ಕಳೆದ ವರ್ಷ ನಾಗರಹಾವ(Cobra)ನ್ನು ಬಳಸಿ ಪತಿಯು(Husband) ತನ್ನ ಪತ್ನಿ(Wife)ಯನ್ನು ಕೊಲೆ(Murder)ಗೈದ ಪ್ರಕರಣವೊಂದು ಕೇರಳ(Kerala)ದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಈ ಪ್ರಕರಣದಲ್ಲಿ ಮೃತಪಟ್ಟ ಉತ್ತರಾ(Uthra Murder)ಅವರ ಪತಿಗೆ ಕೊಲ್ಲಂ(Kollam)ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿಸಿದ್ದು, ಇಂದು ಆತನಿಗೆ 17 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 302(ಕೊಲೆ), 307(ಕೊಲೆ ಯತ್ನ), 328(ವಿಷ ಪ್ರಯೋಗ ಯತ್ನ), 201(ಸಾಕ್ಷ್ಯ ನಾಶ) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಉತ್ತರಾ ಅವರ ಪತಿ ಸೂರಜ್ ಅವರು ಮೇ 7, 2020 ರಂದು ನಾಗರ ಹಾವನ್ನು ಬಳಸಿ ಆಕೆಯನ್ನು ಕೊಂದಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಕೊಲ್ಲಂನಲ್ಲಿರುವ ಆಕೆಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದರು. ಪ್ರಾಸಿಕ್ಯೂಷನ್ ಪ್ರಕಾರ, ಸೂರಜ್ ಅವರ ಮನೆಯಲ್ಲಿ ಈ ಹಿಂದೆ ಸಹ ಉತ್ತರಾಗೆ ಹಾವು ಕಚ್ಚಿದ್ದು, ಆಕೆ ಒಟ್ಟು ಎರಡು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರಿ ವಕೀಲರಾದ ಜಿ. ಮೋಹನ್ ರಾಜ್ ಅವರು ತಿಳಿಸಿರುವಂತೆ, ಉತ್ತರಾ ವಿಕಲಚೇತನರಾಗಿದ್ದು, ಮದುವೆಯ ಸಂದರ್ಭದಲ್ಲಿ ಚಿನ್ನ, 4 ಲಕ್ಷ ರೂಪಾಯಿ ಮತ್ತು ಒಂದು ಕಾರನ್ನು ಸೂರಜ್ಗೆ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು ಎಂದು ತಿಳಿಸಿದರು. ಉತ್ತರಾ ಅವರ ತಂದೆ ಕೂಡ ಪ್ರತಿ ತಿಂಗಳು ಸುಮಾರು 8000 ರೂಪಾಯಿಗಳನ್ನು ನೀಡುತ್ತಿದ್ದರು. ಸೂರಜ್ ಈ ಎಲ್ಲಾ ಹಣವನ್ನು ತಾನೇ ಪಡೆಯಬೇಕೆಂದು ಈ ಅಪರಾಧವನ್ನು ಎಸಗಿದ್ದಾನೆ ಎಂದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಈ ಪ್ರಕರಣದಲ್ಲಿ ಸೂರಜ್ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಪ್ರಯತ್ನ), 328 ಮತ್ತು 201 ರ ಅಡಿಯಲ್ಲಿ ದೋಷಿ ಎಂದು ಸಾಬೀತಾಗಿದ್ದು, ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ಆಶ್ರಯಿಸಬೇಕಾಯಿತು. ಸ್ವಾಭಾವಿಕವಾಗಿ ಹಾವು ಕಚ್ಚಿದಾಗ ಮತ್ತು ಪ್ರಚೋದಿಸಿದಾಗ ಕಚ್ಚಿದ ಗುರುತುಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಅವರು ಡಮ್ಮಿ ಹಾವಿನೊಂದಿಗೆ ಪರೀಕ್ಷೆಯನ್ನು ಸಹ ನಡೆಸಿದ್ದ ಎಂಬುದು ತಿಳಿದು ಬಂದಿದೆ. ಸೂರಜ್ನ ಮೊಬೈಲ್ನಿಂದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆತ ನಾಗರ ಹಾವು ಮತ್ತು ವಿಷಪೂರಿತ ಹಾವುಗಳಿಗಾಗಿ ಹುಡುಕಾಟ ನಡೆಸಿರುವುದು ಬಹಿರಂಗವಾಗಿದೆ.
ಪ್ರಾಸಿಕ್ಯೂಷನ್ ವಾದದ ಪ್ರಕಾರ, ಸೂರಜ್ ನಾಗರ ಹಾವನ್ನು ಖರೀದಿಸಿ ಮತ್ತು ಅದಕ್ಕೆ ಮಾದಕ ದ್ರವ್ಯ ನೀಡಿದ ನಂತರ ಉದ್ದೇಶಪೂರ್ವಕವಾಗಿ ಅದನ್ನು ಕಚ್ಚುವಂತೆ ಮಾಡಿದ್ದನು ಎಂದು ಹೇಳಲಾಗುತ್ತಿದೆ.
ಮಾರ್ಚ್ 3, 2020 ರಂದು, ಉತ್ತರಾಗೆ ಮೊದಲ ಬಾರಿ ಹಾವು ಕಚ್ಚಿದ್ದು, ಸೂರಜ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ ಮಾಡಲು ಪ್ರಯತ್ನಿಸಿದ್ದನು ಎಂದು ಪ್ರಾಸಿಕ್ಯೂಷನ್ ತಿಳಿಸಿದ್ದಾರೆ.
ಇದನ್ನೂ ಓದಿ:Saptapadi: ಪಾತ್ರೆಯಲ್ಲಿ ಬೆಂಕಿ ಉರಿಸಿ ಸಪ್ತಪದಿ ತುಳಿದ ಜೋಡಿ, 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್!
"ಹಾವು ಕಚ್ಚಿದ್ದರಿಂದ ಅವಳು ಸುಮಾರು 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು. ಪತಿ ಸೂರಜ್ ಅವಳೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದನು. ಅದೇ ಸಮಯದಲ್ಲಿ, ಆತ ತನ್ನ ಮೊಬೈಲ್ ಫೋನ್ ನಲ್ಲಿ ನಾಗರ ಹಾವುಗಳಿಗಾಗಿ ಹುಡುಕುತ್ತಿದ್ದನು" ಎಂದು ಪ್ರಾಸಿಕ್ಯೂಷನ್ ಅವರು ತಿಳಿಸಿದ್ದಾರೆ.
ಮಾರ್ಚ್ 10, 2020 ರಂದು ಸೂರಜ್ ನಾಗರ ಹಾವಿನ ವಿಷ ಹೊರ ತೆಗೆಯುವ ಕುರಿತು ನಾಲ್ಕು ಬಾರಿ ವೀಡಿಯೊವನ್ನು ವೀಕ್ಷಿಸಿದ್ದಾನೆ. ಮೇ 7 ರಂದು ಸೂರಜ್ ಮತ್ತು ಉತ್ತರಾ ಇಬ್ಬರೇ ಮನೆಯಲ್ಲಿದ್ದರು. ಹಿಂದಿನ ದಿನ, ಸೂರಜ್ ಚೀಲದಲ್ಲಿ ಅವನು ನಾಗರ ಹಾವನ್ನು ತಂದಿರುವುದಾಗಿ ವರದಿಯಾಗಿದೆ. ಉತ್ತರಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ, ಪತಿ ಸೂರಜ್ ವೈದ್ಯರಿಗೆ ಹಾವು ಕಚ್ಚಿದ ಗುರುತಿನ ಬಗ್ಗೆ ವೈದ್ಯರಿಗೆ ತಿಳಿಸಿದ್ದನು ಎಂದು ನ್ಯಾಯಾಲಯ ತಿಳಿಸಿದೆ.
ಇದೆಲ್ಲದರ ಮಧ್ಯೆ ಸೂರಜ್ ಪರ ವಕೀಲರು ಇದು ನೈಸರ್ಗಿಕ ಹಾವು ಕಡಿತದ ಪ್ರಕರಣವಾಗಿದೆ ಇದರಲ್ಲಿ ಯಾವುದೇ ಪ್ರಚೋದನೆಯಿಲ್ಲ ಎಂದು ವಾದಿಸಿದ್ದರು. ನೈಸರ್ಗಿಕ ಮತ್ತು ಪ್ರೇರಿತ ಕಚ್ಚುವಿಕೆಯ ಮೇಲೆ ಪೊಲೀಸರು ನಡೆಸಿದ ಪರೀಕ್ಷೆಯು ವಿಪರೀತವಾಗಿದೆ. ಪೊಲೀಸರ ಪ್ರಕಾರ, ಎರಡು ಸ್ಥಳಗಳಲ್ಲಿ ಘಟನೆ ನಡೆದಿದೆ ಆದರೆ ಎರಡು ಘಟನೆಗಳಲ್ಲಿ ಎಫ್ಐಆರ್ಗಳು ಅಥವಾ ತನಿಖೆ ನಡೆದಿಲ್ಲ. ಇದು ಸ್ವಾಭಾವಿಕ ಕಚ್ಚುವಿಕೆಯಾಗಿದೆ ಮತ್ತು ಪ್ರೇರಿತವಲ್ಲ ಎಂದು ವಾದಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ