Election Results 2021: ಕೇರಳ- ಪುದುಚೇರಿಯಲ್ಲಿ ಅವೇ ಸರ್ಕಾರಕ್ಕೆ ಜನರ ಒಲವು, ತಮಿಳುನಾಡಿನಲ್ಲಿ ಮಾತ್ರ ಬದಲಾವಣೆ ಸಾಧ್ಯತೆ?

ಚುನಾವಣೋತ್ತರ ಸಮೀಕ್ಷೆಗಳು ಕೇರಳ ಮತ್ತು ಪುದುಚೇರಿಯಲ್ಲಿ ಈ ಹಿಂದಿನ ಸರ್ಕಾರಗಳೇ ಮತ್ತೆ ಅಧಿಕಾರವನ್ನು ಹಿಡಿಯಲಿವೆ ಎಂದು ತಿಳಿಸಿದ್ದರೆ, ತಮಿಳುನಾಡಿನಲ್ಲಿ ಮಾತ್ರ ಎನ್​ಡಿಎ ಮೈತ್ರಿಕೂಟ ಮುಖಭಂಗ ಅನುಭವಿಸಲಿದೆ ಎಂದು ವ್ಯಾಖ್ಯಾನಿಸಿವೆ.

ಕಮ್ಯೂನಿಸ್ಟ್​ ಮತ್ತು ಕಾಂಗ್ರೆಸ್ ಬಾವುಟ.

ಕಮ್ಯೂನಿಸ್ಟ್​ ಮತ್ತು ಕಾಂಗ್ರೆಸ್ ಬಾವುಟ.

 • Share this:
  ಕೊರೋನಾ ಭೀತಿಯ ನಡುವೆಯೂ ಪಂಚ ರಾಜ್ಯಗಳ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಇದೀಗ ಎಲ್ಲಾ ಚುನಾವಣೋತ್ರ ಸಮೀಕ್ಷೆಗಳು ಎಲ್ಲಿ? ಯಾವ ಪಕ್ಷ ಗೆಲುವು ಸಾಧಿಸಲಿದೆ? ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ? ಎಂಬ ಮಹತ್ವದ ಸಮೀಕ್ಷೆಗಳನ್ನು ಹೊರಗೆಡವುತ್ತಿದ್ದಾರೆ. ಅದರಂತೆ ಉತ್ತರದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದರೆ, ದಕ್ಷಿಣದಲ್ಲಿ ತಮಿಳುನಾಡು-ಪುದುಚೇರಿ ಮತ್ತು ಕೇರಳದ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಹೀಗಾಗಿ ಎಲ್ಲಿ? ಯಾರು ಸರ್ಕಾರ ರಚಿಸಲಿದ್ದಾರೆ? ಎಂಬ ಕುರಿತು ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಕೇರಳ ಮತ್ತು ಪುದುಚೇರಿಯಲ್ಲಿ ಈ ಹಿಂದಿನ ಸರ್ಕಾರಗಳೇ ಮತ್ತೆ ಅಧಿಕಾರವನ್ನು ಹಿಡಿಯಲಿವೆ ಎಂದು ತಿಳಿಸಿದ್ದರೆ, ತಮಿಳುನಾಡಿನಲ್ಲಿ ಮಾತ್ರ ಎನ್​ಡಿಎ ಮೈತ್ರಿಕೂಟ ಮುಖಭಂಗ ಅನುಭವಿಸಲಿದ್ದು, ಕಾಂಗ್ರೆಸ್ ನೇತೃತ್ವದ ಡಿಎಂಕೆ 10 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಪ್ರಕಟಿಸಿವೆ. 

  ಕೇರಳದಲ್ಲಿ ಮತ್ತೆ ಅಧಿಕಾರದತ್ತ ಪಿಣರಾಯಿ ವಿಜಯನ್:

  ಕೇರಳದಲ್ಲಿ ಈಗಿನ ಎಡಪಂಥೀಯ ಎಲ್‌ಡಿಎಫ್ ಕೂಟವು 140 ಸ್ಥಾನಗಳಲ್ಲಿ 85 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 53 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅದು ಸರಿಯೆಂದು ಸಾಬೀತಾದರೆ, ಕೇರಳದ ರಾಜಕೀಯದಲ್ಲಿ ಆಡಳಿತ ಪಕ್ಷ ಪುನರಾಯ್ಕೆಗೊಂಡ ಮೊದಲ ನಿದರ್ಶನ ಇದಾಗಲಿದೆ.

  ಈವರೆಗೆ ಕೇರಳದಲ್ಲಿ ಯಾವೊಂದು ಪಕ್ಷವೂ 5 ವರ್ಷಕ್ಕಿಂತ ಹೆಚ್ಚು ನಿರಂತರವಾಗಿ ಅಧಿಕಾರ ನಡೆಸಿದ ಇತಿಹಾಸ ಇಲ್ಲ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಯ್ಯಪ್ಪ ಸ್ವಾಮಿ ಶಬರಿಮಲೆ ವಿವಾದದಿಂದ ಇತ್ತೀಚಿನ ಕೊರೋನಾ ಯೋಜನೆವರೆಗೆ ಹಲವು ವಿಚಾರಗಳನ್ನು ಯಶಸ್ವಿಯಾಗಿ ನಿಭಾಯಿಸಿ ಜನ ಮನ್ನಣೆ ಗಳಿಸಿದ್ದಾರೆ. ಇದೇ ಕಾರಣಕ್ಕೆ ಕೇರಳ ಮತದಾರ ಮತ್ತೆ ಸಿಎಂ ವಿಜಯನ್ ಅವರಿಗೆ ವಿಜಯ ಮಾಲೆ ತೊಡಿಸಿದ್ದಾನೆ ಎನ್ನುತ್ತಿವೆ ಸಮೀಕ್ಷೆಯ ವರದಿಗಳು. ಇನ್ನೂ ಕೇರಳದಲ್ಲಿ ಎರಡು ಸ್ಥಾನಗಳೊಂದಿಗೆ ಬಿಜೆಪಿ ತನ್ನ ಅಸ್ತಿತ್ವವನ್ನು ತೋರಿಸಲು ಸಜ್ಜಾಗಿದೆ ಎಂಬುದು ಸಮೀಕ್ಷೆಗಳ ಲೆಕ್ಕಾಚಾರ.

  ತಮಿಳುನಾಡಿನಲ್ಲಿ ಬಿಜೆಪಿಗೆ ಮುಖಭಂಗ:

  ತಮಿಳುನಾಡಿನಲ್ಲಿ, ಡಿಎಂಕೆ ನೇತೃತ್ವದ ಕೂಟ ಸಲೀಸಾಗಿ ಅಧಿಕಾರಕ್ಕೆ ಬರಲಿದೆ. ಡಿಎಂಕೆ ಕೂಟ 234 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಆಡಳಿತಾರೂಢ ಮತ್ತು ಬಿಜೆಪಿಯ ಮಿತ್ರ ಪಕ್ಷ ಎಐಡಿಎಂಕೆ ತನ್ನ ವರ್ಚಸ್ವಿ ನಾಯಕಿ ಜೆ.ಜಯಲಲಿತಾ ಅವರ ನಿಧನದ ನಂತರ ನಡೆದ ಮೊದಲ ರಾಜ್ಯ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗಳಿಸಲಿದೆ.

  ಎಡಿಎಂಕೆ ಅಧಿಕ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿಯೇ ಆಡಳಿತರೂಢ ಪಕ್ಷ ಹೀನಾಯವಾಗಿ ಸೋಲನುಭವಿಸಲಿದೆ. ತಮಿಳುನಾಡಿನ ಜನ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ ಎಂ.ಕೆ ಸ್ಟಾಲಿನ್ ಅವರ ಡಿಎಂಕೆ 2019 ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ಗಳಿಸಿತ್ತು. ಪ್ರತಿಪಕ್ಷದಲ್ಲಿ ಎರಡು ಅವಧಿಯ ನಂತರ ಈ ಬಾರಿ ಅಧಿಕಾರಕ್ಕೆ ಮರಳುವ ಭರವಸೆ ಇದೆ.

  ಇದನ್ನೂ ಓದಿ: Supreme Court: ಶೇ.100 ರಷ್ಟು ಲಸಿಕೆಯನ್ನು ನೀವೆ ಏಕೆ ಖರೀದಿಸಬಾರದು?; ಮೋದಿ ಸರ್ಕಾರದ ಎದುರು 10 ಪ್ರಶ್ನೆಗಳನ್ನಿಟ್ಟ ಸುಪ್ರೀಂ

  ಪುದುಚೇರಿಯಲ್ಲಿ ಕಾಂಗ್ರೆಸ್​ ಕಹಳೆ:

  ಪುದುಚೇರಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಪುದುಚೇರಿಗೆ ಅವಧಿಗೆ ಮುನ್ನವೇ ಚುನಾವಣೆ ಎದುರಾಗಿತ್ತು. ನಿರ್ಗಮಿತ ಸಿಎಂ ವಿ. ನಾರಾಯಣ ಸ್ವಾಮಿ ಸಹ ಚುನಾವಣೆಗೆ ಸ್ಪರ್ಧಿಸದೆ ಪ್ರಚಾರ ಮತ್ತು ಪಕ್ಷದ ಕೆಲಸವನ್ನು ನಿಭಾಯಿಸಿದ್ದರು. ಹೀಗಾಗಿ ಈ ಭಾರಿ ಪುದುಚೇರಿಯಲ್ಲಿ ಕಾಂಗ್ರೆಸ್​ಗೆ ಕಷ್ಟವಾದರೂ ಮರಳಿ ಅಧಿಕಾರಕ್ಕೆ ಬರುವ ಸೂಚನೆಗಳಿವೆ. ಅಧಿಕಾರದ ಆಸೆಯಲ್ಲಿದ್ದ ಬಿಜೆಪಿ ಖಾತೆ ತೆರೆಯುವುದೂ ಕಷ್ಟ ಎನ್ನಲಾಗುತ್ತಿದೆ.

  ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಾರ್ಚ್ 27 ರಿಂದ ಚುನಾವಣೆ ನಡೆಯಿತು. ಬಂಗಾಳದ ದಾಖಲೆಯ ಎಂಟು ಹಂತದ ಮತದಾನ ಏಪ್ರಿಲ್ 29ಕ್ಕೆ ಕೊನೆಗೊಂಡಿದೆ. ಮೇ 2 ರಂದು (ಇಂದು) ಫಲಿತಾಂಶಗಳು ಪ್ರಕಟವಾಗಲಿವೆ.
  Published by:MAshok Kumar
  First published: