ ಹೊಡೆದು ಅಪಾಯ ತಂದುಕೊಳ್ಳುತ್ತಿದ್ದ. ಆದರೆ ಆತನ ಅದೃಷ್ಟ ದೊಡ್ಡದು, ಕೂದಲೆಳೆಯ ಅಂತರದಿಂದ ಭೀಕರ ಅಪಘಾತದಿಂದ ಪಾರಾಗಿದ್ದಾನೆ. ಇದೀಗ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ (CCTV Camera) ಸೆರೆಯಾಗಿದ್ದು, ಈ ವಿಡಿಯೋಗಳೀಗ (Video) ವೈರಲ್ (Viral) ಆಗಿದೆ.

ಭೀಕರ ಘಟನೆ ನಡೆದಿದ್ದು ಎಲ್ಲಿ?

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ  ತಳಿಪರಂಬ ಸಮೀಪದ ಚೋರುಕ್ಕಲ ಎಂಬ ಗ್ರಾಮದಲ್ಲಿ ಈ ಭಯಾನಕ  ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ 8 ವರ್ಷದ ಬಾಲಕನೊಬ್ಬ ಕೆಲವೇ ಸೆಕೆಂಡುಗಳಲ್ಲಿ ಒಂದಲ್ಲ ಎರಡು ಬಾರಿ ಸಾವಿನಿಂದ ಪಾರಾಗಿದ್ದಾನೆ. ಬೈಕ್ ಆ್ಯಕ್ಸಿಡೆಂಟ್‌ನಿಂದ ತಪ್ಪಿಸಿಕೊಂಡ ಬಾಲಕ, ಮತ್ತೆ ಸ್ವಲ್ಪದರಲ್ಲೇ ವೇಗವಾಗಿ ಬರುತ್ತಿದ್ದ ಬಸ್‌ನಿಂದ ಪಾರಾಗಿದ್ದಾನೆ.

ಅಸಲಿಗೆ ಅಲ್ಲಿ ನಡೆದಿದ್ದ ಏನು?

ಜನನಿಭಿಡ ರಸ್ತೆಯಲ್ಲಿ ಬಾಲಕ ತನ್ನ ಸೈಕಲ್‌ ಮೇಲೆ ಕುಳಿತು ವೇಗವಾಗಿ ಬಂದಿದ್ದಾನೆ. ಅವನು ರಸ್ತೆಗೆ ಸೈಕಲ್ ಮೇಲೆ ವೇಗವಾಗಿ ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವನ ಸೈಕಲ್‌ನಿಂದ ಬಿದ್ದಿದ್ದಾನೆ. ಬಳಿಕ ಅವನು ರಸ್ತೆಯಿಂದ ಸ್ಕಿಡ್ ಆಗುತ್ತಿದ್ದಂತೆ, ಮೋಟಾರ್‌ಬೈಕ್‌ನ ಹಿಂದೆ ಬಂದ ಕೇರಳ ರಾಜ್ಯ ಸಾರಿಗೆ ಬಸ್ ಹುಡುಗನ ಸೈಕಲ್ ಮೇಲೆ ಚಲಿಸಿದೆ. ಅಲ್ಲೇ ರಸ್ತೆ ಪಕ್ಕದಲ್ಲಿ ಬಿದ್ದ ಬಾಲಕ, ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಇದನ್ನೂ ಓದಿ: Viral Video: ಫುಟ್‌ಬಾಲ್ ಆಡುವಾಗ ಜನರಿದ್ದ ಗ್ಯಾಲರಿಯೇ ಕುಸಿದು ಬಿತ್ತು! ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಘಟನೆಯಲ್ಲಿ ಬಾಲಕನಿಗೆ ಚಿಕ್ಕ ಪುಟ್ಟ ಗಾಯ

ಬಸ್ ಬೈಸಿಕಲ್ ಮೇಲೆ ಓಡುತ್ತಿದ್ದಂತೆ, ಅದರ ಹಿಂದೆಯೇ ಒಂದು ಕಾರೊಂದು ಬಂದು, ಸೈಡಿಗೆ ನಿಂತಿದೆ. ರಸ್ತೆಯ ಇನ್ನೊಂದು ಬದಿಗೆ ಉರುಳಿದ ಹುಡುಗ ಬಿದ್ದಿದ್ದಾನೆ. ಬಳಿಕ ಗಾಬರಿಯಿಂದ ಮತ್ತೆ ಎದ್ದು ಬರುತ್ತಿರುವುದು ಕಂಡುಬಂದಿದೆ. ಆಗ ಅಲ್ಲಿದ್ದವರೆಲ್ಲ ಓಡಿ ಬಂದು ಬಾಲಕನನ್ನು ಎತ್ತುತ್ತಾರೆ.


ಸಾವಿನ ಮನೆಯಿಂದ ಬಚಾವಾಗಿ ಬಂದ ಬಾಲಕ

ಕೆಲವೇ ಸೆಕೆಂಡುಗಳ ಅಂತರದಲ್ಲಿ ಬಾಲಕ ಒಂದಲ್ಲ 2 ಬಾರಿ ತಪ್ಪಿಸಿಕೊಂಡಿದ್ದಾನೆ. ಈ ಭಯಾನಕ ಘಟನೆಯಲ್ಲಿ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ದೊಡ್ಡ ಗಾಯವಾಗದೇ, ಬಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.

ಇದನ್ನೂ ಓದಿ: Viral Video: ಎರಡು ಕಾಡೆಮ್ಮೆಗಳು ಫೈಟ್ ಮಾಡೋದನ್ನ ನೋಡಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ರೋಮಾಂಚಕ ವಿಡಿಯೋ

ಬಾಲಕನಿಗೆ ಮನೆಯಲ್ಲಿ ಕೊಡಿಸಿದ್ದ ಬೈಸಿಕಲ್

ಬಾಲಕನಿಗೆ ಕೆಲ ದಿನಗಳ ಹಿಂದಷ್ಟೇ ಮನೆಯಲ್ಲಿ ಬೈಸಿಕಲ್ ಕೊಡಿಸಿದ್ದರು ಎನ್ನಲಾಗಿದೆ. ಅದರ ಮೇಲೆ ಸವಾರಿ ಮಾಡುತ್ತಾ ಬಾಲಕ ಮೈಮರೆತಿದ್ದಾನೆ. ಆದರೆ ಅದೃಷ್ಟವಶಾತ್ ಒಮ್ಮೆಲೇ ಎರಡೆರಡು ಅಪಘಾತಗಳಿಂದ ತಪ್ಪಿಸಿಕೊಂಡಿದ್ದಾನೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಭಯಾನಕ ಘಟನೆಯ ವಿಡಿಯೋ ಇದೀಗ ಟ್ವಿಟ್ಚರ್, ವಾಟ್ಸಾಪ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published by:Annappa Achari
First published: