NEET Exam: ಕೆಲವೇ ನಿಮಿಷ ಬಾಕಿ ಇತ್ತು, ಅಭ್ಯರ್ಥಿಯನ್ನು ಎಕ್ಸಾಂ ಸೆಂಟರ್​ಗೆ ತಲುಪಿಸಿದ ಕೇರಳ ಪೊಲೀಸ್

ರಾಂಗ್ ಎಡ್ರೆಸ್​ನಲ್ಲಿ ಎಕ್ಸಾಂ ಸೆಂಟರ್ ತಲುಪಿದ ನೀಟ್ ಅಭ್ಯರ್ಥಿಗೆ ಪರೀಕ್ಷೆ ಕೇಂದ್ರ ತಲುಪಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಆಕೆ ಬಹುಶಃ ಪರೀಕ್ಷೆ ಬರೆಯಲು ಸಾಧ್ಯವೇ ಇರಲಿಲ್ಲ. ಆದರೆ ಕೇರಳ ಪೊಲೀಸ್ ವಿದ್ಯಾರ್ಥಿನಿಗೆ ನೆರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ(ಜು.20): ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು (Students) ಬಹಳಷ್ಟು ಭಯದಲ್ಲಿರುತ್ತಾರೆ. ಭಯ, ಆತಂಕದಲ್ಲಿರುವ ವಿದ್ಯಾರ್ಥಿಗಳು ಬಹಳಷ್ಟು ಸಲ ಗಡಿಬಿಡಿಯಲ್ಲಿಯೇ ಅವಾಂತರ ಮಾಡಿಕೊಳ್ಳುತ್ತಾರೆ. ಇದೀಗ ಕೇರಳದಲ್ಲಿ ವಿಳಾಸ ತಪ್ಪಿ ರಾಂಗ್ ಎಡ್ರೆಸ್ (Wrong Address) ಪರೀಕ್ಷೆ ಕೇಂದ್ರಕ್ಕೆ (Exam Center) ಬಂದ ನೀಟ್ ಅಭ್ಯರ್ಥಿಯೊಬ್ಬಳು (NEET Candidate) ನಿಜಕ್ಕೂ ಸಂಕಟಕ್ಕೆ ಬಿದ್ದಿದ್ದಳು. ಆಕೆ ಪರೀಕ್ಷೆ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ತಲುಪಿದ್ದಳು. ಆದರೆ ಆಕೆಗೆ ಮೀಸಲಾದ ಎಕ್ಸಾಂ ಸೆಂಟರ್ ಅದಾಗಿರಲಿಲ್ಲ. ತಕ್ಷಣ ಹೊರಗೆ ಬಂದು ನೋಡಿದರೆ ಅಲ್ಲಿ ಆಕೆಯೊಂದಿಗೆ ಬಂದ ಆಕೆಯ ತಂದೆಯೂ ಇರಲಿಲ್ಲ. ಆ ವೇಳೆ ಆಕೆಗೆ ಕೇರಳ ಪೊಲೀಸ್ (Kerala Police) ನೆರವಾಗಿದ್ದಾರೆ. ಇನ್ನೇನು ಎಕ್ಸಾಂ ಬರೆಯಲು ಸಾಧ್ಯವೇ ಇಲ್ಲ ಎನ್ನುವಂತಿದ್ದ ಪರಿಸ್ಥಿತಿಯಲ್ಲಿ ಬಾಲಕಿಯ ನೆರವಿಗೆ ಧಾವಿಸಿದ್ದಾರೆ ಪೊಲೀಸರು.

NEET ಆಕಾಂಕ್ಷಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ನೆರವಾದ ಪೊಲೀಸ್ ಸಿಬ್ಬಂದಿ ಈಗ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾರೆ. ಪೊಲೀಸರ ಸಮಯೋಚಿತ ಸಹಾಯದಿಂದಾಗಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಸಾಧ್ಯವಾಗಿದೆ. ಪರೀಕ್ಷಾ ಅಭ್ಯರ್ಥಿಗೆ ನೆರವಾದ ಪೊಲೀಸ್ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಗಳಿಸಿದ್ದಾರೆ.

ಅಂಬಲಪ್ಪುಳ ಸಬ್ ಇನ್ಸ್‌ಪೆಕ್ಟರ್

ಅಂಬಲಪ್ಪುಳ ಸಬ್ ಇನ್ಸ್‌ಪೆಕ್ಟರ್ ಟೋಲ್ಸನ್ ಪಿ ಜೋಸೆಫ್ ಮತ್ತು ಚಾಲಕ ಜೋಜಿ ಥಾಮಸ್ ಅವರು ಕನ್ನಮಂಗಲಂ, ಚೆಟ್ಟಿಕುಲಂಗರ ನಿವಾಸಿ ಅರ್ಚಾ ದಾಸ್ ಅವರಿಗೆ ಆಲಪ್ಪುಳ ಪಟ್ಟಣದ ಎಸ್‌ಡಿವಿ ಶಾಲೆ ತಲುಪಲು ಸಹಾಯ ಮಾಡಿದರು.

ತಪ್ಪಾಗಿ ಬರೆದಿದ್ದ ವಿಳಾಸ

ಅಧಿಕಾರಿಗಳು ಹಾಲ್ ಟಿಕೆಟ್‌ನಲ್ಲಿ ಅಂಬಲಪ್ಪುಳದ ಬಳಿಯಿರುವ ಎಸ್‌ಡಿವಿ ಆಂಗ್ಲ ಮಾಧ್ಯಮ ಶಾಲೆ ಎಂದು ಮುದ್ರಿಸಿದ್ದರೆ, ಶಾಲೆಯು ವಾಸ್ತವವಾಗಿ ಆಲಪ್ಪುಳ ಟೌನ್‌ನ ಅಂಬಲಪ್ಪುಳ ತಾಲೂಕು ಕಚೇರಿ ಬಳಿ ಇದೆ. ಅರ್ಚಾ ಅವರು ಸರಿಯಾದ ಪರೀಕ್ಷಾ ಕೇಂದ್ರವನ್ನು ತಲುಪಿಲ್ಲ ಅರಿತುಕೊಂಡ ನಂತರ, ಟೋಲ್ಸನ್ ಅರ್ಚಾಳನ್ನು ಅಂಬಲಪ್ಪುಳದಿಂದ ಅಲಪ್ಪುಳಕ್ಕೆ ಕರೆದೊಯ್ದರು.

ಇದನ್ನೂ ಓದಿ: ಒಳಉಡುಪು ಕಳಚಿ ಮುಜುಗರ, ಕೂದಲು ಕವರ್ ಮಾಡಿಕೊಂಡ ಹೆಣ್ಮಕ್ಕಳು!

15 ನಿಮಿಷಗಳಲ್ಲಿ 10 ಕಿಮೀ ಕ್ರಮಿಸಿದ ಪೊಲೀಸ್

ಪೊಲೀಸ್ ಜೀಪ್ 15 ನಿಮಿಷಗಳಲ್ಲಿ 10 ಕಿಮೀ ಕ್ರಮಿಸಿ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದೆ. ನೀರ್ಕುನ್ನಂನ ಅಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಲ್ ಟಿಕೆಟ್ ಪರಿಶೀಲಿಸುವ ವಿಳಾಸ ತಪ್ಪಿರುವುದು ಅಧಿಕಾರಿಗೆ ತಿಳಿದಿದೆ ಎಂದು ಎಸ್‌ಐ ಹೇಳಿದರು. ಸ್ಥಳದ ವ್ಯತ್ಯಾಸವನ್ನು ಗುರುತಿಸಿ ಅವರು ವಿದ್ಯಾರ್ಥಿನಿಯನ್ನು ಎಚ್ಚರಿಸಿದರು.

ಜೀಪ್​ನಲ್ಲಿ ವಿದ್ಯಾರ್ಥಿನಿಯನ್ನು ಕರೆದೊಯ್ದ ಪೊಲೀಸರು

“ಶಾಲೆಯ ವಿಳಾಸದಲ್ಲಿನ ಅಸ್ಪಷ್ಟತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ತೊಂದರೆ ಅನುಭವಿಸಿದರು. ಅರ್ಚಾ ಮಧ್ಯಾಹ್ನ 12.50 ಕ್ಕೆ ಶಾಲೆಗೆ ತಲುಪಿದಳು. ಅವಳು 1.20 ಕ್ಕೆ ಸಭಾಂಗಣವನ್ನು ಪ್ರವೇಶಿಸಬೇಕಿತ್ತು.
ಶಾಲೆಗೆ ಪ್ರವೇಶಿಸಿದ ನಂತರ, ಸಹಾಯಕಿ ರೆಜಿತಾ ಸಂತೋಷ್ ವಿಳಾಸವನ್ನು ಗಮನಿಸಿದರು.

ಕೂಡಲೇ ಬಾಲಕಿಯೊಂದಿಗೆ ಶಾಲೆಯ ಕಾಂಪೌಂಡ್‌ನಿಂದ ಹೊರಗೆ ಬಂದರೂ ಆಕೆಯ ತಂದೆ ಎಲ್ಲೂ ಕಾಣಲಿಲ್ಲ. ತಕ್ಷಣ, ನಾವು ಅವಳನ್ನು ನಮ್ಮ ಜೀಪಿನಲ್ಲಿ ಕರೆದುಕೊಂಡು ಆಲಪ್ಪುಳ ಪಟ್ಟಣದ ಎಸ್‌ಡಿವಿ ಶಾಲೆಗೆ ಧಾವಿಸಿದೆವು ಎಂದು ಟಾಲ್ಸನ್ ಹೇಳಿದರು.

ಇದನ್ನೂ ಓದಿ: ಒಳ ಉಡುಪು ತೆರೆದಿಟ್ಟು NEET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸೂಚನೆ; ಕೇರಳದಲ್ಲಿ ಶಾಕಿಂಗ್ ಘಟನೆ

ಅರ್ಚಾಳ ತಂದೆ ದಾಸ್, ಟಾಲ್ಸನ್‌ಗೆ ಧನ್ಯವಾದ ಅರ್ಪಿಸಿದರು. ಅವರ ಸಮಯೋಚಿತ ಮಧ್ಯಸ್ಥಿಕೆ ಇಲ್ಲದಿದ್ದರೆ, ಅವರ ಮಗಳು ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು ಎಂದು ಹೇಳಿದರು.
Published by:Divya D
First published: