ಕೇರಳದಲ್ಲಿ ಕೇರಳದ ಉನ್ನತ ಶಿಕ್ಷಣ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಡಾ.ಕೆ.ಟಿ.ಜಲೀಲ್ ಅವರು ಮಂಗಳವಾರ ತಮ್ಮ ರಾಜೀನಾಮೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜಲೀರ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ಪ್ರಮಾಣ ವಚನ ಉಲ್ಲಂಘನೆ ಆರೋಪಗಳು ಸಚಿವರ ವಿರುದ್ಧ ದೃಢಪಟ್ಟಿವೆ ಎಂದು ಕೇರಳ ಲೋಕಾಯುಕ್ತ ವರದಿ ನೀಡಿದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇರಳ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಸಚಿವರ ಎರಡನೇ ಸೋದರ ಸಂಬಂಧಿ ನೇಮಕಾತಿಗೆ ಲೋಕಾಯುಕ್ತ ವರದಿ ಸಂಬಂಧಿಸಿದೆ. ತಮ್ಮ ಸಂಬಂಧಿಯನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದ್ದರ ಸಂಬಂಧ ಸಚಿವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿ ಲೋಕಾಯುಕ್ತರು ಕೇರಳ ಸಿಎಂಗೆ ವರದಿ ಸಲ್ಲಿಸಿದರು. ಕೆ ಟಿ ಜಲೀಲ್ ವಿರುದ್ಧ ಇಂತಹ ಆರೋಪಗಳು ದೃಢಪಟ್ಟಿರುವುದರಿಂದ ಅವರನ್ನು ಸಚಿವ ಸಂಪುಟದಲ್ಲಿ ಸದಸ್ಯರಾಗಿ ಮುಂದುವರಿಸಬಾರದು ಎಂದು ಲೋಕಾಯುಕ್ತ ಹೇಳಿದ್ದರು. ಲೋಕಾಯುಕ್ತ ವರದಿಯ ನಂತರ ಪ್ರತಿಪಕ್ಷಗಳು ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.
ಕೆ ಟಿ ಜಲೀಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಲೋಕಾಯುಕ್ತರ ಆದೇಶವು ಕೇರಳ ಹೈಕೋರ್ಟ್‌ನ ಪರಿಗಣನೆಗೆ ಮುಂಚೆಯೇ, ರಾಜಕೀಯ ಪ್ರಾಮಾಣಿಕತೆ ಎತ್ತಿಹಿಡಿಯುವ ಉದ್ದೇಶದಿಂದ ಹೈಕೋರ್ಟ್‌ನ ಆದೇಶಕ್ಕೂ ಮುನ್ನವೇ, ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದೇನೆ” ಎಂದು ಹೇಳಿದ್ದಾರೆ.
ಮುಂದುವರೆದು ಜಲೀಲ್ ಅವರು ತಮ್ಮ ಫೇಸ್ಬುಕ್ನಲ್ಲಿ, “ಕೇಂದ್ರ ಮೂರು ತನಿಖಾ ಸಂಸ್ಥೆಗಳ ಸಮಗ್ರ ತನಿಖೆಯ ನಂತರವೂ ಅವರು ನನ್ನ ವಿರುದ್ಧ ಏನನ್ನೂ ಕಂಡುಹಿಡಿಯಲಾಗಲಿಲ್ಲ. ಇದು ನನ್ನ ಸಾರ್ವಜನಿಕ ಜೀವನದ ಒಂದು ದೊಡ್ಡ ಸಾಧನೆ ಎಂದು ನಾನು ನೋಡುತ್ತೇನೆ. ಇದು ಜಲೀಲ್ ಬೇಟೆಯಿಂದ ತಾತ್ಕಾಲಿಕ ಪರಿಹಾರವಾಗಬಹುದೆಂದು ನಾನು ಭಾವಿಸುತ್ತೇನೆ. ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನು ಓದಿ: ಯುಗಾದಿ ಹಬ್ಬದಂದು ಕಟ್ಟುವ ಹೊನ್ನೇರು ಕೃಷಿ ಚಟುವಟಿಕೆಯ ಮೊದಲ ಹೆಜ್ಜೆ!
ಮಾಧ್ಯಮ ಮತ್ತು ಬಲಪಂಥೀಯರನ್ನು ಒಳಗೊಂಡ ಎಡಪಂಥೀಯ ವಿರೋಧಿ ಮಹಾಘಟಬಂಧನ್ ಅವನನ್ನು ಕೊಲ್ಲಲು ಸಮರ್ಥನಾಗಬಹುದು, ಆದರೆ ಎಂದಿಗೂ ಅವನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಚಿನ್ನದ ಕಳ್ಳಸಾಗಣೆ ಪ್ರಕರಣ ಮತ್ತು ಕುರಾನ್ ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಲೀಲ್ ಅವರನ್ನು ಈ ಹಿಂದೆ ಕೇಂದ್ರದ ತನಿಖಾ ಸಂಸ್ಥೆಗಳು ಪ್ರಶ್ನಿಸಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ