ಪ್ರವಾಹ ಸಂತ್ರಸ್ತರ ಬಗ್ಗೆ ಅವಹೇಳನ; ಕೆಲಸ ಕಳೆದುಕೊಂಡ ಕೇರಳ ವ್ಯಕ್ತಿ


Updated:August 20, 2018, 12:59 PM IST
ಪ್ರವಾಹ ಸಂತ್ರಸ್ತರ ಬಗ್ಗೆ ಅವಹೇಳನ; ಕೆಲಸ ಕಳೆದುಕೊಂಡ ಕೇರಳ ವ್ಯಕ್ತಿ

Updated: August 20, 2018, 12:59 PM IST
ನ್ಯೂಸ್​ 18

ಜಲ ಪ್ರಳಯಕ್ಕೆ ತತ್ತರಿಸಿರುವ ಕೇರಳದ ನೆರೆ ಸಂತ್ರಸ್ತರಿಗೆ ದೇಶ ವಿದೇಶದಿಂದ ನೆರವಿನ ಹಸ್ತ ಹರಿದು ಬರುತ್ತಿದ್ದಾರೆ. ಆದರೆ ಇಲ್ಲೊಬ್ಬ ತನ್ನ ರಾಜ್ಯದ ನಿರಾಶ್ರಿತರ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ವರ್ತನೆ ತೋರಿ ಕೆಲಸ ಕಳೆದುಕೊಂಡಿದ್ದಾನೆ.

ರಾಹುಲ್​ ಚೆರು ಪಾಲಯಟ್ಟು ಈ ರೀತಿ ದುರ್ವತನೆ ತೋರಿದ ವ್ಯಕ್ತಿ. ನೆರೆ ಸಂತ್ರಸ್ತರ ನೆರವಿನ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ವರ್ತನೆ ಎಂಬ ಕಾರಣಕ್ಕೆ ಈತನನ್ನು ಗಲ್ಫ್​ ಮೂಲದ ಕಂಪನಿ ಕೆಲದಿಂದ ತೆಗೆದು ಹಾಕಿದೆ.

ಲಾಲು ಗ್ರೂಪ್​ನಲ್ಲಿ ಕ್ಯಾಶಿಯರ್​ ಆಗಿದ್ದ ಈತ ಸಂತ್ರಸ್ತ ತಾಣದಲ್ಲಿರುವ ಮಹಿಳೆಯರಿಗೆ ಕಂಡೋಮ್​ ಅವಶ್ಯಕತೆ ಇದೆ ಎಂದು ಈತ ತನ್ನ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ ಎಂದು ಖಲೇಜ್​ ಟೈಮ್​ವರದಿ ಮಾಡಿದೆ ಎಂದು ಎಎನ್​ಐ ವರದಿ ಮಾಡಿತ್ತು.

ಕೇರಳದಲ್ಲಿ ಪ್ರವಾಹ ಸಂತ್ರಸ್ತರ ಬಗ್ಗೆ ಅಸಭ್ಯ ವರ್ತನೆ ಹಾಗೂ ಅವಹೇಳನಕಾರಿ ಕಾಮೆಂಟ್​ ಮಾಡಿದ ಹಿನ್ನಲೆ ಈತನನ್ನು  ತಮ್ಮ ಕಂಪನಿಯಿಂದ ಸೇವೆಯಿಂದ ತೆಗೆದು ಹಾಕುತ್ತಿರುವುದಾಗಿ ಕಂಪನಿ ತಿಳಿಸಿದೆ.

ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೆನೆ. ನಾನು ಮಾಡಿದ  ಅಜಾಗುರುಕ ವರ್ತನೆ ದೊಡ್ಡ ಪ್ರಮಾದವಾಗಿದೆ ಎಂಬು ಬಳಿಕ ಪಲಯಟ್ಟು ಫೇಸ್​ ಬುಕ್​ನಲ್ಲಿ ಕ್ಷಮೆಯಾಚಿಸಿದ್ದಾನೆ.


Loading...

ಜನರು ಇಂತಹ ಸ್ಥಿತಿಯಲ್ಲಿದ್ದಾಗ ಈ ರೀತಿ ವರ್ತನೆ ತೋರಿದ ಹಿನ್ನಲೆ ನಾವು ತಕ್ಷಣಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಸ್ಪಷ್ಟವಾಗಿ ಅವರಿಗೆ ಸಂದೇಶವನ್ನು ಕೂಡ ಅವರಿಗೆ ನೀಡಿದ್ದೇವೆ. ನಮ್ಮ ಕಂಪನಿ ಮಾನವೀಯತೆ ಮತ್ತು ನೈತಿಕ ನಿಲುವನ್ನು ಹೊಂದಿದ್ದೆ. ಈ ಹಿನ್ನಲೆಯಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಿದ್ದೇವೆ ಎಂದು ಲಾಲು ಗ್ರೂಪ್​ ಮುಖ್ಯ ಸಂಪರ್ಕ ಅಧಿಕಾರಿ ನಂದಕುಮಾರ್​ ತಿಳಿಸಿದ್ದಾರೆ.

ಕೇರಳ ಪ್ರವಾಹದಿಂದ ಜನರು ತತ್ತರಿಸಿದ್ದು, ಈವರೆಗೆ ಪ್ರವಾಹದಿಂದಾಗಿ 370 ಜನರು ಸಾವನ್ನಪ್ಪಿದ್ದಾರೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ