ಆ್ಯಡಮ್​ ಹ್ಯಾರಿ ದೇಶದ ಮೊದಲ ತೃತೀಯ ಲಿಂಗಿ ಪೈಲಟ್​; ಸಾಧನೆಯ ಹಿಂದಿದೆ ಮನಕಲಕುವ ಕಥೆ!

ಸದ್ಯ, ಹ್ಯಾರಿ ಖಾಸಗಿ ಪೈಲಟ್ ಲೈಸೆನ್ಸ್​ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂದು ಗುರುತಿಸಲ್ಪಟ್ಟಿದ್ದಾರೆ. ಅಲ್ಲದೆ, ಜೋಹಾನ್ಸ್‌ಬರ್ಗ್‌ನಲ್ಲಿ ತರಬೇತಿ ಪಡೆದಿರುವ ಅವರು 2017 ರಲ್ಲಿ ಪೈಲೆಟ್ ಆಗುವ ವಾಣಿಜ್ಯ ಪರವಾನಗಿಯನ್ನೂ ​ ಪಡೆದಿದ್ದಾರೆ.

Latha CG | news18-kannada
Updated:October 10, 2019, 12:36 PM IST
ಆ್ಯಡಮ್​ ಹ್ಯಾರಿ ದೇಶದ ಮೊದಲ ತೃತೀಯ ಲಿಂಗಿ ಪೈಲಟ್​; ಸಾಧನೆಯ ಹಿಂದಿದೆ ಮನಕಲಕುವ ಕಥೆ!
ಆಡಮ್ ಹ್ಯಾರಿ
Latha CG | news18-kannada
Updated: October 10, 2019, 12:36 PM IST
ಆತ ತೃತೀಯ ಲಿಂಗಿ ಎಂದು ತಿಳಿದ ತಕ್ಷಣವೇ ಪೋಷಕರು ಆತನನ್ನು ಮನೆಯಿಂದ ಹೊರಹಾಕಿದ್ದರು. ಪೈಲಟ್​ ಆಗಬೇಕೆಂಬ ಉದಾತ್ತ ಕನಸನ್ನು ಕಂಡಿದ್ದ 20 ವರ್ಷದ ಆ್ಯಡಮ್ ಹ್ಯಾರಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿತ್ತು. ಒಂದೆಡೆ ಪೈಲಟ್​ ತರಬೇತಿ ಪಡೆಯಲು ಹಣ ಇಲ್ಲ, ಇನ್ನೊಂದೆಡೆ ತಂದೆ-ತಾಯಿ, ಗೆಳೆಯರ ಆಶ್ರಯ ಬೆಂಬಲವಿಲ್ಲ. ದಿಕ್ಕು ತೋಚದಂತಾಗಿದ್ದ ಹ್ಯಾರಿ ಕೊನೆಗೂ ತಾನು ಪೈಲಟ್​ ಆಗುವ ಗುರಿಯನ್ನು ಮುಟ್ಟಲೇಬೇಕೆಂದು ಛಲ ತೊಟ್ಟಿದ್ದ. ಹೀಗಾಗಿ ಧನಸಹಾಯಕ್ಕಾಗಿ ಸರ್ಕಾರಕ್ಕೆ ಅರ್ಜಿ ಕೂಡ ಸಲ್ಲಿಸಿದ್ದ. ಅರ್ಜಿ ಪರಿಶೀಲಿಸಿದ ಕೇರಳ ಸರ್ಕಾರ ಹ್ಯಾರಿಯ ಪೈಲಟ್​ ತರಬೇತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸಲು ಮುಂದಾಗಿದೆ.

ಆಡಮ್​ ಹ್ಯಾರಿ ಕೇರಳದ ಕೇರಳದ ತ್ರಿಶೂರ್ ಜಿಲ್ಲೆಯ ತೃತೀಯ ಲಿಂಗಿ. ಪೈಲಟ್​ ಆಗಲು ಬಯಸಿರುವ  ಹ್ಯಾರಿಗೆ ಕೇರಳ ಸರ್ಕಾರ ಬೆಂಬಲಕ್ಕೆ ನಿಂತಿದೆ. ಹ್ಯಾರಿಯ ವಿಮಾನಯಾನ ತರಬೇತಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಕೇರಳ ಸರ್ಕಾರವೇ ಭರಿಸಲಿದೆ. ತಿರುವನಂತಪುರಂನ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ​​ಟೆಕ್ನಾಲಜಿಯಲ್ಲಿ 3 ವರ್ಷಗಳ ಕೋರ್ಸ್ ವ್ಯಾಸಂಗ ಮಾಡಲು ಮತ್ತು ವಾಣಿಜ್ಯ ಪೈಲಟ್ ಪರವಾನಗಿ ಪಡೆಯಲು ಹ್ಯಾರಿಗೆ  ಸರ್ಕಾರ ಹಣ ಸಹಾಯ ಮಾಡಲು ಮುಂದಾಗಿದೆ. ಸಾಮಾಜಿಕ ನ್ಯಾಯ ಇಲಾಖೆ ಹ್ಯಾರಿ ವಿದ್ಯಾಭ್ಯಾಸಕ್ಕೆ 23.34 ಲಕ್ಷ ರೂ. ಧನ ಸಹಾಯ ಮಾಡಲು ಅನುಮೋದನೆ ನೀಡಿದೆ.

ಮೋದಿ ಉಪನಾಮೆಗಳೆಲ್ಲಾ ಕಳ್ಳರು ಎಂದಿದ್ದ ರಾಹುಲ್ ಗಾಂಧಿ; ಮಾನಹಾನಿ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಹಾಜರಿ

ಖಾಸಗಿ ಪೈಲಟ್ ಪರವಾನಗಿ ಹೊಂದಿರುವ ಹ್ಯಾರಿ, ಧನ ಸಹಾಯ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹ್ಯಾರಿ ತೃತೀಯ ಲಿಂಗಿ ಎಂದು ತಿಳಿದ ಬಳಿಕ ಅವರ ಕುಟುಂಬವು ಅವರನ್ನು ಮನೆಯಿಂದ ಹೊರಹಾಕಿತ್ತು. ಹೀಗಾಗಿ ಹೆಚ್ಚಿನ ತರಬೇತಿ ಪಡೆಯಲು ಹ್ಯಾರಿಗೆ ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಕೇರಳ ಸರ್ಕಾರ ಹ್ಯಾರಿಗೆ ಧನಸಹಾಯ ನೀಡಲು ನಿರ್ಧರಿಸಿದೆ.

ಪೈಲಟ್ ಆಗಲು ವಾಣಿಜ್ಯ ಪರವಾನಗಿ(ಕಮರ್ಷಿಯಲ್​ ಲೈಸೆನ್ಸ್​) ಅಗತ್ಯವಿದೆ. ಅಂತಹ ಲೈಸೆನ್ಸ್​ಗಾಗಿ ಅರ್ಜಿದಾರರು ವಿಮಾನಯಾನ ನಿಯಂತ್ರಕ ಡಿಜಿಸಿಎ ನಿಯಮಗಳ ಪ್ರಕಾರ 200 ಗಂಟೆಗಳಿಗಿಂತ ಕಡಿಮೆ ಹಾರಾಟದ ಸಮಯವನ್ನು ಹೊಂದಿರುವುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು.

ಹ್ಯಾರಿಗೆ ತನ್ನ ಕುಟುಂಬ ಹಾಗೂ ಗೆಳೆಯರಿಂದ ಕಷ್ಟಗಳು ಎದುರಾದಾಗ ಪೈಲಟ್​ ಆಗಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ಸರ್ಕಾರದ ಸಹಾಯಧನ ಸಿಕ್ಕಿದ ಬಳಿಕ ತನ್ನ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳಲು ಹ್ಯಾರಿ ಮುಂದಾಗಿದ್ದಾರೆ. ಅವರು ಕೇರಳ ಸರ್ಕಾರಕ್ಕೆ ಕೃತಜ್ಞನಾಗಿರುವುದಾಗಿ ತಿಳಿಸಿದ್ದಾರೆ.

ಪರಮೇಶ್ವರ್​ ಮನೆ, ಕಾಲೇಜುಗಳ ಮೇಲೆ ಐಟಿ ದಾಳಿ; ಕೇಂದ್ರದ ವಿರುದ್ಧ ಕಿಡಿಕಾರಿದ ಕೈ​ ನಾಯಕರು
Loading...

ಸದ್ಯ, ಹ್ಯಾರಿ ಖಾಸಗಿ ಪೈಲಟ್ ಲೈಸೆನ್ಸ್​ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂದು ಗುರುತಿಸಲ್ಪಟ್ಟಿದ್ದಾರೆ. ಅಲ್ಲದೆ, ಜೋಹಾನ್ಸ್‌ಬರ್ಗ್‌ನಲ್ಲಿ ತರಬೇತಿ ಪಡೆದಿರುವ ಅವರು 2017 ರಲ್ಲಿ ಪೈಲೆಟ್ ಆಗುವ ವಾಣಿಜ್ಯ ಪರವಾನಗಿಯನ್ನೂ ​ ಪಡೆದಿದ್ದಾರೆ.

ಇತ್ತೀಚೆಗೆ ಕೇರಳ ಸರ್ಕಾರ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕಟಿಬದ್ಧವಾಗಿರುವುದಾಗಿ ತಿಳಿಸಿತ್ತು.  ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕಡ್ಡಾಯ 2 ಸ್ಥಾನಗಳನ್ನು ಮೀಸರಲಿರಿಸಬೇಕು ಎಂದು ಕಾನೂನು ರೂಪಿಸಿದೆ. ಅಲ್ಲದೆ, ಅವರ ಶಿಕ್ಷಣಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನೂ ಸರ್ಕಾರವೇ ಭರಿಸುವುದಾಗಿ ಘೋಷಿಸಿತ್ತು. ಪರಿಣಾಮ ಇಡೀ ದೇಶದಲ್ಲೇ ಅತಿಹೆಚ್ಚು ತೃತೀಯ ಲಿಂಗಿ ಪದವೀಧರರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿತ್ತು. ಕೇರಳ ಸರ್ಕಾರದ ಈ ನಡೆಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು. ಈ ನಡುವೆ ಆ್ಯಡಮ್ ಹ್ಯಾರಿ ಎಂಬ ಪೈಲಟ್​ ಕಥೆ ಕೇರಳ ಸರ್ಕಾರದ ಕಾರ್ಯವೈಖರಿಗೆ ಮತ್ತೊಂದು ಉದಾಹರಣೆಯಾಗಿದೆ.

ಇನ್ನೂ ಒಂದು ತಿಂಗಳು ಮಳೆಗೆ ತತ್ತರಿಸಲಿದೆ ರಾಜ್ಯ; ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ?

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...