ಕೇರಳ: ಸಾಮಾನ್ಯವಾಗಿ ಮಗಳಿಗೆ (Daughter) ತಂದೆಯೇ (Father) ಮೊದಲ ಹೀರೋ. ಅಲ್ಲದೇ ಎಷ್ಟೋ ಅಪ್ಪಂದರಿಗೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೆಂದರೆ ಪ್ರಾಣ. ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರಪಂಚ. ನಿಜಕ್ಕೂ ಅಪ್ಪನದು ಹೋರಾಟದ ಬದುಕು. ತಮ್ಮ ಬದುಕಿನ ಕೊನೆಯ ದಿನದವರೆಗೂ ಬೆವರು ಹರಿಸಿ ದುಡಿಯುತ್ತಾರೆ. ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅಪ್ಪ ನಿರಂತರವಾಗಿ ಪ್ರಯತ್ನ ಪಡುತ್ತಿರುತ್ತಾರೆ. ಇನ್ನೂ ಮಗಳ ಆಸೆ, ಆಕಾಂಕ್ಷೆ, ಕನಸು ಎಲ್ಲವನ್ನು ನನಸು ಮಾಡಲು ತನ್ನ ಜೀವನವನ್ನೇ ತಂದೆ ಪಣಕ್ಕಿಟ್ಟಿರುತ್ತಾರೆ. ಆದರೆ ತನ್ನ ಮಗಳಿಗೆ ಯಾರಿಂದಲಾದರೂ ಕೊಂಚ ನೋವುಂಟದರೆ, ಅವಳ ಕಣ್ಣಲ್ಲಿ ನೀರು ಬಂದರೆ ಯಾವ ತಂದೆ ಸಹಿಸುವುದಿಲ್ಲ. ಆಕೆಯ ಸಂತೋಷಕ್ಕಾಗಿ ಎಲ್ಲವನ್ನು ಏನು ಬೇಕಾದರೂ ಮಾಡುವ ತಂದೆ ಆಕೆಗೆ ನೋವುಂಟು ಮಾಡಿದವರ ವಿರುದ್ಧ ತನ್ನ ಇನ್ನೊಂದು ಉಗ್ರ ರೂಪವನ್ನು ತೋರಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಬೇಕರಿ ಮಾಲೀಕ (Bakery owner) ಅಂಗಡಿಗೆ ವ್ಯಕ್ತಿಯೋರ್ವ ಬೆಂಕಿ (Fire) ಹಚ್ಚಿರುವ ಘನಟೆ ಕೇರಳದ (Kerala) ಎರ್ನಾಕುಲಂ (Ernakulam ) ಜಿಲ್ಲೆಯ ಚೇರನಲ್ಲೂರಿನಲ್ಲಿ (Cheranallur) ನಡೆದಿದೆ. ಇದೀಗ ಬಾಲಕಿಯ ತಂದೆಯನ್ನು ಪೊಲೀಸರು (Police) ಬಂಧಿಸಿದ್ದಾರೆ.
13 ವರ್ಷದ ಬಾಲಕಿಗೆ ಬೇಕರಿ ಮಾಲೀಕನಿಂದ ಕಿರುಕುಳ
ಮಂಗಳವಾರ ಸಂಜೆ ಚೇರನಲ್ಲೂರಿನ ವಿಷ್ಣುಪುರಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 57 ವರ್ಷದ ಕಣ್ಣನ್ ಅಲಿಯಾಸ್ ಬಾಬುರಾಜ್ ಅವರ ಮಾಲೀಕತ್ವದ ಬೇಕರಿಗೆ 13 ವರ್ಷದ ಬಾಲಕಿ ಭೇಟಿ ನೀಡಿದ್ದಳು. ಈ ವೇಳೆ ಬಾಲಕಿಯೊಂದಿಗೆ ಬೇಕರಿ ಮಾಲೀಕ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಮನೆಗೆ ಬಂದ ಬಾಲಕಿ ತನ್ನ ಪೋಷಕರಿಗೆ ಅಂಗಡಿಯಲ್ಲಿದ್ದ ವ್ಯಕ್ತಿ ನನ್ನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾಳೆ.
ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ
ಈ ವಿಚಾರ ಕೇಳಿ ರೊಚ್ಚಿಗೆದ್ದ ಬಾಲಕಿಯ ತಂದೆ, ರಾತ್ರಿ 8 ಗಂಟೆ ಸುಮಾರಿಗೆ ಬೇಕರಿಗೆ ಬಂದು ಬೆಂಕಿ ಹಚ್ಚಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಅದರಲ್ಲಿಯೂ ಅಂಗಡಿಗೆ ಪೆಟ್ರೋಲ್ ಸುರಿದು ಬಾಲಕಿಯ ತಂದೆ ಬೆಂಕಿ ಹಚ್ಚಿದ್ದು, ಇದೀಗ ಅಂಗಡಿ ಸುಟ್ಟು ಕರಕಲಾಗಿದೆ.
ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೇಕರಿ ಮಾಲೀಕ ಹಾಗೂ ಬಾಲಕಿಯ ತಂದೆ ಇಬ್ಬರನ್ನು ಪ್ರತ್ಯೇಕ ಪ್ರಕರಣದಡಿ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದಾರೆ. ನಂತರ ಕಣ್ಣನ್ ಅಲಿಯಾಸ್ ಬಾಬುರಾಜ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ ಚಿತ್ತೂರಿನಲ್ಲಿ ಶಾಲಾ ಬಾಲಕಿಗೆ ಕಿರುಕುಳ ನೀಡಿದ್ದ ವ್ಯಕ್ತಿ
ಈ ಮುನ್ನ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರಿನಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಆರೋಪಿಯನ್ನು 50 ವರ್ಷದ ರಾಜಗೋಪಾಲ್ ಎಂದು ಗುರುತಿಸಲಾಗಿದ್ದು, ಈತ ವಂದಿಪಾಳ್ಯಂ ಗ್ರಾಮದ ಶಾಲೆಯೊಂದರಲ್ಲಿ ಶಾಲಾ ಬಸ್ನ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಇದನ್ನೂ ಓದಿ: Dharwad News: ಕೇರಳದ ದಾರಿ ಹಿಡಿದ ಧಾರವಾಡ ಜಿಲ್ಲಾ ಪಂಚಾಯತ್!
ಥಿಯೇಟರ್ಗೆ ಕರೆದೊಯ್ದು ಬಾಲಕಿಗೆ ಲೈಂಗಿಕ ಕಿರುಕುಳ
ಶಾಲೆಯಲ್ಲಿ ಓದುತ್ತಿದ್ದ ಬಾಲಕಿಗೆ ಸಿನಿಮಾಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ ಆರೋಪಿ ಆಮಿಷವೊಡ್ಡಿದ್ದನು. ನಂತರ ತರಗತಿಗೆ ರಜೆ ಹಾಕಿಸಿ ಆಕೆಯನ್ನು ಚಿತ್ತೂರಿನ ಥಿಯೇಟರ್ಗೆ ಕರೆದೊಯ್ದಿದ್ದಾನೆ. ಈ ವೇಳೆ ಸಿನಿಮಾ ಆರಂಭವಾಗುತ್ತಿದ್ದಂತೆಯೇ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ