Accident: ಹೆಂಡತಿ ಮತ್ತು ಆಕೆಯ ಫ್ರೆಂಡ್ಸ್ ಕಿರುಕುಳ! ಟ್ರಕ್​​ಗೆ ಕಾರು ಗುದ್ದಿಸಿ ಮಗನೊಂದಿಗೆ ವ್ಯಕ್ತಿ ಆತ್ಮಹತ್ಯೆ

ಹೆಂಡತಿಯ ಕಾಟ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಹೆಂಡತಿ ಹಾಗೂ ಆಕೆಯ ಫ್ರೆಂಡ್ಸ್ ಕಾಟದಿಂದ ವ್ಯಕ್ತಿ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ(ಜೂ.23): ಹೆಂಡತಿ (Wife) ಹಾಗೂ ಆಕೆಯ ಸ್ನೇಹಿತರ (Friends) ಕಾಟ ತಾಳಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ. ಹೆಂಡತಿಯ ಹಿಂಸೆಯಿಂದ ಬೇಸತ್ತ ಗಂಡ ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಕೇರಳದ ತಿರುವನಂತಪುರಂ ಬಳಿ ತನ್ನ ಪತ್ನಿ ಮತ್ತು ಆಕೆಯ ಸ್ನೇಹಿತರನ್ನು ದೂಷಿಸುವ ಫೇಸ್‌ಬುಕ್ ಪೋಸ್ಟ್ (Facebook Post) ಅನ್ನು ಬಿಟ್ಟ ನಂತರ, 48 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರನ್ನು (Car) ಟ್ರಕ್‌ಗೆ (Truck) ಡಿಕ್ಕಿ ಹೊಡೆದು ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು (Minor Son) ಕೊಂದಿದ್ದಾರೆ.

ಟ್ರಕ್​​ಗೆ ಕಾರು ಗುದ್ದಿ ತಂದೆ-ಮಗ ಸಾವು

ಅಟ್ಟಿಂಗಲ್‌ನಲ್ಲಿ ಸಂಭವಿಸಿದ ಅಪಘಾತವು ವ್ಯಕ್ತಿ ಮತ್ತು ಅವರ ಮಗನನ್ನು ಬಲಿ ತೆಗೆದುಕೊಂಡಿರುವುದು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಆ ವ್ಯಕ್ತಿ ಟ್ರಕ್‌ಗೆ ಚಲಾಯಿಸಿದ ಕಾರಿನಿಂದ ಸುಸೈಡ್ ನೋಟ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡರು.

ಫೇಸ್​ಬುಕ್​ನಲ್ಲಿ ಆತ್ಮಹತ್ಯೆಯ ಕಾರಣೀಕರ್ತರನ್ನು ರಿವೀಲ್ ಮಾಡಿದ ವ್ಯಕ್ತಿ

ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳುವ ಕೆಲವು ಗಂಟೆಗಳ ಮೊದಲು, 48 ವರ್ಷದ ವ್ಯಕ್ತಿ ತನ್ನ ಫೇಸ್‌ಬುಕ್ ಪುಟಕ್ಕೆ ಲಾಗ್ ಇನ್ ಮಾಡಿ, ಅಲ್ಲಿ ಅವನು ತನ್ನ ಹೆಂಡತಿ ಸೇರಿದಂತೆ ಐದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವ್ಯಕ್ತಿಗಳೇ ನನ್ನ ಸಾವಿಗೆ ಕಾರಣರಾಗಿದ್ದಾರೆ. ಅವರನ್ನು ಕಾನೂನಿನ ಮುಂದೆ ಕರೆತರಬೇಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಪೋಸ್ಟ್ ಹಂಚಿಕೊಂಡ ನಂತರ ವ್ಯಕ್ತಿ ತನ್ನ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಲ್ಫ್​ನಲ್ಲಿ ದುಡಿಯುವ ಪತ್ನಿಗೆ ಬೇಡಿಕೆಗಳು ಹೆಚ್ಚು, ಆದರೆ ಊರಿಗೆ ಬರಲ್ಲ

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹಾಗೂ ಆತನ ಪತ್ನಿ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಮಿಡಲ್ ಈಸ್ಟ್​​ನಲ್ಲಿ ಕೆಲಸ ಮಾಡುತ್ತಿದ್ದು ಆಕೆ ಅಲ್ಲಿಂದ ಮರಳಿ ಊರಿಗೆ ಬರಲು ನಿರಾಕರಿಸಿದ್ದಾಳೆ. ಪತಿಯಿಂದ ಬಹಳಷ್ಟು ಬೇಡಿಕೆಗಳನ್ನು ಇಡುತ್ತಿದ್ದ ಪತ್ನಿ ಪತಿ ಕರೆದಾಗ ಮಾತ್ರ ಊರಿಗೆ ಮರಳಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Sarayu River: ಸರಯೂ ನದಿಯಲ್ಲಿ ಹೆಂಡತಿಗೆ ಕಿಸ್ ಮಾಡಿದ ಗಂಡನಿಗೆ ಥಳಿತ

ಆರ್ಥಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾಗಿ ಗಂಡನಿಂದ ಆರೋಪ

ಕಾರಿನಲ್ಲಿ ಪತ್ತೆಯಾಗಿರುವ ಆತ್ಮಹತ್ಯೆ ಪತ್ರದಲ್ಲಿ ನಾಲ್ವರ ಹೆಸರಿತ್ತು. ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದು ಪತ್ನಿ ಮತ್ತು ಆಕೆಯ ಸ್ನೇಹಿತರು ಎಂದು ಡೆತ್​ನೋಟ್​ನಲ್ಲಿ ತಿಳಿದುಬಂದಿದೆ. ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ನನ್ನ ಪತ್ನಿ ಮತ್ತು ಆಕೆಯ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಲಕ್ನೋದಲ್ಲಿ ಭೀಕರ ಅಪಘಾತ, 10 ಜನರು ಸ್ಥಳದಲ್ಲಿಯೇ ಸಾವು

ಉತ್ತರಪ್ರದೇಶದಲ್ಲಿ ಭಕ್ತರ ವಾಹನವೊಂದು ಅಪಘಾತಕ್ಕೆ ಒಳಗಾಗಿದ್ದು ಈ ಘಟನೆಯಲ್ಲಿ 10 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹರಿದ್ವಾರದಿಂದ ಮರಳಿ ಬರುತ್ತಿದ್ದ ಭಕ್ತರ ವಾಹನ ಅಪಘಾತಕ್ಕೆ ಒಳಗಾಗಿದ್ದು ಇದರಲ್ಲಿ 7ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿಯೇ ಮೃತಪಟ್ಟ ಜನರು ಸೇರಿದಂತೆ ವಾಹನದಲ್ಲಿ ಒಟ್ಟು 17 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lucknow Accident: ಹರಿದ್ವಾರದಿಂದ ಮರಳುತ್ತಿದ್ದ ವಾಹನ ಅಪಘಾತ, 10 ಭಕ್ತರು ಸ್ಥಳದಲ್ಲೇ ಸಾವು

ಉತ್ತರಾಖಂಡದ ಹರಿದ್ವಾರದಿಂದ ಹಿಂತಿರುಗುತ್ತಿದ್ದ ವಾಹನ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಗುರುವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ. ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ ಎಂದು ಪಿಲಿಭಿತ್ ಡಿಎಂ ಪುಲ್ಕಿತ್ ಖರೆ ಹೇಳಿದ್ದಾರೆ.
Published by:Divya D
First published: