ಕುಡಿದ ಮತ್ತಿನಲ್ಲಿ 54 ದಿನದ ಹಸುಗೂಸನ್ನು ನೆಲಕ್ಕೆ ಬಿಸಾಡಿದ ಅಪ್ಪ; ಕೇರಳದಲ್ಲೊಂದು ಅಮಾನವೀಯ ಘಟನೆ

ಮಗುವಿನ ತಂದೆ 40 ವರ್ಷದ ಶೈಜು ಥೋಮಸ್, ಆಕಸ್ಮಿಕವಾಗಿ ತನ್ನ ಮಗು ಮಂಚದಿಂದ ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವುದಾಗಿ ವೈದ್ಯರ ಬಳಿ ಹೇಳಿದ್ದ. ಆದರೆ, ಆತನ ಹೇಳಿಕೆ ಮೇಲೆ ವೈದ್ಯರಿಗೆ ಅನುಮಾನ ಉಂಟಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

Sushma Chakre | news18-kannada
Updated:June 22, 2020, 4:26 PM IST
ಕುಡಿದ ಮತ್ತಿನಲ್ಲಿ 54 ದಿನದ ಹಸುಗೂಸನ್ನು ನೆಲಕ್ಕೆ ಬಿಸಾಡಿದ ಅಪ್ಪ; ಕೇರಳದಲ್ಲೊಂದು ಅಮಾನವೀಯ ಘಟನೆ
ಸಾಂದರ್ಭಿಕ ಚಿತ್ರ
  • Share this:
ತಿರುವನಂತಪುರಂ (ಜೂ. 22): ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಗಾದೆ ಮಾತಿದೆ. ಆದರೆ, ಕೇರಳದಲ್ಲಿ ಒಬ್ಬ ಅಪ್ಪ ತನ್ನ 54 ದಿನದ ಮಗುವನ್ನು ಎತ್ತಿ, ಎಸೆದಿರುವ ಘಟನೆ ನಡೆದಿದೆ. 54 ದಿನಗಳ ಎಳೆ ಹಸುಳೆಯನ್ನು ಪಾಪಿ ತಂದೆ ಎತ್ತಿ ಎಸೆದ ಪರಿಣಾಮ ಮಗು ಆಸ್ಪತ್ರೆಯಲ್ಲಿ ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕೇರಳದ ಎರ್ನಾಕುಲಂನ ಅಂಗಾಮಲೈ ಎಂಬ ಪ್ರದೇಶದಲ್ಲಿ ನಡೆದಿದೆ.

ಜೂನ್ 19ರಂದು ನಡೆದಿತ್ತು. ಪುಟ್ಟ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆದ ನಂತರ ಅದನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮಗುವನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಂದೆ 40 ವರ್ಷದ ಶೈಜು ಥೋಮಸ್, ಆಕಸ್ಮಿಕವಾಗಿ ತನ್ನ ಮಗು ಮಂಚದಿಂದ ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವುದಾಗಿ ವೈದ್ಯರ ಬಳಿ ಹೇಳಿದ್ದ. ಆದರೆ, ಆತನ ಹೇಳಿಕೆ ಮೇಲೆ ವೈದ್ಯರಿಗೆ ಅನುಮಾನ ಉಂಟಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕ್ವಾರಂಟೈನ್ ನಿಯಮಗಳ ಉಲ್ಲಂಘನೆ - ಕಲಬುರ್ಗಿಯಲ್ಲಿ 28 ಜನರ ವಿರುದ್ಧ ಎಫ್.ಐ.ಆರ್.


ಬಳಿಕ ಥೋಮಸ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದರು. ಕುಡಿದ ಅಮಲಿನಲ್ಲಿ ಮಗುವನ್ನು ಎತ್ತಿ ಎಸೆದ ಪರಿಣಾಮ ಅದು ಮಂಚಕ್ಕೆ ಹೋಗಿ ಬಡಿದಿತ್ತು ಎಂದು ಆತ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಯತ್ನ ಸೇರಿದಂತೆ ಹಲವು ಆರೋಪದಡಿ ಥೋಮಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ ಥೋಮಸ್​ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
First published:June 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading