ಬದುಕು ಬದಲಾಯಿಸಿದ ಲಾಟರಿ!; 41.50 ಕೋಟಿ ರೂ. ಒಡೆಯರಾದ ಅಬುಧಾಬಿಯ ಮೂವರು ಭಾರತೀಯರು

Abu Dhabi Lottery: ಕೇರಳದ ಕಣ್ಣೂರು ಮೂಲದ ಜಿತೇಶ್​ ಕೋರ್ತ್​​​, ಶಾನೋಜ್​ ಮತ್ತು ಶಹಕಹಾನ್ ಅದೃಷ್ಟ ಲಕ್ಷ್ಮಿ ಒಳಿದಿದ್ದಾಳೆ. ಕಷ್ಟದಲ್ಲಿದ್ದ ಈ ಮೂವರ ಬದುಕೀಗ ಬಂಗಾರವಾಗಿದೆ.

news18-kannada
Updated:May 5, 2020, 12:02 AM IST
ಬದುಕು ಬದಲಾಯಿಸಿದ ಲಾಟರಿ!; 41.50 ಕೋಟಿ ರೂ. ಒಡೆಯರಾದ ಅಬುಧಾಬಿಯ ಮೂವರು ಭಾರತೀಯರು
ಪ್ರಾತಿನಿಧಿಕ ಚಿತ್ರ
  • Share this:
2 ತಿಂಗಳಲ್ಲಿ  ಒಬ್ಬ ವ್ಯಕ್ತಿ ಕೋಟ್ಯಧಿಪತಿ ಆಗಲು ಸಾಧ್ಯವಾ? ಹಾಗೆ ಆಗಬೇಕು ಅಂದರೆ ಲಾಟರಿ ಹೊಡೀಬೇಕು ಅಷ್ಟೇ ಅನ್ನೋದು ನಿಮ್ಮ ಉತ್ತರವಾದರೆ, ಊಹೆ ಸತ್ಯ.  ಆದರೆ ಇಲ್ಲಿ ಮೂವರು ವ್ಯಕ್ತಿಗಳು ಒಮ್ಮಿಂದೊಮ್ಮೆಗೆ ಕೋಟ್ಯಾಧಿಪತಿಯಾಗಿದ್ದಾರೆ. ಅಬುದಾಬಿಯಲ್ಲಿ ಕೆಲಸ ಮಾಡುತ್ತಿರುವ ಭಾರತದ ಮೂವರು ಜನರೀಗ  ಬರೋಬ್ಬರಿ 41.50 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಅಷ್ಟಕ್ಕೆ ಇದೆಲ್ಲ ಹೇಗೆ ಸಾಧ್ಯವಾಯಿತು. ಇಲ್ಲಿದೆ ನೋಡಿ ....

ಕೇರಳದ ಕಣ್ಣೂರು ಮೂಲದ ಜಿತೇಶ್​ ಕೋರ್ತ್​​​, ಶಾನೋಜ್​ ಮತ್ತು ಶಹಕಹಾನ್ ಅದೃಷ್ಟ ಲಕ್ಷ್ಮಿ ಒಳಿದಿದ್ದಾಳೆ. ಕಷ್ಟದಲ್ಲಿದ್ದ ಈ ಮೂವರ ಬದುಕೀಗ ಬಂಗಾರವಾಗಿದೆ.

ಪ್ರಾರಂಭದಲ್ಲಿ ಜಿತೇಶ್​ ಕೋರ್ತ್​​ ಅಬುದಾಬಿಯಲ್ಲಿ ಡ್ರೈವರ್​​​ ಆಗಿ ಕೆಲಸ ಮಾಡುತ್ತಿದ್ದರು. ಆನಂತರ ಮೆಕ್ಯಾನಿಕಲ್​​ ಪದವಿ ಪಡೆದುಕೊಂಡು ಅಲ್ಲಿಯೇ ಸ್ವಂತ ಗ್ಯಾರೇಜ್​ ನಿರ್ಮಿಸಿದರು. ಆದರೆ ನಷ್ಟ ಹಾದಿಯಲ್ಲಿದ್ದ ಜಿತೇಶ್​ ಕೆಲ ತಿಂಗಳ ಹಿಂದೆ ಗ್ಯಾರೇಜ್​​ ಬಾಗಿಲು ಮುಚ್ಚಿ ಕೈಕಟ್ಟಿ ಕುಳಿತಿದ್ದರು.

ಹೀಗಿರುವಾಗ ​​​ 2 ತಿಂಗಳ ಹಿಂದೆ ಆತನ ಇಬ್ಬರು ಸ್ನೇಹಿತರಾದ ಶಾನೋಜ್​ ಮತ್ತು ಶಹಕಹಾನ್​ ಜೊತೆ ಸೇರಿಕೊಂಡು ಲಾಟರಿ ಟಿಕೇಟ್​ ಅನ್ನು ಖರೀದಿಸಿದ್ದರು. ಇದೀಗ ಅದೇ ಲಾಟರಿ ಆ ಮೂವರ ಬದುಕನ್ನೇ ಬದಲಾಯಿಸಿದೆ.  ಬರೋಬ್ಬರಿ 41.50ಕೋಟಿ ರೂಪಾಯಿಯನ್ನು ಗೆದ್ದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ್ದ ಜಿತೇಶ್​, ‘ನಾನು 041779 ನಂಬರಿನ ಲಾಟರಿಯನ್ನು ಖರೀದಿಸಿದ್ದೆ. ಲಾಟರಿ ಖರೀದಿಸಿದ್ದಾಗ ಅನೇಕರು ನನಗೆ ಕರೆ ಮಾಡುತ್ತಿದ್ದರು. ಲಾಟರಿ ನಂಬರ್​ ಕೇಳುತ್ತಿದ್ದರು. ಎಲ್ಲರ ನಂಬರ್​ ಒಂದೇ ತರಹ ಇತ್ತು. ನನನ್ನು ಫ್ರಾಂಕ್​ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೀಗ ಅ‘ ಸುಳ್ಳಾಗಿದೆ.

ನಂತರ ಮಾತು ಮುಂದುವರಿಸಿದ ಅವರು, ‘ನಾನು ರಾಸ್​​ ಅಲ್​​ ಕೈಮಾದಲ್ಲಿ 15 ವರ್ಷಗಳಿಂದ ಇದ್ದೇನೆ. ಕಳೆದ ಕೆಲ ತಿಂಗಳಿನಿಂದ ಜೀವನ ನಡೆಸಲು ಕಷ್ಟವಾಗುತ್ತಿತ್ತು. ಹಾಗಾಗಿ ನನ್ನ ಫ್ಯಾಮಿಲಿಯನ್ನು ಭಾರತಕ್ಕೆ ಕಳಯಹಿಸುವ ಆಲೋಚನೆ ಮಾಡಿದ್ದೆ. ಆದರೀಗ ಅದೃಷ್ಠ ಖುಲಾಯಿಸಿದೆ. ನನ್ನ ಮತ್ತು ಸ್ನೇಹಿತರಿಬ್ಬದ ಬದುಕು ಬದಲಾಯಿದೆ‘ ಎಂದು ಜಿತೇಶ್​ ಹೇಳಿದ್ದಾರೆ.

ಗ್ರೀನ್ ಜೋನ್​ನಲ್ಲಿದ್ದ ಹಾವೇರಿಗೆ ವಕ್ಕರಿಸಿತು ಕರೋನಾ; ಎರಡು ಬಡಾವಣೆ ಸೀಲ್​ಡೌನ್
First published: May 4, 2020, 11:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading