Fazal Murder Case: ಚಿತ್ರಹಿಂಸೆಯಿಂದಾಗಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ ಕೇರಳದ ನಿವೃತ್ತ ಐಪಿಎಸ್ ಅಧಿಕಾರಿ..!

ರಾಧಾಕೃಷ್ಣನ್ ಕೇರಳದ ಕಣ್ಣೂರಿನ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಿಪಿಎಂ ತೊರೆದು ಎನ್‌ಡಿಎಫ್‌ಗೆ ಸೇರಿದ ಮೊಹಮ್ಮದ್ ಫಜಲ್ ಅವರನ್ನು ಅಕ್ಟೋಬರ್ 22, 2006ರಂದು ಗ್ಯಾಂಗ್ ಒಂದು ಕೊಂದಿತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಡಳಿತ ಪಕ್ಷ, ಮೇಲಧಿಕಾರಿಗಳ ಒತ್ತಡದ ನಡುವೆಯೂ ಫಜಲ್ ಹತ್ಯೆಯ (Fazal murder case) ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಿ, ಎರಡು ಬಾರಿ ಅಮಾನತಿಗೊಳಗಾಗಿ, ಅಮಾನುಷವಾದ ಹಲ್ಲೆಗೊಳಗಾದ ಅಂದಿನ ಡಿವೈಎಸ್ಪಿ ಕೆ.ರಾಧಾಕೃಷ್ಣನ್ (K Radhakrishnan)  ಅವರ ಪರಿಸ್ಥಿತಿ ಇದು. ಏಪ್ರಿಲ್ 30 ರಂದು ಸೇವೆಯಿಂದ ನಿವೃತ್ತರಾದ ಈ ಐಪಿಎಸ್ ಅಧಿಕಾರಿ (Kerala Retired IPS Officer) ಈಗ ಖಾಸಗಿ ಕಂಪನಿಯೊಂದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾಲ್ಕೂವರೆ ವರ್ಷಗಳ ಕಾಲ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲದೆ, ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲಾಗಿದೆ ಮತ್ತು ನಿವೃತ್ತಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಜೊತೆಗೆ, ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಲಾಗಿದೆ. ಇದಕ್ಕೆ ಕಾರಣ, ಅವರು ಫಜಲ್ ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಆಡಳಿತ ಪಕ್ಷದ ಹೇಳಿಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದು.

ಮಕ್ಕಳ ಸುರಕ್ಷತೆ ಮುಖ್ಯ

ಅವರು ಯಾವಾಗ ಬೇಕಾದರೂ ನನ್ನನ್ನು ಕೊಲ್ಲುತ್ತಾರೆ. ನನ್ನ ಹಣೆಬರಹವನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿದ್ದೇನೆ. ಆದರೆ ಅದಕ್ಕೂ ಮೊದಲು ನನ್ನ ಮಕ್ಕಳ ಸುರಕ್ಷತೆ ನನಗೆ ಮುಖ್ಯ ಎಂದು ಕೆಎಪಿ ಐದನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ನಿವೃತ್ತರಾದ ಕೆ ರಾಧಾಕೃಷ್ಣನ್ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ನನ್ನ ಮಗಳು ಅವಳ ಹಾಸ್ಟೆಲ್ ವೆಚ್ಚ ಭರಿಸಲಾಗದ ಕಾರಣ ಅರೆಕಾಲಿಕ ಕೆಲಸ ಆರಿಸಿಕೊಂಡಿದ್ದಾಳೆ. ಸ್ನಾತಕೋತ್ತರ ಪದವೀಧರನಾದ ನನ್ನ ಮಗ ಸಿವಿಲ್ ಸರ್ವೀಸ್ ಕೋಚಿಂಗ್ ಕೋರ್ಸ್‌ನಿಂದ ಹೊರಗುಳಿಯಬೇಕಾಯಿತು. ಪ್ರಕರಣದ ವಿರುದ್ಧ ಹೋರಾಡಲು ನಾನು ನನ್ನ ಕುಟುಂಬದ ಆಸ್ತಿ ಮಾರಾಟ ಮಾಡಬೇಕಾಗಿತ್ತು. ಆದರೆ, ನಾನು ಸಾಲ ಮರುಪಾವತಿ ಮಾಡದ ಕಾರಣ ನನ್ನ ಮನೆಯನ್ನು ಬ್ಯಾಂಕ್ ಹರಾಜು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ ರಾಧಾಕೃಷ್ಣನ್.

ರಾಧಾಕೃಷ್ಣನ್ ಕೇರಳದ ಕಣ್ಣೂರಿನ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಿಪಿಎಂ ತೊರೆದು ಎನ್‌ಡಿಎಫ್‌ಗೆ ಸೇರಿದ ಮೊಹಮ್ಮದ್ ಫಜಲ್ ಅವರನ್ನು ಅಕ್ಟೋಬರ್ 22, 2006ರಂದು ಗ್ಯಾಂಗ್ ಒಂದು ಕೊಂದಿತ್ತು. ಕಣ್ಣೂರು ಡಿಐಜಿ ಅನಂತಕೃಷ್ಣನ್ ಅವರು ರಾಧಾಕೃಷ್ಣನ್ ಅವರನ್ನು ಈ ಪ್ರಕರಣದಲ್ಲಿ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ನಿಷ್ಕಳಂಕ ದಾಖಲೆ ಹೊಂದಿರುವ ಅಧಿಕಾರಿಯಾಗಿದ್ದ ಅವರು ಅದುವರೆಗೆ 7 ಕ್ಲಿಷ್ಟ ಪ್ರಕರಣಗಳನ್ನು ಬಗೆಹರಿಸಿದ್ದರು.

ಇದನ್ನು ಓದಿ: ಹೇಮಾ ಮಾಲಿನಿಗೆ ವಯಸ್ಸಾಗಿದೆ, ಕತ್ರಿನಾ ಕೈಫ್​ ಕೆನ್ನೆಯಂತಹ ರಸ್ತೆ ನಿರ್ಮಿಸಿ ಎಂದ ರಾಜಸ್ಥಾನ ಸಚಿವ

ಫಜಲ್​ ಹತ್ಯೆ

ಫಜಲ್ ಹತ್ಯೆಯ ಮರುದಿನವೇ ಸಿಪಿಎಂ ಪ್ರತಿಭಟನಾ ಸಭೆ ನಡೆಸಿತ್ತು. ಅಲ್ಲಿ ಪ್ರದೇಶದ ಕಾರ್ಯದರ್ಶಿ ಕರಾಯೀ ರಾಜನ್ ಹತ್ಯೆಯಲ್ಲಿ ಭಾಗಿಯಾಗಿರುವ ನಾಲ್ವರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹೆಸರಿಸಿದ್ದರು. ನಾನು ಅವರೆಲ್ಲರನ್ನೂ ಬಂಧಿಸಿದೆ, ಅವರ ಹೇಳಿಕೆಗಳನ್ನು ದಾಖಲಿಸಿದೆ. ಘಟನೆಯ ಮೊದಲು ಮತ್ತು ನಂತರ ಅವರ ಎಲ್ಲಾ ಚಟುವಟಿಕೆಗಳನ್ನು ಪತ್ತೆಹಚ್ಚಿದೆ. 2ನೇ ದಿನ, ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ನನ್ನನ್ನು ಪಯ್ಯಂಬಲಂ ಅತಿಥಿ ಗೃಹಕ್ಕೆ ಕರೆಸಿದರು. ನನಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

7 ದಿನಗಳಲ್ಲಿ ಆರೋಪಪಟ್ಟಿ ತಯಾರಿ ಮಾಡಿ, ಆರ್‌ಎಸ್‌ಎಸ್‌ನವರು ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದು ನನಗೆ ಮನವರಿಕೆಯಾದ ಕಾರಣ, ನಾನು ಅವರನ್ನು ಬಿಡುಗಡೆ ಮಾಡಿದ್ದೇನೆ. ಆದರೆ, ಇದನ್ನು ಸಿಪಿಎಂ ನಾಯಕತ್ವ ವಿರೋಧಿಸಿತು ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ಇದನ್ನು ಓದಿ: ವಿವಾದ ಕುರಿತ ಹೇಳಿಕೆ ದಾಖಲಿಸಲು ಆಗಮಿಸಿದ ಹಂಸಲೇಖ; ಧರಣಿ ಕುಳಿತ ಅಹಿಂಸಾ ಚೇತನ್​

ರಾಜಕೀಯ ನಾಯಕರ ವಿರುದ್ಧ ಕ್ರಮಕೈಗೊಂಡಿದ್ದ ಅಧಿಕಾರಿ

ಎರಡು ದಿನಗಳ ನಂತರ, ಗೃಹ ಸಚಿವರು ಮತ್ತೊಮ್ಮೆ ನನ್ನನ್ನು ಪಯ್ಯಂಬಲಂ ಅತಿಥಿ ಗೃಹಕ್ಕೆ ಕರೆಸಿ ನನ್ನ ಉದ್ದೇಶವೇನು ಎಂದು ಕೇಳಿದರು. ಯಾವುದೇ ಪಕ್ಷದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ನನಗೆ ತಿಳಿಸುವಂತೆ ತಿಳಿಸಿದರು. ಹತ್ತು ದಿನಗಳ ನಂತರ, ನನ್ನನ್ನು ತನಿಖೆಯಿಂದ ತೆಗೆದುಹಾಕಲಾಯಿತು. ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ಅಧಿಕಾರಿ ಮೇಲೆ ನಡೆದಿತ್ತು ಹಲ್ಲೆ

ಡಿಸೆಂಬರ್ 15, 2006ರಂದು, ಪಕ್ಷದ ಕಾರ್ಯಕರ್ತರ ಗುಂಪೊಂದು ರಾಧಾಕೃಷ್ಣನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿತು. ಅವರ ಬೆನ್ನುಮೂಳೆಗೆ ಆದ ಹಾನಿಯಿಂದಾಗಿ, ಆಸ್ಪತ್ರೆಯಲ್ಲಿ ಒಂದೂವರೆ ವರ್ಷಗಳನ್ನು ಕಳೆಯಬೇಕಾಯಿತು. ಈ ಮಧ್ಯೆ ಅಕ್ರಮ ಸಾಗಾಣಿಕೆ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿತ್ತು. ಇದಾದ ನಂತರ ಮತ್ತೆ ಮೂರು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ನಂತರ ರಾಧಾಕೃಷ್ಣನ್ ಅವರನ್ನು ಎರಡನೇ ಬಾರಿಗೆ ಅಮಾನತುಗೊಳಿಸಲಾಯಿತು. ಇದಕ್ಕಾಗಿ ಅವರು ನಾಲ್ಕೂವರೆ ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಯಿತು. ನಿವೃತ್ತಿಯ ನಂತರದ ಪ್ರಯೋಜನಗಳನ್ನು ನಿರಾಕರಿಸುವ ಸಲುವಾಗಿ ಅವರ ನಿವೃತ್ತಿಯ ಒಂದು ದಿನ ಮುಂಚಿತವಾಗಿ, ಏಪ್ರಿಲ್ 29, 2021 ರಂದು ಶಿಸ್ತು ಕ್ರಮದ ಮೆಮೊ ನೀಡಲಾಗಿತ್ತು.
First published: