ಕಳ್ಳತನದ ಆರೋಪ ಹೊರಿಸಿ ಮರ್ಮಾಂಗವನ್ನೇ ಸುಟ್ಟು ಕೊಂದ ದುಷ್ಟರು; ಕೇರಳದಲ್ಲೊಂದು ಅಮಾನುಷ ಘಟನೆ

ಅಜೀಶ್ ಪರ್ಸ್ ಕದ್ದಿದ್ದಾನೆ ಎಂದು ಆರೋಪಿಸಿ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟು ಸಾಯಿಸಿದೆ. ಮರ್ಮಾಂಗಕ್ಕೆ ಬೆಂಕಿ ಹಚ್ಚಿದ್ದರಿಂದ ಅಜೀಶ್ ಕೊನೆಯುಸಿರೆಳೆದಿದ್ದಾನೆ.

Sushma Chakre | news18-kannada
Updated:December 18, 2019, 3:13 PM IST
ಕಳ್ಳತನದ ಆರೋಪ ಹೊರಿಸಿ ಮರ್ಮಾಂಗವನ್ನೇ ಸುಟ್ಟು ಕೊಂದ ದುಷ್ಟರು; ಕೇರಳದಲ್ಲೊಂದು ಅಮಾನುಷ ಘಟನೆ
ಸಾಂದರ್ಭಿಕ ಚಿತ್ರ
  • Share this:
ತಿರುವನಂತಪುರಂ (ಡಿ. 18): 30 ವರ್ಷದ ಕೇರಳದ ವ್ಯಕ್ತಿಯನ್ನು ಕಳ್ಳನೆಂದು ತಪ್ಪು ತಿಳಿದುಕೊಂಡು ಆತನಿಗೆ ಥಳಿಸಿ, ಆತನ ಮರ್ಮಾಂಗಕ್ಕೆ ಬೆಂಕಿ ಹಚ್ಚಿ ಕೊಂದ ಘಟನೆ ನಡೆದಿದೆ. ಬಸ್​ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯ ಪರ್ಸ್​ ಕಳ್ಳತನವಾಗಿತ್ತು. ಆ ಕಳ್ಳತನ ಮಾಡಿದ್ದು ಅದೇ ವ್ಯಕ್ತಿ ಎಂದು ಭಾವಿಸಿ 7 ಜನರ ಗುಂಪೊಂದು ಆತನಿಗೆ ಬೆಂಕಿ ಹಚ್ಚಿ ಸಾಯಿಸಿದ್ದಾರೆ.

ಆಟೋ ಚಾಲಕ ಸೇರಿದಂತೆ 7 ಜನರ ಗುಂಪೊಂದು ತಿರುವಲ್ಲಂನಲ್ಲಿ ಅಜೀಶ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ. ಅಜೀಶ್ ಎಂಬ ವ್ಯಕ್ತಿಯೇ ಬಸ್​​ಸ್ಟಾಂಡ್​ನಲ್ಲಿ ಮಲಗಿದ್ದವನ ಪರ್ಸ್​ ಕದ್ದಿದ್ದು ಎಂದು ಭಾವಿಸಿ ಆತನನ್ನು ಥಳಿಸಿದ ಗುಂಪಿನವರು ಆತನ ಮರ್ಮಾಂಗವನ್ನು ಬೆಂಕಿಯಿಂದ ಸುಟ್ಟಿದ್ದಾರೆ.

ತಿರುವಲ್ಲಂ ಜಿಲ್ಲೆಯ ತಂಪನೂರು ಪ್ರದೇಶದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಮಲಗಿದ್ದ ವೇಳೆ ಆತನ ಪರ್ಸ್ ಕದಿಯಲಾಗಿತ್ತು. ಆದರೆ ಆ ಪರ್ಸನ್ನು ಅಜೀಶ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಗುಂಪೊಂದು ಆತನನ್ನು ಥಳಿಸಿ, ಆತನ ಮರ್ಮಾಂಗವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟು ಸಾಯಿಸಿದೆ. ಮರ್ಮಾಂಗಕ್ಕೆ ಬೆಂಕಿ ಹಚ್ಚಿದ್ದರಿಂದ ಅಜೀಶ್ ಕೊನೆಯುಸಿರೆಳೆದಿದ್ದಾನೆ.

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಆ ಬಸ್ ಸ್ಟಾಂಡ್ ಬಳಿ ಇದ್ದ ಜನರು ಅಲ್ಲಿ ನಡೆದ ಗಲಾಟೆಯ ದೃಶ್ಯವನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. 7 ಜನರ ಗುಂಪು ಅಜೀಶ್​ನನ್ನು ಥಳಿಸಿ ಹಿಂಸಿಸುತ್ತಿರುವ ವಿಡಿಯೋವನ್ನು ನೋಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಇನ್ನು ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗಿಸ್, ಅರ್ಜುನ್, ಸಜನ್ ಮತ್ತು ರಾಬಿನ್‍ಸನ್ ಎಂದು ಗುರುತಿಸಲಾಗಿದೆ.
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading