ಸುಮಾರು ವರ್ಷಗಳಿಂದ ಸಂಚಾರಿ ಪೊಲೀಸರು ರಸ್ತೆಯಲ್ಲಿ ಸ್ಟಂಟ್, ವ್ಹೀಲಿಂಗ್ ಮಾಡಬೇಡಿ, ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಎಚ್ಚರಿಸುತ್ತಲೇ ಬಂದಿದೆ. ಆದರೆ ಯಾರೊಬ್ಬರೂ ಎಚ್ಚೆತ್ತುಕೊಂಡಂತೆ ತೋರುತ್ತಿಲ್ಲ. ಇದೀಗ ಪೊಲೀಸರು ಕರ್ತವ್ಯದ ಸಂದರ್ಭದ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ತೀವ್ರ ನಿಗಾ ಇರಿಸಿ ಇಂತಹ ದುರ್ವರ್ತನೆ ತೋರಿದವರಿಗೆ ಮಾಂಜಾ ನೀಡಲು ಹೊರಟಿದ್ದಾರೆ ಹೌದು..ಕೇರಳದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ ಸಂಚಾರಿ ಪೊಲೀಸರು. ರಸ್ತೆಯಲ್ಲಿ ಸ್ಟಂಟ್, ವ್ಹೀಲಿಂಗ್ ಹಾಗೂ ಇನ್ನಿತರ ವರ್ತನೆಗಳ ಮೂಲಕ ವಾಹನ ಸವಾರರಿಗೆ ತೊಂದರೆಯುಂಟು ಮಾಡುವ ವಾಹನ ಸವಾರರ ಪರವಾನಿಗೆ ರದ್ದು ಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಕೇರಳದ ಆರ್ಟಿಒ ಅಧಿಕಾರಿಗಳು.
ರಸ್ತೆ ಸಂಚಾರಿ ಪೊಲೀಸರ ಡಿಜಿಟಲ್ ತಂಡವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸಿಸಿಟಿವಿ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಇತರೆ ವೇದಿಕೆಗಳಲ್ಲಿ ವಾಹನ ಸವಾರರು ರಸ್ತೆಗಳಲ್ಲಿ ವಿಚಿತ್ರ ವರ್ತನೆ ತೋರಿದ್ದಲ್ಲಿ ಅಂತಹ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ವಾಹನ ಚಾಲನೆ ವೇಳೆ ಅಪಾಯಕಾರಿಯಾದ ವರ್ತನೆ ತೋರಿದ್ದ ಬೈಕ್ ಸವಾರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಕಂಡ ಆರ್ಟಿಒ ಅಧಿಕಾರಿಗಳು ಆ ವಿಡಿಯೋಗೆ ಸಂಬಂಧಪಟ್ಟ ವ್ಯಕ್ತಿಗಳ ಪರವಾನಗಿಯನ್ನೇ ರದ್ದುಪಡಿಸಿದ್ದಾರೆ.
Sonu Sood: ಕೊರೋನಾ ಸೋಂಕು ತಗುಲಿದರೂ ಸಮಾಜ ಸೇವೆ ನಿಲ್ಲಿಸದ ನಟ ಸೋನು ಸೂದ್
ಆ ವಿಡಿಯೋ ಇನ್ಸ್ಟಾಗ್ರಾಮ್ನ ಗ್ರೀನ್ಪಂಕ್ 46 ಎಂಬ ಖಾತೆಯಲ್ಲಿ ಶೇರ್ ಆಗಿತ್ತು. ಸುಮಾರು ಮಂದಿ ಬೈಕ್ ಸವಾರರು ಕೇರಳದ ರಸ್ತೆಯಲ್ಲಿ ಅಪಾಯಕಾರಿ ವರ್ತನೆಯನ್ನು ತೋರಿದ್ದರು. ಎರಡು ದಿನಗಳ ಹಿಂದೆ ಒಂದು ಯುವಕರ ತಂಡ ರಸ್ತೆಯಲ್ಲಿ ಕೆಟಿಎಂ ಬೈಕ್ನಲ್ಲಿ ಸ್ಟಂಟ್ ಮಾಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ ಕೇರಳ ಸಂಚಾರಿ ಪೊಲೀಸರು ತಕ್ಷಣವೇ ಪರವಾನಿಗೆ ರದ್ದುಗೊಳಿಸಿದರು.
ಬೈಕ್ ಸವಾರರು ಮಾಡುವ ಒಂದು ಸ್ಟಂಟ್, ವ್ಹೀಲಿಂಗ್ ಎದುರು ಬರುವ ಸವಾರರಿಗೂ ಅಪಾಯ ತಂದೊಡ್ಡುತ್ತದೆ. ಕೆಲವು ದಿನಗಳ ಹಿಂದೆ ಈ ರೀತಿಯ ಘಟನೆ ಸಂಭವಿಸಿತ್ತು. ಅದೃಷ್ಟಾವಶಾತ್ ಕ್ಷಣಮಾತ್ರದಲ್ಲಿ ಅಪಾಯ ತಪ್ಪಿದೆ.
ಇನ್ನು ಗುಜರಾತಿನ ಸೂರತ್ನಲ್ಲಿ ಯುವತಿಯೊಬ್ಬಳು ಸಂಚಾರಿ ನಿಯಮ ಉಲ್ಲಂಘಿಸಿ ಹೆಲ್ಮೆಟ್, ಮಾಸ್ಕ್ ಧರಿಸದೇ ಬೈಕ್ನಲ್ಲಿ ಸ್ಟಂಟ್ ಮಾಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇವರ ಹೆಸರು ಸಂಜನಾ ಅಲಿಯಾಸ್ ಎಂಸಿ ಪ್ರಸಾದ್ ಎಂದು ತಿಳಿದು ಬಂದಿದೆ.
ಇವರು ಬೈಕ್ನ ಹ್ಯಾಂಡಲ್ ಬಿಟ್ಟು ಕೂದಲು ಸರಿಮಾಡಿಕೊಳ್ಳುತ್ತಾ ಬೈಕ್ ಓಡಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಇದನ್ನು ವೀಕ್ಷಿಸಿದ ಗುಜರಾತಿನ ಸಂಚಾರಿ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 279, 269 ಅಡಿ ಆಕೆಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು. ಇದಲ್ಲದೇ ಉತ್ತಪ್ರದೇಶದ ಗಾಜಿಯಾಬಾದ್ನಲ್ಲೂ ಈ ರೀತಿ ವರ್ತಿಸಿದ ಇಬ್ಬರು ಯುವತಿಯರಿಗೆ ದಂಡ ವಿಧಿಸಿದ್ದರು.
ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಕಾರು ಮಾಲೀಕರ ವಿರುದ್ಧವೂ ಕ್ರಮಕ್ಕೆ ಮುಂದಾಗಿತ್ತು. ಅಂದರೆ ಕಾರಿನ ಮೇಲೆ ವ್ಯಕ್ತಿಯೊಬ್ಬರು ಪುಷ್ಅಪ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇವರಿಗೆ ಉತ್ತರಪ್ರದೇಶ ಪೊಲೀಸರು ದಂಡ ಹಾಕಿದ್ದರು. ಇದಲ್ಲದೇ ಚಲಿಸುತ್ತಿದ್ದ ಕಾರಿನ ಬ್ಯಾನ್ನೆಟ್ ಮೇಲೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಯುವಕರಿಂದಲೂ ದಂಡ ಕಿತ್ತಿದ್ದರು ಪೊಲೀಸರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ