HOME » NEWS » National-international » KERALA GOVERNMENT TO CALL SPECIAL SESSION OF ASSEMBLY AGAINST FARM REFORMS MAK

ಕೇಂದ್ರ ಕೃಷಿ ಕಾನೂನಿಗೆ ವಿರೋಧ; ಪಂಜಾಬ್​-ದೆಹಲಿ ಬೆನ್ನಿಗೆ ವಿಶೇಷ ಅಧಿವೇಶನ ಕರೆಯಲು ಮುಂದಾಗಿರುವ ಕೇರಳ!

ಈ ಹಿಂದೆ ದೆಹಲಿ ವಿಧಾನಸಭೆ ಕೂಡಾ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ತಿರಸ್ಕರಿಸಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೂದೆಗಳ ಪ್ರತಿಗಳನ್ನು ಸದನದಲ್ಲೇ ಹರಿದು ಹಾಕಿದ್ದರು. ಕೇರಳ ವಿಧಾನಸಭೆಯ ವಿಶೇಷ ಅಧಿವೇಶನವು ಒಂದು ಗಂಟೆಗಳ ಕಾಲ ನಡೆಯಲಿದ್ದು, ಮಸೂದೆಗಳನ್ನು ಮತದಾನಕ್ಕೆ ತಂದು ನಿರ್ಣಯ ಅಂಗೀಕರಿಸಲಾಗುತ್ತದೆ ಎನ್ನಲಾಗಿದೆ.

news18-kannada
Updated:December 21, 2020, 1:13 PM IST
ಕೇಂದ್ರ ಕೃಷಿ ಕಾನೂನಿಗೆ ವಿರೋಧ; ಪಂಜಾಬ್​-ದೆಹಲಿ ಬೆನ್ನಿಗೆ ವಿಶೇಷ ಅಧಿವೇಶನ ಕರೆಯಲು ಮುಂದಾಗಿರುವ ಕೇರಳ!
ಕೇರಳ ಸಿಎಂ ಪಿಣರಾಯಿ ವಿಜಯನ್.
  • Share this:
ಕೊಚ್ಚಿ (ಡಿಸೆಂಬರ್​ 21); ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಯ ವಿರುದ್ದ ಬಹುತೇಕ ಎಲ್ಲಾ ರಾಜ್ಯಗಳೂ ವಿರೋಧ ವ್ಯಕ್ತಪಡಿಸಿವೆ. ಇನ್ನೂ ಪಂಜಾಬ್ ರಾಜ್ಯ ಒಂದು ಹೆಜ್ಜೆ ಮುಂದೆ ನಡೆದಿದ್ದು ಕಳೆದ ತಿಂಗಳೇ ವಿಶೇಷ ಅಧಿವೇಶನ ಕರೆದು ಕೇಂದ್ರ ಕೃಷಿ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರ ಪರ್ಯಾಯವಾಗಿ ಪ್ರತ್ಯೇಕ ಕೃಷಿ ಮಸೂದೆಯನ್ನು ಜಾರಿಗೆ ತಂದಿತ್ತು. ಇದೀಗ ಪಂಜಾಬ್ ಬೆನ್ನಿಗೆ ಕೇರಳ ಸರ್ಕಾರ ಸಹ ನೂತನ ಕೃಷಿ ಮಸೂದೆಗಳ ವಿರುದ್ಧ ನಿರ್ಣಯ ಮಂಡಿಸಲು ಮುಂದಾಗಿದೆ. ಈ ಸಂಬಂಧ ಅಧಿವೇಶನ ಕರೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಶೀಘ್ರದಲ್ಲೇ ರಾಜ್ಯಪಾಲ ಆರೀಫ್ ಮೊಹಮ್ಮದ್​ ಖಾನ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಿದ್ದಾರೆ. ರಾಜ್ಯಪಾಲರು ಒಪ್ಪಿಗೆ ನೀಡಿದ ತಕ್ಷಣ ಅಧಿವೇಶನ ಕರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ರೈತರ ಪರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ನೇತೃತ್ವದ ಆಡಳಿತರೂಢ ಪಕ್ಷ ಸಚಿವ ಸಂಪುಟ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದು, ಸರ್ಕಾರದ ನಿರ್ಧಾರಕ್ಕೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್​ ಸೇರಿದಂತೆ ಎಲ್ಲಾ ಪಕ್ಷಗಳೂ ಬೆಂಬಲ ಸೂಚಿಸಿವೆ ಎನ್ನಲಾಗುತ್ತಿದೆ. 140 ವಿಧಾನಸಭಾ ಸದಸ್ಯರಿರುವ ಕೇರಳ ವಿಧಾನಸಭೆಯಲ್ಲಿ ಬಿಜೆಪಿ ಕೇವಲ ಒಬ್ಬ ಶಾಸಕನನ್ನಷ್ಟೇ ಹೊಂದಿರುವ ಕಾರಣ ಕೇರಳದಲ್ಲಿ ಬಿಜೆಪಿ ಪ್ರಬಲ ವಿರೋಧ ವ್ಯಕ್ತಪಡಿಸುವುದು ಸಹ ಅಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ದೆಹಲಿ ವಿಧಾನಸಭೆ ಕೂಡಾ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ತಿರಸ್ಕರಿಸಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೂದೆಗಳ ಪ್ರತಿಗಳನ್ನು ಸದನದಲ್ಲೇ ಹರಿದು ಹಾಕಿದ್ದರು. ಕೇರಳ ವಿಧಾನಸಭೆಯ ವಿಶೇಷ ಅಧಿವೇಶನವು ಒಂದು ಗಂಟೆಗಳ ಕಾಲ ನಡೆಯಲಿದ್ದು, ಮಸೂದೆಗಳನ್ನು ಮತದಾನಕ್ಕೆ ತಂದು ನಿರ್ಣಯ ಅಂಗೀಕರಿಸಲಾಗುತ್ತದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತರೂಢ ಎಡಪಕ್ಷಗಳ ಒಕ್ಕೂಟ ವಿಜಯ ಗಳಿಸಿದ ಹಿನ್ನಲೆಯಲ್ಲಿ, ಕೇಂದ್ರದ ವಿರುದ್ದ ಇನ್ನೂ ಹೆಚ್ಚು ಧ್ವನಿ ಎತ್ತಲು ಕೇರಳ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿಗಳು ಹೊರ ಬೀಳುತ್ತಿವೆ.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ; ಪ್ರಶಾಂತ್​ ಕಿಶೋರ್​ ಸವಾಲು

ಆದರೆ, ಬಿಜೆಪಿ ಕೇರಳ ಸರ್ಕಾರದ ಕ್ರಮವನ್ನು ರಾಜಕೀಯ ಪ್ರೇರಿತ ನಿರ್ಧಾರ ಎಂದು ಟೀಕಿಸಿದ್ದು, ರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವ ವಿ. ಮುರುಲೀಧರನ್, "ಇದು ರಾಜಕೀಯ ಸಾಹಸಕ್ಕಿಂತ ಹೆಚ್ಚೇನೂ ಅಲ್ಲ. ಇದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದಷ್ಟು ನಿರರ್ಥಕವಾಗಿದೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಎರಡೂ ಅಗ್ಗದ ರಾಜಕೀಯ ಸಾಹಸಗಳಿಗಾಗಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ.
ಇನ್ನೂ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ 25ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕಂತೂ ಈ ಹೋರಾಟ ಮುಗಿಯುವ ಅಥವಾ ರೈತರ ಬೇಡಿಕೆಗೆ ಸರ್ಕಾರ ಮಣಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ದೆಹಲಿ, ಪಂಜಾಬ್ ಮತ್ತು ಕೇರಳ ಹೀಗೆ ಒಂದೊಂದೆ ರಾಜ್ಯಗಳು ವಿಶೇಷ ಅಧಿವೇಶನ ಕರೆದು ಈ ಕೃಷಿ ಮಸೂದೆಗಳ ವಿರುದ್ಧ ನಿರ್ಣಯ ಮಂಡಿಸುತ್ತಿರುವುದು ರೈತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದಂತಾಗುತ್ತಿದೆ.
Published by: MAshok Kumar
First published: December 21, 2020, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories