ಅಪ್ರಾಪ್ತ ಬಾಲಕಿ ಮನವಿ ಪುರಸ್ಕರಿಸಿದ ಕೇರಳ ಹೈ ಕೋರ್ಟ್​; ತಂದೆಯೊಂದಿಗೆ ಅಯ್ಯಪ್ಪನ ದರ್ಶನಕ್ಕೆ ಅನುಮತಿ

ಹೈ ಕೋರ್ಟ್ ಅನುಮತಿ ಬಳಿಕ ಆಗಸ್ಟ್​ 23ರಂದು ಬಾಲಕಿ ತಂದೆಯೊಂದಿಗೆ ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದಾಳೆ

ಶಬರಿಮಲೆ ಅಯ್ಯಪ್ಪ ದೇಗುಲ

ಶಬರಿಮಲೆ ಅಯ್ಯಪ್ಪ ದೇಗುಲ

 • Share this:
  ಕೊಚ್ಚಿ (ಆ. 17): ತಂದೆಯೊಂದಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಬೇಕು ಎಂಬ ಅಪ್ರಾಪ್ತ ಬಾಲಕಿ ಕೋರಿಕೆಗೆ ಕೇರಳ ಹೈ ಕೋರ್ಟ್ ಅಸ್ತು ಎಂದಿದೆ. ತಂದೆಯೊಂದಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಕ್ಕೆ ಅನುಮತಿ ಕೋರಿ ಈ ಬಾಲಕಿ ಹೈ ಕೋರ್ಟ್​​ ಮೆಟ್ಟಿಲೇರಿದ್ದಳು. ಈ ಮನವಿ ಪುರಸ್ಕರಿಸಿರುವ ಕೇರಳ ಉಚ್ಛ ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ. ಹೈ ಕೋರ್ಟ್ ಅನುಮತಿ ಬಳಿಕ ಆಗಸ್ಟ್​ 23ರಂದು ಬಾಲಕಿ ತಂದೆಯೊಂದಿಗೆ ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದಾಳೆ ಎಂದು ಎಎನ್ಐ ವರದಿ ಮಾಡಿದೆ.

  ಏನಿದು ಪ್ರಕರಣ?
  ಕೋವಿಡ್​ ಹಿನ್ನಲೆ ಶಬರಿಮಲೆ ದರ್ಶನಕ್ಕೆ ತೆರಳುವವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಜೊತೆಗೆ ಲಸಿಕೆ ಪಡೆಯದ ಮಕ್ಕಳನ್ನು ಈ ಯಾತ್ರೆಗೆ ಕರೆದೊಯ್ಯಬಾರದು ಎಂದು ಕೇರಳ ಸರ್ಕಾರ ಆದೇಶ ನೀಡಿದೆ. ಈ ಹಿನ್ನಲೆ ಲಸಿಕೆ ಪಡೆಯದ ಮಕ್ಕಳನ್ನು ಈ ಬಾರಿ ಯಾತ್ರೆಯಲ್ಲಿ ಕರೆದೊಯ್ಯುವಂತಿಲ್ಲ. ಈ ಹಿನ್ನಲೆ ಲಸಿಕೆ ಪಡೆಯದ ಅಪ್ರಾಪ್ತ ಬಾಲಕಿ ದೇವರ ದರ್ಶನಕ್ಕೆ ಅನಮತಿ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಳು

  ಆಕೆಗೆ 10 ವರ್ಷ ತುಂಬುವ ಮೊದಲೇ ಅಯ್ಯಪ್ಪನ ದರ್ಶನ ಮಾಡಬೇಕು ಎಂದು 9 ವರ್ಷದ ಬಾಲಕಿ ಆಸೆ ಪಟ್ಟಿದ್ದಳು. 10 ವರ್ಷ ತುಂಬಿದ ಬಳಿಕ ಮುಂದಿನ ನಾಲ್ಕು ದಶಕ ಅಂದರೆ 40 ವರ್ಷಗಳ ಕಾಲ ಆಕೆ ಅಯ್ಯಪ್ಪನ ದರ್ಶನ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆ ಆಕೆಗೆ ಶಬರಿಮಲೆ ಗರ್ಭಗುಡಿ ಪ್ರವೇಶಿಸಲು ಅನುಮತಿ ಕಲ್ಪಿಸುವಂತೆ ಬಾಲಕಿ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದರು.

  ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲಸಿಕೆ ಪಡೆಯದ ಬಾಲಕಿ ತನ್ನ ತಂದೆ ಜೊತೆ ಈ ಯಾತ್ರೆ ನಡೆಸಲು ಅನುಮತಿ ನೀಡಿದೆ. ಇದೇ ಆಗಸ್ಟ್​ 23 ರಂದು ತಂದೆ ಜೊತೆ ಬಾಲಕಿ ಕೂಡ ಅಯ್ಯಪ್ಪನ ದರ್ಶನಕ್ಕೆ ಮುಂದಾಗಲಿದ್ದಾಳೆ.

  ಇದನ್ನು ಓದಿ: ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆಗೆ ಮಣಿದ ಸರ್ಕಾರ; ಮೂಡಿಗೆರೆ ಸೇರಿ 22 ತಾಲೂಕು ನೆರೆ ಪಟ್ಟಿಗೆ

  ನಿರಪುಠಾರಿ ವಾರ್ಷಿಕ ಹಬ್ಬದ ಹಿನ್ನಲೆ ಆಗಸ್ಟ್​ 15ರಿಂದ ಅಯ್ಯಪ್ಪ ಸ್ವಾಮಿ ದೇಗುಲವನ್ನು ತೆರೆಯಲಾಗಿದೆ. ಈ ವೇಳೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ದಿನವೊಂದಕ್ಕೆ 15 ಸಾವಿರ ಭಕ್ತು ಮಾತ್ರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ತಿಂಗಳ ಪೂಜಾ ವಿಧಿ ವಿಧಾನಗಳು ಇದೇ ಆಗಸ್ಟ್​ 23 ರಂದು ಮುಗಿಯಲಿದ್ದು, ಬಳಿಕ ಮತ್ತೆ ದೇಗುಲ ಮುಚ್ಚಲಾಗುವುದು.

  ಶಬರಿ ಮಲೆ ದರ್ಶನಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸಲು ಇದ್ದ ನಿರ್ಬಂಧವನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್​ 2018ರಲ್ಲಿ ತೀರ್ಪು ನೀಡಿತ್ತು. ಈ ಮೊದಲು ದೇವಸ್ಥಾನದ ಆಡಳಿತ ಮಂಡಳಿ 10 ರಿಂದ 50 ವರ್ಷದ ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ನಿಷೇಧಿಸಿತ್ತು. ಆದರೆ, ಈ ಆದೇಶವನ್ನು ಸುಪ್ರೀಂ ಕೋರ್ಟ್​ ರದ್ದು ಪಡಿಸಿ ಎಲ್ಲಾ ಮಯೋಮಾನದ ಮಹಿಳೆಯರಿಗೆ ಅವಕಾಶ ಕಲ್ಪಿಸಿತು.  ಈ ಆದೇಶ ಕೇರಳದಲ್ಲಿ ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಗುರಿಯಾಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: