• Home
  • »
  • News
  • »
  • national-international
  • »
  • Shocking: ಇಬ್ಬರು ಮಹಿಳೆಯರ ನರಬಲಿ; ಭೀಕರ ಕೃತ್ಯ ಎಸಗಿದ ದಂಪತಿ ಅರೆಸ್ಟ್

Shocking: ಇಬ್ಬರು ಮಹಿಳೆಯರ ನರಬಲಿ; ಭೀಕರ ಕೃತ್ಯ ಎಸಗಿದ ದಂಪತಿ ಅರೆಸ್ಟ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೀಗೆ ಮಾಟಮಂತ್ರ ನಡೆಸಿ, ನರಬಲಿ ಕೊಡುವುದು ಸಮೃದ್ಧ ಜೀವನವನ್ನು ತರುತ್ತವೆ ಎಂದು ನರಬಲಿ ನೀಡಿದ ದಂಪತಿ ನಂಬಿದ್ದರಂತೆ.

  • Share this:

ತಿರುವನಂತಪುರಂ: ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ಅವರ ಕುಟುಂಬದವರೇ ಕೊಲೆ ಮಾಡಿ (Couple Killed 2 Women) ಹೂತಿಟ್ಟಿರುವ ಭೀಕರ ಮಾಟಮಂತ್ರ ಮತ್ತು ನರಬಲಿ ಪ್ರಕರಣ ಬೆಳಕಿಗೆ ಬಂದಿದೆ. ರೋಸ್ಲಿನ್ ಮತ್ತು ಪದ್ಮಾ ಎಂಬ ದಂಪತಿಯೇ ಈ ಭೀಕರ ಕೃತ್ಯ ನಡೆಸಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿ ಮಾಟಮಂತ್ರ ಮತ್ತು ನರಬಲಿಯ (Human Sacrifice) ಮೂಲಕ ತಮ್ಮ ಆರ್ಥಿಕ ಸಮಸ್ಯೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದರು ಎಂದು ಪೊಲೀಸರು (Kerala Police)  ತಿಳಿಸಿದ್ದಾರೆ. ದಂಪತಿ ಮತ್ತು ಅವರ ಏಜೆಂಟ್ ಮತ್ತೊಬ್ಬ ವ್ಯಕ್ತಿಯನ್ನು ಇಂದು ಬಂಧಿಸಲಾಗಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಈ ಭೀಕರ ಅಮಾನವೀಯ ಕೃತ್ಯ ನಡೆದಿದೆ.


ಜೂನ್‌ ತಿಂಗಳಲ್ಲಿ ರೋಸ್ಲಿನ್ ಎಂಬ ಮಹಿಳೆ, ಪದ್ಮಾ ಎಂಬ ಮಹಿಳೆ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಮಹಿಳೆಯರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನರಬಲಿ ಕೊಟ್ಟರೆ ಸಮೃದ್ಧ ಜೀವನ ಬರುತ್ತದೆ ಎಂದು ನಂಬಿದ್ದ ದಂಪತಿ
ಮಸಾಜ್ ಥೆರಪಿಸ್ಟ್ ಭಗವಂತ್ ಸಿಂಗ್ ಮತ್ತು ಈತನ ಪತ್ನಿ ಲೈಲಾ ಕೊಲೆಗಾರರು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಮಾಟಮಂತ್ರ ನಡೆಸಿ, ನರಬಲಿ ಕೊಡುವುದು ಸಮೃದ್ಧ ಜೀವನವನ್ನು ತರುತ್ತವೆ ಎಂದು ಅವರು ನಂಬಿದ್ದರು.


ಇನ್ನೋರ್ವ ವ್ಯಕ್ತಿಯಿಂದ ಸಹಾಯ
ಬಂಧನಕ್ಕೊಳಗಾದ ಮೂರನೇ ವ್ಯಕ್ತಿ, ರಶೀದ್ ಅಥವಾ ಮುಹಮ್ಮದ್ ಶಫಿ ಎದು ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿಗಳು ಅಪರಾಧದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: New Zealand Whale Stranding: 500 ತಿಮಿಂಗಿಲಗಳ ಸಾಮೂಹಿಕ ಸಾವು; ಜೀವ ಉಳಿದರೆ ದಯಾಮರಣ


ಅಪಹರಣ ಮಾಡಿರುವುದನ್ನು ಒಪ್ಪಿಕೊಂಡ ಆರೋಪಿಗಳುಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್​ಗಳನ್ನು ಮುಹಮ್ಮದ್ ಶಫಿ ಎಂಬಾತನ ಬಳಿ ಪತ್ತೆ ಮಾಡಲಾಗಿದ್ದು, ಆತ ಫೋನ್​ಗಳನ್ನು ಒಡೆದು ಹಾಕಿದ್ದು, ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.


ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹೂತರು
"ಕಡವಂತರಾದಿಂದ (ಎರ್ನಾಕುಲಂ) ನಾಪತ್ತೆಯಾದ ಮಹಿಳೆಯ ಬಗ್ಗೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿಗಳ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿದ ನಂತರ ಅಲ್ಲಿಯೇ ಹೂಳಲಾಯಿತು ಎಂದು ನಮಗೆ ತಿಳಿದುಬಂದಿದೆ. ಇದು ದಂಪತಿಗಳು ಆರ್ಥಿಕ ಲಾಭಕ್ಕಾಗಿ ಧಾರ್ಮಿಕವಾಗಿ ನರಬಲಿಯಾಗಿದೆ." ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಹೇಳಿದ್ದಾರೆ.


ಇದನ್ನೂ ಓದಿ: Swiss Bank: ಕೇಂದ್ರ ಸರ್ಕಾರಕ್ಕೆ ಸಿಕ್ತು ಸ್ವಿಸ್ ಬ್ಯಾಂಕ್​ಲ್ಲಿ ಹಣ ಇಟ್ಟವರ ವಿವರ!


ದಂಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೋರ್ವ ಮಹಿಳೆಯನ್ನು ನರಬಲಿ ನೀಡಿದ್ದಾಗಿ  ಅವರು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


ಈ ಪ್ರಕರಣದಲ್ಲಿ ಹಲವು ಸ್ತರಗಳಿವೆ. ದಂಪತಿಗಳ ಆರ್ಥಿಕ ಲಾಭಕ್ಕಾಗಿ ನರಬಲಿ ಮಾಡಲಾಗಿದೆ ಎಂದು ನಾವು ಈಗ ಅರ್ಥಮಾಡಿಕೊಂಡಿದ್ದೇವೆ. ಅಲ್ಲದೆ, ಮಧ್ಯವರ್ತಿ ಹಣ ಪಡೆದಿರುವುದು ನಮಗೆ ತಿಳಿದಿದೆ. ಇಡೀ ಪ್ರಕರಣವನ್ನು ಬಹಿರಂಗಪಡಿಸಲು ನಮಗೆ ಹೆಚ್ಚಿನ ಸಮಯ ಬೇಕು. ಕೊಲೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: