Lakshadweep| ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ 2 ವಿವಾದಾತ್ಮಕ ಆದೇಶಗಳಿಗೆ ತಡೆ ನೀಡಿದ ಕೇರಳ ಹೈಕೋರ್ಟ್​

ಕಳೆದ ಡಿಸೆಂಬರ್​ನಲ್ಲಿ ಲಕ್ಷದ್ವೀಪಕ್ಕೆ ಆಡಳಿತ ಅಧಿಕಾರಿಯಾಗಿ ನೇಮಕವಾದ ಪ್ರಫುಲ್​ ಪಟೇಲ್​ ಅನೇಕ ಅನಗತ್ಯ ಕಾನೂನುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಜಾರಿ ಮಾಡುತ್ತಿದ್ದಾರೆ. ಅಲ್ಲದೆ, ಅವರು ಹೊಸದಾಗಿ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಇದೀಗ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ.

ಕೇರಳ ಹೈಕೋರ್ಟ್​.

ಕೇರಳ ಹೈಕೋರ್ಟ್​.

 • Share this:
  ಕೇರಳ; ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ಕಾಲಿಡುತ್ತಿದ್ದಂತೆ ಪ್ರಫುಲ್​ ಪಟೇಲ್​ 4 ವಿವಾದಾತ್ಮಕ ಕಾನೂನುಗಳನ್ನು ಜಾರಿಗೆ ತಂದಿದ್ದರು. ಈ ಪೈಕಿ ಶಾಲಾ ಮಕ್ಕಳ ಊಟದ ಮೆನುವಿನಿಂದ ಮಾಂಸಾಹಾರವನ್ನು ತ್ಯಜಿಸುವುದು ಮತ್ತು ಸ್ಥಳೀಯ ಡೈರಿಗಳನ್ನು ಮುಚ್ಚಿ ಅಮೂಲ್​ ಉತ್ಪನ್ನಗಳನ್ನು ಲಕ್ಷದ್ವೀಪದಲ್ಲಿ ಪ್ರಚುರಪಡಿಸುವುದು. ಆದರೆ, ಪ್ರಫುಲ್ ಪಟೇಲ್ ಅವರ ಈ ನೀತಿ ವಿರುದ್ಧ ಸ್ಧಳೀಯ ದ್ವೀಪವಾಸಿಗಳು ಕಳೆದ ಹಲವು ತಿಂಗಳುಗಳಿಂದ ಹೋರಾಟಕ್ಕೆ ಮುಂದಾಗಿದ್ದಾರೆ. ಕೊನೆಗೂ ಈ ಹೋರಾಟಕ್ಕೆ ಸಣ್ಣದೊಂದು ಗೆಲುವು ಸಿಕ್ಕಂತಾಗಿದೆ. ಏಕೆಂದರೆ, ಪ್ರಫುಲ್‌ ಪಟೇಲ್ ನೇತೃತ್ವದ ಲಕ್ಷದ್ವೀಪ ಆಡಳಿತದ ಈ ಮೇಲಿನ ಎರಡು ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡುವ ಮೂಲಕ ದ್ವೀಪವಾಸಿಗಳಲ್ಲಿ ನಂಬಿಕೆ ಮೂಡಿಸಿದೆ.

  ಕಳೆದ ಡಿಸೆಂಬರ್​ನಲ್ಲಿ ಲಕ್ಷದ್ವೀಪಕ್ಕೆ ಆಡಳಿತ ಅಧಿಕಾರಿಯಾಗಿ ನೇಮಕವಾದ ಪ್ರಫುಲ್​ ಪಟೇಲ್​ ಅನೇಕ ಅನಗತ್ಯ ಕಾನೂನುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಜಾರಿ ಮಾಡುತ್ತಿ ದ್ದಾರೆ. ಅಲ್ಲದೆ, ಅವರು ಹೊಸದಾಗಿ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಇದೀಗ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಹೀಗಾಗಿ ದ್ವೀಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

  ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ನಿವೃತ್ತ ಅಧಿಕಾರಿಗಳು, "ಪ್ರಫುಲ್ ಪಟೇಲ್ ಅವರ ಈ ಪ್ರತಿಯೊಂದು ಕರಡು ನಿಯಮಗಳು ದ್ವೀಪಗಳು ಮತ್ತು ದ್ವೀಪವಾಸಿಗಳ ನೀತಿ ಹಾಗೂ ಹಿತಾಸಕ್ತಿಗಳಿಗೆ ವಿರುದ್ಧವಾದ ದೊಡ್ಡ ಕಾರ್ಯಸೂಚಿಯ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಲಕ್ಷದ್ವೀಪದ ಜನರನ್ನು ಸಂಪರ್ಕಿಸದೆ ಈ ನಿರ್ಧಾರಗಳನ್ನು ಏಕಮುಖವಾಗಿ ತೆಗೆದುಕೊಳ್ಳಲಾಗಿದೆ.

  ಈ ಪ್ರತಿಯೊಂದು ಕ್ರಮಗಳು ಅಭಿವೃದ್ಧಿಯಲ್ಲ, ಆದರೆ ಲಕ್ಷದ್ವೀಪದ ಪರಿಸರ ಮತ್ತು ಸಮಾಜವನ್ನು ಗೌರವಿಸುವ ಸ್ಥಾಪಿತ ಅಭ್ಯಾಸಗಳನ್ನು ಉಲ್ಲಂಘಿಸಿ, ಅನ್ಯ ಮತ್ತು ಅನಿಯಂತ್ರಿತ ನೀತಿ ನಿರೂಪಣೆಯನ್ನು ಕಡಿಮೆ ಮಾಡುತ್ತದೆ. ಒಟ್ಟಿಗೆ ತೆಗೆದುಕೊಂಡರೆ, ನಿರ್ವಾಹಕರ ಕ್ರಮಗಳು ಮತ್ತು ದೂರಗಾಮಿ ಪ್ರಸ್ತಾಪಗಳು, ಸರಿಯಾದ ಸಮಾಲೋಚನೆಯಿಲ್ಲದೆ ದ್ವೀಪವಾಸಿಗಳು, ಲಕ್ಷದ್ವೀಪ ಸಮಾಜ, ಆರ್ಥಿಕತೆ ಮತ್ತು ಭೂದೃಶ್ಯದ ಮೇಲೆ ದಾಳಿ ನಡೆಸುತ್ತಾರೆ, ದ್ವೀಪಗಳು ಪ್ರವಾಸಿಗರಿಗೆ ಮತ್ತು ಹೊರಗಿನ ಪ್ರಪಂಚದ ಪ್ರವಾಸೋದ್ಯಮ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್ನ ಒಂದು ಭಾಗವಾಗಿದೆ" ಎಂದು ಪತ್ರದಲ್ಲಿ ದೂರಲಾಗಿತ್ತು.

  ಅಲ್ಲದೆ, ಪ್ರಫುಲ್ ಪಟೇಲ್ ಜಾರಿಗೆ ತಂದ ಕೊರೋನಾ ಮಾರ್ಗಸೂಚಿಯ ಬದಲಾವಣೆ, ಮೀನುಗಾರರ ಗುಡಿಸಲು ತೆರವು, ಗೂಂಡಾ ಕಾಯ್ದೆ ಸೇರಿದಂತೆ ಜಾರಿ ಮತ್ತಿತರ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಇದುವರೆಗೂ 23 ಅರ್ಜಿಗಳು ಸಲ್ಲಿಕೆಯಾಗಿವೆ.

  ಈ ಅರ್ಜಿಗಳ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ನೇತೃತ್ವದ ವಿಭಾಗೀಯ ಪೀಠ, ದ್ವೀಪಗಳಲ್ಲಿನ ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಕೋಳಿ, ಗೋಮಾಂಸ ಮತ್ತು ಇತರ ಮಾಂಸವನ್ನು ಬದಲಾಯಿಸುವ ಆಡಳಿತದ ನಿರ್ಧಾರಗಳನ್ನು ತಡೆಹಿಡಿದಿದೆ.

  ಲಕ್ಷದ್ವೀಪದ ಕವರತ್ತಿ ಮೂಲದ ವಕೀಲ ಅಜ್ಮಲ್ ಅಹಮದ್ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯವು ಲಕ್ಷದ್ವೀಪದ ಆಡಳಿತ ಮತ್ತು ಆಡಳಿತಾಧಿಕಾರಿ ಪ್ರಫುಲ್‌‌ ಪಟೇಲ್ ಅವರಿಂದ ಪ್ರತಿಕ್ರಿಯೆಗಳನ್ನು ಕೇಳಿದೆ.

  ಇದನ್ನೂ ಓದಿ: SaveLakshaDweep: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್​ ಪಟೇಲ್ ವಿರೋಧಿಸಿ ಪ್ರಧಾನಿಗೆ 93 ಮಾಜಿ ಉನ್ನತ ಅಧಿಕಾರಿಗಳ ಪತ್ರ

  ಡೈರಿ ಫಾರ್ಮ್‌ಗಳನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಮಾಂಸಾಹಾರವನ್ನು ತೆಗೆಯುವ ಆಡಳಿತಾಧಿಕಾರಿಯ ನಿರ್ಧಾರಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ನಿರ್ಧಾರಗಳು ದ್ವೀಪವಾಸಿಗಳ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ನಾಶಪಡಿಸುವ ಗುರಿಯನ್ನು ಹೊಂದಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

  ದ್ವೀಪಗಳ ಚುನಾಯಿತ ಸ್ಥಳೀಯ ಸಂಸ್ಥೆಗಳೊಂದಿಗೆ ಯಾವುದೇ ಸೂಕ್ತ ಸಮಾಲೋಚನೆ ಇಲ್ಲದೆ ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಪ್ರಾಣಿಗಳನ್ನು ಹರಾಜು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿ ಹೇಳಿತ್ತು.

  ಇದನ್ನೂ ಓದಿ: SaveLakshaDweep: ನೆಮ್ಮದಿಯಾಗಿದ್ದ ಲಕ್ಷದ್ವೀಪದಲ್ಲಿ ಹುಳಿ ಹಿಂಡಿತಾ ಕೇಂದ್ರ, ಏನಿದು ಸೇವ್ ಲಕ್ಷದ್ವೀಪ ಹೋರಾಟ? ಇಲ್ಲಿದೆ ಮಾಹಿತಿ!

  ಪ್ರಫುಲ್ ಪಟೇಲ್‌‌ ತಾನು ದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್‌ ಚುನಾವಣೆಗೆ ಸ್ಪರ್ಧಿಸಲು ಅನರ್ಹ, ಖಾಸಗಿ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ, ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕಗಳನ್ನು ಪರಿಚಯಿಸಿದ್ದರು.

  ಇದು ದ್ವೀಪದ ಜನರ ವಿರೋಧಕ್ಕೆ ಕಾರಣವಾಗಿದ್ದು, ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಕೇರಳ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
  Published by:MAshok Kumar
  First published: