• Home
  • »
  • News
  • »
  • national-international
  • »
  • Hate Speech: ದ್ವೇಷ ಭಾಷಣ ಮಾಡಬೇಡಿ; ಮಸೀದಿಗೆ ನೊಟೀಸ್ ನೀಡಿದ್ದ ಕೇರಳದ ಇನ್ಸ್‌ಪೆಕ್ಟರ್ ವಜಾ

Hate Speech: ದ್ವೇಷ ಭಾಷಣ ಮಾಡಬೇಡಿ; ಮಸೀದಿಗೆ ನೊಟೀಸ್ ನೀಡಿದ್ದ ಕೇರಳದ ಇನ್ಸ್‌ಪೆಕ್ಟರ್ ವಜಾ

ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್

ಮಸೀದಿಗಳಲ್ಲಿ ಕೋಮು ಪ್ರಚಾರ ನಡೆಯುತ್ತಿದೆ ಎಂಬುದನ್ನು ಸರ್ಕಾರ ನಂಬುವುದಿಲ್ಲ. ಕೋಮು ಸೌಹಾರ್ದತೆಯ ಮಹತ್ವವನ್ನು ಪರಿಗಣಿಸಿ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಕೇರಳ ಸರ್ಕಾರದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

  • Share this:

    ತಿರುವನಂತಪುರಂ: ಶುಕ್ರವಾರದ ನಮಾಜ್‌ನಲ್ಲಿ ಯಾವುದೇ ದ್ವೇಷದ ಭಾಷಣ (Hate Speech) ಮಾಡಬಾರದು ಎಂದು ಸ್ಥಳೀಯ ಮಸೀದಿಯೊಂದಕ್ಕೆ ಎಚ್ಚರಿಕೆ ನೀಡಿದ ಆರೋಪದ ಅಡಿ ಕೇರಳದ ಕಣ್ಣೂರು ಜಿಲ್ಲೆಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (SHO) ಓರ್ವರನ್ನು ಕೇರಳ ಸರ್ಕಾರ ವಜಾಗೊಳಿಸಿದೆ. ಬುಧವಾರ ಕೇರಳ ಸರ್ಕಾರ (Kerala Government) ಈ ನಿರ್ಧಾರ ಕೈಗೊಂಡಿದ್ದು ವಿವಾದಿತ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ (Nupur Sharma) ಘಟನೆ ಕೇರಳದಲ್ಲೂ ಪರಿಣಾಮ ಬೀರಿದೆ. ಪ್ರವಾದಿ ಕುರಿತು ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ವಿವಾದಿತ ಹೇಳಿಕೆ ನೀಡಿದ್ದ ವಿವಾದದ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿ ಅವಲೋಕಿಸಿ ಕೇರಳದ ಮಯ್ಯಿಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಿಜು ಪ್ರಕಾಶ್ ಅವರು ಸ್ಥಳೀಯ ಮಸೀದಿ ಸಮಿತಿಗೆ ನೋಟಿಸ್ ನೀಡಿದ್ದರು.


    ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಛಿದ್ರಗೊಳಿಸುವ" ಯಾವುದೇ ದ್ವೇಷದ ಭಾಷಣ ಮಾಡಬಾರದು ಎಂದು ಅವರು ನೀಡಿದ್ದ ನೊಟೀಸ್​ನಲ್ಲ ಉಲ್ಲೇಖಿಸಲಾಗಿತ್ತು. ಕೋಮು ಸೌಹಾರ್ದತೆಯನ್ನು ಛಿದ್ರಗೊಳಿಸುವ ಯಾವುದೇ ದ್ವೇಷದ ಭಾಷಣಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಚ್‌ಒ ನೋಟಿಸ್‌ನಲ್ಲಿ ತಿಳಿಸಿದ್ದರು. ಆದರೆ ಅವರು ನೀಡಿದ್ದ ನೊಟೀಸ್ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು.


    ಕೇರಳ ಸರ್ಕಾರ ಹೇಳಿದ್ದೇನು?
    ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಅಧಿಕೃತ ಪ್ರಕಟಣೆಯಲ್ಲಿ ಕೇರಳದ ಮಯ್ಯಿಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಿಜು ಪ್ರಕಾಶ್ ಮಸೀದಿಗೆ ನೀಡಿದ ಸೂಚನೆಯು ಎಲ್‌ಡಿಎಫ್ ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.


    ಸರ್ಕಾರದ ನೀತಿ ಅರ್ಥ ಮಾಡಿಕೊಂಡಿಲ್ಲ
    ಎಸ್‌ಎಚ್‌ಒ ಅವರು ಸರ್ಕಾರದ ನೀತಿಯನ್ನು ಅರ್ಥಮಾಡಿಕೊಳ್ಳದೆ ನೋಟಿಸ್ ನೀಡಿದ್ದಾರೆ. ಹೀಗಾಗ ಪೊಲೀಸ್ ಮಹಾನಿರ್ದೇಶಕರು (DGP) ಅವರನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ ಎಂದು ಕೇರಳ ಸರ್ಕಾರದ ಅದಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


    ಈ ಆರೋಪದಲ್ಲಿ ಸರ್ಕಾರಕ್ಕೆ ನಂಬಿಕೆಯಿಲ್ಲ
    ಮಸೀದಿಗಳಲ್ಲಿ ಕೋಮು ಪ್ರಚಾರ ನಡೆಯುತ್ತಿದೆ ಎಂಬುದನ್ನು ಸರ್ಕಾರ ನಂಬುವುದಿಲ್ಲ. ಕೋಮು ಸೌಹಾರ್ದತೆಯ ಮಹತ್ವವನ್ನು ಪರಿಗಣಿಸಿ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಕೇರಳ ಸರ್ಕಾರದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.


    ಇದನ್ನೂ ಓದಿ: President Poll: ದೇವೇಗೌಡರು ರಾಷ್ಟ್ರಪತಿ ಆಗ್ತಾರಾ? ಮುನ್ನೆಲೆಗೆ ಬಂದಿದೆ ಹೆಸರು, ಹೆಚ್ಚಿದ ಕುತೂಹಲ


    ಶಾಂತಿಯುತ ಜೀವನ ಮತ್ತು ಸಾಮರಸ್ಯವನ್ನು ರಕ್ಷಣೆ ಅತ್ಯಗತ್ಯ
    ಕೆಲವು ಶಕ್ತಿಗಳು ದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಈ ಹಂತದಲ್ಲಿ ಶಾಂತಿಯುತ ಜೀವನ ಮತ್ತು ಸಾಮರಸ್ಯವನ್ನು ರಕ್ಷಿಸುವುದು ಅತ್ಯಗತ್ಯ ಎಂದು ಸಹ ಕೇರಳ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.


    ನೂಪುರ್ ಶರ್ಮಾಗೆ ಹೊಸ ಸಮನ್ಸ್
    ಪ್ರವಾದಿ ಮಹಮ್ಮದ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಹೊಸ ಸಮನ್ಸ್ ಕಳುಹಿಸಿದ್ದಾರೆ. ಜೂನ್ 25 ರಂದು ನೂಪುರ್ ಶರ್ಮಾ ಮುಂಬೈ ಪೊಲೀಸರ ಎದುರು ಹಾಜರಾಗಬೇಕಿದೆ. ಜೂನ್ 25 ರಂದು ಪಿಡೋನಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೂಪುರ್ ಶರ್ಮಾಗೆ ನೀಡಿದ ಸಮನ್ಸ್​ನಲ್ಲಿ ಸೂಚನೆ ನೀಡಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಈಮುನ್ನ ಜೂನ್ 22ರಂದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದರು. ಆದರೆ ಇದೀಗ ಹೊಸ ಸಮನ್ಸ್ ಜಾರಿಗೊಳಿಸಲಾಗಿದೆ.


    ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?


    ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ಗಲ್ಲಿಗೆ ಏರಿಸಿದ್ದಾರೆ. ಸಾರ್ವಜನಿಕರು ಓಡಾಡುವ ನಡು ರಸ್ತೆಯಲ್ಲೇ ನಿನ್ನೆ ರಾತ್ರಿ ವೇಳೆಗೆ ಕಿಡಿಗೇಡಿಗಳು ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದಾರೆ. ಮುಂಜಾನೆ ಸಾರ್ವಜನಿಕರು ಇದನ್ನು ಗಮನಿಸಿದ್ದಾರೆ. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    Published by:guruganesh bhat
    First published: