ಪ್ರವಾಹಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಬೆನ್ನನ್ನೇ ಮೆಟ್ಟಿಲನ್ನಾಗಿಸಿದ ಮೀನುಗಾರನಿಗೆ ಸಿಗಲಿದೆ ಬಹುಮಾನ


Updated:August 22, 2018, 5:01 PM IST
ಪ್ರವಾಹಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಬೆನ್ನನ್ನೇ ಮೆಟ್ಟಿಲನ್ನಾಗಿಸಿದ ಮೀನುಗಾರನಿಗೆ ಸಿಗಲಿದೆ ಬಹುಮಾನ
  • Share this:
ನ್ಯೂಸ್​ 18 ಕನ್ನಡ

ತಿರುವನಂತಪುರಂ(ಆ.22): ಭಾರತದ ದಕ್ಷಿಣ ರಾಜ್ಯ ಕೇರಳವು ಈ ದಿನಗಳಲ್ಲಿ ಪ್ರವಾಹಕ್ಕೀಡಾಗಿದೆ. ಭಾರತೀಯ ಸೇನೆ ಆಹಾಗೂ ಎನ್​ಡಿಆರ್​ಎಫ್​ ತಂಡಗಳಲ್ಲಿ ಇಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡುತ್ತಿದ್ದಾರೆ. ಈ ನಡುವೆ ಮಹಿಳೆಯರ ಹಾಗೂ ಮಕ್ಕಳ ರಕ್ಷಣಾ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ಬೆನ್ನನ್ನೇ ಮೆಟ್ಟಿಲಂತಿಟ್ಟು ಬೋಟ್​ಗೇರಿಸಿದ್ದ ಮೀನುಗಾರ ಜೈಸಲ್​ ಕೆಪಿ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಸದ್ದು ಮಾಡಿದ್ದರು, ಹಲವಾರು ಮಂದಿ ಅವರ ಈ ಸೇವೆಗೆ ಶಹಬ್ಬಾಸ್​ ಎಂದಿದ್ದರು. ಇದೀಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಜೈಸಲ್​ರವರ ಈ ಹೃದಯವೈಶಾಲ್ಯತೆಯ ಕಾರ್ಯಕ್ಕೆ ಸನ್ಮಾನಿಸುವ ತಯಾರಿ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಅವರ ಈ ಕಾರ್ಯಕ್ಕೆ ನಗದು ಹಣ ಹಾಗೂ ಮನೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

'Times of India' ದಲ್ಲಿ ಪ್ರಕಟವಾದ ವರದಿಯನ್ವಯ ಕೇರಳದ ಮಲಪ್ಪುರಂ ಬಳಿ ಇರುವ ತನೂನ್​ನ ಜೋಪಡಿಯಲ್ಲಿ ನೆಲೆಸುವ 32 ವರ್ಷದ ಜೈಸಲ್​ ಕೆಪಿಯವರ ವಿಡಿಯೋ ಒಂದು ಆಗಸ್ಟ್​ 17ರಂದು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್​ ಆಗಿತ್ತು. ವಾಸ್ತವವಾಗಿ, ಅದೇ ದಿನ ಅವರಿಗೆ ತಮ್ಮ ಮನೆ ಬಳಿಯ ಒಂದು ಪ್ರದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳು ಪ್ರವಾಹದಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿತ್ತು. ಮಣಪ್ಪುರಂ ಟ್ರೋಮಾ ಕೇರ್​ ಯೂನಿಟ್​ನಲ್ಲಿ ಸ್ವಯಂಸೇವಕರಾಗಿದ್ದ ಜೈಸಲ್​ ತಡ ಮಾಡದೇ ಆ ಸ್ಥಳಕ್ಕೆ ತೆರಳಿ ಜನರಿಗೆ ಸಹಾಯ ಮಾಡಲಾರಂಭಿಸಿದರು.ಮಹಿಳೆಯರು ಹಾಗೂ ಮಕ್ಕಳನ್ನು ಎನ್​ಡಿಆರ್​ಎಫ್​ ಕಳುಹಿಸಿದ್ದ ಬೋಟ್​ಗೇರಿಸಲು ತಮ್ಮ ಹೊಟ್ಟೆಯ ಸಹಾಯದಲ್ಲಿ ಕುಳಿತುಕೊಂಡರು. ಈ ಸಂದರರ್ಭದಲ್ಲಿ ಮಹಿಳೆಯರು ಹಾಗೂ ಮಕ್ಕಳು ಅವರ ಬೆನ್ನನ್ನೇ ಮೆಟ್ಟಿಲಿನಂತೆ ಬಳಸಿ ಸುಲಭವಾಗಿ ಬೋಟನ್ನೇರಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಜೈಸಲ್​ "ಕೆಲ ಮಹಿಳೆಯರು ಹಾಗೂ ಮಕ್ಕಳು ಪ್ರವಾಹದಲ್ಲಿ ಸಿಲುಕಿದ್ದಾರೆಂಬ ಮಾಹಿತಿ ನನಗೆ ಲಭ್ಯವಾಗಿತ್ತು. ಇವರಲ್ಲಿ ಒಂದಿಬ್ಬರು ಗರ್ಭಿಣಿಯರೂ ಇದ್ದರು. ಗರ್ಭಿಣಿ ಮಹಿಳೆಯರಿಗೆ ರಕ್ಷಣಾ ಕಾರ್ಯದ ಸಂದರ್ಭದಲ್ಲಿ ನೀರಿನಿಂದ ಬೋಟ್​ಗೇರಲು ಬಹಳ ಕಷ್ಟವಾಗುತ್ತದೆ ಎಂಬ ವಿಚಾರ ನನಗೆ ತಿಳಿದಿತ್ತು. ಅಷ್ಟು ಜನರ ನಡುವೆ ಗರ್ಭಿಣಿ ಮಹಿಳೆಯನ್ನು ಎತ್ತುವುದು ಸರಿ ಎನಿಸಲಿಲ್ಲ ಹೀಗಾಗಿ, ಹೊಟ್ಟೆಯನ್ನೇ ಆಧಾರವಾಗಿಟ್ಟುಕೊಂಡು ಮಲಗಲು ನಿರ್ಧರಿಸಿದೆ. ಈ ಮೂಲಕ ಎಲ್ಲಾ ಜನರು ನನ್ನ ಬೆನ್ನನ್ನೇರಿ ಸುಲಭವಾಗಿ ಬೋಟನ್ನೇರಬಹುದಾಗಿತ್ತು"

ಅಲ್ಲದೇ "ಸಮಾಜವು ಇಷ್ಟು ದೊಡ್ಡ ಸಮಸ್ಯೆಗೀಡಾಗಿದೆ ಎಂದರೆ, ಆಗ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಹಾಗೂ ಜವಅಬ್ದಾರಿಯಾಗಿದೆ. ನಾನೂ ಅದನ್ನೇ ಮಾಡಿದ್ದೇನೆ" ಎಂದಿದ್ದಾರೆ ಜೈಸಲ್​.
First published: August 22, 2018, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading