ಪ್ರವಾಹದಲ್ಲಿ ಸಿಲುಕಿದ ತುಂಬು ಗರ್ಭಿಣಿ : ಗಂಡು ಮಗುವಿಗೆ ಜನ್ಮ ನೀಡಿದ ಮಹಾತಾಯಿ

G Hareeshkumar | news18
Updated:August 18, 2018, 2:57 PM IST
ಪ್ರವಾಹದಲ್ಲಿ ಸಿಲುಕಿದ ತುಂಬು ಗರ್ಭಿಣಿ : ಗಂಡು ಮಗುವಿಗೆ ಜನ್ಮ ನೀಡಿದ ಮಹಾತಾಯಿ
G Hareeshkumar | news18
Updated: August 18, 2018, 2:57 PM IST
ನ್ಯೂಸ್ 18 ಕನ್ನಡ

ಕೇರಳ (ಆಗಸ್ಟ್ 18) : ಮಳೆ ಬೇಕು ಮಳೆ ಬೇಕು ಅಂತಿದ್ದ ಜನರಿಗೆ ಅಯ್ಯೋ  ಮಳೆ ಯಾವಾಗ ನಿಲ್ಲುತ್ತೋ ಅನ್ನೋ ಪರಿಸ್ಥಿತಿ ನಿರ್ಮಾನವಾಗಿದೆ. ಕೇರಳದಲ್ಲಂತೂ ಮಲೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಕೆಲ ಪ್ರದೇಶಗಳಲ್ಲಿ ಜನರು ಮನೆಯ ಮಾಳಿಗೆ ಹಾಗೂ ಮರಗಳ ಮೇಲೆ ನಿಂತು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಇಂಥದರಲ್ಲಿ ಇವತ್ತೋ ನಾಳೆಯೋ ಹೆರಿಗೆಯಾಗುವ ಸ್ಥಿತಿಯಲ್ಲಿರುವ ಗರ್ಭಿಣಿಯರ ಗೊಳಂತು ಕೇಳೋದೆ ಬೇಡಾ.

ಮಳೆ ಅವಾಂತರ ಮಧ್ಯಯೇ ನೌಕಾ  ಪಡೆಯ ಯೋಧರ ಸಹಾಯದಿಂದ 25 ವರ್ಷದ ಗರ್ಭಿಣಿಯೊಬ್ಬರು ಪವಾಡವೆಂಬಂತೆ ಗಂಡು ಮಗುವಿಗೆ ಜನ್ಮ ನೀಡಿರುವ ಅಪರೂಪದ  ಘಟನೆ  ನಡೆದಿದೆ. ಈ ವರದಿಯನ್ನು ನೌಕಾ ಪಡೆ ಟ್ವೀಟ್ ಮಾಡಿದೆ.

A pregnant lady with water bag leaking has been airlifted and evacuated to Sanjivani. Doctor was lowered to assess the lady. Operation successful #OpMadad #KeralaFloodRelief #KeralaFloods2018 pic.twitter.com/bycGXEBV8q


ಜಿಲ್ಲೆಯ ಆಳುವಾ ಪಟ್ಟಣದ ಸಮೀಪದ ಚೆಗಮಾನಡ್ ನಿವಾಸಿ ಸುಜಿತಾ ಜಾಬಿಲ್ ಎಂಬ ಮಹಿಳೆಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ಮನೆಯ ಮಾಳಿಗೆ ಮೇಲೆ ನಿಂತಿದ್ದರು. ಈ ವೇಳೆ ಅವರು ಹೆರಿಗೆ ನೋವಿನಿಂದ  ಬಳಲುತ್ತಿದ್ದರು.

ಈ ಸುದ್ದಿ ತಿಳಿದ ಯೋಧರು ತಮ್ಮ ನೌಕಾ ಚಾಪರ್​ನಲ್ಲಿ ವೈದ್ಯರನ್ನು ಕರೆತಂದು, ಸುಜಿತಾ ಇದ್ದ ಮಾಳಿಗೆ ಮೇಲೆ ಇಳಿಸಿದ್ದಾರೆ. ಬಳಿಕ ವೈದ್ಯರು ಸುಜಿತಾಗೆ ಪ್ರಾಥಮಿಕ ಚಿಕಿತ್ಸೆ ನಿಡಿ ನಂತರ ಅದನ್ನು ಮೇಲಕ್ಕೆ ಎಳೆದುಕೊಂಡು ಚಾಪರ್ ಮೂಲಕ ಕೇರಳದ ಕೊಚ್ಚಿಯಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Loading...

ಆಸ್ಪತ್ರೆಗೆ ಹೋದ 30 ನಿಮಿಷಗಳಲ್ಲೇ (ನಿನ್ನೆ ಮಧ್ಯಾಹ್ನ 2.30ಕ್ಕೆ) ಸುಜಿತಾ ಹೆರಿಗೆಯಾಗಿದ್ದು, ಗಂಡುಮಗುವಿಗೆ ಜನ್ಮ ಜನಿಸಿದೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಯಿ ಮಗು ಜತೆಗೆ ನೌಕಾ ಪಡೆ ಯೋಧರು , ಮಹಿಳಾ ಪೊಲೀಸ್ ಹಾಗೂ ಡಾಕ್ಟರ್ ಇರುವ ಪೋಟೋವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸುಜಿತಾ ವಾಸವಾಗಿರುವ ಅಳುವಾ ಎಂಬ ಊರು, ಪೆರಿಯಾರ್ ನದಿಯ ಭೀಕರ ಪ್ರವಾಹಕ್ಕೆ ತುತ್ತಾದ ಪ್ರದೇಶದಲ್ಲಿದೆ.


 

 

 

 

 

 
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ