Stop Hate: ಅಪ್ರಾಪ್ತ ಬಾಲಕನ ಬಾಯಲ್ಲೂ ಪ್ರಚೋದನಕಾರಿ ಘೋಷಣೆ! ಎಲ್ಲೆಡೆ ವ್ಯಕ್ತವಾದ ಆಕ್ರೋಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರ್‍ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವ್ಯಕ್ತಿಯ ಭುಜದ ಮೇಲೆ ಕುಳಿತು ಇತರ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

  • Share this:

ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಕೋಮು ಗಲಭೆಗಳು (Communal Riot) ನಡೆಯುತ್ತಲೇ ಇರುವುದನ್ನು ನಾವು ಕಾಣುತ್ತಿದ್ದೇವೆ. ಕೋಮು ಗಲಭೆಗೆ ಸಂಬಂಧಿಸಿದ ವಿಡಿಯೋವೊಂದು ಇತ್ತೀಚಿಗೆ ವೈರಲ್ (Video Viral) ಆಗಿತ್ತು. ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front Of India) ರ್‍ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವ್ಯಕ್ತಿಯ ಭುಜದ ಮೇಲೆ ಕುಳಿತು ಇತರ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋಗೆ ಎಲ್ಲಾ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಪಿಎಫ್‌ಐ ಶನಿವಾರ ಅಲಪ್ಪುಳದಲ್ಲಿ 'ಸೇವ್ ರಿಪಬ್ಲಿಕ್ ರ್‍ಯಾಲಿ' (Save Republic Rally) ಎಂಬ ಸಭೆಯನ್ನು ಆಯೋಜಿಸಿತ್ತು. ಇದರಲ್ಲಿ ಹುಡುಗನಿಂದ ದ್ವೇಷದ ಘೋಷಣೆಗಳನ್ನು ಕೂಗಿಸಲಾಗಿತ್ತು. ಇತರರು ಅವನನ್ನು ಶ್ಲಾಘಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿತ್ತು.


ಈ ಪ್ರಕರಣದ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಪ್ರಕಾರ ಪಿಎಫ್‌ಐ ಮತ್ತು ಹುಡುಗನ ಪೋಷಕರ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಪ್ರಚೋದನಕಾರಿ ಘೋಷಣೆಯಲ್ಲಿ ಏನು ಹೇಳಿದ್ದು
"ಸಾಕಷ್ಟು ಅಕ್ಕಿ ಮತ್ತು ಪಫ್ಡ್ ರೈಸ್ ಅನ್ನು (ಸಾಮಾನ್ಯವಾಗಿ ಹಿಂದೂ ಶವಸಂಸ್ಕಾರದ ಸಮಯದಲ್ಲಿ ಬಳಸಲಾಗುತ್ತದೆ) ಮತ್ತು ಸಾಕಷ್ಟು ಧೂಪದ್ರವ್ಯವನ್ನು (ಕ್ರಿಶ್ಚಿಯನ್ನರು ಸಮಾಧಿ ಸಮಯದಲ್ಲಿ ಬಳಸುತ್ತಾರೆ) ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ", “ನಿಮ್ಮ ಕಾಲ (ಕೊಲೆಗಾರ) ಸುತ್ತುತ್ತಿದ್ದಾನೆ. ಸೌಹಾರ್ದತೆಯಿಂದ ಬಾಳಿದರೆ ಇಲ್ಲಿ ಬಾಳಬಹುದು. ಇಲ್ಲದಿದ್ದರೆ ಏನು ಮಾಡಬೇಕೆಂದು ನಮಗೆ ಗೊತ್ತು” ಎಂದು ಬಾಲಕ ಕೂಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.


ಇದನ್ನೂ ಓದಿ: Loudspeaker: ಹನುಮ ಮಂದಿರಕ್ಕೆ ಧ್ವನಿವರ್ಧಕ ಕೊಡುಗೆ ನೀಡಿದ ಮುಸ್ಲಿಂ ಯುವಕರು!


ಖಂಡನೆಗೆ ಗುರಿಯಾದ ವಿಡಿಯೋ
ಈ ವಿಡಿಯೋ ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಈ ಘೋಷಣೆ ರ್‍ಯಾಲಿಯ ಒಂದು ಭಾಗವಾಗಿರಲಿಲ್ಲ. ಸಂಘಟನೆ ಈ ಬಗ್ಗೆ ಪರಿಶೀಲಿಸುತ್ತದೆ ಎಂದು PFI ಹೇಳಿದೆ. ಈ ಬಗ್ಗೆ ಕೇರಳ ಬಿಜೆಪಿ ಮತ್ತು ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಈ ಚಿಕ್ಕ ಹುಡುಗನಿಂದ PFI "ವಿಷವನ್ನು ಉಗುಳಲು" ಬಳಸಿಕೊಂಡಿದೆ ಎಂದು ಟೀಕಿಸಿ, ರ್‍ಯಾಲಿಯ ಸಂಘಟಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಇನ್ನೂ ಪ್ರತಿಕ್ರಿಯಿಸಿಲ್ಲ. ಮೇ 31ರ ಉಪಚುನಾವಣೆ ನಂತರ ಮಾತ್ರ ಇಬ್ಬರೂ ಪ್ರತಿಕ್ರಿಯಿಸುತ್ತಾರೆ ಎಂದು ಬಿಜೆಪಿ ಹೇಳಿದೆ.


ಚಾಲಕನ ನಡೆಗೆ ಕೆಸಿಬಿಸಿ ವಕ್ತಾರರ ಪ್ರತಿಕ್ರಿಯೆ
“ಒಂದು ಮುಗ್ಧ ಮಗು ಇಂತಹ ವಿಷಪೂರಿತ ಘೋಷಣೆಗಳನ್ನು ಎತ್ತುವುದಿಲ್ಲ. ಅಂತಹ ಪದಗಳನ್ನು ಬಳಸಲು ಅವನು ತರಬೇತಿ ಪಡೆದಿರಬಹುದು. ಸುತ್ತಮುತ್ತಲಿನ ಜನರು ಅವರನ್ನು ಹೊಗಳುತ್ತಿರುವುದು ಕಂಡುಬಂದಿದೆ. ಇಂತಹ ಘೋಷಣೆಗಳು ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸುತ್ತವೆ ಮತ್ತು ಅವು ದೇಶದ ಜಾತ್ಯತೀತ ರಚನೆಗೆ ಹೊಂದಿಕೆಯಾಗುವುದಿಲ್ಲ" ಎಂದು ಕೆಸಿಬಿಸಿ ವಕ್ತಾರರು ಹೇಳಿದ್ದಾರೆ.


ಘಟನೆಗೆ ಹೊಣೆಗಾರರ ವಿರುದ್ಧವೂ ಕ್ರಮಕೈಗೊಳ್ಳುವಂತೆ ಮನವಿ
ಕೇರಳದ ರಾಜಕೀಯ ರ್‍ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲು ಮಗುವಿಗೆ ಅವಕಾಶ ನೀಡಿದ ಆರೋಪದ ಮೇಲೆ ಹೊಣೆಗಾರರ ವಿರುದ್ಧ ಎಫ್‌ಐಆರ್ ದಾಖಲಿಸಲು ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆ ಎನ್‌ಸಿಪಿಸಿಆರ್ ಕೋರಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಮಲಯಾಳಂ ಭಾಷೆಯಲ್ಲಿ "ಪ್ರಚೋದನಕಾರಿಯಾಗಿ ಕೊಲ್ಲುವ ಅರ್ಥದಲ್ಲಿ" ಘೋಷಣೆಗಳನ್ನು ಕೂಗಿದ ಬಗ್ಗೆ ದೂರು ಸ್ವೀಕರಿಸಲಾಗಿದೆ ಕೇರಳ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.


ಇದನ್ನೂ ಓದಿ: Sanskrit University: ಸಂಸ್ಕೃತ ವಿಶ್ವವಿದ್ಯಾಲಯಗಳು ಭವಿಷ್ಯದಲ್ಲಿ ಏನಾಗಲಿವೆ? ಶಿಕ್ಷಣ ಸಚಿವರ ಮಾತಿನ ಅರ್ಥವೇನು?


ವೀಡಿಯೊದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಧ್ವಜ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವಿಡಿಯೋ ವೈರಲ್ ಬಳಿಕವೂ ಕೇರಳ ಪೊಲೀಸರು ಮಗುವಿನ ಪೋಷಕರು ಮತ್ತು ಪಿಎಫ್‌ಐ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಎನ್‌ಸಿಪಿಸಿಆರ್‌ ಹೇಳಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು