Happy Farewell: ಅಜ್ಜಿಯ ಮೃತದೇಹದ ಜೊತೆ ಕುಟುಂಬಸ್ಥರ ನಗುವ ಫೋಟೋ!

ಅಜ್ಜಿಯ ಮೃತದೇಹದ ಜೊತೆಗೆ ಕ್ಲಿಕ್ಕಿಸಿರುವ ಎಲ್ಲರ ಮುಖದಲ್ಲೂ ನಗು ಬೀರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ಸುತ್ತಮುತ್ತ ಇದೀಗ ನಾನಾ ರೀತಿಯ ಚರ್ಚೆಗಳು ಬಿರುಸಾಗಿ ಸಾಗಿವೆ.

ಮೃತದೇಹದ ಜೊತೆ ನಗುವಿನ ಫೋಟೋ

ಮೃತದೇಹದ ಜೊತೆ ನಗುವಿನ ಫೋಟೋ

  • Share this:
ಯಾರಾದರೂ ಸತ್ತಾಗ ಅಳುವುದು ಸಹಜದ ರೂಢಿ. ಆದರೆ ಸದ್ಯ ಭಾರೀ ವೈರಲ್ ಆಗುತ್ತಿರುವ ಚಿತ್ರವೊಂದು ಈ ‘ಸಹಜ ರೂಢಿ’ಗೆ ಸೆಡ್ಡು ಹೊಡೆದಿದೆ! ಹೌದು, ಕೇರಳದ (Kerala Funeral Viral Photo) ಪತ್ತನಂತಿಟ್ಟದ ಮಲ್ಲಪಲ್ಲಿಯ ಕುಟುಂಬವೊಂದು ತಮ್ಮ ಮನೆಯ ವಯಸ್ಸಾದ ಮಹಿಳೆಯ ಶವಸಂಸ್ಕಾರದ ವೇಳೆ ನಗುತ್ತಿರುವ ಫೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಕುಟುಂಬದ ಸದಸ್ಯರೇ ಆಗಿದ್ದ 95 ವರ್ಷದ ಮರಿಯಮ್ಮ (Mariyamma Funeral Viral Photo) ಅವರು ಆಗಸ್ಟ್ 17 ರಂದು ನಿಧನರಾಗಿದ್ದರು. ಅವರ ಶವಪೆಟ್ಟಿಗೆಯ ಬಳಿ ಇಡೀ ಕುಟುಂಬ ನೆರೆದಿದ್ದು ಎಲ್ಲರೂ ನಗುನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಅಜ್ಜಿಯ ಮೃತದೇಹದ ಜೊತೆಗೆ ಕ್ಲಿಕ್ಕಿಸಿರುವ ಎಲ್ಲರ ಮುಖದಲ್ಲೂ ನಗು ಬೀರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ಸುತ್ತಮುತ್ತ ಇದೀಗ ನಾನಾ ರೀತಿಯ ಚರ್ಚೆಗಳು ಬಿರುಸಾಗಿ ಸಾಗಿವೆ.

ಹಲವರಿಂದ ಮೆಚ್ಚುಗೆ-ಟೀಕೆ
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶವಸಂಸ್ಕಾರದ ವೇಳೆ ನಗುವ ಈ ಫೋಟೊವನ್ನು ಮೆಚ್ಚಿ ಕಮೆಂಟ್ ಮಾಡಿದ್ದರೆ ಇನ್ನು ಹಲವರು ವಿರೋಧಿಸಿದ್ದಾರೆ. ಮೃತಪಟ್ಟವರಿಗೆ ಖುಷಿಯ ವಿದಾಯ ಹೇಳಬೇಕು ಎಂಬುದು ಸ್ವಾಗತಿಸಿದವರ ವಾದವಾಗಿದ್ದರೆ, ಕುಟುಂಬದ ಸದಸ್ಯೆಯೇ ಮೃತಪಟ್ಟಾಗ ನಗುವುದಾದರೂ ಹೇಗೆ ಸಾಧ್ಯ? ನಗುವುದು ಎಷ್ಟು ಸರಿ? ಎಂದು ಪ್ರಶ್ನೆ ಎತ್ತಿದ್ದಾರೆ.

ಅಷ್ಟಕ್ಕೂ ಈ ನಗುವಿಗೆ ಏನು ಕಾರಣ?
ಹೀಗೆ ನಾನಾ ವಿಧದ ಪ್ರತಿಕ್ರಿಯೆಗಳ ನಂತರ ಸ್ವತಃ ಕುಟುಂಬದ ಸದಸ್ಯರೇ ಶವಪೆಟ್ಟಿಗೆಯ ಬಳಿ ನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡ ಕಾರಣವನ್ನು ವಿವರಿಸಿದ್ದಾರೆ. 95 ವರ್ಷಗಳ ಕಾಲ ಮರಿಯಮ್ಮ ಅವರು ಸಾಕಷ್ಟು ಪ್ರೀತಿಯನ್ನು ಕೊಟ್ಟು- ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಆಕೆಯನ್ನು ಸಂತಸದಿಂದ ಬೀಳ್ಕೊಟ್ಟಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮರಿಯಮ್ಮಳ ಜೀವನ ಹೀಗಿತ್ತು
ಮರಿಯಮ್ಮ ಅವರಿಗೆ ಒಟ್ಟು ಒಂಬತ್ತು ಮಕ್ಕಳು. ಕುಟುಂಬದ ಜೊತೆ ಸಂತೋಷದಿಂದ ಜೀವಿಸುತ್ತಿದ್ದ ಮರಿಯಮ್ಮರನ್ನು ಕುಟುಂಬದ ಸದಸ್ಯರೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಸುಮಾರು ಒಂದು ವರ್ಷಗಳ ಕಾಲ ಹಾಸಿಗೆ ಹಿಡಿದು ಮರಿಯಮ್ಮ ಆಗಸ್ಟ್ 17 ರಂದು ನಿಧನರಾರಾಗಿದ್ದಾರೆ. ಸದ್ಯ ವೈರಲ್ ಆದ ಛಾಯಾಚಿತ್ರವನ್ನು ಆಗಸ್ಟ್ 19 ರಂದು ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಮದುವೆ ದುಡ್ಡಲ್ಲಿ ರಸ್ತೆ ನಿರ್ಮಿಸಿದ ಟೆಕ್ಕಿ! ಈತನೇ ನಿಜವಾದ ಶ್ರೀಮಂತ!

ಮರಿಯಮ್ಮನ ಸಂಬಂಧಿಕರೊಬ್ಬರು ಮಾತನಾಡಿ, ಮರಿಯಮ್ಮ ಅವರು ತಮ್ಮ ಸಾವಿನ ನಂತರ ಉತ್ತಮ ನೆನಪುಗಳನ್ನು ನೆನಪಿಸಿಕೊಳ್ಳಲು ಬಯಸಿದ್ದರು ಎಂದು ಹೇಳಿದ್ದಾರೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ಸುಮಾರು 24 ಗಂಟೆಗಳ ಕಾಲ ಮರಿಯಮ್ಮಗಾಗಿ ಪ್ರಾರ್ಥಿಸಲಾಗಿದೆ.  ನಂತರ ಮರಿಯಮ್ಮ ಅವರ ಮೃತದೇಹದ ಪಕ್ಕದಲ್ಲಿ ನಗುತ್ತಿರುವ ಛಾಯಾಚಿತ್ರವನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಸಾಂಪ್ರದಾಯಿಕವಾಗಿ ನಡೆದುಬಂದಿರುವಂತೆ ಇಲ್ಲದ ಕಾರಣ ಈ ಫೋಟೋ ಕುರಿತು ವಿವಿಧ ತೆರನಾದ ಚರ್ಚೆ ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Senthil Balaji vs Savukku Shankar: ಯೂಟ್ಯೂಬರ್ ವಿರುದ್ಧ ಹೈಕೋರ್ಟ್​ನಲ್ಲಿ ಗೆದ್ದ ಸಚಿವ! ಏನಿದು ಪ್ರಕರಣ?

ಛಾಯಾಚಿತ್ರವನ್ನು ಖಾಸಗಿ ಕುಟುಂಬದ ನೆನಪಿಗಾಗಿ ತೆಗೆದಿದ್ದು ಅದು ಹೇಗೋ ಹೊರಗಿನವರಿಗೆ ಸೋರಿಕೆಯಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ತಮ್ಮ ಕ್ರಿಶ್ಚಿಯನ್ ನಂಬಿಕೆಯಂತೆ ಸ್ವರ್ಗಕ್ಕೆ ಹೋಗುವ ತಮ್ಮ ತಾಯಿಗೆ ವಿದಾಯ ಹೇಳುತ್ತಿರುವುದರಿಂದ ಅವರು ಫೋಟೋ ತೆಗೆದುಕೊಳ್ಳುವ ನಿರ್ಧಾರಕ್ಕೆ ವಿಷಾದಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.ಕೇರಳ ಶಿಕ್ಷಣ ಸಚಿವರಿಂದಲೂ ಪ್ರತಿಕ್ರಿಯೆ!
ಇದೆಲ್ಲದರ ನಡುವೆ ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಫೇಸ್‌ಬುಕ್ ಮೂಲಕ ಈ ವೈರಲ್ ಫೋಟೋದ ಕುರಿತು ನೆಗೆಟಿವ್ ಕಮೆಂಟ್ ಮಾಡದಂತೆ ಮನವಿ ಮಾಡಿದ್ದಾರೆ.   “ಸಾವು ನೋವಿನಿಂದ ಕೂಡಿದೆ. ಆದರೆ ಇದು ವಿದಾಯವೂ ಆಗಿದೆ. ಸುಖವಾಗಿ ಬಾಳಿದವರಿಗೆ ನಗುಮೊಗದ ವಿದಾಯ ನೀಡುವುದಕ್ಕಿಂತ ಹೆಚ್ಚಿನ ಸಂತೋಷ ಬೇರೇನಿದೆ? ಈ ಫೋಟೋಗೆ ಋಣಾತ್ಮಕ ಕಾಮೆಂಟ್‌ಗಳ ಅಗತ್ಯವಿಲ್ಲ ಎಂದು ಸಚಿವ  ವಿ ಶಿವನ್‌ಕುಟ್ಟಿ ಬರೆದಿದ್ದಾರೆ.
Published by:guruganesh bhat
First published: