• Home
  • »
  • News
  • »
  • national-international
  • »
  • Burkha: ಬುರ್ಖಾ ಧರಿಸಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕ ಸೆರೆ!

Burkha: ಬುರ್ಖಾ ಧರಿಸಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕ ಸೆರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲಿನ ಮೆಪ್ಪಯೂರು ಬಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ತನಗೆ ಚಿಕನ್​ಫಾಕ್ಸ್ ಇರುವ ಕಾರಣ ಬುರ್ಖಾ ಹಾಕಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

  • Share this:

ಕೋಯಿಕ್ಕೋಡ್: ದೇವಸ್ಥಾನದ ಅರ್ಚಕರೊಬ್ಬರು ಬುರ್ಖಾ ಧರಿಸಿ (Burkha)  ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಅಕ್ಟೋಬರ್ 7 ರಂದು ಕೊಯಿಲಾಂಡಿ ಜಂಕ್ಷನ್‌ನಲ್ಲಿ ಜಿಷ್ಣು ನಂಬೂದಿರಿ (28) ಆಟೋ ಚಾಲಕರ ಕೈಗೆ ಸಿಕ್ಕಿಬಿದ್ದ ಅರ್ಚಕ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅರ್ಚಕ ಬುರ್ಖಾ ಧರಿಸಿ ಅಲೆದಾಡುತ್ತಿರುವುದನ್ನು ಕಂಡು ಪೊಲೀಸರಿಗೆ (Kerala Police)ಒಪ್ಪಿಸಲಾಗಿದೆ. ಆದರೆ ಯಾವುದೇ ಅಪರಾಧ ಎಸಗಿದ ಕುರಿತು ಕೇರಳದ ಅರ್ಚಕರ (Kerala Priest) ವಿರುದ್ಧ ಯಾವುದೇ ದೂರು ಬಂದಿಲ್ಲ. ಆದ್ದರಿಂದ ಅರ್ಚಕರ ಸಂಬಂಧಿಕರಿಗೆ ಆತನನ್ನು ಒಪ್ಪಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


ಇಲ್ಲಿನ ಮೆಪ್ಪಯೂರು ಬಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ತನಗೆ ಚಿಕನ್​ಫಾಕ್ಸ್ ಇರುವ ಕಾರಣ ಬುರ್ಖಾ ಹಾಕಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ವ್ಯಕ್ತಿಯ ಪ್ರಾಥಮಿಕ ಪರೀಕ್ಷೆಯಲ್ಲಿ ಚಿಕನ್​ಫಾಕ್ಸ್​ನ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಶಾಲೆಯಲ್ಲಿದ್ದ 57 ಮಕ್ಕಳಿಗೆ ವಿಷಪ್ರಾಷನ; ಕಾರಣ ಮಾತ್ರ ನಿಗೂಢ
ಶಾಲೆಯೊಂದರ 57 ಮಕ್ಕಳು ಏಕಾಏಕಿ ವಿಷಪ್ರಾಷನಕ್ಕೆ (Poison) ಈಡಾದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದಕ್ಷಿಣ ಮೆಕ್ಸಿಕನ್ ರಾಜ್ಯವಾದ (South Mexican State) ಚಿಯಾಪಾಸ್‌ನಲ್ಲಿ, ಗ್ರಾಮೀಣ ಮಾಧ್ಯಮಿಕ ಶಾಲೆಯಲ್ಲಿ 57 ವಿದ್ಯಾರ್ಥಿಗಳು ರಹಸ್ಯ ರೀತಿಯಲ್ಲಿ (Mysteriously Poisoned) ವಿಷಪ್ರಾಷನಕ್ಕೆ ಈಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಖಾಸಗಿ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಕೊಕೇನ್‌ ಸೇವಿಸಿರುವ ಕುರಿತು ವರದಿ ದೃಢೀಕರಿಸಿದೆ ಎಂದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.


ಇದನ್ನೂ ಓದಿ: Old Monk: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ


ಆದರೆ ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರಬಹುದು ಎಂದು ವಿದ್ಯಾರ್ಥಿಗಳ ಪೋಷಕರು ಶಂಕಿಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಇದು ಇಂತಹ ಮೂರನೇ ಘಟನೆ
ಕಳೆದ ಎರಡು ವಾರಗಳಲ್ಲಿ ಚಿಯಾಪಾಸ್ ಪ್ರದೇಶದ ಶಾಲೆಗಳಲ್ಲಿ ಸಾಮೂಹಿಕ ವಿಷಪ್ರಾಷನದ ಮೂರನೇ ಘಟನೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.


ಇದನ್ನೂ ಓದಿ: Explained: ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲವೇ? ಏನು ಈ ಹೊಸ ವಿವಾದ?


ಓರ್ವ ವಿದ್ಯಾರ್ಥಿ ಸೂಕ್ಷ್ಮ ಸ್ಥಿತಿಯಲ್ಲಿ
ಬೋಚಿಲ್‌ನ ಗ್ರಾಮೀಣ ಸಮುದಾಯದ 57 ಹದಿಹರೆಯದ ವಿದ್ಯಾರ್ಥಿಗಳು ವಿಷಪ್ರಾಷನ ಆದ ಲಕ್ಷಣಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಬಂದಿದ್ದಾರೆ. ಸೂಕ್ಷ್ಮ ಸ್ಥಿತಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಜ್ಯದ ರಾಜಧಾನಿಯ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಉಳಿದವರು ಸ್ಥಿರವಾಗಿದ್ದಾರೆ ಎಂದು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಲಂಡನ್​ನಲ್ಲಿ ವರದಿಯಾದ ವಿಚಿತ್ರ ಘಟನೆ!
ಬ್ರಿಟನ್‌ನ ಯಾರ್ಕ್‌ಷೈರ್‌ನಲ್ಲಿ ಪ್ರಕರಣ ನಡೆದಿದ್ದು, 3 ವರ್ಷಗಳ ಹಿಂದೆ ಎಲ್ಲರ್ಬಿ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗೆ ಅಡುಗೆ ಮನೆಯ ನೆಲದಡಿಯಿಂದ 264 ಚಿನ್ನದ ನಾಣ್ಯಗಳು ಸಿಕ್ಕಿದ್ದವು. ಈ ನಾಣ್ಯಗಳು ರಾಜ ಜೇಮ್ಸ್ I ರ ಆಳ್ವಿಕೆಗೆ ಸೇರಿವೆ. ದಂಪತಿ ಇತ್ತೀಚೆಗೆ ಹರಾಜಿನಲ್ಲಿ ಈ ನಾಣ್ಯಗಳನ್ನು £ 755,000 (ರೂ 6 ಕೋಟಿ 92 ಲಕ್ಷ) ಗೆ ಮಾರಾಟ ಮಾಡಿದ್ದಾರೆ. 'ಡೈಲಿ ಮೇಲ್' ಪ್ರಕಾರ, ಜೋಸೆಫ್ ಫರ್ನ್ಲಿ ಮತ್ತು ಅವರ ಪತ್ನಿ ಸಾರಾ ಮೀಸ್ಟರ್ 18 ನೇ ಶತಮಾನದಲ್ಲಿ ನಿರ್ಮಿಸಲಾದ ಮನೆಯಲ್ಲಿ ವಾಸಿಸುತ್ತಿದ್ದರು. 2019 ರಲ್ಲಿ, ಅವರು ತಮ್ಮ ಅಡುಗೆ ಮನೆ ದುರಸ್ತಿ ಮಾಡುತ್ತಿದ್ದರು. ಆಗ ಅಡುಗೆ ಮನೆಯ ಕಾಂಕ್ರೀಟ್ ನೆಲದಡಿಯಲ್ಲಿ ನೂರಾರು ಚಿನ್ನದ ನಾಣ್ಯಗಳು ಪತ್ತೆಯಾಗಿವೆ, ಅವುಗಳಲ್ಲಿ ಕೆಲವು 400 ವರ್ಷಗಳಷ್ಟು ಹಳೆಯವು ಎನ್ನಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: