• Home
  • »
  • News
  • »
  • national-international
  • »
  • Model Minister: ಯುವಕನ ಕಿಡ್ನಿ ಟ್ರೀಟ್ಮೆಂಟ್‌ಗೆ ಚಿನ್ನದ ಬಳೆಯನ್ನೇ ಕಳಚಿಕೊಟ್ಟ ಸಚಿವೆ! ಜನಪ್ರತಿನಿಧಿಗೆ ಜನರಿಂದ ಮೆಚ್ಚುಗೆ

Model Minister: ಯುವಕನ ಕಿಡ್ನಿ ಟ್ರೀಟ್ಮೆಂಟ್‌ಗೆ ಚಿನ್ನದ ಬಳೆಯನ್ನೇ ಕಳಚಿಕೊಟ್ಟ ಸಚಿವೆ! ಜನಪ್ರತಿನಿಧಿಗೆ ಜನರಿಂದ ಮೆಚ್ಚುಗೆ

ಯುವಕನಿಗೆ ಚಿನ್ನದ ಬಳೆ ಕೊಟ್ಟ ಸಚಿವೆ ಬಿಂದು

ಯುವಕನಿಗೆ ಚಿನ್ನದ ಬಳೆ ಕೊಟ್ಟ ಸಚಿವೆ ಬಿಂದು

ಸಚಿವೆಯೊಬ್ಬರು ಮಾದರಿ ಕೆಲಸ ಮಾಡಿ, ಜನ ಮೆಚ್ಚುಗೆ ಗಳಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನ ಚಿಕಿತ್ಸೆಗೆ ಅಂತ ಸಚಿವೆ ತಮ್ಮ ಚಿನ್ನದ ಬಳೆಗಳನ್ನು ಯುವಕನಿಗೆ ಕಳಚಿ ಕೊಟ್ಟಿದ್ದಾರೆ.

  • Share this:

ಕೇರಳ: ಬಂಗಾರ (Gold) ಅಂದರೆ ಯಾರಿಗೆ ತಾನೇ ಪ್ರೀತಿ (Love) ಇರೋದಿಲ್ಲ ಹೇಳಿ? ಅದರಲ್ಲೂ ಮಹಿಳೆಯರಂತೂ (Women) ಬಂಗಾರ ಅಂದರೆ ಜೀವಕ್ಕಿಂತ (Life) ಜಾಸ್ತಿನೇ ಇಷ್ಟಪಡುತ್ತಾರೆ. ಆದರೆ ಇಲ್ಲಿ ಮಹಿಳೆಯೊಬ್ಬರು ತಮ್ಮ ಚಿನ್ನದ ಬಳೆಗಳನ್ನೇ ಬಡ ಯುವಕನ (Poor Boy) ಆರೋಗ್ಯ (Health) ಚಿಕಿತ್ಸೆಗಾಗಿ (Treatment) ದಾನ (Donate) ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವರ ಸ್ವಂತ ನಾಡು (Gods Own Country) ಕೇರಳದ (Kerala) ಸಚಿವೆಯೊಬ್ಬರು (Minister) ಈ ರೀತಿಯ ಕೆಲಸ ಮಾಡಿ, ಜನ ಮೆಚ್ಚುಗೆ ಗಳಿಸಿದ್ದಾರೆ. ಕೇರಳದ ಉನ್ನತ ಶಿಕ್ಷಣ ಸಚಿವೆ (Kerala Higher Education Minister) ಆರ್ ಬಿಂದು (R. Bindu) ಅವರೇ ತಮ್ಮ ಚಿನ್ನದ ಬಳೆಗಳನ್ನು (Gold Bangles) ಯುವಕನಿಗೆ ಕಳಚಿಕೊಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ (Kidney Problem) ಬಳಲುತ್ತಿದ್ದ ಯುವಕನ ಚಿಕಿತ್ಸೆಗೆ ಅಂತ ಸಚಿವೆ ತಮ್ಮ ಚಿನ್ನದ ಬಳೆಗಳನ್ನೇ ಸ್ಥಳದಲ್ಲೇ ಕಳಚಿ ಕೊಟ್ಟಿದ್ದಾರೆ.


 ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ


ಕೇರಳ ರಾಜ್ಯದ ಕರುವನ್ನೂರು ಮೂಲದ ವಿವೇಕ್ ಪ್ರಭಾಕರ್ ಎಂಬ 27 ವರ್ಷದ ಯುವಕ  ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಅವನಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕು ಅಂತ ವೈದ್ಯರು ಸೂಚಿಸಿದ್ದರು. ಆದರೆ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ವಿವೇಕ್ ಕುಟುಂಬಸ್ಥರು ಚಿಕಿತ್ಸೆಗೆ ಹಣ ಹೊಂದಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ.


ಸಚಿವೆಯ ಸಹಾಯ ಕೇಳಿದ ವಿವೇಕ್ ಕುಟುಂಬಸ್ಥರು


ಚಿಕಿತ್ಸೆಗೆ ಹಣ ಹೊಂದಿಸಲಾಗದೇ ವಿವೇಕ್ ಕುಟುಂಬಸ್ಥರು ಕಂಗಾಲಾಗಿದ್ದರು. ಆಗ ಬೇರೆ ದಾರಿ ಕಾಣದೇ ಯಾರೋ ನೀಡಿದ ಸಲಹೆಯಂತೆ ಯುವಕನ ಕಿಡ್ನಿ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಸಮಿತಿ ರಚಿಸಿಕೊಂಡಿದ್ದಾರೆ. ಈ ಸಮಿತಿ ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರನ್ನು ಭೇಟಿಯಾಗಿದೆ. ಅವರ ಮುಂದೆ ಯುವಕ ವಿವೇಕ್ ಮತ್ತು ಆತನ ಕುಟುಂಬಸ್ಥರ ಕಷ್ಟಗಳನ್ನು ಹೇಳಿ ಕೊಂಡಿದ್ದಾರೆ.


ಇದನ್ನೂ ಓದಿ: National Emblem Expression: ರಾಷ್ಟ್ರೀಯ ಲಾಂಛನದ ಸೌಮ್ಯ ರೂಪ vs ಉಗ್ರ ರೂಪ; ಏನಿದು ವಿಪಕ್ಷಗಳ ಹೊಸ ಟೀಕೆ?


 ಯುವಕನಿಗೆ ಚಿನ್ನದ ಬಳೆ ಕಳಚಿಕೊಟ್ಟ ಸಚಿವೆ


ಯುವಕನ ಕಷ್ಟ ಕೇಳಿ ಸಚಿವೆ ಬಿಂದು ಕರಗಿದ್ದಾರೆ. ಆತನ ಆರೋಗ್ಯ ಸ್ಥಿತಿ, ಆತನ ಮನೆಯ ಆರ್ಥಿಕ ಪರಿಸ್ಥಿತಿ ತಿಳಿದು ಮರುಗಿದ್ದಾರೆ. ಮೊದಲಿಗೆ ತಮ್ಮ ಕೈಲಾದ ಧನ ಸಹಾಯ ಮಾಡಿದ ಸಚಿವೆ, ಬಳಿಕ ಹಿಂದೆ ಮುಂದೆ ನೋಡದೆ ತಮ್ಮ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಕಳಚಿ ಕೊಟ್ಟಿದ್ದಾರೆ. ಚಿನ್ನಾಭರಣದ ಮೌಲ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದ ಸಚಿವೆ, ತಮ್ಮ ಬಳೆಯನ್ನು ಮಾರಿ, ಚಿಕಿತ್ಸೆಗೆ ಹಣ ಹೊಂದಿಸಿಕೊಳ್ಳುವಂತೆ ಹೇಳಿದ್ದಾರೆ.


ಚಿನ್ನದ ಬಳೆ ಕಳಚಿಕೊಟ್ಟ ತೆರಳಿದ ಸಚಿವೆ


ಮೂರ್ಕನಾಡು ಗ್ರಾಮಾಂತರ ವೈನಶಾಲೆ ಎಂಬಲ್ಲಿ ಸಚಿವೆ ಈ ಯುವಕನ ಚಿಕಿತ್ಸೆಗೆ ತಮ್ಮ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಕಳಚಿ ಕೊಟ್ಟಿದ್ದಾರೆ. ಪ್ರೇಕ್ಷಕರೂ ಕೂಡ ಈ ಅನಿರೀಕ್ಷಿತ ಘಟನೆಗೆ ಸಾಕ್ಷಿಯಾದ್ರು. ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ವಿವೇಕ್ ಅವರ ಪ್ರಾಣ ಉಳಿಸಲು ಶಸ್ತ್ರ ಚಿಕಿತ್ಸೆಯೊಂದೇ ಮಾರ್ಗ ಎಂಬ ವ್ಯಥೆಯನ್ನು ಕೇಳಿದ ಸಚಿವರ ಕಣ್ಣಲ್ಲಿ ನೀರು ಜಿನುಗಿತು. ಸಮಿತಿ ಸದಸ್ಯರಾದ ಪಿ.ಕೆ.ಮನುಮೋಹನ್, ನಾಸಿಮಾ ಕುಂಜುಮಾನ್ ಮತ್ತು ಸಾಜಿ ಎರಟ್ಟುಪರಂಬಿಲ್ ಅವರಿಗೆ ಬಳೆ ಹಸ್ತಾಂತರಿಸಿದರು.


ಇದನ್ನೂ ಓದಿ: Rahul Gandhi Foreign Trip: ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿ; ಯಾವ ದೇಶ, ಏನು ಕಾರಣ?


 ರೋಗಿಗೆ ಹಾರೈಸಿ ಸಚಿವೆ ನಿರ್ಗಮನ


ವಿವೇಕ್ ಸಹೋದರ ವಿಷ್ಣು ಅವರೊಂದಿಗೂ ಮಾತನಾಡಿದ ಸಚಿವರು, ವಿವೇಕ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಬಳಿಕ ಬಳೆ ಕಳಚಿ ಕೊಟ್ಟ ಸಚಿವೆ ಬಿಂದು,  ಕೃತಜ್ಞತೆ ಅಥವಾ ಕೃತಜ್ಞತೆಯ ಮಾತುಗಳಿಗೆ ಕಾಯದೆ ಸಭೆಯಿಂದ ನಿರ್ಗಮಿಸಿದರು.

Published by:Annappa Achari
First published: