Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?

ಕೇರಳದ ಈ ವ್ಯಕ್ತಿಗೆ ಯಾವುದಕ್ಕೆ ದಂಡ ಹಾಕಿದ್ದಾರೆ ಪೊಲೀಸರು ಅಂತ ನೀವು ಅವರು ನೀಡಿದ ಚಲನ್ ಅನ್ನು ನೋಡಿದರೆ ‘ಇದೆಂಥಾ ಅಪರಾಧ’ ಅಂತ ಹೇಳುವುದಂತೂ ಖಂಡಿತ.

ಬಸಿಲ್ ಶ್ಯಾಮ್

ಬಸಿಲ್ ಶ್ಯಾಮ್

  • Share this:
ಸಾಮಾನ್ಯವಾಗಿ ನಾವು ಬೈಕ್ (Bike) ಮೇಲೆ ಹೋಗುತ್ತಿರುವಾಗ ಹೆಲ್ಮೆಟ್ (Helmet) ಧರಿಸದೆ ಇದ್ದರೆ, ಬೈಕ್ ಮೇಲೆ ಮೂವರು ಕುಳಿತುಕೊಂಡು ಹೋಗುತ್ತಿದ್ದರೆ ಮತ್ತು ತಪ್ಪು ದಾರಿಯಲ್ಲಿ ಬಂದರೆ ಮತ್ತು ಕಾರಿನಲ್ಲಿ (Car) ಹೋಗುತ್ತಿರುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇದ್ದರೆ ಮತ್ತು ಒನ್ ವೇ ಯಲ್ಲಿ ಕಾರು ಚಲಾಯಿಸಿಕೊಂಡು ಮತ್ತು ಅತೀ ವೇಗವಾಗಿ ಕಾರು ಚಲಾಯಿಸಿದರೆ ಪೊಲೀಸರು (Police) ದಂಡ (fine) ಹಾಕುತ್ತಾರೆ. ಆದರೆ ಕೇರಳದ (Kerala) ಈ ವ್ಯಕ್ತಿಗೆ ಯಾವುದಕ್ಕೆ ದಂಡ ಹಾಕಿದ್ದಾರೆ ಪೊಲೀಸರು ಅಂತ ನೀವು ಅವರು ನೀಡಿದ ಚಲನ್ (Challan) ಅನ್ನು ನೋಡಿದರೆ ‘ಇದೆಂಥಾ ಅಪರಾಧ’ ಅಂತ ಹೇಳುವುದಂತೂ ಖಂಡಿತ.

ಈ ವ್ಯಕ್ತಿಗೆ ದಂಡ ಹಾಕಿದ್ದು ಯಾವ ಕಾರಣಕ್ಕೆ ಅಂತ ಕೇಳಿದರೆ ನೀವು ಸರಿಯಾಗಿದೆ ಅಂತ ಹೇಳುತ್ತೀರಿ. ಅದೇ ಪೊಲೀಸರು ಇವರಿಗೆ ನೀಡಿದ ಚಲನ್ ನಲ್ಲಿ ಉಲ್ಲೇಖಿಸಿದ ಕಾರಣವನ್ನು ನೀವು ಕೇಳಿದರೆ ಒಂದು ಕ್ಷಣ ಯೋಚನೆಯಲ್ಲಿ ಮುಳುಗುವುದು ಗ್ಯಾರೆಂಟಿ.

ಬೈಕ್ ನಲ್ಲಿ ಬೇಕಾಗುವಷ್ಟು ಇಂಧನವಿಲ್ಲ ಅಂತ ಫೈನ್ 
ಅಂತದ್ದೇನು ಉಲ್ಲೇಖಿಸಿದ್ದಾರೆ ಪೊಲೀಸರು ಆ ವ್ಯಕ್ತಿಗೆ ನೀಡಿದ ಚಲನ್ ನಲ್ಲಿ ಅಂತ ನೀವು ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರಬೇಕಲ್ಲವೇ? ಆ ಚಲನ್​ನಲ್ಲಿ ಅವರ ಬೈಕ್ ಮೇಲೆ ಪ್ರಯಾಣಿಕರೊಬ್ಬರು ಇದ್ದು, ಬೈಕ್ ನಲ್ಲಿ ಬೇಕಾಗುವಷ್ಟು ಇಂಧನವಿಲ್ಲದೆ ತಮ್ಮ ಬೈಕ್ ಅನ್ನು ಚಲಾಯಿಸುತ್ತಿದ್ದಾರೆ ಎಂದು ಬರೆದಿತ್ತು. ಕೇರಳದ ಟ್ರಾಫಿಕ್ ಪೊಲೀಸರು ಕಳುಹಿಸಿದ ಇ-ಚಲನ್ ನ ಫೋಟೋ ಆ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾನೆ ಮತ್ತು ಈಗ ಅದು ಜೋರಾಗಿಯೇ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ ಮತ್ತು ಅನೇಕ ಜನರ ಗಮನವನ್ನು ಇದು ಸೆಳೆಯುತ್ತಿದೆ. ವರದಿಯ ಪ್ರಕಾರ, ಚಲನ್ ನೀಡಿದಾಗ ಆ ವ್ಯಕ್ತಿ ತನ್ನ ರಾಯಲ್ ಎನ್‌ಫೀಲ್ಡ್ ಮೋಟರ್ ಸೈಕಲ್ ಅನ್ನು ಚಲಾಯಿಸುತ್ತಿದ್ದನು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Co- Education: ಕೋ-ಎಡ್ ಪದ್ಧತಿಗೆ ಒತ್ತು: ಇನ್ಮುಂದೆ ಕೇರಳದಲ್ಲಿ ಬಾಲಕ, ಬಾಲಕಿಯರ ಪ್ರತ್ಯೇಕ ಶಾಲೆಗಳು ಕ್ಲೋಸ್

ಟ್ರಾಫಿಕ್ ಪೊಲೀಸ್ ಇ-ಚಲನ್​ನಲ್ಲಿ ವ್ಯಕ್ತಿಯ ಹೆಸರನ್ನು ಬಸಿಲ್ ಶ್ಯಾಮ್ ಎಂದು ಉಲ್ಲೇಖಿಸಲಾಗಿದೆ ಮತ್ತು ದಂಡದ ಮೊತ್ತವನ್ನು 250 ರೂಪಾಯಿ ಎಂದು ಉಲ್ಲೇಖಿಸಲಾಗಿದೆ.

ಘಟನೆಯ ಬಗ್ಗೆ ಶ್ಯಾಮ್ ಹೇಳಿದ್ದು ಹೀಗೆ
ಆಟೋ ಮೊಬೈಲ್ ಕ್ಷೇತ್ರದ ಬಗ್ಗೆ ಸುದ್ದಿಗಳನ್ನು ಒಳಗೊಂಡಿರುವ ಬೈಕ್ ದೆಖೋ ತನ್ನ ವರದಿಯಲ್ಲಿ, ಪ್ರತಿಕ್ರಿಯೆಗಾಗಿ ಶ್ಯಾಮ್ ಅವರನ್ನು ಸಂಪರ್ಕಿಸಿದೆ ಎಂದು ಹೇಳಿದೆ. ತಾನು ತನ್ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸ್ ಒಬ್ಬರು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ನನ್ನ ಬೈಕ್ ನಿಲ್ಲಿಸಲು ಹೇಳಿದರು ಎಂದು ಶ್ಯಾಮ್ ಹೇಳಿದರು.

ನಂತರ ಶ್ಯಾಮ್ ಅವರಿಗೆ ಈ ಒಂದು ತಪ್ಪಿಗೆ 250 ರೂಪಾಯಿಯ ದಂಡವನ್ನು ಪಾವತಿಸುವಂತೆ ಕೇಳಲಾಯಿತು, ಅದನ್ನು ಅಲ್ಲಿಯೇ ಪಾವತಿಸಿ ಕೆಲಸಕ್ಕೆ ಹೋದರು. ಕಚೇರಿ ತಲುಪಿದ ನಂತರವೇ ಅವರು ಆ ಇ-ಚಲನ್ ಅನ್ನು ನೋಡಿದರು ಮತ್ತು ಅದರಲ್ಲಿ 'ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೈಕ್ ನಲ್ಲಿ ಬೇಕಾಗುವಷ್ಟು ಇಂಧನವಿಲ್ಲದೆ ಚಾಲನೆ ಮಾಡುತ್ತಿರುವುದು’ ಎಂಬ ಕಾರಣವನ್ನು ಕಂಡುಕೊಂಡರು ಎಂದು ಬೈಕ್ ದೆಖೋ ವರದಿ ಮಾಡಿದೆ.

ಕಾನೂನಿನಲ್ಲಿ ಈ ರೀತಿಯ ರೂಲ್ಸ್ ಏನಾದ್ರೂ ಇದ್ಯಾ?
ಅನೇಕ ಸ್ಥಳೀಯ ಸುದ್ದಿ ಸಂಸ್ಥೆಗಳು ಮತ್ತು ಯೂಟ್ಯೂಬ್ ನಲ್ಲಿ ವಿಷಯ ಸೃಷ್ಟಿಕರ್ತರು ಈ ಘಟನೆಯ ಬಗ್ಗೆ ವರದಿ ಮಾಡಿದ್ದಾರೆ ಮತ್ತು ಕಡಿಮೆ ಇಂಧನದೊಂದಿಗೆ ಯಾರಾದರೂ ತಮ್ಮ ವಾಹನವನ್ನು ಚಲಾಯಿಸುವುದನ್ನು ಅಥವಾ ಓಡಿಸುವುದನ್ನು ನಿಷೇಧಿಸಲು ಭಾರತೀಯ ಮೋಟಾರು ವಾಹನ ಕಾಯ್ದೆ ಅಥವಾ ರಾಜ್ಯ ಕಾನೂನಿನಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:  Vishwanath Karthikeya: 13 ವರ್ಷದ ಬಾಲಕನಿಂದ ಪರ್ವತಾರೋಹಣದಲ್ಲಿ ವಿಶ್ವದಾಖಲೆ!

ಕೇರಳ ಸಾರಿಗೆ ಕಾನೂನಿನಲ್ಲಿ ಉಲ್ಲೇಖಿಸಲಾದ ಏಕೈಕ ಇಂಧನ ಸಂಬಂಧಿತ ಅಪರಾಧವೆಂದರೆ ವ್ಯಾನ್, ಕಾರು, ಬಸ್ ಮತ್ತು ಆಟೋದಂತಹ ವಾಹನದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು ಅವರನ್ನು ಗಮ್ಯಸ್ಥಾನಕ್ಕೆ ತಲುಪಿಸುವ ಮೊದಲು ವಾಹನದಲ್ಲಿ ಇಂಧನ ಖಾಲಿ ಆದರೆ, ಅಂತಹ ವಾಹನದ ಚಾಲಕ ಅಥವಾ ಮಾಲೀಕರಿಗೆ 250 ರೂಪಾಯಿ ದಂಡವನ್ನು ಹಾಕಲಾಗುತ್ತದೆ. ಮೋಟಾರು ವಾಹನ ಇಲಾಖೆ (ಎಂವಿಡಿ) ಮಾಜಿ ಇನ್ಸ್ಪೆಕ್ಟರ್ ಥಂಕಚನ್ ಟಿಜೆ ಅವರು ಇ-ಚಲನ್ ಗಳನ್ನು ನೀಡುವಾಗ ಸಾರಿಗೆ ಇಲಾಖೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
Published by:Ashwini Prabhu
First published: