ಕೇರಳ ಪ್ರವಾಹದಲ್ಲಿ ಹಲವರ ಪ್ರಾಣ ಕಾಪಾಡಿದ್ದ ಮೀನುಗಾರ ಸಾವು!

news18
Updated:October 1, 2018, 5:25 PM IST
ಕೇರಳ ಪ್ರವಾಹದಲ್ಲಿ ಹಲವರ ಪ್ರಾಣ ಕಾಪಾಡಿದ್ದ ಮೀನುಗಾರ ಸಾವು!
  • Advertorial
  • Last Updated: October 1, 2018, 5:25 PM IST
  • Share this:
ನ್ಯೂಸ್​ 18 ಕನ್ನಡ

ತಿರುವನಂತಪುರಂ(ಅ.01): ಕೇರಳದಲ್ಲಿ ಬಂದ ಭೀಕರ ಪ್ರವಾಹದ ಸಂದರ್ಭದಲ್ಲಿ ಜನರ ಪ್ರಾಣ ಕಾಪಾಡಿದ್ದ ತಿರುವನಂತಪುರಂನ ಮೀನುಗಾರ ಶನಿವಾರದಂದು ನಡೆದ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. 24 ವರ್ಷದ ಜಿನೀಶ್​ ಜೆರೋನ್​ ಬೈಕ್​ ಸ್ಕಿಡ್​ ಆಗಿ ರಸ್ತೆಯಲ್ಲಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಟ್ರಕ್​ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಿನೀಶ್​ರವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಅಪಘಾತ ನಡೆದ ಸಂದರ್ಭದಲ್ಲಿ ಜಿನೀಶ್​ ತಮ್ಮ ಗೆಳೆಯನೊಂದಿಗೆ ತಮಿಳುನಾಡಿಗೆ ತೆರಳುತ್ತಿದ್ದರೆಂದು ತಿಳಿದು ಬಂದಿದೆ. ಇನ್ನು ಕೇರಳ ಪ್ರವಾಹದಲ್ಲಿ ಯಾವೆಲ್ಲ ವ್ಯಕ್ತಿಗಳನ್ನು ಜಿನೀಶ್​ ರಕ್ಷಿಸಿದ್ದರೋ ಅವರ ಉಪಸ್ಥಿತಿಯಲ್ಲಿ ಕೇರಳದ ಸೈಂಟ್​ ಥಾಮಸ್​ ಚರ್ಚ್​ನ ಸ್ಮಶಾನದಲ್ಲಿ ಅವರ ಅಂತಿಮ ಸಂಸ್ಕಾರ ನಡೆದಿದೆ. ಚೆಂಗನೂರ್​ನ ಶಾಸಕ ಸಾಜೀ ಚೆರಿಯನ್​ ಕೂಡಾ ಜಿನೀಶ್​ರವರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದರು. ಜಿನೀಶ್​ರವರ ಅಗಲಿಕೆಯಿಂದ ಅವರ ಕ್ಷೇತ್ರದಲ್ಲಿ ಶೋಕದ ವಾತಾವರಣ ಮನೆಮಾಡಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸೋದು ಕನಸಿನಲ್ಲಿಯೂ ಊಹಿಸದ ಮಾತು - ಉಮೇಶ್ ಜಾಧವ್

ಕೇರಳದಲ್ಲಿ ಪ್ರವಾಹ ಎದುರಾದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಪೀಡಿತ ಪ್ರದೆಶಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿದ್ದ ಮೀನುಗಾರರ ತಂಡದಲ್ಲಿ ಜಿನೀಶ್​ ಕೂಡಾ ಇದ್ದರು. ರಕ್ಷಣಾ ಕಾರ್ಯದಲ್ಲಿ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭಾಗವಹಿಸಿದ್ದರು. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ರಕ್ಷಣಾ ಕಾರ್ಯ ಆರಂಭಿಸುವುದಕ್ಕೂ ಮೊದಲೇ ಅವರು ತಮ್ಮ ದೋಣಿಯೊಂದಿಗೆ ಧಾವಿಸಿದ್ದರು. ಬಳಿಕ ಅವರ ಈ ಕಾರ್ಯಕ್ಕೆ ಸರ್ಕಾರವು ಅವರನ್ನು ಸನ್ಮಾನಿಸಿತ್ತು.
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ