Shocking News: ಯೂಟ್ಯೂಬ್ ನೋಡಿ ಸ್ವತಃ ತಾನೇ ಹೆರಿಗೆ ಮಾಡಿಕೊಂಡ ಕೇರಳದ ಅಪ್ರಾಪ್ತೆ..!

Minor delivered baby by watching YouTube: 17 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿಯೇ ಅಕ್ಟೋಬರ್ 20ರಂದು ಮಗುವಿಗೆ ಜನ್ಮ ನೀಡಿದ್ದಾಳೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯೂಟ್ಯೂಬ್ (YouTube) ಒಂದು ಅಂಗೈಯಲ್ಲಿನ ಪ್ರಪಂಚ. ಇಲ್ಲಿ ಎಲ್ಲ ರೀತಿಯ ಮಾಹಿತಿ, ಸಲಹೆಗಳು ಸಿಗುತ್ತವೆ. ಇದರಿಂದ ಸಹಾಯವಾಗಿರುವುದು ಉಂಟು, ತೊಂದರೆ ಸಂಭವಿಸಿರುವುದೂ ಉಂಟು. ಕೇರಳದ ಮಲಪ್ಪುರಂ (kerala Mallapuram) ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.ಹೌದು 17 ವರ್ಷದ ಯುವತಿಯೊಬ್ಬಳು ಯೂಟ್ಯೂಬ್ ವಿಡಿಯೋಗಳನ್ನು (YouTube video) ನೋಡಿ ಸ್ವತಃ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬುದೇ ಸಮಾಧಾನಕರ ಸಂಗತಿ.

ಏನಿದು ಘಟನೆ?:

ನಿಜ, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿಯೇ ಅಕ್ಟೋಬರ್ 20ರಂದು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆರಿಗೆಯಾದ ನಂತರ, ಮೂರು ದಿನಗಳ ಕಾಲ ತನ್ನ ಕೋಣೆಯಲ್ಲಿಯೇ ಇದ್ದ ಆಕೆಗೆ ಕೆಲವು ಸೋಂಕುಗಳು ಕಾಣಿಸಿಕೊಂಡವು. ತರುವಾಯ, ಆಕೆಯ ತಾಯಿ ಅವಳನ್ನು ಆಸ್ಪತ್ರೆಗೆ ಸೇರಿಸಿದರು, ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ಹೆರಿಗೆಯ ಬಗ್ಗೆ ಆಸ್ಪತ್ರೆಯು ಮಾಹಿತಿ ನೀಡಿರುವುದರ ಜೊತೆಗೆ ಪೊಲೀಸರನ್ನು ಸಂಪರ್ಕಿಸಿರುವುದಾಗಿಯೂ ತಿಳಿಸಿದರು. ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ನವಜಾತ ಗಂಡು ಮಗು ಜೊತೆ ತಾಯಿ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಮಲಪ್ಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಅಧ್ಯಕ್ಷ ಅಡ್ವೊಕೇಟ್ ಶಾಜೇಶ್ ಭಾಸ್ಕರ್ ತಿಳಿಸಿದರು.

ಇದನ್ನು ಓದಿ: almistry: ಅಂಗೈನಲ್ಲಿನ ವಿಷ್ಣು ರೇಖೆ ಬಗ್ಗೆ ನಿಮಗಿದ್ಯಾ ಮಾಹಿತಿ!

ಪ್ರಿಯತಮನ ಬಂಧನ:

ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಕೆಯು ಗರ್ಭಧರಿಸುವಂತೆ ಮಾಡಿದ ಆರೋಪದ ಮೇಲೆ ಅದೇ ಪ್ರದೇಶದ 21 ವರ್ಷದ ಯುವತಿಯ ಪ್ರಿಯತಮನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CWC ಅಧ್ಯಕ್ಷರು, ಬಾಲಕಿಯ ತಾಯಿಗೆ ಆಕೆಯ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಎರಡು ದಿನಗಳ ಕಾಲ ಹೆರಿಗೆ ಆಗಿರುವುದರ ಬಗ್ಗೆಯೂ ತಿಳಿಯದಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದರು.

ಇದನ್ನು ಓದಿ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಮುಂದಾದ 10ನೇ ತರಗತಿ ಬಾಲಕ; ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

ಪೋಷಕರಿಗೆ ತಿಳಿದಿರಲಿಲ್ಲ ಸತ್ಯ:

“ಅಪ್ರಾಪ್ತ ಯುವತಿಯ ತಾಯಿಗೆ 50 ವರ್ಷ ವಯಸ್ಸಾಗಿದ್ದು, ತಾಯಿ ದೃಷ್ಟಿಹೀನಳಾಗಿದ್ದಾಳೆ. ಇನ್ನು ಇವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಯಾವಾಗಲೂ ರಾತ್ರಿ ಕರ್ತವ್ಯದಲ್ಲಿ ಇರುತ್ತಿದ್ದರು. ಹುಡುಗಿ ತನ್ನ ಮೊಬೈಲ್ ಫೋನ್‍ನೊಂದಿಗೆ ಕೋಣೆಯಲ್ಲಿ ಇದ್ದುದ್ದರಿಂದ ಅವಳು ಆನ್‍ಲೈನ್ ತರಗತಿಗಳಲ್ಲಿ ನಿರತಳಾಗಿದ್ದಾಳೆ ಎಂದು ತಾಯಿ ಭಾವಿಸಿದ್ದರು'' ಎಂದು ಅವರು ಹೇಳಿದರು.

ಬಂಧಿತ ಯುವಕ ಮನೆಯ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. "ಹೊಕ್ಕುಳಬಳ್ಳಿಯನ್ನು ಹೇಗೆ ಕತ್ತರಿಸಬೇಕು ಎಂದು ಯೂಟ್ಯೂಬ್ ವಿಡಿಯೋಗಳನ್ನು ನೋಡುವಂತೆ ಆಕೆಗೆ ಯುವಕ ಸಲಹೆ ನೀಡಿದ್ದನು. ಇವರಿಬ್ಬರೂ ಸೇರಿ ಗರ್ಭಾಧಾರಣೆ ಮುಚ್ಚಿಡಲು ಬಯಸಿದ್ದರು. ಗರ್ಭಧಾರಣೆಯ 3ನೇ ತಿಂಗಳಲ್ಲಿ, ಹುಡುಗಿ ಹೊಟ್ಟೆ ನೋವು ಎಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಳು. ನಂತರ ಗ್ಯಾಸ್ಟ್ರಿಕ್‍ಗೆ ಚಿಕಿತ್ಸೆ ಪಡೆದುಕೊಂಡಿದ್ದಳು. ತನಿಖೆಗಾಗಿ ನಾವು DNA ಪರೀಕ್ಷೆಯ ಮೊರೆ ಹೋಗಲಿದ್ದೇವೆ'' ಎಂದು ಪೊಲೀಸರು ಹೇಳಿದರು.

ಅಪ್ರಾಪ್ತನಿಂದ ಅತ್ಯಾಚಾರ ಯತ್ನ:

ಇನ್ನು ಮತ್ತೊಂದು ಪ್ರಕರಣದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ (minor Bou) 23 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ (Rape Attempt) ಭಯಾನಕ ಘಟನೆ ಕೇರಳದ (kerala) ಕೊಂಡೊಟ್ಟಿ ನಗರದಲ್ಲಿ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಅಪ್ರಾಪ್ತ ಬಾಲಕ ಆಕೆ ಪ್ರತಿರೋಧ ತೋರಿ ಓಡಿ ಹೋಗಲು ಮುಂದಾದ ಆಕೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಆರೋಪಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಾಜ್ಯ ಮಟ್ಟದ ಜೂಡೋ ಚಾಂಪಿಯನ್ ಆಗಿದ್ದಾನೆ. ಮಹಿಳೆ ನೀಡಿದ ಹೇಳಿಕ ಮತ್ತು ಸಿಸಿಟಿವಿ ದೃಶ್ಯಗಳಿಂದ ಆತನ ಕೃತ್ಯ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ.
Published by:Sharath Sharma Kalagaru
First published: