Flood Alert: ತನ್ನಿಂದ ತಾನೇ ತೆರೆದುಕೊಂಡ ಡ್ಯಾಂ ಗೇಟ್! ಭೀಕರ ಪ್ರವಾಹದ ಭೀತಿ

ಹೈ ಅಲರ್ಟ್

ಹೈ ಅಲರ್ಟ್

ಸಾಮಾನ್ಯವಾಗಿ ಒಂದೇ ಬಾರಿಗೆ 10 ಸೆಂಟಿಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಗೇಟ್ ಬುಧವಾರ ಬೆಳಗಿನ ಜಾವ 2 ಗಂಟೆ ವೇಳೆಗೆ 25 ಅಡಿ ಎತ್ತರಕ್ಕೆ ಸ್ವಯಂಚಾಲಿತವಾಗಿ ತೆರೆದುಕೊಂಡಿದೆ.

  • Share this:

ತಿರುವನಂತಪುರಂ: ಕೇರಳದಲ್ಲಿ ಹೈ ಅಲರ್ಟ್ (Kerala Flood Alert) ಘೋಷಿಸಲಾಗಿದೆ. ತಾಂತ್ರಿಕ ದೋಷಗಳಿಂದಾಗಿ ಪರಂಬಿಕುಲಂ ಅಣೆಕಟ್ಟಿನ ಮೂರು ಗೇಟ್​ಗಳಲ್ಲಿ ಒಂದು ಬುಧವಾರ ಮುಂಜಾನೆ ಸ್ವಯಂಚಾಲಿತವಾಗಿ ತೆರೆದುಕೊಂಡಿದೆ. ಇದರಿಂದ ಕೇರಳದ ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರಿಂದ ಚಲಕುಡಿ ನದಿಯಲ್ಲಿ ಅಪಾಯಕಾರಿ ಮಟ್ಟಕ್ಕೆ ನೀರಿನ ಪ್ರಮಾಣ ಏರಿಕೆಯಾಗಿದ್ದು ನದಿ ಪಕ್ಕದ ಜನತೆಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಇರುವ ಪರಂಬಿಕುಲಂ ಅಣೆಕಟ್ಟು (Parabhikulam Dam In Palakkad) ತಮಿಳುನಾಡು ಸರ್ಕಾರದ (Tamil Nadu) ನಿಯಂತ್ರಣದಲ್ಲಿದೆ. ಪರಂಬಿಕುಲಂ ಅಣೆಕಟ್ಟಿನ  ಗೇಟ್​‌ಗಳನ್ನು ಒತ್ತಡ ತಗ್ಗಿಸಲು ತೆರೆಯಲಾಗಿದೆ. ಇದರ ನಡುವೆ ಕೇರಳ ರಾಜ್ಯ ಸರ್ಕಾರವು ಎಲ್ಲಾ ಸ್ಲೂಸ್ ಗೇಟ್‌ಗಳನ್ನು ತೆರೆಯುವಂತೆ ತಮಿಳುನಾಡಿಗೆ ಮನವಿ ಮಾಡಿದೆ.


ಪ್ರಸ್ತುತ ಪರಂಬಿಕುಲಂ ಅಣೆಕಟ್ಟಿನಲ್ಲಿ ಸುಮಾರು 20,000 ಕ್ಯೂಸೆಕ್ (ಸೆಕೆಂಡಿಗೆ ಒಂದು ಘನ ಅಡಿ) ನೀರು ಹರಿಯುತ್ತಿದೆ. ಪರಂಬಿಕುಲಂ ಅಣೆಕಟ್ಟಿನ ಎಲ್ಲಾ 6 ಗೇಟ್​ಗಳನ್ನು  ತೆರೆದಿದ್ದರಿಂದ ಚಾಲಕುಡಿ ನದಿಗೆ ನೀರಿನ ಹರಿವು ಹೆಚ್ಚಿದೆ.


ಸ್ವಯಂಚಾಲಿತವಾಗಿ ತೆರೆದುಕೊಂಡ ಆಣೆಕಟ್ಟಿನ ಗೇಟ್
ಸಾಮಾನ್ಯವಾಗಿ ಒಂದೇ ಬಾರಿಗೆ 10 ಸೆಂಟಿಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಗೇಟ್ ಬುಧವಾರ ಬೆಳಗಿನ ಜಾವ 2 ಗಂಟೆ ವೇಳೆಗೆ 25 ಅಡಿ ಎತ್ತರಕ್ಕೆ ಸ್ವಯಂಚಾಲಿತವಾಗಿ ತೆರೆದುಕೊಂಡಿದೆ. ನೀರಿನ ಹೆಚ್ಚಿದ ಒತ್ತಡದಿಂದ ಈ ಗೇಟ್​ಗಳಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಪರಂಬಿಕುಲಂ ಅಣೆಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.


ತಗ್ಗು ಪ್ರದೇಶದ ಜನರ ಸ್ಥಳಾಂತರ
ಅನಿರೀಕ್ಷಿತ ಅಪಾಯದ ದೃಷ್ಟಿಯಿಂದ ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಎರಡು ಜಿಲ್ಲೆಗಳಲ್ಲಿ ಎಲ್ಲಾ ನದಿಗಳಲ್ಲಿ ಮೀನುಗಾರಿಕೆ ಮತ್ತು ಪ್ರವಾಸ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸೋರಿಕೆ ಸರಿಪಡಿಸಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಅಣೆಕಟ್ಟಿನ ಸಮೀಪ ನದಿಗಳ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲಾಗುತ್ತಿದೆ.


ಇದನ್ನೂ ಓದಿ: Lumpy Virus: ಲಂಪಿಯಿಂದ ಸಾವಿರಾರು ಜಾನುವಾರು ಸಾವು, ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ!


ಚಲಕುಡಿ ಶಾಸಕ ಕೆ.ಸನೀಶ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು ಮಧ್ಯರಾತ್ರಿ 1 ಗಂಟೆಗೆ ಆಣೆಕಟ್ಟಿನಲ್ಲಿ ದೋಷ ಕಾಣಿಸಿಕೊಂಡಿದ್ದು, ತಕ್ಷಣವೇ ಸಮೀಪದ ಎಲ್ಲಾ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಮುಂಬೈನಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ!
ಮಕ್ಕಳ ಅಪಹರಣದ ಸಂದೇಶಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬಬೇಡಿ ಎಂದು ಮುಂಬೈ ಪೊಲೀಸರು ಸೋಮವಾರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಮಕ್ಕಳ ಅಪಹರಣದ ಬಗ್ಗೆ ಆಗಾಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ವಿಡಿಯೋ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ, ಹೀಗೆ ಯಾರೋ ಬಂದು ನಿಮ್ಮ ಮಕ್ಕಳನ್ನು ಕಿಡ್ನಾಪ್‌ ಮಾಡುತ್ತಾರೆ ಅಥವಾ ಮಕ್ಕಳ ಕಳ್ಳರ ಗುಂಪು ಬಂದಿದೆ ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನೆ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಪೋಷಕರು ಕೂಡ ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ. ಇದೇ ರೀತಿ ಸುಳ್ಳು ವದಂತಿಗಳನ್ನುಮುಂಬೈನಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ.


ಸುಳ್ಳು ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಖಾಕಿ ಮನವಿ
ಈ ಬಗ್ಗೆ ಎಚ್ಚರ ವಹಿಸಿದ ಮುಂಬೈ ಪೊಲೀಸರು ಪೋಷಕರ ಆತಂಕ ಕಡಿಮೆ ಮಾಡಲು ಈ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಕೋರಿದ್ದಾರೆ.


ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಸುಳ್ಳು ಮಾಹಿತಿ
ಮುಂಬೈನಲ್ಲಿ ಕಳೆದ ವಾರದಿಂದ ಫೇಸ್‌ ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪೋಷಕರು, ಸಾರ್ವಜನಿಕರು, ಮಕ್ಕಳ ಅಪಹರಣದ ಬಗ್ಗೆ ಇನ್ನಿಲ್ಲದ ಮೆಸೇಜ್ ಗಳು, ವಿಡಿಯೋಗಳು, ವಾಯ್ಸ್‌ ಮೆಸೇಜ್‌ ಹೀಗೆ ಹಲವು ಸುಳ್ಳು ಮಾಹಿತಿಗಳಿರುವ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು