Kerala: ಕಾಂಗ್ರೆಸ್​ ತೊರೆದ ಹಿರಿಯ ನಾಯಕನನ್ನು ಪಕ್ಷಕ್ಕೆ ಬರ ಮಾಡಿಕೊಂಡ ಸಿಪಿಎಂ

"ಇಂದಿರಾ ಗಾಂಧಿಯವರ ಚಿತಾಭಸ್ಮವನ್ನು ಕಣ್ಣೂರಿನಲ್ಲಿ ನದಿಯಲ್ಲಿ ಬಿಡಲು ತಂದಾಗ ಸುಧಾಕರನ್ ವರ್ತಿಸಿದ ವಿಧಾನವನ್ನು ಯಾರೂ ಮರೆಯುವುದಿಲ್ಲ ಮತ್ತು ಸೋನಿಯಾಗಾಂಧಿ ಮತ್ತು ದಿವಂಗತ ಅಹ್ಮದ್ ಪಟೇಲ್ ಬಗ್ಗೆ ಮುರಳೀಧರನ್ ಹೇಳಿರುವ ಮಾತುಗಳು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಅವರು ನನ್ನನ್ನು ಟೀಕಿಸುವ ಹಕ್ಕನ್ನು ಹೊಂದಿಲ್ಲ, ಆದರೆ ನಾನು ಎಲ್ಲ ಸಮಯದಲ್ಲೂ ಸಭ್ಯತೆ ಮತ್ತು ಘನತೆಯನ್ನು ಉಳಿಸಿಕೊಂಡಿದ್ದೇನೆ "ಎಂದು ಕುಮಾರ್ ತಿರುಗೇಟು ನೀಡಿದರು.

ಕಾಂಗ್ರೆಸ್​ ತೊರೆದ ಅನಿಲ್​ ಕುಮಾರ್​

ಕಾಂಗ್ರೆಸ್​ ತೊರೆದ ಅನಿಲ್​ ಕುಮಾರ್​

 • Share this:
  Kerala: ಕೇರಳ ಕಾಂಗ್ರೆಸ್ ಉನ್ನತ ನಾಯಕ ಕೆ.ಪಿ. ಅನಿಲ್ ಕುಮಾರ್ (Congress leader K.P. Anil Kumar) ಅವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜಿನಾಮೆ ನೀಡಿದ ನಂತರ ದೇವರ ನಾಡಿನಲ್ಲಿ ಬೇರೆಯದೇ ರೀತಿಯ ರಾಜಕೀಯ ಸಂಚಲನ ಉಂಟಾಗಿದ್ದು, ವಿರೋಧಿಗಳು ಇವರನ್ನು ಸ್ವಾಗತಿಸಿ ಅಚ್ಚರಿ ಮೆರೆದಿದ್ದಾರೆ.

  ಕುಮಾರ್​ ಅವರನ್ನು ಬುಧವಾರ ಸಿಪಿಐ (ಎಂ) (CPI-M) ನಾಯಕರು ಕೋಜಿಕ್ಕೋಡ್​ ರೈಲ್ವೇ ನಿಲ್ದಾಣದಲ್ಲಿ ಮತ್ತು ಸಿಪಿಐ-ಎಂ ಕೋಜಿಕ್ಕೋಡ್ ಜಿಲ್ಲಾ ಸಮಿತಿ ಕಚೇರಿಯಲ್ಲೂ ಭವ್ಯ ಸ್ವಾಗತ ನೀಡಿ, ಸನ್ಮಾನಿಸಿದರು. ಇಷ್ಟು ದಿನ ಕಡು ವೈರಿಗಳಾಗಿದ್ದವರು ಬೆಳಗಾಗುವುದರೊಳಗೆ ಮಿತ್ರರಾಗಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್​ ಪಕ್ಷಕ್ಕೆ ಸಾಕಷ್ಟು ಪೆಟ್ಟು ಕೊಡಲಿದೆ ಎಂದು ಹೇಳಲಾಗಿದೆ.

  ಕೋಜಿಕೋಡ್ ಕುಮಾರ್ ಅವರ ಮೂಲ ಊರು. ಮಂಗಳವಾರದಂದು ಕುಮಾರ್ ಅವರು ರಾಜ್ಯ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು 43 ವರ್ಷಗಳ ಸುದೀರ್ಘ ಪ್ರಯಾಣವನ್ನು ಕೊನೆಗೊಳಿಸಿ, ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ನಂತರ ಅವರು ಸಿಪಿಐ (ಎಂ) ರಾಜ್ಯ ಪಕ್ಷದ ಪ್ರಧಾನ ಕಚೇರಿಗೆ ಹೋದರು, ಅಲ್ಲಿ ಅವರನ್ನು ಮೂವರು ಪಾಲಿಟ್ ಬ್ಯೂರೋ ಸದಸ್ಯರು ಮತ್ತು ಇತರರು ಸ್ವಾಗತಿಸಿದರು.

  ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ (State Congress president K. Sudhakaran) ಮತ್ತು ಹಿರಿಯ ಕಾಂಗ್ರೆಸ್ ಲೋಕಸಭಾ ಸದಸ್ಯ ಕೆ.ಮುರಳೀಧರನ್ ( K. Muraleedharan) ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಕುಮಾರ್, ಇಬ್ಬರೂ ತಮ್ಮತ್ತ ಬೆರಳು ತೋರಿಸಲು ಯಾವುದೇ ಕಾರಣವಿಲ್ಲ.

  "ಇಂದಿರಾ ಗಾಂಧಿಯವರ ಚಿತಾಭಸ್ಮವನ್ನು ಕಣ್ಣೂರಿನಲ್ಲಿ ನದಿಯಲ್ಲಿ ಬಿಡಲು ತಂದಾಗ ಸುಧಾಕರನ್ ವರ್ತಿಸಿದ ವಿಧಾನವನ್ನು ಯಾರೂ ಮರೆಯುವುದಿಲ್ಲ ಮತ್ತು ಸೋನಿಯಾಗಾಂಧಿ ಮತ್ತು ದಿವಂಗತ ಅಹ್ಮದ್ ಪಟೇಲ್ ಬಗ್ಗೆ ಮುರಳೀಧರನ್ ಹೇಳಿರುವ ಮಾತುಗಳು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಅವರು ನನ್ನನ್ನು ಟೀಕಿಸುವ ಹಕ್ಕನ್ನು ಹೊಂದಿಲ್ಲ, ಆದರೆ ನಾನು ಎಲ್ಲ ಸಮಯದಲ್ಲೂ ಸಭ್ಯತೆ ಮತ್ತು ಘನತೆಯನ್ನು ಉಳಿಸಿಕೊಂಡಿದ್ದೇನೆ "ಎಂದು ಕುಮಾರ್ ತಿರುಗೇಟು ನೀಡಿದರು.

  ಕುಮಾರ್ ಅವರು ನಾಲ್ಕು ರಾಜ್ಯ ಅಧ್ಯಕ್ಷರ ಅಡಿಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಮತ್ತು ಇತ್ತೀಚೆಗೆ ಸುಧಾಕರನ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸುವವರೆಗೂ ಅವರು ನಿರ್ಗಮಿತ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.


  "ಇಂದು ಕಾಂಗ್ರೆಸ್ ಪಕ್ಷಕ್ಕೆ ಇವರಲ್ಲೆ ಒಂಥರಾ ಶಾಪಗ್ರಸ್ತರು. ಏಕೆಂದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ. ವೇಣುಗೋಪಾಲ್ K.C. Venugopal, ಸುಧಾಕರನ್ Sudhakaran ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ V.D. Satheesan ಇವರುಗಳು ಸಮರ್ಥ ನಾಯಕರಲ್ಲ. ಹಾಗೂ ಇವರಿಂದ ಬೇಸತ್ತು ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ನಾಯಕರು ಶೀಘ್ರದಲ್ಲೇ ಪಕ್ಷವನ್ನು ತೊರೆಯುವ ನಿರೀಕ್ಷೆಯಿದೆ ಎಂದು ಕುಮಾರ್ ಹೇಳಿದರು.

  ಮುಂಬರುವ ದಿನಗಳಲ್ಲಿ ಸಿಪಿಐ (ಎಂ) ನ ವಿವಿಧ ಸಮಿತಿಗಳ ರಚನೆಗಾಗಿ ಮುಂದಿನ ಫೆಬ್ರವರಿಯಲ್ಲಿ ಎರ್ನಾಕುಲಂನಲ್ಲಿ ನಡೆಯಲಿರುವ  ಪಕ್ಷದ ರಾಜ್ಯ ಸಮ್ಮೇಳನಕ್ಕೆ ಮುಂಚಿತವಾಗಿ ಸಭೆಗಳನ್ನು ನಡೆಸಲಾಗುತ್ತದೆ, ಈ ಕಾರ್ಯಕ್ರಮದಲ್ಲಿ ಕುಮಾರ್ ಅವರನ್ನು ಅಧಿಕೃತವಾಗಿ ಸಿಪಿಐ (ಎಂ) ಗೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.


  ಇದನ್ನೂ ಓದಿ: Electric vehicle: ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ 26 ಸಾವಿರ ಕೋಟಿ ಪ್ರೋತ್ಸಾಹ ಯೋಜನೆ ಘೋಷಿಸಿದ ಕೇಂದ್ರ

  ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷದಲ್ಲಿ ಕ್ಲೀನ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕುಮಾರ್ ಅವರಿಗೆ ಕೆಲವು ಪ್ರಮುಖ ಸರ್ಕಾರಿ ಸಂಸ್ಥೆಗಳಲ್ಲಿ ಅಧಿಕೃತ ದೊಡ್ಡ ಹುದ್ದೆ ಹಾಗೂ ಉತ್ತಮ ಹುದ್ದೆ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: