ಕೌಟುಂಬಿಕ ಕ್ರೌರ್ಯವಲ್ಲದೆ (Domestic Violence) ಇನ್ನಿತರ ಕಾರಣಗಳಿಂದ ಪತ್ನಿಯು (Wife) ಪತಿಯ ಮನೆಯನ್ನು(Husband Home) ತೊರೆದು ಪ್ರತ್ಯೇಕವಾಗಿ ಜೀವಿಸುತ್ತಿದ್ದರೂ ಆಕೆ ಜೀವನಾಂಶ ಪಡೆಯಲು ಅರ್ಹಳು ಎಂದು ಕೇರಳ (Kerala) ಹೈಕೋರ್ಟ್ (High Court) ತಿಳಿಸಿದೆ. ಸ್ವಯಂಪ್ರೇರಿತಳಾಗಿ ಹಾಗೂ ಸ್ವ-ಇಚ್ಛೆಯಿಂದ ಪತಿಯಿಂದ ದೂರವಾಗಿರುವ ಪತ್ನಿಗೆ ಕೂಡ ಪತಿಯು ಮಾಸಿಕ ಜೀವನಾಂಶವನ್ನು (Alimony) ನೀಡಬೇಕು ಎಂದು ಉಚ್ಚ ನ್ಯಾಯಾಲಯ ತಿಳಿಸಿದೆ.
ಜೀವನಾಂಶ ಪಡೆಯಲು ಪತ್ನಿ ಕೂಡ ಅರ್ಹಳು
ತನ್ನ ಪತಿಯ ಮನೆಯಲ್ಲಿ ಶಾಂತಿಯುತ ಜೀವನ ನಡೆಸಲು ಪತ್ನಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿರುವ ಕೇರಳ ಹೈಕೋರ್ಟ್ ಒಂದೇ ಮನೆಯಲ್ಲಿ ಜೊತೆಯಾಗಿ ವಾಸಿಸುವುದನ್ನು ನಿರಾಕರಿಸಲು ಪತ್ನಿಗೆ ಹಲವು ಕಾರಣಗಳಿದ್ದು, ಆಕೆಗೆ ಜೀವನಾಂಶವನ್ನು ನಿರಾಕರಿಸುವ ಯಾವುದೇ ಆಯ್ಕೆಯನ್ನು ಪತಿಗೆ ನೀಡುವುದಿಲ್ಲ ಎಂದು ತಿಳಿಸಿದೆ.
ಜೊತೆಯಾಗಿ ಜೀವಿಸುವುದು ಪತ್ನಿಗೆ ಸಮಸ್ಯೆಯನ್ನುಂಟು ಮಾಡಿದಲ್ಲಿ ಆಕೆ ಪ್ರತ್ಯೇಕವಾಗಿ ಜೀವಿಸಬಹುದು ಹಾಗೂ ಜೀವನಾಂಶ ಪಡೆಯಲು ಅರ್ಹಳು ಎಂದು ತಿಳಿಸಿದೆ.
ಇದನ್ನೂ ಓದಿ: Kerala Hostel Rules: ಹಾಸ್ಟೆಲ್ ವಿದ್ಯಾರ್ಥಿನಿಯರು ರಾತ್ರಿ ಹೊತ್ತು ಹೊರಗೆ ಹೋಗ್ಬಹುದು! ಇದು ಹೈಕೋರ್ಟ್ ಆದೇಶ
ಜೀವನಾಂಶ ನಿರಾಕರಿಸುವ ಆಯ್ಕೆ ಪತಿಗಿಲ್ಲ
ಪತಿಯ ಮನೆಯನ್ನು ಇಚ್ಛೆಯನುಸಾರ ಪತ್ನಿಯು ತೊರೆದ ನಂತರ ಪತಿಯಿಂದ ಜೀವನಾಂಶವನ್ನು ಪಡೆಯಲು ಪತ್ನಿ ಕಾನೂನುಬದ್ಧವಾಗಿ ಅರ್ಹರಾಗಿರುವುದಿಲ್ಲ ಎಂಬ ವಾದವನ್ನು ಮಂಡಿಸಿದ್ದರು. ಆದರೆ ಹೈಕೋರ್ಟ್ನ ನ್ಯಾಯಮೂರ್ತಿಗಳು, ಪತ್ನಿಗೆ ತನ್ನ ಪತಿಯೊಂದಿಗೆ ಹಾಗೂ ಆತನ ಮನೆಯಲ್ಲಿ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದು ಕಂಡುಬಂದರೆ ಆಕೆಗೆ ಜೀವನಾಂಶವನ್ನು ನಿರಾಕರಿಸುವ ಆಯ್ಕೆ ಪತಿಗಿಲ್ಲ ಎಂದು ತಿಳಿಸಿದ್ದಾರೆ.
ಕೇರಳ ಹೈಕೋರ್ಟ್ ತೀರ್ಪು
ಕೌಟುಂಬಿಕ ಕ್ರೌರ್ಯದ ಹಿನ್ನಲೆಯಲ್ಲಿ ಪತ್ನಿಯು ವಿಚ್ಛೇದನವನ್ನು ಕೋರಿದಾಗ ಕ್ರೌರ್ಯವನ್ನು ಸಾಬೀತುಪಡಿಸುವ ಸಾಕಷ್ಟು ಮನವಿ ಹಾಗೂ ಪುರಾವೆಗಳನ್ನು ಸಲ್ಲಿಸಲಾಗುತ್ತದೆ.
ಪತ್ನಿಗೆ ತನ್ನ ಪತಿಯ ಮನೆಯಲ್ಲಿ ಜೊತೆಯಾಗಿ ವಾಸಿಸಲು ಹಾಗೂ ಶಾಂತಿಯಿಂದ ಜೀವನ ನಿರ್ವಹಿಸಲು ಸಾಧ್ಯವಿಲ್ಲದೇ ಹೋದಾಗ ಜೀವನಾಂಶವನ್ನು ನಿರಾಕರಿಸುವ ಉದ್ದೇಶಪೂರ್ವಕ ಆಯ್ಕೆ ಪತಿಗೆ ಇದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಜೀವನಾಂಶ ನೀಡಲು ಆದೇಶಿಸಿದ್ದ ಕುಟುಂಬ ನ್ಯಾಯಾಲಯ
ಅರ್ಜಿದಾರರಿಗೆ ಕುಟುಂಬ ನ್ಯಾಯಾಲಯವು ಈ ಹಿಂದೆ ಸೆಕ್ಷನ್ 125(1) ಸಿಆರ್ಪಿಸಿ ಅಡಿಯಲ್ಲಿ ತನ್ನ ಪತ್ನಿಗೆ ರೂ 4,000 ಜೀವನಾಂಶವನ್ನು ನೀಡುವಂತೆ ನಿರ್ದೇಶಿಸಿತ್ತು.
ಹೈಕೋರ್ಟ್ನ ಮುಂದೆ ನಡೆದ ವಿಚಾರಣೆಯಲ್ಲಿ, ಪತ್ನಿಯು ಸ್ವಯಂಪ್ರೇರಣೆ ಹಾಗೂ ಸಮರ್ಥನೀಯ ಕಾರಣಗಳಿಲ್ಲದೆ ತನ್ನನ್ನು ತೊರೆದಿರುವುದರಿಂದ ತನ್ನ ಪತ್ನಿಗೆ ಜೀವನಾಂಶವನ್ನು ಪಾವತಿಸಲು ತಾನು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಪತಿಯು ವಾದಿಸಿದ್ದಾರೆ.
ಜೀವನಾಂಶ ಪಡೆಯಲು ಪತ್ನಿ ಅರ್ಹರಲ್ಲ ವಾದಿಸಿದ ವಕೀಲರು
ಪತಿಯ ಪರವಾಗಿ ವಾದ ಮಂಡಿಸಿದ ವಕೀಲರು, ಪತ್ನಿ ಇಚ್ಛಾಪೂರ್ವಕವಾಗಿ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಜೀವನಾಂಶ ಪಡೆಯಲು ಕಾನೂನುಬದ್ಧವಾಗಿ ಅರ್ಹರಲ್ಲ ಮತ್ತು ಕ್ರೌರ್ಯದ ಆಧಾರದ ಮೇಲೆ ಪ್ರತಿವಾದಿಯು ಸಲ್ಲಿಸಿದ ಪ್ರಕರಣವು ಖುಲಾಸೆಯಲ್ಲಿ ಕೊನೆಗೊಂಡಿದೆ ಎಂದು ವಾದಿಸಿದರು.
ವೈವಾಹಿಕ ನೆಲೆಯಲ್ಲಿನ ನಿರ್ದಿಷ್ಟ ಸನ್ನಿವೇಶಗಳಿಂದಾಗಿ ಅಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ಪತ್ನಿ ವೈವಾಹಿಕ ಮನೆಯನ್ನು ತೊರೆದಿದ್ದಾರೆ ಎಂದು ಸಾಕ್ಷ್ಯಗಳು ಸೂಚಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: Instagram Love: ಹೈದರಾಬಾದ್ ಮೂಲದ ಮುಸ್ಲಿಂ ಯುವಕನನ್ನ ಮದ್ವೆಯಾದ ಕೊಪ್ಪಳದ ಹಿಂದೂ ಯುವತಿ
ಹಾಗಾಗಿ ಆಕೆ ಪತಿಯಿಂದ ಮಾಸಿಕ ಜೀವನಾಂಶ ಪಡೆಯಲು ಅರ್ಹರು ಎಂಬುದಾಗಿ ನ್ಯಾಯಾಲಯ ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಮಹಿಳೆಯು ಸೆಪ್ಟೆಂಬರ್ 2022 ರಲ್ಲಿ ಇನ್ನೊಬ್ಬರ ಜೊತೆ ಮರು ಮದುವೆ ಮಾಡಿಕೊಂಡಿರುವುದರಿಂದ ಅಲ್ಲಿಯವರೆಗೂ ಆಕೆ ಜೀವನಾಂಶಕ್ಕೆ ಅರ್ಹಳಾಗಿದ್ದು ಆಕೆ ಮದುವೆ ಮಾಡಿಕೊಂಡ ದಿನಾಂಕದವರೆಗಿನ ಅವಧಿಯನ್ನು ಪರಿಗಣಿಸಿ ಆಕೆಗೆ ಮಾಸಿಕವಾಗಿ ರೂ. 3,500 ರಂತೆ ಲೆಕ್ಕ ಮಾಡಿ ಜೀವನಾಂಶ ನೀಡಬೇಕೆಂದು ಕೋರ್ಟ್ ತಿಳಿಸಿದೆ.
ಪತಿಯ ವಾಸ್ತವಿಕ ಆದಾಯವನ್ನು ಸಮರ್ಪಕವಾಗಿ ವ್ಯಾಖ್ಯಾನಿಸಲಾಗದ ಕಾರಣದಿಂದಾಗಿ ನ್ಯಾಯಾಲಯವು ನಿರ್ವಹಣೆ ಮೊತ್ತವನ್ನು 3,500 ರೂ.ಗೆ ಇಳಿಸಿತು.
ಈ ಮೊತ್ತವನ್ನು ಅರ್ಜಿದಾರರು, ಅರ್ಜಿಯ ದಿನಾಂಕದಿಂದ ಆಕೆ ಮರುಮದುವೆಯಾದ ದಿನಾಂಕದವರೆಗೆ ಮಾಸಿಕವಾಗಿ ಇಲ್ಲವೆ ಒಂದೇ ಕಂತಿನಲ್ಲಿ ಮೂವತ್ತು ದಿನದೊಳಗೆ ಪಾವತಿಸಬೇಕು ಹಾಗೂ ಪಾವತಿಸಲು ವಿಫಲವಾದಲ್ಲಿ ಪ್ರತಿವಾದಿಗಳು ಕಾನೂನಿನ ಪ್ರಕಾರ ಮಾರ್ಪಡಿಸಿದ ಆದೇಶವನ್ನು ಕಾರ್ಯಗತಗೊಳಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ, ”ಎಂದು ನ್ಯಾಯಾಲಯ ಆದೇಶಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ