HR RameshHR Ramesh
|
news18-kannada Updated:November 30, 2019, 4:52 PM IST
ಬಿಷಪ್ ಫ್ರಾಂಕೋ ಮುಲಾಕ್ಕಲ್.
ತಿರುವನಂತಪುರಂ: ಅತ್ಯಚಾರ ಆರೋಪ ಎದುರಿಸುತ್ತಿರುವ ಜಲಾಂಧರ್ನ ಮಾಜಿ ಬಿಷಪ್ ಫ್ರಾಂಕೋ ಮುಲಾಕ್ಕಲ್ ಅವರಿಗೆ ಕೇರಳ ನ್ಯಾಯಾಲಯ ಜನವರಿ 6ರವರೆಗೆ ಜಾಮೀನು ಅವಧಿ ವಿಸ್ತರಣೆ ಮಾಡಿದೆ.
ಕೇರಳ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ವಿಚಾರಣೆಗೆ ಹಾಜರಾಗುವ ಮುನ್ನ ಫ್ರಾಂಕೋ ಸಮೀಪದ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಕೆಲ ಪಾರ್ಧಿಗಳು ಮತ್ತು ಭಕ್ತರೊಂದಿಗೆ ಇಂದು ಬೆಳಗ್ಗೆ 9 ಗಂಟೆಗೆ ಕೊಟ್ಟಾಯಂನಲ್ಲಿರುವ ಚರ್ಚ್ಗೆ ತೆರಳಿದ ಫ್ರಾಂಕೋ ಪ್ರಾರ್ಥನೆ ಸಲ್ಲಿಸಿದರು. ಬಳಿಕ ವಿಚಾರಣೆಗೆ ಹಾಜರಾದರು.
ಅತ್ಯಾಚಾರದ ಆರೋಪದ ಮೇಲೆ ಫ್ರಾಂಕೋ ಕಳೆದ ವರ್ಷ ಸೆಪ್ಟೆಂಬರ್ 21ರಂದು ಬಂಧನಕ್ಕೆ ಒಳಗಾಗಿದ್ದರು. ಬಳಿಕ ಕಳೆದ ವರ್ಷದ ಅಕ್ಟೋಬರ್ 16ರಂದು ಜಾಮೀನು ಪಡೆದಿದ್ದರು.
ಫ್ರಾಂಕೋ ವಿರುದ್ಧ ಕೇರಳ ಪೊಲೀಸರು 1400 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜನವರಿ 6ರಿಂದ ವಿಚಾರಣೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸೈರೋಮಲಾಬಾರ್ ಕ್ಯಾಥೋಲಿಕ್ ಚರ್ಚ್ನ ಪ್ರಮುಖ, ಮಾರ್ ಜಾರ್ಜ್ ಅಲೆನ್ಚೆರಿ, ಮೂವರು ಬಿಷಪ್ಗಳು, 11 ಪಾರ್ದಿಗಳು ಹಾಗೂ ಹಲವು ಸಂನ್ಯಾಸಿನಿಯರು ಸೇರಿದಂತೆ 83 ಸಾಕ್ಷಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಫ್ರಾಂಕೊ ಅವರನ್ನು ಬಿಷಪ್ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.
ಇದನ್ನು ಓದಿ: ಬನಾರಸ್ ಹಿಂದೂ ವಿವಿ ಸಂಸ್ಕೃತಕ್ಕೆ ಮುಸ್ಲಿಂ ಪ್ರಾಧ್ಯಾಪಕ ನೇಮಕ ವಿವಾದ; ಆಯುರ್ವೇದ ವಿಭಾಗದ ಸಂದರ್ಶನಕ್ಕೆ ಹಾಜರಾದ ಬೋಧಕ
First published:
November 30, 2019, 4:52 PM IST