• Home
  • »
  • News
  • »
  • national-international
  • »
  • Human Sacrifice Case: ₹50 ಕ್ಕೆ ನರಬಲಿ ನಡೆದ ಮನೆಗೆ ಕರ್ಕೊಂಡು ಹೋಗ್ತಾರೆ, ಕೇರಳದಲ್ಲಿ ಹೀಗೂ ಒಂದು ಟೂರಿಸಂ!

Human Sacrifice Case: ₹50 ಕ್ಕೆ ನರಬಲಿ ನಡೆದ ಮನೆಗೆ ಕರ್ಕೊಂಡು ಹೋಗ್ತಾರೆ, ಕೇರಳದಲ್ಲಿ ಹೀಗೂ ಒಂದು ಟೂರಿಸಂ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳದ ವಿವಿಧ ಭಾಗಗಳಿಂದ ನರಬಲಿ ನೀಡುತ್ತಿದ್ದ ಮನೆಗೆ ಜನರು ಭೇಟಿ ನೀಡುತ್ತಿದ್ದರು. ಅವರಿಗೆ ಸುಲಭವಾಗಿ ನರಬಲಿ ನೀಡುತ್ತಿದ್ದ ಮನೆಗೆ ತೆರಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆಟೋದ ಮೇಲೆ ನರಬಲಿ ಮನೆಯ ಕುರಿತಾದ ಕರಪತ್ರ ಅಂಟಿಸಿದ್ದಾಗಿ ಚಾಲಕ ಗಿರೀಶ್ ತಪ್ಪೊಪ್ಪಿಕೊಂಡಿದ್ದಾನೆ.

  • Share this:

ತಿರುವನಂತಪುರಂ: ಕೇರಳದಲ್ಲಿ ನಡೆದ ಇಬ್ಬರು ಮಹಿಳೆಯರ ನರಬಲಿ (Kerala Human Sacrifice Case) ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ ಈ ಪ್ರಕರಣದಲ್ಲಿ ಕೇವಲ ಇಬ್ಬರು ಮಹಿಳೆಯರ ನರಬಲಿ ಮಾತ್ರ ನಡೆದಿಲ್ಲ. ಇನ್ನೂ ಹಲವರು ನರಬಲಿ ಆಟೋ ಸೇವೆ ಪಡೆದಿದ್ದಾರೆ ಎಂಬ ಕರಾಳ ಸತ್ಯ (Shocking News) ಒಂದೊಂದಾಗಿ ಬಯಲಿಗೆ ಬರುತ್ತಿದೆ. ಸದ್ಯ ಪೊಲೀಸರು ನಡಸುತ್ತಿರುವ ವಿಚಾರಣೆಯಲ್ಲಿ ಆಟೋ ಡ್ರೈವರ್ (Kerala Auto Driver) ಈ ಸಂಗತಿ ಬಾಯ್ಬಿಟ್ಟಿದ್ದಾನೆ. ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಬಲಿಕೊಟ್ಟು ಹತ್ಯೆಗೈದಿರುವ ವರದಿಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಆಟೋ ಚಾಲಕನೊಬ್ಬ ಅಪಘಾತದ ಲಾಭ ಪಡೆದಿದ್ದಾನೆ.


ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಜಂಕ್ಷನ್‌ನಿಂದ ಆಟೋ ಓಡಿಸುವ ಗಿರೀಶ್ ಎಂಬ ಆಟೋ ಚಾಲಕನೇ ಈ ನರಬಲಿ ಪ್ರಕರಣದಲ್ಲಿ ಲಾಭ ಪಡೆದ ಆರೋಪಿ. ಈ ಆಟೋ ಚಾಲಕ ತನ್ನ ಆಟೋಕ್ಕೆ ‘ನರಬಲಿ ಭವನ ದರ್ಶನಂ 50 ರೂ.’ ಎಂಬ ಕರಪತ್ರವನ್ನೂ ಅಂಟಿಸಿದ್ದನಂತೆ! ಅಲ್ಲದೇ ಈ ಕರಪತ್ರವನ್ನು ಅಂಟಿಸಲು ಆತನಿಗೆ 1,200 ರೂ. ಹಣವನ್ನೂ ನೀಡಲಾಗಿತ್ತುಎಂಬ ಕರಾಳ ಸತ್ಯವೊಂದು ಇದೀಗ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರಷ್ಟೇ ಅಲ್ಲದೇ ಇನ್ನೂ ಅನೇಕರನ್ನು ನರಬಲಿ ನೀಡುತ್ತಿದ್ದ ಮನೆಗೆ ಈ ಆಟೋ ಡ್ರೈವರ್ ಡ್ರಾಪ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಜನರು ಆ ಮನೆಗೆ ಭೇಟಿ ನೀಡಲು ಅನುಕೂಲ
ನರಬಲಿ ನೀಡುತ್ತಿದ್ದ ಪ್ರಕರಣದ ಆರೋಪಿಗಳಾದ ಭಗವಾಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ ಅವರ ಮನೆಗೆ ಬಿಡುವಂತೆ ಹಲವರು ತನ್ನ ಬಳಿ ಕೇಳಿಕೊಂಡಿದ್ದರು ಆಟೋ ಚಾಲಕ ಎಂದು ಗಿರೀಶ್ ಹೇಳಿಕೊಂಡಿದ್ದಾನೆ. ಕೇರಳದ ವಿವಿಧ ಭಾಗಗಳಿಂದ ನರಬಲಿ ನೀಡುತ್ತಿದ್ದ ಮನೆಗೆ ಜನರು ಭೇಟಿ ನೀಡುತ್ತಿದ್ದರು. ಅವರಿಗೆ ಸುಲಭವಾಗಿ ನರಬಲಿ ನೀಡುತ್ತಿದ್ದ ಮನೆಗೆ ತೆರಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆಟೋದ ಮೇಲೆ ನರಬಲಿ ಮನೆಯ ಕುರಿತಾದ ಕರಪತ್ರ ಅಂಟಿಸಿದ್ದಾಗಿ ಚಾಲಕ ಗಿರೀಶ್ ತಪ್ಪೊಪ್ಪಿಕೊಂಡಿದ್ದಾನೆ.


ಇದನ್ನೂ ಓದಿ: Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!


ಕೇರಳದ ಪಟ್ಟಣತಿಟ್ಟಂ ಬಳಿಯ ಎಲಂತೂರಲ್ಲಿ ವಾಮಾಚಾರಕ್ಕೆ ಮಹಿಳೆಯರನ್ನ ಬಲಿ ಕೊಟ್ಟ ದುರುಳರು. ಕೊಂದ ಬಳಿಕ ಶವಗಳನ್ನು ಕಟ್ ಮಾಡಿ ಮಾಂಸವನ್ನ ಬೇಯಿಸಿಕೊಂಡು ತಿಂದಿದ್ದಾರೆ ಎಂಬ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಈಗಾಗಲೇ ಭಗವಾಲ್ ಸಿಂಗ್, ಲೈಲಾ ಹಾಗೂ ಶಫಿ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಭಕ್ಷಣೆ
ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಬೇಯಿಸಿ ತಿಂದಿದ್ದಾರೆ. ಹೀಗೆ ಮಾಡಿದರೆ ವೃದ್ದಾಪ್ಯ ಬರದಂತೆ ತಡೆಗಟ್ಟಬಹುದು ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Joe Biden: ಪಾಕಿಸ್ತಾನ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದಿದ್ದ ಅಮೆರಿಕದಿಂದ ಯೂ ಟರ್ನ್​!


15 ಸಾವಿರ ಕೊಡೋದಾಗಿ ಮಹಿಳೆಯರನ್ನ ಕರೆತರಲಾಗಿತ್ತು, ಈ ವೇಳೆ ಹಲ್ಲೆ ಮಾಡಿ ಕೊಲೆ ಮಾಡಿರುವ ದುರುಳರು ಮೃತದೇಹ ಪೀಸ್ ಪೀಸ್ ಮಾಡಿ ಭಕ್ಷಿಸಿದ್ದಾರೆ ಎನ್ನಲಾಗಿದೆ.


ಮಾಂತ್ರಿಕನಿಗೆ ಶಫಿ ಎಂಬುವನಿಂದ ಸಹಕಾರ
ಪದ್ಮಾ(52), ರೋಸ್ಲಿನ್(50) ಎಂಬ ಇಬ್ಬರು ಮಹಿಳೆಯರೇ ಹತ್ಯೆಗೀಡಾದ ಮಹಿಳೆಯರು. ಎರ್ನಾಕುಲಂ ಜಿಲ್ಲೆಯ 2 ಸ್ಥಳಗಳಲ್ಲಿ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಮಾಂತ್ರಿಕ ಭಗವಲ್ ಸಿಂಗ್, ಪತ್ನಿ ಲೀಲಾ ಕೃತ್ಯ ಎಸಗಿದ್ದಾರೆ. ಮಾಂತ್ರಿಕನಿಗೆ ಶಫಿ ಎಂಬುವನಿಂದ ಸಹಕಾರ ದೊರೆತಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.


56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು
ಸೆಪ್ಟೆಂಬರ್ 26ರಂದು ಕಡವಂತ್ರದಿಂದ ನಾಪತ್ತೆಯಾಗಿದ್ದ ಪದ್ಮ ಮತ್ತು ರೋಸ್ಲಿನ್​​​ಳನ್ನೂ ಅಪಹರಿಸಿದ್ದ ಹಂತಕರು ಇಬ್ಬರು ಮಹಿಳೆಯರ ಕತ್ತು ಸೀಳಿ ನರಬಲಿ ಕೊಟ್ಟು ತುಂಡು ತುಂಡುಗಳಾಗಿ ಕತ್ತರಿಸಿದ್ದರು. 56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು. ನರಬಲಿ ಬಳಿಕ ದೇಹವನ್ನು ಬೇಯಿಸಿ ತಿಂದಿದ್ದರು. ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು. ಪತ್ತಣಂತಿಟ್ಟ ಪ್ರದೇಶದ ಬೇರೆ ಬೇರೆ ಕಡೆ ಶವ ಹೂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: