Wild Boars: ಕಾಡುಹಂದಿಗಳನ್ನು ಕ್ರಿಮಿ ಕೀಟ ವರ್ಗಕ್ಕೆ ಸೇರಿಸಿ ಅಂತಿದೆ ಕೇರಳ ಸರ್ಕಾರ, ಕೇಂದ್ರ ಕೊಟ್ಟ ಉತ್ತರವಿದು

ಹಂದಿಗಳನ್ನು, ರೈತರ ಬೆಳೆಗಳಿಗೆ ಮತ್ತು ಮನುಷ್ಯರ ಮೇಲೆ ದಾಳಿ ಮಾಡುವ ಪೀಡಕ ಪ್ರಾಣಿಗಳ ಅಥವಾ ಜಂತುಗಳ ಸ್ಥಾನಕ್ಕೆ ಸೇರಿಸಿ, ಕೇರಳದ ರೈತರಿಗೆ ಅವುಗಳನ್ನು ಕೊಲ್ಲುವ ಮತ್ತು ತಿನ್ನುವ ಹಕ್ಕನ್ನು ನೀಡಬೇಕು ಎಂಬ ಕೇರಳ ಸರಕಾರದ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರಕಾರ ಪದೇ ಪದೇ ತಿರಸ್ಕರಿಸುತ್ತಲೇ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಡು ಹಂದಿಗಳನ್ನು (Wild Boars), ರೈತರ ಬೆಳೆಗಳಿಗೆ ಮತ್ತು ಮನುಷ್ಯರ ಮೇಲೆ ದಾಳಿ ಮಾಡುವ ಪೀಡಕ ಪ್ರಾಣಿಗಳ ಅಥವಾ ಜಂತುಗಳ ಸ್ಥಾನಕ್ಕೆ ಸೇರಿಸಿ, ಕೇರಳದ (Kerala) ರೈತರಿಗೆ ಅವುಗಳನ್ನು ಕೊಲ್ಲುವ ಮತ್ತು ತಿನ್ನುವ ಹಕ್ಕನ್ನು ನೀಡಬೇಕು ಎಂಬ ಕೇರಳ ಸರಕಾರದ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರಕಾರ (Govt) ಪದೇ ಪದೇ ತಿರಸ್ಕರಿಸುತ್ತಲೇ ಬಂದಿದೆ. ರಾಜ್ಯದಾದ್ಯಂತ, ಮುಖ್ಯವಾಗಿ ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳು  (Village) ಮತ್ತು ಪಣ್ಣಣಗಳಲ್ಲಿ ಕಾಡು ಹಂದಿಗಳ ಕಾಟ ಜನರ ಪಾಲಿಗೆ ಕಳವಳಕಾರಿ ಸಂಗತಿಯಾಗಿ ಪರಿಣಮಿಸಿದೆ.

ಒಂದು ವಾರದ ಹಿಂದೆ, ಕೇರಳದ ಉತ್ತರ ಭಾಗದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಸಮೀಪದ ಭೀಮಾನದಿಯ ಅಣ್ಣಮ್ಮ ಅಚ್ಚಪ್ಪನ್ ಎಂಬುವವರ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿತ್ತು. 58 ವರ್ಷದ ಆಕೆ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಹಂದಿಗಳ ದಾಳಿ

ಏಪ್ರಿಲ್ 28 ರಂದು ಬೆಳಗ್ಗೆ ಅಣ್ಣಮ್ಮ ಅವರು ತಮ್ಮ ಫಾರ್ಮ್‍ನಲ್ಲಿ ರಬ್ಬರ್ ಲ್ಯಾಟೆಕ್ಸ್ ಸಂಗ್ರಹಿಸುತ್ತಿದ್ದಾಗ, ಆ ಕಾಡು ಹಂದಿ ಹಿಂದಿನಿಂದ ಬಂದು ದಾಳಿ ಮಾಡಿತ್ತು. ಅದರಿಂದಾಗಿ ಅವರ ಎರಡು ಪಕ್ಕೆಲುಬುಗಳು ಮುರಿದಿದ್ದು, ಬಲಗಾಲಿಗೆ ಗಂಭೀರ ಗಾಯವಾಗಿದೆ.

ಕೇರಳದಲ್ಲಿ ಹಂದಿಗಳ ದಾಳಿ ಪ್ರಕರಣ ಹೆಚ್ಚಳ

ಏಪ್ರಿಲ್ 17 ರಂದು ಕೂಡ ಇಂತದ್ದೇ ದಾಳಿ ದಕ್ಷಿಣ ತಿರುವನಂತಪುರಂನ ವಿತುರದ ಸಮೀಪ ಮೇಮಲದಲ್ಲಿ ನಡೆದಿದೆ. ಸ್ಥಳೀಯ ಹೋಟೆಲ್ ಒಂದರಲ್ಲಿ, ಟೀ ಕುಡಿಯುತ್ತಿದ್ದ ಎಂ ಮುರುಗನ್ (47) ಎಂಬ ಕೂಲಿ ಕಾರ್ಮಿಕನ ಮೇಲೆ ಕಾಡು ಹಂದಿ ದಾಳಿ ನಡೆಸಿತ್ತು. ಹಿಂದಿನಿಂದ ನಡೆದ ಈ ಅನಿರೀಕ್ಷಿತ ದಾಳಿಯಲ್ಲಿ ಅವರ ಎಡಗಾಲು ಮುರಿದಿದೆ. ಅದಕ್ಕೂ ಮೂರು ದಿನ ಮುಂಚೆ, ಅಂದರೆ ಏಪ್ರಿಲ್ 14 ರಂದು ನಡೆದ ಕಾಡು ಹಂದಿ ದಾಳಿ ಹೀಗಿದೆ; ಕೋಯಿಕೊಡ್ ಜಿಲ್ಲೆ ತಾಮರಶೇರಿಯಲ್ಲಿ , ಲಿಜೋ ಜೋಸೆಫ್ ಎಂಬ 33 ವರ್ಷ ವಯಸ್ಸಿನ ಶಾಲಾ ಶಿಕ್ಷಕ, ಸ್ಥಳೀಯ ಶೋ ರೂಮ್ ಒಂದರಿಂದ ಫ್ಲೈವುಡ್ ಖರೀದಿಸುತ್ತಿದ್ದಾಗ, ಕಾಡು ಹಂದಿಯೊಂದು ದಾಳಿ ಮಾಡಿತ್ತು.

ಅದು, ನಗರ ಪ್ರದೇಶದಲ್ಲಿನ ಜನದಟ್ಟಣೆ ಇದ್ದ ಅಂಗಡಿಯಾಗಿದ್ದರೂ, ಹಂದಿ ಒಳಗೆ ನುಗ್ಗಿ ದಾಳಿ ಮಾಡಿತ್ತು, ಪರಿಣಾಮವಾಗಿ ಆ ಶಿಕ್ಷಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಪರ್ಯಾಸವೆಂದರೆ, ಅದೇ ಪ್ರದೇಶದಲ್ಲಿ ಅರ್ಧ ಗಂಟೆಯ ಬಳಿಕ, ತಮ್ಮ ಮನೆಯ ಮುಂದೆ ಸುಮ್ಮನೆ ಕುಳಿತಿದ್ದ, 34 ವರ್ಷದ ಜುಬೈರಿಯಾ ಮತ್ತು ಆಕೆಯ 14 ವರ್ಷದ ಮಗಳು ಫಾತೀಮ ನಜಾ ಮೇಲೆ ಮತ್ತೊಂದು ಹಂದಿ ದಾಳಿ ಮಾಡಿತ್ತು.

ಕೃಷಿಗೆ ತೀವ್ರ ಹಾನಿ

ಕಾಡು ಹಂದಿಗಳ ಈ ಹಾವಳಿಗಳಿಗೆ ಇಡೀ ಪಶ್ಚಿಮ ಘಟ್ಟ ಪ್ರದೇಶವೇ ಸಾಕ್ಷಿಯಾಗಿವೆ. “ಕೇಂದ್ರ ಸರಕಾರ, ಕಾಡುಹಂದಿಗಳನ್ನು ಕ್ರಿಮಿಕೀಟಗಳೆಂದು ಘೋಷಿಸಲು ನಿರಾಕರಿಸುತ್ತಿರುವುದು ಬೇಸರ ತಂದಿದೆ. ಕೃಷಿಗೆ ತೀವ್ರ ಹಾನಿಯನ್ನು ಉಂಟು ಮಾಡುವುದರ ಹೊರತಾಗಿ, ಅವು ರಾಜ್ಯದ ನಗರ ಪ್ರದೇಶಗಳಲ್ಲೂ ಸಂಚರಿಸಿ, ಜನರ ಮೇಲೆ ದಾಳಿ ನಡೆಸುತ್ತಿದೆ. ರೈತರು ಇದೀಗ ಕಾಡು ಹಂದಿಗಳ ಆಕ್ರಮಣದ ಆತಂಕದಲ್ಲಿದ್ದರೂ, ಸರಕಾರ ನಿಷ್ಕ್ರೀಯತೆ ಮತ್ತು ಅಸಡ್ಡೆಯನ್ನು ತೋರುತ್ತಿದೆ” ಎಂದು ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಾ ಮಾಜಿ ಪುರಸಭೆ ಅಧ್ಯಕ್ಷ ಸಿ ಕೆ ಸಹದೇವನ್ ಹೇಳಿದ್ದಾರೆ.

ಕಾಡು ಹಂದಿಗಳ ಆಕ್ರಮಣಕ್ಕೆ ಬಲಿ

ಹವಮಾನ ಬದಲಾವಣೆ, ನಗರಗಳ ವಿಸ್ತರಣೆ, ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶ ಮತ್ತು ಮೇವಿನ ಕೊರತೆಯೇ, ಕಾಡು ಹಂದಿಗಳು ಕಾಡಿನಿಂದ ಹೊರ ಹೋಗಲು ಮತ್ತು ಮಾನವ ವಾಸ ಸ್ಥಾನಗಳಲ್ಲಿ ಸಂಚರಿಸಲು ಕಾರಣವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಕಂಡ ಮಾನವ - ಪ್ರಾಣಿ ಸಂಘರ್ಷಗಳಲ್ಲಿ ಅವರು ಕಾಡಾನೆಗಳ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ. ಬೆಟ್ಟದ ಸಾಲುಗಳ ಪ್ರದೇಶಗಳಲ್ಲಿ, ಆಟೋ ಕಾರುಗಳಲ್ಲಿ ಸಂಚರಿಸುವರು ಕೂಡ ಕಾಡು ಹಂದಿಗಳ ಆಕ್ರಮಣಕ್ಕೆ ಬಲಿಯಾಗುತ್ತಿದ್ದಾರೆ.

ಇದನ್ನೂ ಓದಿ: Bill Gates: ಮಾಜಿ ಹೆಂಡತಿಯನ್ನು ಮತ್ತೆ ಮದುವೆಯಾಗಲು ಸಿದ್ಧ: ಬಿಲ್ ಗೇಟ್ಸ್ ಹೀಗೆ ಹೇಳಿದ್ದೇಕೆ?

ಕೇರಳದ ಅರಣ್ಯ ಸಚಿವ ಎ.ಕೆ ಶಸಿಂದ್ರನ್ ಅವರ ಪ್ರಕಾರ, ಪ್ರಸ್ತುತ ಕಾನೂನುಗಳ ಪ್ರಕಾರ, ಯಾವುದೇ ಕಾಡು ಪ್ರಾಣಿಗಳನ್ನು ಕ್ರಿಮಿ ಕೀಟಗಳೆಂದು ಘೋಷಿಸಲು ರಾಜ್ಯಗಳಿಗೆ ಹಕ್ಕಿಲ್ಲ. ಈ ಕಾರಣದಿಂದ, ಅವರು ಕಳೆದ ನವೆಂಬರ್ ನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವ ಭೂಪೆಂದರ್ ಯಾದವ್ ಅವರನ್ನು ಭೇಟಿಯಾಗಿದ್ದರು ಮತ್ತು ಕೇರಳದಾದ್ಯಂತ ಜನರ ಮೇಲೆ ಕಾಡು ಹಂದಿಗಳಿಂದ ಆಗುತ್ತಿರುವ ಹಾವಳಿಗಳ ಪ್ರಮಾಣವನ್ನು ವಿವರಿಸಿದ್ದರು. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ಸಚಿವರು ಕಾಲವಾಕಾಶವನ್ನು ಕೋರಿದ್ದರು.

ಕೇಂದ್ರದ ಉತ್ತರವೇನು?

ಮಾರ್ಚ್ 7 ರಂದು , ಕಾಡು ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿ, ಸಚಿವಾಲಯವು ಶಸಿಂದ್ರನ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಉತ್ತರ ನೀಡುತ್ತಾ, ಶಸಿಂದ್ರನ್ ಅವರು ಆಕ್ಷೇಪ ವ್ಯಕ್ತಪಡಿಸಿ, ನಿರ್ಧಾರವನ್ನು ಮರುಪರೀಶೀಲಿಸಬೇಕೆಂದು ಕೋರಿದ್ದರು. ಏಪ್ರಿಲ್ 12 ರಂದು ಕೇಂದ್ರ ಸಚಿವರು, ಕಾಡು ಹಂದಿಗಳನ್ನು ಕ್ರಿಮಿಕೀಟಗಳೆಂದು ಘೋಷಿಸುವುದರಿಂದ , ಅರಣ್ಯದ ಆವಾಸ ಸ್ಥಾನಗಳ ಸಮತೋಲನವನ್ನು ಹಾಳು ಮಾಡಿದಂತಾಗುತ್ತದೆ ಮಾತ್ರವಲ್ಲ, ಅವುಗಳನ್ನು ವಿವೇಚನಾರಹಿತವಾಗಿ ಕೊಲ್ಲಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi ನೈಟ್​ ಪಾರ್ಟಿ ವಿಡಿಯೋ ಪೋಸ್ಟ್​ ಮಾಡಿದ ಬಿಜೆಪಿ; ತಪ್ಪೇನಿದೆ ಎಂದ ಕಾಂಗ್ರೆಸ್​​

ಕೇಂದ್ರ ಸರಕಾರವು, 2016 ರಲ್ಲಿ ಉತ್ತರಖಂಡ ಮತ್ತು ಬಿಹಾರಕ್ಕೆ ಇದೇ ರೀತಿಯ ಸಡಿಲಿಕೆಗಳನ್ನು ನೀಡಿತ್ತು, ಹಾಗಾಗಿ, ಈ ವಿಷಯದಲ್ಲಿ ಕೇಂದ್ರ ತಾರತಮ್ಯ ತೋರುತ್ತಿದೆ ಎನ್ನಲು ಕೇರಳವು ಕಾರಣಗಳನ್ನು ಹೊಂದಿದೆ. ಗೋವಾ ಮತ್ತು ಕರ್ನಾಟಕದಂತಹ ರಾಜ್ಯಗಳು ಕೂಡ ತಮ್ಮ ಅರಣ್ಯಗಳ ಅಂಚಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ಬೇಡಿಕೆಗಳನ್ನು ಇಟ್ಟು, ಒತ್ತಾಯಿಸುತ್ತಿವೆ. ರಾಜ್ಯದಾದ್ಯಂತ ರೈತ ಸಂಘಟನೆಗಳು, ಈ ವಿಷಯದಲ್ಲಿ ಆಕ್ರೋಶಿತರಾಗಿದ್ದು, ಕಾಡು ಪ್ರಾಣಿಗಳಿಂದ ಆಗುತ್ತಿರುವ ಕೃಷಿ ಹಾನಿಯನ್ನು ತಡೆಗಟ್ಟಲು ಶೀಘ್ರ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿವೆ.

ಕ್ರಿಮಿಕೀಟಗಳೆಂದು ಘೋಷಿಸುವ ಹಕ್ಕು ಕೇಂದ್ರ ಸಚಿವಾಲಯಕ್ಕಿದೆ

1972 ರ ವನ್ಯಜೀವಿ ಕಾಯಿದೆ, ಶೆಡ್ಯೂಲ್ 3 ರ ಅಡಿಯಲ್ಲಿ ಪ್ರಸ್ತುತ ಪಟ್ಟಿ ಮಾಡಲಾದ ಕಾಡು ಹಂದಿಗಳನ್ನು ಶೆಡ್ಯೂಲ್ 5 ಅಡಿಯಲ್ಲಿ ಕ್ರಿಮಿಕೀಟಗಳೆಂದು ಘೋಷಿಸುವ ಹಕ್ಕನ್ನು ಕೇಂದ್ರ ಸಚಿವಾಲಯ ಹೊಂದಿದೆ. ಅದರಲ್ಲಿ ಸಾಮಾನ್ಯ ಕಾಗೆ, ಫ್ರುಟ್ ಬಾವಲಿ ಮತ್ತು ಇಲಿಗಳು ಕೂಡ ಸೇರಿವೆ. ಶೆಡ್ಯೂಲ್ 5 ರಲ್ಲಿ ಕಾಡು ಹಂದಿಗಳನ್ನು ಸೇರಿಸುವುದರಿಂದ, ರೈತರು ಅವುಗಳನ್ನು ಕೊಂದಾಗ, ಕ್ರಿಮಿನಲ್ ಮೊಕದ್ದಮೆ ಎದುರಿಸುವ ತೊಂದರೆ ಇರುವುದಿಲ್ಲ ಮತ್ತು ಅವರು ಅದರ ಮಾಂಸವನ್ನು ಕೂಡ ಸೇವಿಸಬಹುದು. ಕೆಲ ಸಮಯಗಳ ಹಿಂದೆ, ಕಾಡು ಹಂದಿಗಳು ಬೆಳೆ ದಾಳಿಯಲ್ಲಿ ತೊಡಗಿರುವುದು ಮತ್ತು ಪ್ರಾಣ ಹಾನಿಗೆ ಕಾರಣವಾಗುತ್ತಿರುವುದು ಕಂಡು ಬಂದರೆ, ಪರವಾನಿಗಿ ಪಡೆದ ಬಂದೂಕುಗಳಿಂದ ಅವುಗಳನ್ನುಯ ಕೊಲ್ಲಲು, ಕೇರಳ ಸರಕಾರ ರೈತರಿಗೆ ಅನುಮತಿ ನೀಡಿತ್ತು.

ಕೇಂದ್ರ ಸರಕಾರ, ಕಾಡು ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವ ಬೇಡಿಕೆಯನ್ನು ತಿರಸ್ಕರಿಸಿದ್ದರೂ ಕೂಡ, ಕೇರಳ ಸರಕಾರ, ಮೇ 17, 2022 ರಿಂದ ಆರಂಭವಾಗುವ ತೀವ್ರ ನಿರ್ಬಂಧಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ, ಇನ್ನು ಒಂದು ವರ್ಷಗಳ ವರೆಗೆ ಕಾಡು ಹಂದಿಗಳ ಹತ್ಯೆಯನ್ನು ಅನುಮತಿಸುವ ನಿರ್ದಿಷ್ಟ ಆದೇಶವನ್ನು ವಿಸ್ತರಿಸಿದೆ. ಕೃಷಿ ಭೂಮಿಗೆ ಪ್ರವೇಶಿಸುವ ಕಾಡು ಹಂದಿಗಳನ್ನು ಪರವಾನಿಗೆ ಪಡೆದ ಬಂದೂಕುಗಳಿಂದ ಮಾತ್ರ ಕೊಲ್ಲಬಹುದು ಮತ್ತು ಅರಣ್ಯ ಸಿಂಬಂದಿಯ ಉಪಸ್ಥಿತಿ ಇರಬೇಕು. ಅದರ ಮಾಂಸವನ್ನು ಸೀಮೆ ಎಣ್ಣೆಯಿಂದ ಸುಟ್ಟು ಹೂಳಬೇಕು.

ಸರಕಾರ ಮತ್ತು ರೈತರ ಬೇಡಿಕೆ ಈ ರೀತಿ ಇದ್ದರೆ, ತಜ್ಞರು ಮಾತ್ರ ಕಾಡು ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನಮಾನ ನೀಡುವ ಬೇಡಿಕೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಅರಣ್ಯ ತಜ್ಞ, ಸಿ ಆರ್ ಬಿಜೋಯ್ ಹೇಳಿದ್ದೇನು?

ಕೊಯಂಬತ್ತೂರು ಮೂಲದ ಅರಣ್ಯ ತಜ್ಞ, ಸಿ ಆರ್ ಬಿಜೋಯ್ ಅವರ ಪ್ರಕಾರ, ವಿಶ್ವದಾದ್ಯಂತ 18 ಪ್ರಭೇದದ ಹಂದಿಗಳಿವೆ ಮತ್ತು ಅವುಗಳ ಪೈಕಿ ಹತ್ತು ಅಳಿವಿನ ಅಂಚಿನಲ್ಲಿವೆ. ಕಾಡು ಹಂದಿಗಳಲ್ಲಿ 17 ಉಪ -ಪ್ರಭೇದಗಳಿವೆ ಮತ್ತು ಅದರಲ್ಲಿ ಕೇವಲ ಮೂರು ಮಾತ್ರ ಭಾರತದಲ್ಲಿ ಕಾಣ ಸಿಗುತ್ತವೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಂದಿಗಳು, ತೆಂಗಿನ ಕಾಯಿ, ಪ್ಲಾಂಟೈನ್ಸ್ ಮತ್ತು ಟ್ಯೂಬರ್‍ಗಳನ್ನು ನಾಶ ಮಾಡುವುದಕ್ಕೆ ಹೆಸರುವಾಸಿಯಾಗಿವೆ. ಅರಣ್ಯದಿಂದ ಹೊರಗೆ ಹೋದಾಗಲೆಲ್ಲಾ ಅವುಗಳನ್ನು ಕೊಂದರೆ, ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.”

ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವ ವಿವಾದ ಅನಗತ್ಯ

ಮಾನವ-ಪ್ರಾಣಿ ಸಂಘರ್ಷಗಳ ಕುರಿತು ಅಧ್ಯಯನ ಮಾಡಿರುವ ಪರಿಸರ ಸಂಶೋಧಕಿ ಜೆ ದೇವಿಕಾ ಅವರ ಪ್ರಕಾರ, ಬೆಳೆಗಳ ನಾಶ ಮಾಡುವ ಹಂದಿಗಳನ್ನು ಕೊಲ್ಲುವ ಕುರಿತಂತೆ, ಸಂರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇಲ್ಲ. ಅದೇ ರೀತಿ, ಕಾಡು ಹಂದಿಗಳಿಗೆ ಕ್ರಿಮಿ ಕೀಟಗಳ ಸ್ಥಾನವನ್ನು ನೀಡುವ ವಿವಾದ ಅನಗತ್ಯ ಎಂಬುವುದು ಲೋಕ ಸಭಾ ಸದಸ್ಯ ರಾಜ್ಯಮೋಹನ್ ಉನ್ನಿತಾನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by:Divya D
First published: