ಮದ್ವೆಯಾದ ಒಂದೂವರೆ ತಿಂಗಳಿಗೆ Triple Talaq ನೀಡಲು ಮುಂದಾದ ಪತಿಗೆ ಥಳಿತ

ಈ ಘಟನೆ ವಿಭಿನ್ನ. ತ್ರಿವಳಿ ತಲಾಖ್ ಹೇಳದೇ ಇದ್ದದ್ದಕ್ಕಾಗಿ ನವ ವಿವಾಹಿತ ವ್ಯಕ್ತಿಯನ್ನು ಅವನ ಹೆಂಡತಿಯ ಸಂಬಂಧಿಕರು ಕೇರಳ ರಾಜ್ಯದಲ್ಲಿರುವ ಮಲಪ್ಪುರಂನಲ್ಲಿ ಮನಬಂದಂತೆ ಕ್ರೂರವಾಗಿ ಥಳಿಸಿರುವಂತಹ ಘಟನೆ ನಡೆದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಈಗಂತೂ ತ್ರಿವಳಿ ತಲಾಖ್ ಎನ್ನುವುದು ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿ ತ್ವರಿತ ವಿಚ್ಛೇನೆ (Divorce)ಪಡೆಯಲು ತ್ರಿವಳಿ ತಲಾಖ್ ಬಳಸುವುದುಂಟು. ಮೊದಲೆಲ್ಲಾ ಗಂಡನು (Husband) ನೀಡುತ್ತಿದ್ದಂತಹ ಕಿರುಕುಳವನ್ನು ತಾಳದೆ ಹೆಂಡತಿಯು (Wife) ತನ್ನ ತವರು ಮನೆಗೆ ಹೋಗುವುದು, ನಂತರ ಎರಡು ಮನೆಯವರು ಬಂದು ಪರಸ್ಪರ ಮಾತನಾಡಿಕೊಂಡು ಅವರಿಬ್ಬರ ನಡುವಿನ ಜಗಳವನ್ನು ಬಗೆಹರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏನೇ ಕಿರಿಕಿರಿ ಅನ್ನಿಸಿದರೂ, ಜಗಳವಾದರೂ ಕೂಡಲೇ ತ್ರಿವಳಿ ತಲಾಖ್ ಮೂಲಕ ತ್ವರಿತ ವಿಚ್ಛೇದನೆಯನ್ನು ನೀಡುತ್ತಿದ್ದಾರೆ. ತ್ರಿವಳಿ ತಲಾಖ್‌ ಸದ್ಯ ದೇಶದಲ್ಲಿ ಬ್ಯಾನ್‌ ಆಗಿದೆ. ಆದರೂ, ಈ ಪ್ರಕರಣಗಳು ವರದಿಯಾಗುತ್ತಿರುತ್ತವೆ.


ಆದರೆ, ಈ ಘಟನೆ ವಿಭಿನ್ನ. ತ್ರಿವಳಿ ತಲಾಖ್ ಹೇಳದೇ ಇದ್ದದ್ದಕ್ಕಾಗಿ ನವ ವಿವಾಹಿತ ವ್ಯಕ್ತಿಯನ್ನು ಅವನ ಹೆಂಡತಿಯ ಸಂಬಂಧಿಕರು ಕೇರಳ ರಾಜ್ಯದಲ್ಲಿರುವ ಮಲಪ್ಪುರಂನಲ್ಲಿ ಮನಬಂದಂತೆ ಕ್ರೂರವಾಗಿ ಥಳಿಸಿರುವಂತಹ ಘಟನೆ ನಡೆದಿದೆ.


ಅಪಹರಿಸಿ ಕ್ರೂರವಾಗಿ ಥಳಿತ

ಕೊಟ್ಟಕಲ್ ಮೂಲದ ಅಬ್ದುಲ್ ಅಸೀಬ್‌ನನ್ನು ಅವನ ಹೆಂಡತಿಯ ಸಂಬಂಧಿಕರು ಅಪಹರಿಸಿ ನಂತರ ಹಿಗ್ಗಾಮುಗ್ಗಾ ಕ್ರೂರವಾಗಿ ಥಳಿಸಿದ್ದಾರೆ ಎಂದು ಅಬ್ದುಲ್ ಅಸೀಬ್ ಸಂಬಂಧಿಕರು ಆರೋಪಿಸಿದ್ದಾರೆ.


ಒಂದೂವರೆ ತಿಂಗಳ ಹಿಂದೆ ಮದುವೆ

ಒಂದೂವರೆ ತಿಂಗಳ ಹಿಂದೆಯಷ್ಟೇ ಈ ದಂಪತಿಯ ಮದುವೆ ನಡೆದಿತ್ತು. ಆದರೆ ಅಸೀಬ್‌ನೊಂದಿಗಿನ ಆಗಾಗ್ಗೆ ನಡೆಯುತ್ತಿರುವ ಜಗಳಗಳ ನಂತರ, ಅವನ ಹೆಂಡತಿ ತನ್ನ ತವರು ಮನೆಗೆ ಹಿಂದಿರುಗಿದ್ದಾಳೆ. ಈ ಘಟನೆಯ ನಂತರ, ಮಹಿಳೆಯ ಸಂಬಂಧಿಕರು ಅಸೀಬ್‌ನನ್ನು ಭೇಟಿಯಾದರು ಮತ್ತು ವಿಚ್ಛೇದನ ಒಪ್ಪಂದಕ್ಕೆ ಒತ್ತಾಯಿಸಿದರು. ಅಸೀಬ್ ಪ್ರಕಾರ, ಅವರ ಬೇಡಿಕೆಗಳನ್ನು ಪಾಲಿಸಲು ನಾನು ನಿರಾಕರಿಸಿದಾಗ ಅವಳ ಸಂಬಂಧಿಕರು ನನ್ನನ್ನು ಹೀಗೆ ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Viral Video: ಹೆಂಡತಿಯ ಅತ್ತಿಗೆಯ ಜೊತೆ ಕಿಸ್​ ಮಾಡಿದ ಪೊಲೀಸ್​ ಕಾನ್ಸ್​ಟೇಬಲ್​, ವೈರಲ್​ ಆಯ್ತು ವಿಡಿಯೋ

ಆ್ಯಸಿಡ್ ದಾಳಿಯ ಬೆದರಿಕೆ

ತನ್ನ ಹೆಂಡತಿಯ ಹತ್ತಿರದ ಸಂಬಂಧಿಕರು ಸೇರಿದಂತೆ 7 ಜನರ ಗುಂಪೊಂದು ತನ್ನನ್ನು ಥಳಿಸಿದೆ ಮತ್ತು ನಂತರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ. ಅವರು ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಸೀಬ್ ಹೇಳಿದ್ದಾರೆ.


ಅಸೀಬ್ ಮದುವೆಯದಾಗಿನಿಂದಲೂ ತನ್ನ ಹೆಂಡತಿಯೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಹೊಂದಿದ್ದನು ಎಂದು ಹೇಳಿಕೊಂಡರೆ, ಅವರ ಹೆಂಡತಿಯ ಸಂಬಂಧಿಕರು ಅವನು ತನ್ನ ಹೆಂಡತಿಯನ್ನು ಕ್ರೂರವಾಗಿ ಹಿಂಸಿಸಿದ್ದಾನೆ ಎಂದು ಆರೋಪಿಸಿದ್ದಾರೆ.


ಮೂವರನ್ನು ವಶಕ್ಕೆ ಪಡೆದ ಪೊಲೀಸರು, ಇನ್ನುಳಿದವರಿಗೆ ಶೋಧ

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮೂವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಲ್ಲದೆ, ಇತರ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ, ಗಂಭೀರ ಗಾಯಗಳಿಂದ ಬಳಲುತ್ತಿದ್ದ ಅಸೀಬ್ ಅವರನ್ನು ಕೂಡಲೇ ಮಲಪ್ಪುರಂನ ಕೊಟ್ಟಕಲ್‌ನಲ್ಲಿರುವ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ:  ಸಂಸತ್ತಿನ ಎರಡು ಸದನಗಳಲ್ಲಿ ತ್ರಿವಳಿ ತಲಾಖ್‌ ಅಂಗೀಕಾರ; ಆರೋಪಿಗೆ ಮೂರು ವರ್ಷ ಜೈಲು

ತ್ರಿವಳಿ ತಲಾಖ್‌ನಿಂದಾಗಿ ಅನೇಕ ಮುಸ್ಲಿಂ ಮಹಿಳೆಯರು ತಮ್ಮ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ. ಹೀಗೆ ಅನೇಕ ಚಿಕ್ಕ ಪುಟ್ಟ ಕಾರಣಗಳಿಗೂ ತಾವು ಮದುವೆಯಾದ ಹೆಂಡತಿಗೆ ತ್ರಿವಳಿ ತಲಾಖ್ ಹೇಳುವ ಮೂಲಕ ತ್ವರಿತ ವಿಚ್ಛೇದನೆಯನ್ನು ಗಂಡಂದಿರು ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಈ ಪ್ರಕರಣದಲ್ಲಿ ತ್ರಿವಳಿ ತಲಾಖ್‌ ನೀಡಲಿಲ್ಲವೆಂದು ಪತ್ನಿಯ ಸಂಬಂಧಿಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.


ಏನಿದು ತಲಾಖೆ ಕಾಯ್ದೆ?:

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್​ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್​ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್​ಟಂಟ್ ತಲಾಖ್ ಆಗಿಬಿಟ್ಟಿದೆ.

ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್​ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆನ್ನಲಾಗಿದೆ.
First published: