Lucky Draw Prizes: ₹ 100 ಕ್ಕೆ 5 ಸೆಂಟ್ಸ್ ಭೂಮಿ ನಿಮ್ಮದಾಗಬಹುದು!

ಒಂದು ಟಿಕೆಟ್​ಗೆ ರೂ. 100 ನಿಗದಿಪಡಿಸಲಾಗಿದೆ. ಟಿಕೆಟ್‌ಗಳನ್ನು ಮಾರಾಟ ಮಾಡುವುದರಿಂದ ಸಂಗ್ರಹವಾದ ಹಣವನ್ನು ವರ್ಷವಿಡೀ ಚಾರಿಟಿ ಕಾರ್ಯಗಳಿಗೆ ಹಣವನ್ನು ನೀಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾಸರಗೋಡು: ರಂಗಭೂಮಿ ಕಲಾವಿದರ ಆರ್ಥಿಕ ಸಮಸ್ಯೆ ನೀಗಿಸಲು ಕೇರಳದಲ್ಲಿ (Kerala)  ಅತ್ಯಂತ ವಿಶಿಷ್ಟ ಕಾರ್ಯವೊಂದನ್ನು ಕೈಗೊಳ್ಳಲಾಗುತ್ತಿದೆ. ಕೇರಳದ ಚೆರುವತ್ತೂರು ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ(Cheruvathur Grama Panchayat)  ದತ್ತಿ ಕಾರ್ಯಗಳಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಲಕ್ಕಿ ಡ್ರಾ (Luckey Draw) ಏರ್ಪಡಿಸಲಾಗಿದ್ದು ಮೊದಲ ಬಹುಮಾನವಾಗಿ ಐದು ಸೆಂಟ್ಸ್ ಭೂಮಿ, ಒಂದು ಮ್ಯಾಟ್, ಐದು ತೆಂಗಿನ ಸಸಿಗಳು ಮತ್ತು ಸಾವಯವ ತರಕಾರಿಗಳ ಬೀಜಗಳನ್ನು ಘೋಷಿಸಲಾಗಿದೆ. ದ್ವಿತೀಯ ಬಹುಮಾನ ಹಸು ಆಗಿದ್ದು ತೃತೀಯ ಮತ್ತು ನಾಲ್ಕನೇ ಬಹುಮಾನ ಕ್ರಮವಾಗಿ ಮೇಕೆ ಮತ್ತು ನಾಲ್ಕು ಕೋಳಿಗಳಾಗಿವೆ. ಹೀಗೆ ಆಕರ್ಷಕ ಬಹುಮಾನದ ಕಾರಣಗಳಿಂದ ಈ ದತ್ತಿ ಸಂಗ್ರಹಣೆ ಕಾರ್ಯ ಭಾರೀ ಸಂಚಲನ ಸೃಷ್ಟಿಸಿದೆ.

  ಜನವರಿ 2 ರಿಂದ 8 ರವರೆಗೆ ಕೇರಳದ ಕನ್ನಂಕೈ ಮುಕ್ತ ಸಭಾಂಗಣದಲ್ಲಿ ಏಳು ದಿನಗಳ ರಾಜ್ಯ ನಾಟಕೋತ್ಸವವನ್ನು ಆಯೋಜಿಸುತ್ತಿರುವ ರಂಗಭೂಮಿ ತಂಡವು ಕೊನೆಯ ದಿನ ಲಾಟ್ಸ್ ಡ್ರಾ ಮಾಡಲಿದೆ. ಇದು ನಮ್ಮ ನಾಟಕೋತ್ಸವದ 7ನೇ ಆವೃತ್ತಿಯಾಗಿದೆ.

  ಇದೇ ಮೊದಲ ಬಾರಿಗೆ ಆಯೋಜನೆ
  ಇದೇ ಮೊದಲ ಬಾರಿಗೆ ನಾವು ಹೀಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೆ ಉತ್ಸವವನ್ನು ಆಯೋಜಿಸಲು ನಾವು ಇದನ್ನು ಮಾಡುತ್ತಿಲ್ಲ ಎಂದು ಪ್ರಶಸ್ತಿ ವಿಜೇತ ನಟ ಮತ್ತು ಗುಂಪಿನ ಹಿಂದಿನ ಶಕ್ತಿ ಕನ್ನಮ್ಕೈ ಕುಂಞಿರಾಮನ್ ಹೇಳಿದ್ದಾರೆ

  ನಮ್ಮದು ತಳಮಟ್ಟದ ರಂಗತಂಡ. ನಮ್ಮ ಸದಸ್ಯರಲ್ಲಿ ಸುಮಾರು ಶೇಕಡಾ 65 ರಷ್ಟು ಮಹಿಳೆಯರು. ನಮ್ಮ ಸಮಾಜದ ಬಡವರಿಗೆ ಜೀವನೋಪಾಯ ಕಂಡುಕೊಳ್ಳಲು ಸಹಾಯ ಮಾಡಲು ನಾವು ಬಯಸುತ್ತೇವೆ ಎಂದು ಪ್ರಶಸ್ತಿ ವಿಜೇತ ನಟ ಶಕ್ತಿ ಕನ್ನಮ್ಕೈ ಅವರು ಹೇಳಿದ್ದಾರೆ.

  5 ಸೆಂಟ್ಸ್ ಜಾಗ ಯಾರ ಒಡೆತನದಲ್ಲಿದೆ?
  ಮನೆ ಕಟ್ಟಲು ಸೂಕ್ತವೆನಿಸುವ ಪ್ರಥಮ ಬಹುಮಾನದ ಐದು ಸೆಂಟ್ಸ್ ನಿವೇಶನ ಪ್ರಸ್ತುತ ಕುಂಞಿರಾಮನ್ ಅವರ ಒಡೆತನದಲ್ಲಿದೆ.  ಕುಂಞಿರಾಮನ್ ಅವರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು ಮೊದಲ ಬಹುಮಾನದ ಸಲುವಾಗಿ ಭೂಮಿ ಬಿಟ್ಟುಕೊಡಲು ತಯಾರಾಗಿದ್ದಾರೆ. ಒಂದು ಟಿಕೆಟ್​ಗೆ ರೂ. 100 ನಿಗದಿಪಡಿಸಲಾಗಿದೆ.

  ಇದನ್ನೂ ಓದಿ: Old Man: ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟ ಈ ಅಜ್ಜನಿಗೆ ಬದುಕಿರುವುದನ್ನು ಸಾಬೀತುಪಡಿಸುವುದೇ ಸವಾಲು!

  ಟಿಕೆಟ್‌ಗಳನ್ನು ಮಾರಾಟ ಮಾಡುವುದರಿಂದ ಸಂಗ್ರಹವಾದ ಹಣವನ್ನು ವರ್ಷವಿಡೀ ಚಾರಿಟಿ ಕಾರ್ಯಗಳಿಗೆ ಹಣವನ್ನು ನೀಡಲಾಗುತ್ತದೆ. ನಿಧಿಯ ಒಂದು ಭಾಗವನ್ನು ಕೇರಳ ರಾಜ್ಯಾದ್ಯಂತ ಪೋಷಕ ರಂಗಭೂಮಿ ಕಲಾವಿದರಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

  ಕೊವಿಡ್ ಸಮಯದಲ್ಲೂ ಹಲವರಿಗೆ ಸಹಾಯ
  ಕೊವಿಡ್ ಸಮಯದಲ್ಲಿ ಈ ಸಂಘವು ಬಡ ಕುಟುಂಬಗಳಿಗೆ 2.3 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ಪೂರೈಸಿದೆ. ಕಳೆದ ಓಣಂನಲ್ಲಿ, ಪಂಚಾಯತ್‌ನಲ್ಲಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದೆ.

  ಇದನ್ನೂ ಓದಿ: Shiva Temple: ಈ ಶಿವ ದೇಗುಲಕ್ಕೆ ಅಣ್ಣ-ತಂಗಿ ಒಟ್ಟಿಗೆ ಹೋಗುವಂತಿಲ್ಲ!

  ಇನ್ನೂ ಹಲವು ಸಹಾಯ ಕಾರ್ಯ
  ಕಳೆದ ತಿಂಗಳು ಭಾರಿ ಮಳೆಗೆ ಪಂಚಾಯಿತಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಾಗ ಕನ್ನಂಕಾಯಿ ನಾಡಕ ವೇದಿಕೆ 430 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸಿತ್ತು. ಸಮವಸ್ತ್ರ ಇಲ್ಲದ ಸ್ನೇಹಾತೀರಂ ಬಿಯುಡಿಎಸ್ ವಿಶೇಷ ಶಾಲೆಯ ರಕ್ಷಣೆಗೂ ಮುಂದಾಯಿತು. ಥಿಯೇಟರ್ ಗ್ರೂಪ್ ಎಲ್ಲಾ 33 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೋಟ್‌ಗಳನ್ನು ವಿತರಿಸಿದೆ. ಹುಡುಗಿಯರಿಗೆ ಚೂಡಿದಾರ್ ಮತ್ತು ಟಾಪ್‌ಗಳು, ಹುಡುಗರಿಗೆ ಶರ್ಟ್ ಮತ್ತು ಪ್ಯಾಂಟ್‌ಗಳನ್ನು ವಿತರಿಸಿತು. ಸ್ಥಳೀಯರಾದ ಕುಂಞಿರಾಮನ್ ಮಾತನಾಡಿ, ನಾಟಕೋತ್ಸವದ ಮೊದಲ ಐದು ದಿನ ರಾಜ್ಯಾದ್ಯಂತ ಇರುವ ವೃತ್ತಿ ರಂಗಭೂಮಿ ತಂಡಗಳಿಂದ ಐದು ನಾಟಕಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.  
  Published by:guruganesh bhat
  First published: