Viral Protest: ರಸ್ತೆಗುಂಡಿಯಲ್ಲೇ ಯೋಗ, ಸ್ನಾನ! ವೈರಲ್ ಆಯ್ತು ಪ್ರತಿಭಟನೆ

ಮಳೆ ನೀರು ತುಂಬಿದ ರಸ್ತೆ ಹೊಂಡಗಳಲ್ಲಿ ಕುಳಿತು ಹೀಗೆ ಪ್ರತಿಭಟನೆ ಮಾಡಿದ ಕೇರಳದ ವ್ಯಕ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. 

ನಡುರಸ್ತೆಯಲ್ಲಿ ಪ್ರತಿಭಟನೆ

ನಡುರಸ್ತೆಯಲ್ಲಿ ಪ್ರತಿಭಟನೆ

  • Share this:
    ಕೇರಳದ ವ್ಯಕ್ತಿಯೋರ್ವ ನಡೆಸಿದ ಪ್ರತಿಭಟನೆಯೊಂದು ಭಾರೀ ವೈರಲ್ ಆಗುತ್ತಿದೆ.  ಅದೂ ಸ್ಥಳೀಯ ಶಾಸಕರ ಮುಂದೆಯೇ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ವ್ಯಕ್ತಿಯೋರ್ವ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬರು (Kerala Viral Protest) ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳ ಅಪಾಯದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ವಿಶಿಷ್ಟವಾದ ಪ್ರತಿಭಟನೆಯನ್ನು ನಡೆಸಿದ್ದೇ (Bath In Pothole) ಸಾಮಾಜಿಕ ಜಾಲತಾಣಗಳಲ್ಲಿ (Social Media Viral Video) ಭಾರೀ ವೈರಲ್ ಆಗುತ್ತಿದೆ. ಮಳೆ ನೀರು ತುಂಬಿದ ರಸ್ತೆ ಹೊಂಡಗಳಲ್ಲಿ ಕುಳಿತು ಹೀಗೆ ಪ್ರತಿಭಟನೆ ಮಾಡಿದ ಕೇರಳದ ವ್ಯಕ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. 



    ಸ್ಥಳೀಯ ಮಾಧ್ಯಮಗಳು ವ್ಯಕ್ತಿಯನ್ನು ಹಮ್ಜಾ ಪೊರಾಲಿ ಎಂದು ವರದಿ ಮಾಡಿವೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ವಿಡಿಯೋ ನೋಡಿ
    ಸಂಪೂರ್ಣ ಪ್ರದರ್ಶನದ ವಿಡಿಯೋ ಆನ್‌ಲೈನ್‌ನಲ್ಲಿ ಫುಲ್ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಬಕೆಟ್ ಮಗ್, ಸೋಪು ಮತ್ತು ಸ್ನಾನದ ಟವೆಲ್‌ನೊಂದಿಗೆ ಹೊರಟ ವ್ಯಕ್ತಿ, ಮಳೆನೀರು ತುಂಬಿದ ಹೊಂಡಗಳಲ್ಲಿ ಸ್ನಾನ ಮಾಡುತ್ತಿರುವುದು ಕಾಣಿಸುತ್ತದೆ. ಕುತೂಹಲದಿಂದ ವಾಹನ ಸವಾರರು ಹಾದು ಹೋಗುತ್ತಿದ್ದಾಗ ಅವರು ರಸ್ತೆಯ ಕೆಸರಿನ ನೀರಿನ ಕೊಳದಲ್ಲಿ ಬಟ್ಟೆ ತೊಳೆಯುತ್ತಿರುವುದನ್ನು ಸಹ ಚಿತ್ರೀಕರಿಸಲಾಗಿದೆ.

    ಶಾಸಕರಿಗೆ ಮುಜುಗರ ತಂದ ವೈರಲ್ ಪ್ರತಿಭಟನೆ
    ಸ್ಥಳೀಯ ಶಾಸಕ ಯುಎ ಲತೀಫ್  ವಿಶಿಷ್ಟ ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಹಾದುಹೋಗುತ್ತಿದ್ದರು. ಆಗ ಪ್ರತಿಭಟನೆ ನಡೆಸುತ್ತಿದ್ದ ಪೊರಾಲಿ ರಸ್ತೆಗುಂಡಿಯಲ್ಲಿ ಯೋಗ ಮಾಡಲು ಆರಂಭಿಸಿದರು. ಇದರಿಂದ ಶಾಸಕ ಯುಎ ಲತೀಫ್ ಕಾರಿನಿಂದ ಇಳಿಯಲೇಬೇಕಾಯಿತು. ಅಲ್ಲದೇ ರಸ್ತೆ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲೇ ಸ್ನಾನ ಮಾಡಲು ಆರಂಭಿಸಿದ್ದಾರೆ.   

    ರಸ್ತೆಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದ ವ್ಯಕ್ತಿ
    ಕೇರಳದಲ್ಲಿ ಗುಂಡಿಯಿಂದಾಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ಕೆಲವು ದಿನಗಳ ನಂತರ ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. 52 ವರ್ಷದ ಸ್ಕೂಟರ್ ಸವಾರ ಎರ್ನಾಕುಲಂ ಜಿಲ್ಲೆಯ ನೆಡುಂಬಸ್ಸೆರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡದ ಕಾರಣ ರಸ್ತೆಗೆ ಬಿದ್ದು ಟ್ರಕ್‌ಗೆ ಸಿಲುಕಿ ಮೃತಪಟ್ಟಿದ್ದರು.

    ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ
    ಆದರೆ ಈ ಘಟನೆಯ ನಂತರವೂ ರಸ್ತೆ ಗುಂಡಿಗಳನ್ನು ಮುಚ್ಚಿರಲಿಲ್ಲ. ಈ ಕುರಿತು ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೂ ಜನಪ್ರತಿನಿಧಿಗಳು  ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿರಲಿಲ್ಲ.

    ಕೇರಳ ಹೈಕೋರ್ಟ್​ನಿಂದ ಖಡಕ್ ತಾಕೀತು
    ಪ್ರಕರಣವನ್ನು ಗಮನದಲ್ಲಿಟ್ಟುಕೊಂಡ ಕೇರಳ ಹೈಕೋರ್ಟ್, ಗುಂಡಿಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಸೂಚಿಸಿದೆ.

    ಇದನ್ನೂ ಓದಿ: Booster Dose Corbevax: ಕೊವ್ಯಾಕ್ಸಿನ್, ಕೊವಿಶೀಲ್ಡ್ ಪಡೆದವರೇ ಗಮನಿಸಿ; ಕೊರೊನಾ ಬೂಸ್ಟರ್ ಡೋಸ್ ಆಗಿ ಕೊರ್ಬೆವ್ಯಾಕ್ಸ್

    ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು ಯಾವುದೇ ರಸ್ತೆಯಲ್ಲಿ ಗುಂಡಿಗಳು ಕಂಡು ಬಂದರೆ ಅದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿ, ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿತ್ತು.

    ಇದನ್ನೂ ಓದಿ: Under Water Metro: ನೀರೊಳಗೂ ಓಡಲಿದೆ ಮೆಟ್ರೋ! ನೀವೂ ಪ್ರಯಾಣಿಸಿ, ಆನಂದಿಸಿ!

    ಅಥವಾ ಈ ಅವ್ಯವಸ್ಥೆಗೆ ಜವಾಬ್ದಾರರಾಗಿರುವ ಯಾವುದೇ ಇತರ ವ್ಯಕ್ತಿಯ     ವಿರುದ್ಧ  ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕ ಪೀಠ ತೀರ್ಪು ನೀಡಿದೆ
    Published by:guruganesh bhat
    First published: