• Home
  • »
  • News
  • »
  • national-international
  • »
  • Kerala High Court: ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಒಪ್ಪಿಗೆ - ಕೇರಳ ಹೈಕೋರ್ಟ್ ಮಹತ್ವದ ತೀರ್ಪು

Kerala High Court: ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಒಪ್ಪಿಗೆ - ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗರ್ಭಪಾತಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪ್ರಕರಣದಲ್ಲಿ ದೇಶದ ಎರಡು ನ್ಯಾಯಾಲಯಗಳು ಮಹತ್ವದ ತೀರ್ಪನ್ನು ನೀಡಿವೆ. ಒಂದು ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆಯ ಬಾಲಕಿಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅನುಮತಿ ನೀಡಿದರೆ, ಮತ್ತೊಂದು ಪ್ರಕರಣದಲ್ಲಿ 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.

ಮುಂದೆ ಓದಿ ...
  • Share this:

ಗರ್ಭಪಾತಕ್ಕೆ (Miscarriage) ಸಂಬಂಧಿಸಿದಂತೆ ಬೇರೆ ಬೇರೆ ಪ್ರಕರಣದಲ್ಲಿ ದೇಶದ ಎರಡು ನ್ಯಾಯಾಲಯಗಳು ಮಹತ್ವದ ತೀರ್ಪನ್ನು ನೀಡಿವೆ. ಒಂದು ಅತ್ಯಾಚಾರಕ್ಕೆ (Rape) ಒಳಗಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆ ಬಾಲಕಿಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ (Kerala High Court) ಅನುಮತಿ ನೀಡಿದರೆ, ಮತ್ತೊಂದು ಪ್ರಕರಣದಲ್ಲಿ 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಅತ್ಯಾಚಾರಕ್ಕೆ ಗುರಿಯಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆಯ (Minor) ಗರ್ಭಪಾತಕ್ಕೆ ಮಾಡಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಅಂಗೀಕರಿಸಿದೆ. ಅತ್ಯಾಚಾರ ಸಂತ್ರಸ್ತೆಯ ಭ್ರೂಣದ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. 


ಗರ್ಭಪಾತಕ್ಕೆ ಅನುಮತಿ, ವೈದ್ಯರ ತಂಡ ರಚನೆಗೆ ಸೂಚನೆ
ಮಹತ್ವದ ಆದೇಶವೊಂದರಲ್ಲಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ 24 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ ಮತ್ತು ಈ ಕಾರ್ಯದ ಎಲ್ಲಾ ವಿಧಾನಕ್ಕೆ ವೈದ್ಯರ ತಂಡ ರಚಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ವಿ.ಜಿ. ಅರುಣ್ ಈ ಆದೇಶವನ್ನು ಹೊರಡಿಸಿದ್ದಾರೆ. ಜೊತೆಗೆ 15 ವರ್ಷದ ಬಾಲಕಿ ಮನವಿ ಪರಿಗಣಿಸುವಾಗ, ಮಗು ಹುಟ್ಟುವ ವೇಳೆ ಜೀವಂತವಾಗಿದ್ದರೆ, ಮಗುವಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ.


ಅರ್ಜಿದಾರರು ಅಥವಾ ಅವರ ಕುಟುಂಬದವರು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ದರಿಲ್ಲದಿದ್ದರೆ, ರಾಜ್ಯ ಸರ್ಕಾರ ಮತ್ತು ಅದರ ಏಜೆನ್ಸಿಗಳು ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಮಗುವಿಗೆ ವೈದ್ಯಕೀಯ ಬೆಂಬಲ, ಸೌಲಭ್ಯಗಳನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.


ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತ ಬಾಲಕಿಯ ಗರ್ಭವನ್ನು ಅಂತ್ಯಗೊಳಿಸಲು ನ್ಯಾಯಾಲಯ ಅನುಮತಿ ನೀಡಿದೆ. ಕಾನೂನಿನ ಕಟ್ಟು ನಿಟ್ಟಿನ ಪಾತ್ರಕ್ಕೆ ಅಂಟಿಕೊಳ್ಳುವ ಬದಲು ಅಪ್ರಾಪ್ತ ಬಾಲಕಿಯ ಪರವಾಗಿ ಒಲವು ತೋರುವುದು ಸೂಕ್ತವೆಂದು ನಾನು ಭಾವಿಸುತ್ತೇವೆ ಎಂದು ನ್ಯಾಯಾಲಯವು ಜುಲೈ 14 ರಂದು ಹೊರಡಿಸಿದ ಆದೇಶದಲ್ಲಿ ಹೇಳಿದೆ. ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆ 1971ರ ಅನ್ವಯ 24 ವಾರಗಳ ಬಾಹ್ಯ ಮಿತಿಯನ್ನು ಒದಗಿಸುತ್ತದೆ, ಅದನ್ನು ಮೀರಿ ಗರ್ಭಪಾತಕ್ಕೆ ಅನುಮತಿ ನೀಡಲಾಗುವುದಿಲ್ಲ.


ಇದನ್ನೂ ಓದಿ:  African Swine Fever: ಕೇರಳದಲ್ಲಿ ಸ್ವೈನ್ ಫ್ಲೂ ಪತ್ತೆ! ರಾಹುಲ್ ಗಾಂಧಿ ಕ್ಷೇತ್ರ ವಯನಾಡ್​ನಲ್ಲಿ 300 ಹಂದಿ ಹತ್ಯೆ


ಅವಿವಾಹಿತ ಮಹಿಳೆ ಸಲ್ಲಿಸಿದ್ದ ಗರ್ಭಪಾತ ಅರ್ಜಿ ವಜಾ
ಮತ್ತೊಂದು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಇದೇ ರೀತಿಯ ಮನವಿಯನ್ನು ತಿರಸ್ಕರಿಸಿದೆ. 25 ವರ್ಷದ ಅವಿವಾಹಿತ ಮಹಿಳೆ ಗರ್ಭಪಾತಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಒಮ್ಮತದ ಸಂಬಂಧದಿಂದ ಉಂಟಾಗಿರುವ ಗರ್ಭಧಾರಣೆ ಸಂದರ್ಭದಲ್ಲಿ 20 ವಾರಗಳ ನಂತರದ ಗರ್ಭಪಾತಕ್ಕೆ ಅನುಮತಿ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.


“ಒಮ್ಮತದ ಸಂಬಂಧದಿಂದ ಉಂಟಾದ ಭ್ರೂಣಕ್ಕೆ 20 ವಾರಗಳ ನಂತರ ಗರ್ಭಪಾತ ಮಾಡುವಂತಿಲ್ಲ”
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು, ಹೆಣ್ಣು-ಗಂಡು ಇಬ್ಬರ ಒಪ್ಪಿಗೆಯ ಲೈಂಗಿಕ ಸಂಬಂಧದಿಂದ ಮಗುವನ್ನು ಹೊರುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತದ ನಿಯಮಗಳ ಪ್ರಕಾರ 20 ವಾರಗಳು ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ.


ಇದನ್ನೂ ಓದಿ:  ISI Mark Toys: ಪೋಷಕರೇ ಅಲರ್ಟ್​​, ನಿಮ್ಮ ಮಕ್ಕಳಿಗೆ ಐಎಸ್‍ಐ ಮಾರ್ಕ್ ಇರುವ ಆಟಿಕೆಗಳನ್ನೇ ಖರೀದಿಸಿ


ಅವಿವಾಹಿತ ಮಹಿಳೆಯಾಗಿರುವ ಮತ್ತು ಸಮ್ಮತಿಯಿಂದ ಗರ್ಭ ಧರಿಸಿರುವ ಅರ್ಜಿದಾರರು, ಪುರುಷನೊಂದಿಗೆ ಒಮ್ಮತದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆ ವ್ಯಕ್ತಿಯು ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮಹಿಳೆ ಗರ್ಭಪಾತಕ್ಕೆ ಮುಂದಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ಆದರೆ ಅವಿವಾಹಿತ ಮಹಿಳೆಯ ಅರ್ಜಿಯನ್ನು ಕೋರ್ಟ್ ಕಾನೂನಿನ ಅಡಿಯಲ್ಲಿ ಬರುವ ಅಂಶಗಳನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಿದೆ.

Published by:Ashwini Prabhu
First published: