Kerala Rains- ರಣಮಳೆಗೆ ಕೇರಳ ತಲ್ಲಣ- ಎಲ್ಲವನ್ನೂ ಆಪೋಷಣೆ ಪಡೆಯುತ್ತಿರುವ ಮಳೆ; ಸಾವಿನ ಸಂಖ್ಯೆ 19ಕ್ಕೇರಿಕೆ

Death Toll Rises to 19 for Kerala Flood- ಕೇರಳದಲ್ಲಿ ಎಡಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭೀಕರ ಪ್ರವಾಹವೂ ಇದ್ದು ಜನಜೀವನ ಅಕ್ಷರಶಃ ನಲುಗಿಹೋಗಿದೆ. 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾವಿನ ಸಂಖ್ಯೆ 19ಕ್ಕೆ ಏರಿದೆ.

ಕೇರಳ ಮಳೆ ಪ್ರವಾಹದಿಂದ ಆದ ಒಂದು ಅನಾಹುತ

ಕೇರಳ ಮಳೆ ಪ್ರವಾಹದಿಂದ ಆದ ಒಂದು ಅನಾಹುತ

 • News18
 • Last Updated :
 • Share this:
  ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ರಣ ಮಳೆ (Kerala Rain) ಮನೆ ಆಸ್ತಿ, ಜೀವಗಳನ್ನು ಆಪೋಷಣೆ ಪಡೆದುಕೊಳ್ಳುತ್ತಿದೆ. ಕೇರಳದಲ್ಲಿ ಪ್ರವಾಹದಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಸುಮಾರು 19 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸದ್ಯದ ವರದಿ ಪ್ರಕಾರ 8 ಜನ ಕಾಣೆಯಾಗಿದ್ದಾರೆ. ಇಡುಕ್ಕಿ ಜಿಲ್ಲೆಯ (Idukki Dsitrict) ಕೊಕ್ಕರೈನಲ್ಲಿ ಮೂರು ಶವಗಳು ಒಂದೊಕ್ಕೊಂದು ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶವಗಳ ವಯಸ್ಸು ಸುಮಾರು 4, 7 ಮತ್ತು 8 ಅಂತ ಅದಾಜಿಸಲಾಗಿದೆ. ಕೊಟ್ಟಾಯಂ, ಇಡುಕ್ಕಿ ಮತ್ತು ಪಟ್ಟಣಂತಿಟ್ಟ (Pathanamthitta) ಪರ್ವತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿದೆ. ಇಡುಕ್ಕಿಯ ಥೊಡುಪುಜಾ ಮತ್ತು ಕೊಕ್ಕರೈನ ಕೂಟಿಕ್ಕಲ್ ನಲ್ಲಿ ಜನರು ಸಾವನ್ನಪ್ಪುತ್ತಿರುವ ವರದಿಗಳು ಪ್ರಕಟವಾಗುತ್ತಿವೆ.

  ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲಿ ನೋಡಿದ್ರೂ ನೀರು:

  ಮೀನಾಚಲ ಮತ್ತು ಮನಿಮಾಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ. ತೀವ್ರ ಪ್ರವಾಹ ಉಂಟಾದ ಸ್ಥಳಗಳಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಭೂ ಕುಸಿತ ಮತ್ತು ಪ್ರವಾಹದಿಂದಾಗಿ ಪರ್ವತ ಪ್ರದೇಶದ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಎರಡು ಅಂತಸ್ತಿನ ಬೃಹತ್ ಕಟ್ಟಡ ಧರೆಗೆ ಉಳಿಯುತ್ತಿರುವ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ನದಿಗಳು ತುಂಬಿ ಹರಿಯತ್ತಿರೋದು, ಜನರು ಸಂಕಷ್ಟಕ್ಕೆ ಸಿಲುಕಿರುವ, ರಸ್ತೆ ಸಂಪರ್ಕ ಕಡಿತಗೊಂಡಿರುವ ಮತ್ತು ರಕ್ಷಣಾ ಕಾರ್ಯದ ವಿಡಿಂಯೋಗಳು ವೈರಲ್ ಆಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ.

  ತಿರುವನಂತಪುರ, ಕೊಲ್ಲಂ ಸೇರಿದಂತೆ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yello Alert): 

  ಭಾರತೀಯ ಹವಾಮಾನ ಇಲಾಖೆ ತಿರುವನಂತರಪುರಂ, ಕೊಲ್ಲಂ, ಪಟಾನಮಿಥಟ್ಟಾ, ಕೊಟ್ಟಾಯಂ, ಅಲ್ಲಪುಜಾ, ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರ್, ಪಾಲಕ್ಕಾಡ, ಮಲಪ್ಪುರಂ ಮತ್ತು ಕೊಯಿಕೊಡ್ ಜಿಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ಉತ್ತರಾಖಂಡ, ಈಶಾನ್ಯ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮಳೆಯಾಗಲಿದ್ದು, ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

  ಇದನ್ನೂ ಓದಿ: Shocking News: ಮದುವೆಯಾದ 10ನೇ ದಿನಕ್ಕೇ ಪತ್ನಿ ಗರ್ಭಿಣಿ ಎಂದು ತಿಳಿದ ಪತಿ, ಆಮೇಲೆ ನಡೆದದ್ದೆಲ್ಲಾ ಸಿನಿಮಾ ಸ್ಟೈಲ್ ಘಟನೆ!

  ರಕ್ಷಣಾ ಕಾರ್ಯದಲ್ಲಿ ವಾಯುಸೇನೆ:

  ಇಂಜಿನಿಯರಿಂಗ್ ಮತ್ತು ಮೆಡಿಕಲ್ ಯುನಿಟ್ ಜೊತೆ ಸೈನಿಕರು ಕನ್ನೂರ್ ನಿಂದ ವಯನಾಡು ತಲುಪಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನ ಇಂಜಿಯರಿಂಗ್ ಟಾಸ್ಕ್ ಫೋರ್ಸ್ ತಂಡ ಶೀಘ್ರದಲ್ಲಿಯೇ ವಯನಾಡ್ ತಲುಪಲಿದೆ. ಸೇನೆಯ ಮೂರು ತುಕಡಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಾಯುಸೇನೆಯ ಕಾಪ್ಟರ್ ಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿ ಮತ್ತು ಔಷಧಿ ಕಳುಹಿಸಲಾಗುತ್ತಿದೆ ಎಂದು ಡಿಫೆನ್ಸ್ ಪಿಆರ್‍ಓ ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Crime News: ಮಧ್ಯಪ್ರದೇಶದಲ್ಲಿ ಜನ ಸಂದಣಿ ಮೇಲೆ ಕಾರ್​ ಹತ್ತಿಸಿ ಪರಾರಿಯಾದ ಅಪರಿಚಿತ!

  ಇನ್ನು, ಈ ಕುರಿತು ಮಾಹಿತಿ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದಿಂದಾಗಿ ಅಧಿಕ ಮಳೆಯಾಗಿದೆ, ಭಾರತೀಯ ಹವಾಮಾನ ಇಲಾಖೆ ಸಹ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ಸಹಾಯಕ್ಕೆ ಧಾವಿಸಿದ್ದು, ಕೇಂದ್ರ ಸಚಿವ ಅಮಿತ್ ಶಾ ಸಂಪೂರ್ಣ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದ ಮಾಹಿತಿ ನೀಡಿದ್ದಾರೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: