ಜಲಪ್ರವಾಹ: ಸಹಾಯಕ್ಕೆ ಬಂದ ಗೂಗಲ್, ಫೇಸ್ಬುಕ್, ಟ್ರೂಕಾಲರ್, qkopy


Updated:August 18, 2018, 1:40 PM IST
ಜಲಪ್ರವಾಹ: ಸಹಾಯಕ್ಕೆ ಬಂದ ಗೂಗಲ್, ಫೇಸ್ಬುಕ್, ಟ್ರೂಕಾಲರ್, qkopy

Updated: August 18, 2018, 1:40 PM IST
- ನ್ಯೂಸ್18 ಕನ್ನಡ

ತಿರುವನಂತಪುರಂ(ಆ. 18): ಕೊಡಗು ಮತ್ತು ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಭೀಕರ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಸಮರೋಪಾದಿಯಲ್ಲಿ ರಕ್ಷಣೆಯ ಕೆಲಸಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ತಂತ್ರಜ್ಞಾನಗಳು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಸೋಷಿಯಲ್ ಮೀಡಿಯಾ ಇದೀಗ ಜನರ ಮತ್ತು ಸರಕಾರದ ಸಹಾಯಕ್ಕೆ ಬಂದಿವೆ.

ಗೂಗಲ್:

ಕೇರಳ ಮತ್ತು ಕೊಡಗಿನಲ್ಲಿ ಪರಿಹಾರ ಕಾರ್ಯಕ್ಕೆ ಸಂಪನ್ಮೂಲಗಳ ಕ್ರೋಢೀಕರಣವೇ ದೊಡ್ಡ ಸಮಸ್ಯೆ. ಪ್ರವಾಹಪೀಡಿತರಾದವರಿಗೆ ಈ ಸಂಪನ್ಮೂಲಗಳು ಮತ್ತು ಸೌಕರ್ಯಗಳು ಎಲ್ಲೆಲ್ಲಿವೆ ಎಂಬುದನ್ನು ಪತ್ತೆ ಹೆಚ್ಚುವುದೂ ಸಮಸ್ಯೆಯೇ. ಈ ವಿಚಾರದಲ್ಲಿ ಗೂಗಲ್ ಸಂಸ್ಥೆ ಸಹಾಯಕ್ಕೆ ಬಂದಿದೆ. ಪರಿಹಾರ ಶಿಬಿರ, ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳಗಳು, ಆಹಾರ ಮತ್ತು ಕುಡಿಯುವ ನೀರು ಇರುವ ಸ್ಥಳಗಳು, ಸಹಾಯವಾಣಿ, ರಕ್ಷಣಾ ಸಾಮಗ್ರಿ, ಆಂಬುಲೆನ್ಸ್, ವಾಹನ ವ್ಯವಸ್ಥೆ, ಬಟ್ಟೆ ಇತ್ಯಾದಿ ಅಗತ್ಯ ವಸ್ತುಗಳು ಲಭ್ಯವಿರುವ ಸಂಪೂರ್ಣ ಪಟ್ಟಿಯನ್ನು ಗೂಗಲ್ ಮ್ಯಾಪ್​ನಲ್ಲಿ ಅಳವಡಿಸಲಾಗಿದೆ. ಅದರ ಲಿಂಕ್ ಇಲ್ಲಿದೆ: (https://www.google.com/maps/d/u/0/viewer?mid=19pdXYBAk8RyaMjazX7mjJIJ9EqAyoRs5&shorturl=1&ll=10.131576801923254%2C76.09216694682618&z=7)

ಈ ಲಿಂಕ್ ಓಪನ್ ಮಾಡಿದರೆ ವಿವಿಧ ಸ್ಥಳಗಳನ್ನ ಗುರುತು ಮಾಡಿರುವ ನಕ್ಷೆ ಕಾಣುತ್ತದೆ. ಬೇಕಾದ ಸ್ಥಳದಲ್ಲಿನ ಐಕಾನ್​ಗಳನ್ನ ಕ್ಲಿಕ್ ಮಾಡಿದರೆ ಫೋನ್ ನಂಬರ್ ಇತ್ಯಾದಿ ಹೆಚ್ಚಿನ ವಿವರಗಳನ್ನ ನೋಡಬಹುದು.

ಕೇರಳದಲ್ಲಿ ಪರ್ಸನ್ ಫೈಂಡರ್ (ವ್ಯಕ್ತಿ ಶೋಧ) ಎಂಬ ಹೊಸ ಫೀಚರನ್ನು ಗೂಗಲ್ ರಿಲೀಸ್ ಮಾಡಿದೆ. ಪ್ರವಾಹಕ್ಕೆ ಸಿಲುಕಿ ನಿಮ್ಮ ಸಂರ್ಕದಿಂದ ಕಡಿತಗೊಂಡ ವ್ಯಕ್ತಿಯನ್ನ ಹುಡುಕಲು ಇದು ನೆರವಾಗುತ್ತದೆ. ಅಥವಾ, ಪ್ರವಾಹದಲ್ಲಿ ಸಿಲುಕಿರುವ ವ್ಯಕ್ತಿಯ ಮಾಹಿತಿ ನಿಮಗೆ ಲಭ್ಯವಿದ್ದರೆ ಅದನ್ನು ಬಹಿರಂಗಪಡಿಸುವ ಅವಕಾಶವನ್ನೂ ಇದು ಕಲ್ಪಿಸುತ್ತದೆ. ಅದರ ಲಿಂಕ್ ಇಲ್ಲಿದೆ… (http://google.org/personfinder/2018-kerala-flooding)

ಕ್ಯೂಕೋಪಿ(Qkopy):
Loading...

ಕೇರಳ ಮೂಲದ್ದೇ ಆದ ಈ ಹೊಸ ಸೋಷಿಯಲ್ ನೆಟ್ವರ್ಕಿಂಗ್ ಆ್ಯಪ್ ಕೂಡ ರಕ್ಷಣಾ ಕಾರ್ಯದಲ್ಲಿ ತನ್ನದೇ ರೀತಿಯಲ್ಲಿ ಸಹಾಯಹಸ್ತ ಚಾಚಿದೆ. ಇದು ಸದ್ಯಕ್ಕೆ ಕೋಳಿಕೋಡ್ ಜಿಲ್ಲೆಗೆ ಮಾತ್ರ ಸೀಮಿತವಾದ ಆ್ಯಪ್ ಆಗಿದೆ. ಪ್ರವಾಹದ ರಿಯಲ್ ಟೈಮ್ ಸ್ಥಿತಿ ಹೇಗಿದೆ, ರಸ್ತೆಗಳಲ್ಲಿ ಸಂಚಾರ ಸಾಧ್ಯತೆ ಎಷ್ಟಿದೆ, ಯಾವ್ಯಾವ ಪ್ರದೇಶಗಳು ಅಪಾಯದ ಸ್ಥಿತಿಯಲ್ಲಿವೆ, ಇತ್ಯಾದಿ ವಿವರಗಳನ್ನ ಇದು ನೀಡುತ್ತದೆ. ಈ ಆ್ಯಪ್​ನ ಬಳಕೆದಾರರು ಕೋಳಿಕೋಡ್ ಟ್ರಾಫಿಕ್ ಪೊಲೀಸ್​ನ ಫೋನ್ ನಂಬರನ್ನು (9497975656) ತಮ್ಮ ಮೊಬೈಲ್​ನಲ್ಲಿ ಸೇವ್ ಮಾಡಿಕೊಳ್ಳಬೇಕಾಗುತ್ತದೆ. ಫೋನ್ ಮತ್ತು ಆ್ಯಪ್ ಇಂಟರ್​ಲಿಂಕ್ ಆಗಿರುತ್ತದೆ. ಪೊಲೀಸರು ಕೊಡುವ ಅಪ್​ಡೇಟ್ಸ್ ಎಲ್ಲವೂ ಈ ಆ್ಯಪ್​ನಲ್ಲಿ ಲಭ್ಯವಿರುತ್ತದೆ.

ಇನ್ನು, ಅಮೇಜಾನ್ ಮತ್ತು ಟ್ರೂಕಾಲರ್ ಆ್ಯಪ್​ಗಳು ಧನಸಹಾಯಕ್ಕೆ ಸಾಧನಗಳನ್ನ ಒದಗಿಸಿವೆ. ಕೇರಳದ ಸಂತ್ರಸ್ತರ ನೆರವಿಗೆ ಧನ ಸಹಾಯ ಮಾಡಲಿಚ್ಛಿಸುವವರಿಗೆ ಈ ಆ್ಯಪ್​ಗಳು ವೇದಿಕೆ ಕಲ್ಪಿಸಿವೆ. ಅಮೇಜಾನ್ ಸಂಸ್ಥೆಯು ಮೂರು ಎನ್​ಜಿಓಗಳೊಂದಿಗೆ ಟೈಅಪ್ ಮಾಡಿಕೊಂಡಿದೆ. ಟ್ರೂಕಾಲರ್ ಮೂಲಕ ಕಳುಹಿಸಿದ ಹಣವು ನೇರ ಸಿಎಂ ಪರಿಹಾರ ನಿಧಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿ ವಾಟ್ಸಾಪ್​ನಲ್ಲಿ ಪರಿಹಾರಕ್ಕಾಗಿ ವಿವಿಧ ಗ್ರೂಪ್​ಗಳು ರಚನೆಯಾಗಿದ್ದು, ಆ ಮೂಲಕ ಕ್ಷಣಕ್ಷಣದ ಮಾಹಿತಿಯನ್ನು ರವಾಹಿಸಲಾಗುತ್ತಿದೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...