Ex-MLA Arrested: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಶಾಸಕ ಅರೆಸ್ಟ್

ಪಿ.ಸಿ. ಜಾರ್ಜ್

ಪಿ.ಸಿ. ಜಾರ್ಜ್

ಯುವತಿಯನ್ನು ಗೆಸ್ಟ್​ಹೌಸ್​ಗೆ ಕರೆದು ನಂತರ ಲೈಂಗಿಕ ದೌರ್ಜನ್ಯ ಎಸಗಿದ ಮಾಜಿ ಸಚಿವ ಅರೆಸ್ಟ್ ಆಗಿದ್ದಾರೆ. ಯುವತಿ ಘಟನೆಯನ್ನು ತನ್ನ ದೂರಿನಲ್ಲಿ ವಿವರಿಸಿದ್ದಾರೆ.

  • Share this:

    ತಿರುವನಂತಪುರಂ(ಜು.03): ಸೋಲಾರ್ ಪ್ಯಾನಲ್ ಪ್ರಕರಣದಲ್ಲಿ ಆರೋಪಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯದ (Sexual Assult) ದೂರಿನ ಆಧಾರದ ಮೇಲೆ ಕೇರಳದ (Kerala) ಹಿರಿಯ ರಾಜಕಾರಣಿ ಮತ್ತು ಮಾಜಿ ಶಾಸಕ  (Ex-MLA) ಪಿಸಿ ಜಾರ್ಜ್ (PC George) ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 10 ರಂದು ಪಿಸಿ ಜಾರ್ಜ್ ತನ್ನನ್ನು ತೈಕಾಡ್‌ನಲ್ಲಿರುವ ಅತಿಥಿ ಗೃಹಕ್ಕೆ ಆಹ್ವಾನಿಸಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ನಂತರ, ಅವರು ರಾಜಕಾರಣಿಯಿಂದ ಅನುಚಿತ ಸಂದೇಶಗಳನ್ನು ಸ್ವೀಕರಿಸುವುದನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.


    ಚಿನ್ನ ಅಕ್ರಮ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆರೋಪಕ್ಕೆ ಸಂಬಂಧಿಸಿದಂತೆ ಪಿಸಿ ಜಾರ್ಜ್ ಅವರನ್ನು ಇಲ್ಲಿನ ಗೆಸ್ಟ್ ಹೌಸ್‌ನಿಂದ ಕಂಟೋನ್ಮೆಂಟ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಕ್ರೈಂ ಬ್ರಾಂಚ್ ಅವರನ್ನು ವಿಚಾರಣೆ ನಡೆಸುತ್ತಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.


    33 ವರ್ಷ ಕೇರಳ ವಿಧಾನಸಭೆಯಲ್ಲಿದ್ದ ಜಾರ್ಜ್


    ಪ್ಲಾಂತೋಟ್ಟತ್ತಿಲ್ ಚಾಕೋ ಜಾರ್ಜ್ ಕೇರಳದ ರಾಜಕಾರಣಿ.  ಜಾರ್ಜ್ ಅವರು ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪೂಂಜಾರ್ ಕ್ಷೇತ್ರದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರು 33 ವರ್ಷಗಳ ಕಾಲ ಕೇರಳ ವಿಧಾನಸಭೆಯಲ್ಲಿದ್ದರು. 2016 ರ ಶಾಸಕಾಂಗ ಚುನಾವಣೆಯ ನಂತರ, ಅವರು ಕೇರಳ ಜನಪಕ್ಷಂ (ಜಾತ್ಯತೀತ) ಎಂಬ ಹೆಸರಿನ ತಮ್ಮದೇ ಆದ ಪಕ್ಷವನ್ನು ರಚಿಸಿದರು. ಹಿಂದೆ, ಅವರು ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಣಿ) ಮತ್ತು ಕೇರಳ ಕಾಂಗ್ರೆಸ್ (ಜಾತ್ಯತೀತ) ನಂತಹ ರಾಜಕೀಯ ಪಕ್ಷಗಳ ಸದಸ್ಯರಾಗಿದ್ದರು.


    ಇದನ್ನೂ ಒದಿ: Telangana: ಮೋದಿ ಹುಲಿ, ತೆಲಂಗಾಣ ಸಿಎಂ KCR ನರಿ ಎಂದ ಬಿಜೆಪಿ ಮುಖಂಡ!


    ಜಾರ್ಜ್ ಅವರು ಯುಡಿಎಫ್ ಸರ್ಕಾರದ ಕೇರಳ ಕಾಂಗ್ರೆಸ್ (ಎಂ) ಪಕ್ಷದ ಅಡಿಯಲ್ಲಿ 2011 ರಿಂದ 2015 ರವರೆಗೆ ಕೇರಳ ವಿಧಾನಸಭೆಯ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದರು. ಜಾರ್ಜ್ ನಂತರ ಸ್ವತಂತ್ರ ರಾಜಕಾರಣಿಯಾದರು. 2017 ರಲ್ಲಿ ಅವರು ಕೇರಳ ಜನಪಕ್ಷಂ (ಜಾತ್ಯತೀತ) ಪಕ್ಷವನ್ನು ಸ್ಥಾಪಿಸಿದರು.


    ಜಾರ್ಜ್​ಗೆ ಜಾಮೀನು


    ಪೊಲೀಸರು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರಿಂದ ಪೂಂಜಾರ್‌ನ ಮಾಜಿ ಶಾಸಕ ಪಿ ಸಿ ಜಾರ್ಜ್ - ಅವರನ್ನು ಜೈಲಿಗಟ್ಟಲು ರಾಜ್ಯ ಪೊಲೀಸರ ಮೂರನೇ ಪ್ರಯತ್ನ ಶನಿವಾರ ರಾತ್ರಿ ನೆಲಕಚ್ಚಿದೆ.


    ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್-III ದೂರು ಸ್ವೀಕರಿಸಿದ ಎರಡು ಗಂಟೆಗಳಲ್ಲಿ ಜಾರ್ಜ್ ಅವರ ವಾದಗಳನ್ನು ನಂಬಲರ್ಹವಾಗಿದೆ ಎಂದು ಕಂಡುಹಿಡಿದಿದೆ. ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆ ಸಲ್ಲಿಸಿದ ದೂರಿನ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.


    ಇದನ್ನೂ ಓದಿ: Covid-19: ಲಕ್ಷ ದಾಟಿದ ಕೊರೋನಾ ಕೇಸ್, ಒಂದೇ ದಿನ 31 ಸೋಂಕಿತರು ಸಾವು


    ಅಪರಾಧ ವಿಭಾಗದ ಎಸ್‌ಪಿ ಮಧುಸೂದನನ್ ನೇತೃತ್ವದ ತಂಡವು ತೈಕಾಡ್‌ನ ಸರ್ಕಾರಿ ಅತಿಥಿ ಗೃಹದಲ್ಲಿ ಜಾರ್ಜ್‌ನನ್ನು ವಿಚಾರಣೆ ನಡೆಸುತ್ತಿದ್ದಾಗ ಮ್ಯೂಸಿಯಂ ಎಸ್‌ಐ ನೇತೃತ್ವದ ಪೊಲೀಸ್ ತಂಡವು ಅಲ್ಲಿಗೆ ತಲುಪಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು.


    ಬಂಧನದ ನಂತರ, ದೂರುದಾರ ಮಹಿಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತನ್ನ ಮತ್ತು ಜಾರ್ಜ್ ನಡುವಿನ ದೂರವಾಣಿ ಕರೆ ದಾಖಲೆಗಳು ಮತ್ತು ಫೆಬ್ರುವರಿ 10 ರಂದು ಅತಿಥಿ ಗೃಹದ ಕೊಠಡಿಯಲ್ಲಿ ಏನಾಯಿತು ಎಂಬುದರ ಧ್ವನಿಮುದ್ರಣ ಸೇರಿದಂತೆ ಎಲ್ಲಾ ಪುರಾವೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದೇನೆ ಎಂದಿದ್ದರು.

    Published by:Divya D
    First published: