ಕೇರಳದಲ್ಲಿ ವರುಣನ ಆರ್ಭಟ; ಪರಿಹಾರ ನಿಧಿಗೆ 7 ಕೋಟಿ ರೂ. ನೀಡಿದ ಉದ್ಯಮಿ

news18
Updated:August 13, 2018, 7:09 PM IST
ಕೇರಳದಲ್ಲಿ ವರುಣನ ಆರ್ಭಟ; ಪರಿಹಾರ ನಿಧಿಗೆ 7 ಕೋಟಿ ರೂ. ನೀಡಿದ ಉದ್ಯಮಿ
news18
Updated: August 13, 2018, 7:09 PM IST
-ನ್ಯೂಸ್ 18 ಕನ್ನಡ

ದೇವರನಾಡು ಕೇರಳದಲ್ಲಿ ವರುಣನ ರೌದ್ರನರ್ತನಕ್ಕೆ ಅಪಾರ ನಾಶ ನಷ್ಟ ಉಂಟಾಗಿದೆ. ಇದೀಗ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಹಲವರು ಧನ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಕೇರಳದ ಹೈಪರ್​ ಮಾರ್ಕೆಟ್​ ಉದ್ಯಮಿ ಎಂ.ಎ ಯೂಸುಫ್ ಅಲಿ ಅವರು ಮಲಯಾಳಿಗಳ ನೆರವಿಗೆ ನಿಂತಿದ್ದಾರೆ. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5 ಕೋಟಿ ನೀಡಿರುವ ಈ ಉದ್ಯಮಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಹಾಯಹಸ್ತ ಚಾಚಿದ್ದಾರೆ.

ಕಳೆದ ವಾರ ಪರಿಹಾರ ಕಾರ್ಯ ಕೈಗೆತ್ತಿಕೊಂಡಿರುವ ಎರಡು ಸಂಘಟನೆಗಳಿಗೆ 2 ಕೋಟಿ ರೂ ನೀಡಿದ್ದ ಯೂಸುಫ್ ಅಲಿ, ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ನೀಡುವ ಮೂಲಕ ಪ್ರವಾಹ ಸಂತ್ರಸ್ತರ ಕಣ್ಣೀರೊರೆಸಲು ಮುಂದಾಗಿದ್ದಾರೆ.

ಕೇರಳದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಈಗಾಗಲೇ 36 ಸಾವಿರ ಜನರನ್ನು ಸ್ಥಳಾಂತರಿಸಲಾಗಿದ್ದು, ಇತ್ತೀಚಿನ ವರದಿಯ ಪ್ರಕಾರ ಒಟ್ಟು 37 ಜನರು ಪ್ರಾಣ ಕಳೆದುಕೊಂಡಿದ್ದಾರೆ.


'ಕೇರಳಿಗರು ನಿಜವಾಗಲೂ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಊಹಿಸಲೂ ಸಾಧ್ಯವಾಗದಿರುವ ರೀತಿಯಲ್ಲಿ ನಮ್ಮ ಸಹೋದರ-ಸಹೋದರಿಯರು ಅಲ್ಲಿ ಕಷ್ಟಪಡುತ್ತಿದ್ದಾರೆ. ಅವರ ಮೇಲೆ ದೇವರು ದಯೆ ತೋರಲು ನಾವೆಲ್ಲರೂ ಪ್ರಾರ್ಥಿಸಬೇಕಿದೆ' ಎಂದು ಖ್ಯಾತ ಉದ್ಯಮಿ ಯೂಸುಫ್ ಅಲಿ ತಿಳಿಸಿದರು.

ಗಲ್ಫ್ ರಾಜ್ಯದ ಶ್ರೀಮಂತ ಕೋಟ್ಯಾಧಿಪತಿಗಳಲ್ಲಿ ಯೂಸುಫ್ ಅಲಿ ಕೂಡ ಒಬ್ಬರಾಗಿದ್ದು, ಲೂಲೂ ಸಂಸ್ಥೆಯ ಮಾಲೀಕರಾಗಿರುವ ಇವರು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಿರುದ್ಯೋಗಿಗಳ ಪಾಲಿನ ಆಶಾಕಿರಣ.
Loading...

ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ 8 ಸಾವಿರ ಕೋಟಿಗೂ ಹೆಚ್ಚಿನ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ನೂರು ಕೋಟಿ ರೂ ಪರಿಹಾರ ನೀಡುವುದಾಗಿ ಘೋಷಿಸಿದೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...